ಗೋವುಗಳನ್ನು ನಾವು ಮಾತೆ ಎಂದು ಪೂಜೆ ಮಾಡುತ್ತೇವೆ| ಗೋವು ಹತ್ಯೆ ಮಾಡಿ ತಿನ್ನುವುದು ಮಹಾ ಅಪರಾಧ| ಸಿದ್ದರಾಮಯ್ಯ ಅವರೂ ಗೋವುಳನ್ನು ಮಾತೆ ಎಂದು ಪೂಜೆ ಮಾಡ್ತಾರೆ. ಆದರೆ ಗೋ ಮಾಂಸ ತಿನ್ನುತ್ತೇವೆ ಎನ್ನುತ್ತಿರುವುದು ದ್ವಂದ್ವವಾಗುವುದಿಲ್ಲವೇ? ಇದು ಎಷ್ಟರ ಮಟ್ಟಿಗೆ ಸರಿ: ಸಚಿವ ಪ್ರಭು ಚವ್ಹಾಣ್|
ಕೊಪ್ಪಳ(ಜ.14): ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆಯೂ ಗೋಮಾಂಸ ತಿನ್ನುತ್ತೇನೆ ಎಂದು ಹೇಳುವ ಮೂಲಕ ಗೋಹತ್ಯೆಗೆ ಪ್ರಚೋದನೆ ನೀಡಿದರೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕಲಾಗುತ್ತದೆ ಎಂದು ಪಶು ಪಾಲನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಗೋಹತ್ಯೆಗೆ ಪ್ರಚೋದನೆ ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳುವ ಕಾಯ್ದೆ ಜಾರಿಗೆ ತರಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಸಲಹೆ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಈ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು.
ದನದ ಮಾಂಸ ತಿನ್ನೋ ಶ್ಲೋಕ ಇದೆ, ಸದ್ಯ ನೆನಪಾಗ್ತಿಲ್ಲ ಎಂದ ಸಿದ್ದು
ಗೋವುಗಳನ್ನು ನಾವು ಮಾತೆ ಎಂದು ಪೂಜೆ ಮಾಡುತ್ತೇವೆ. ಅವುಗಳನ್ನು ಹತ್ಯೆ ಮಾಡಿ ತಿನ್ನುವುದು ಮಹಾ ಅಪರಾಧ. ಸಿದ್ದರಾಮಯ್ಯ ಅವರೂ ಗೋವುಳನ್ನು ಮಾತೆ ಎಂದು ಪೂಜೆ ಮಾಡ್ತಾರೆ. ಆದರೆ ಗೋ ಮಾಂಸ ತಿನ್ನುತ್ತೇವೆ ಎನ್ನುತ್ತಿರುವುದು ದ್ವಂದ್ವವಾಗುವುದಿಲ್ಲವೇ? ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.