Dharwad: ಸಚಿವರಿಗೇ ಮಾಹಿತಿ ನೀಡದ ಅಧಕಾರಿ: ಹಿಗ್ಗಾಮುಗ್ಗಾ ಜಾಡಿಸಿದ ಹಾಲಪ್ಪ ಆಚಾರ್‌..!

By Girish Goudar  |  First Published Apr 12, 2022, 12:07 PM IST

*  ಅಧಿಕಾರಿ ಮತ್ತು ಡಿಸಿ ವಿರುದ್ಧ ಕೆಂಡಾಮಂಡಲರಾದ ಸಚಿವರು 
*  ರಾಜ್ಯಕ್ಕೆ ಎಷ್ಟು ಮರಳು ಬೇಕು ಅಂತ ನನ್ನ ಹತ್ರ ಮಾಹಿತಿ ಇದೆ, ಜಿಲ್ಲೆಯದ್ದು ಏನಿದೆ ನಿಮ್ಮ ಹತ್ರ ಎಂದು ಕಿಡಿ 
*  ಸಚಿವರು ಕೇಳಿದ ಪ್ರಶ್ನೆಗೆ ಮಂಕಾಗಿ ನಿಂತ ಅಧಿಕಾರಿ 
 


ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಏ.12):  ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ(Halappa Achar) ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ವಿರುದ್ಧ ಕಿಡಿ ಕಾರಿದ್ದಾರೆ. ಧಾರವಾಡದ(Dharwad) ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ನಾಲ್ಕನೇಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾಹಿತಿಯನ್ನ ನೀಡದ ಕಾರಣಕ್ಕೆ ಅಧಿಕಾರಿಗೆ ಫುಲ್ ಕ್ಲಾಸ್ ತಡಗೆದುಕೊಂಡಿದ್ದಾರೆ. 

Tap to resize

Latest Videos

ಕಳೆದ ಒಂದು ವರ್ಷದಿಂದ ಧಾರವಾಡ ಜಿಲ್ಲೆಯಲ್ಲಿ ಕೃಷರ್ ಮಶಿನ್‌ಗಳು, ಜಲ್ಲಿ ಕೃಷರ್‌ಗಳು ಎಷ್ಟು ಇವೆ ಎಂದು ಮಾಹಿತಿಯನ್ನ ಕೇಳಿದರೆ ಯಾವುದೇ ಮಾಹಿತಿ ಇರಲಿಲ್ಲ ಜಿಲ್ಲೆಗೆ ಎಷ್ಟು ಮೆಡ್ರಿಕ್ ಟನ್ ಪ್ರೊಡಕ್ಷನ್ ಆಗುತ್ತೆ ಎಂಬುದಕ್ಕೆ ಉತ್ತರವಿಲ್ಲ, ಜಿಲ್ಲೆಯಲ್ಲಿ ಎಷ್ಟು ಅವಶ್ಯಕತೆ ಇದೆ ಎಂದು ಸಚಿವರು ಕೇಳಿದಾಗ ಅಂಕಿ ಸಂಖ್ಯೆಯ ಮಾಹಿತಿಯನ್ನ ಕೊಡದೆ ಇರೋದಕ್ಕೆ ಆಕ್ರೊಶ ಗೊಂಡರು. ಗಣಿ ಮತ್ತು ಭೂ ವಿಜ್ಞಾನ ಸಚಿವನಾಗಿ ರಾಜ್ಯಕ್ಕೆ ಎಷ್ಟು ಅವಶ್ಯಕತೆ ಇದೆ ಎಂಬುದು ನನಗೆ ಗೊತ್ತಿದೆ ನೀನು ನಿನ್ನ ಜಲ್ಲೆಗೆ ಎಷ್ಟು ಮರಳು ಅವಶ್ಯಕತೆ ಇದೆ ಎಂಬುದು ಗೊತ್ತಿಲ್ಲ, ಇಲಾಖೆಯಲ್ಲಿ ಯಾಕೆ ಕೆಲಸವನ್ನ‌ ಮಾಡುತ್ತಿರಿ, ಬೇಡಿಕೆ ಗೊತ್ತಿಲ್ಲ ಪೂರೈಕೆ ಗೊತ್ತಿಲ್ಲ, ನೀವು ಜಿಲ್ಲೆಯಲ್ಲಿ ಏನು ಕೆಲಸವನ್ನ ಮಾಡುತ್ತೀರಿ ಎಂದು ಫುಲ್ ಗರಂ ಆದ ಸಚಿವ ಆಚಾರ ಹಾಲಪ್ಪ ಜ‌ನರಿಗಾಗಿ ನಾನು ಕೆಲಸ ಮಾಡಬೇಕು ಎಂದು ಸಬೆಯಲ್ಲಿ ಅಧಿಕಾರಿಗೆ ಹಿಗ್ಗಾಮುಗ್ಗಾ ಜಾಡಿಸಿದರು.

Dharwad: ನುಗ್ಗಿಕೇರಿ ಘಟನೆಗೆ ಪರೋಕ್ಷವಾಗಿ ಮುಸ್ಲಿಂ ಸಮುದಾಯ ಕಾರಣ: ಶಾಸಕ ಬೆಲ್ಲದ

ಜಿಲ್ಲೆಯಲ್ಲಿ ಎಷ್ಟು ಕೇಸ್ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ಯಾವುದೇ ಮಾಹಿತಿಯನ್ನ ನಿಡಲಿಲ್ಲ. ರಾಜಧನ ಕಟ್ಟದೆ ಧಾರವಾಡ ಜಿಲ್ಲೆಯಲ್ಲಿ ಮರಳು ಬರ್ತಾ ಇದ್ರೆ ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳೇ ನೀವು ಟಾಸ್ಕ್‌ ಪೋರ್ಸ್‌ ಕಮಿಟಿಯ ಅಧ್ಯಕ್ಷರು ಇದಿರಿ ರಿವಿವ್ ಸಭೆ ಮಾಡಬೇಕು ಎಲ್ಲಿ ಲೋಪ ಇದೆ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು, ಧಾರವಾಡ ಜಿಲ್ಲೆಯಲ್ಲಿ ಒಂದೇ ಪಸ್‌ ನಲ್ಲಿ ನಾಲ್ಕೈದು ಟ್ರಿಪ್ ಗಳನ್ನ ಹೊಡೆಯುತ್ತಾರೆ. ಧಾರವಾಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಿ‌ ಏನು ಕೆಲಸವನ್ನ ಮಾಡ್ತಾ ಇದಿರಿ ಎಂದು ಡಿಸಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಇನ್ನು ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಮೋಸ ಮಾಡುತ್ತಾರೆ. ಒಂದೇ ಪಾಸ್‌ನಲ್ಲಿ ನಾಲ್ಕು ಲೋಡ್‌ನ್ನ ಜಿಲ್ಲೆಯಲ್ಲಿ ಡಂಪ್‌ ಮಾಡ್ತಾ ಇದಾರೆ, ಜಿಲ್ಲೆಯಲ್ಲಿ ಎಷ್ಟು ಸ್ಯಾಂಡ್ ಪೂರೈಕೆ ಆಗ್ತಾ ಇದೆ ಅದೆಲ್ಲುದರ ಬಗ್ಗೆ ನನಗೆ ಮಾಹಿತಿಯನ್ನ ಕೊಡಲೇಬೇಕು ಎಂದು ಅಧಿಕಾರಿಗೆ ಸಭೆಯುದ್ದಕ್ಕೂ ಗಣಿ ಮತ್ತು ಭೂ ವಿಜ್ಞಾನ ಸಚಿವರು ಕ್ಲಾಸ್ ತಡಗೆದುಕ್ಕೊಂಡಿದ್ದಾರೆ. 
 

click me!