ವ್ಯಕ್ತಿಯೊಬ್ಬ ತನ್ನ ಒತ್ನಿ ಹಾಗೂ ಪುತ್ರಿಯನ್ನೇ ದೊಣ್ಣೆಯಿಂದ ಬಡಿದು ಕೊಂದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ತನ್ನ ಹೆಂಡತಿ ಮತ್ತು ಪುತ್ರಿಯನ್ನೇ ಹತ್ಯೆ ಮಾಡಿದ್ದ ಆರೋಪದಲ್ಲಿ ಅಸ್ಸಾಂ ಮೂಲದ ಗಫರ್ ಅಲಿ ಬಂಧಿತನಾಗಿದ್ದಾನೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಶುಕ್ರವಾರ ಸಂಜೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮಡಿಕೇರಿ(ಜ.25): ವಿರಾಜಪೇಟೆ ಸಮೀಪದ ಕೊಳ್ತೋಡು ಬೈಗೋಡಿನಲ್ಲಿ ನಡೆದ ತಾಯಿ-ಮಗಳ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೃತ್ಯ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ತನ್ನ ಹೆಂಡತಿ ಮತ್ತು ಪುತ್ರಿಯನ್ನೇ ಹತ್ಯೆ ಮಾಡಿದ್ದ ಆರೋಪದಲ್ಲಿ ಅಸ್ಸಾಂ ಮೂಲದ ಗಫರ್ ಅಲಿ ಬಂಧಿತನಾಗಿದ್ದಾನೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಶುಕ್ರವಾರ ಸಂಜೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ವಿರಾಜಪೇಟೆ ತಾಲೂಕು ಕೊಳ್ತೋಡು ಬೈಗೋಡು ಗ್ರಾಮದ ಮುಕ್ಕಾಟಿ ದೇವಯ್ಯ ಎಂಬವರ ತೋಟಕ್ಕೆ 15 ದಿನಗಳ ಹಿಂದೆ ಅಸ್ಸಾಂ ಮೂಲದ ಗಫäರ್ ಅಲಿ ಎಂಬಾತ, ತನ್ನ ಪತ್ನಿ ಹಾಗೂ 15ರ ಪ್ರಾಯದ ಮಗಳೊಂದಿಗೆ ಬಂದಿದ್ದ. ಜ. 19ರಂದು ಆತ ಕೂಲಿ ಕೆಲಸದ ವೇತನವಾಗಿ 13 ಸಾವಿರ ರುಪಾಯಿಗಳನ್ನು ಮಾಲೀಕರಿಂದ ಪಡೆದುಕೊಂಡಿದ್ದ. ಮರು ದಿನ ಅಲಿಯ ಹೆಂಡತಿ ಮತ್ತು ಮಗಳು ಸಂತೆಗೆ ಹೋಗಿದ್ದಾರೆ ಎನ್ನಲಾಗಿದ್ದು, ಮನೆಗೆ ಬಾರದ ಅವರಿಬ್ಬರನ್ನೂ ಹುಡುಕಲು ಜ. 21ರಂದು ಅಲಿ ಹೊರಟಿದ್ದ. ಆದರೆ, ಆತನು ಕೂಡ ಮನೆಗೆ ಮರಳಲಿಲ್ಲ ಎಂದು ಎಸ್ಪಿ ಹೇಳಿದ್ದಾರೆ.
undefined
ತಾಯಿ, 3 ವರ್ಷದ ಮಗುವಿನ ಮೇಲೆ ಆ್ಯಸಿಡ್ ದಾಳಿ.
ಜ. 23ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತೋಟದ ಬಾವಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದ್ದು, ಅದು ಅಲಿಯ ಪತ್ನಿ ಮತ್ತು ಮಗಳ ಮೃತದೇಹ ಎಂಬುದು ದೃಢವಾಗಿದೆ. ಪತಿ ಅಲಿಯೇ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಿ ತೋಟ ಮಾಲೀಕ ದೇವಯ್ಯ, ಅದೇ ದಿನ ಪೊಲೀಸರಿಗೆ ದೂರು ನೀಡಿದ್ದರು ಎಂದು ಸುಮನ್ ಪನ್ನೇಕರ್ ಹೇಳಿದ್ದಾರೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಮೃತರ ಹೆಸರು ವಿಳಾಸ ಪತ್ತೆಯಾಗದ ಹಿನ್ನೆಲೆಯಲ್ಲಿ ಫೋನ್ ಕರೆ ದಾಖಲೆಯನ್ನು ಕಲೆಹಾಕಿ, ತನಿಖೆ ಕೈಗೊಳ್ಳಲಾಯಿತು. ಇದರಿಂದ, ಮೃತರ ಗುರುತು ಪತ್ತೆ ಮಾಡಲಾಯಿತು. ಮೃತರು, 40 ವರ್ಷ ಪ್ರಾಯದ ಮುರ್ಷಿದ ಕರೂನ್ ಹಾಗೂ ಆಕೆಯ 15 ವರ್ಷದ ಪುತ್ರಿ ಎಂಬುದು ದೃಢವಾಗಿದೆ. ಪ್ರಕರಣ ಆರೋಪಿಯಾದ ಗಫರ್ ಅಲಿ ಅಲಿಯಾಸ್ ಅಲಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಧರ್ಮಕ್ಕೆ ಒಳಿತಾಗುತ್ತದೆ ಎಂದು ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಯತ್ನ!
ಅಲಿ, ಅಸ್ಸಾಂ ರಾಜ್ಯದ ಮಂಗಳದೇಯಿ ಜಿಲ್ಲೆಯ ದಲೇಂಗಾವ್ ನಿವಾಸಿ. ಆರೋೕಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ ಪತ್ತೆ ಮಾಡಿ, ಬಂಧಿಸಲಾಗಿದೆ. ವಿಚಾರಣೆ ಬಳಿಕ, ತಾನು ಹಣದ ವಿಚಾರವಾಗಿ ಪತ್ನಿ ಮತ್ತು ಪುತ್ರಿಯನ್ನು ದೊಣ್ಣೆಯಿಂದ ಹೊಡದು ಕೊಲೆ ಮಾಡಿರುವುದಾಗಿಯೂ, ಬಳಿಕ ಶವಗಳನ್ನು ಬಾವಿಗೆ ಎಸೆದಿರುವುದಾಗಿಯೂ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಹೇಳಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಇನ್ನಷ್ಟುಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧಿಕ್ಷಕರಾದ ಜಯಕುಮಾರ್ ಮಾರ್ಗದರ್ಶನದಲ್ಲಿ ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾದ ಕಾಂತೇಗೌಡ ರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.
ಮಂಡ್ಯ: ಹೆಂಡತಿಯ ಮೊಬೈಲ್ ಹೇಳಿದ ಗಂಡನ ಭೀಕರ ಕೊಲೆ ಕತೆ!
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಎಚ್.ಎಂ. ಮರಿಸ್ವಾಮಿ, ಎಎಸ್‌ಐ ಶ್ರೀಧರ್, ಸಿಬ್ಬಂದಿ ರಾಮಪ್ಪ, ಶ್ರೀನಿವಾಸ, ಮುಸ್ತಾಫ, ಮುನೀರ್, ಗಿರೀಶ, ಶಿಲ್ಪ, ಸುಕುಮಾರ, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ಘಟಕದ ರಾಜೇಶ್ ಮತ್ತು ಗಿರೀಶ್ ಪಾಲ್ಗೊಂಡಿದ್ದರು.