ಚಿಕ್ಕಮಗಳೂರು: ಎರಡು ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ಕುಂಕುಮ ಜಾತ್ರೆ !

Published : May 14, 2022, 12:17 PM ISTUpdated : May 14, 2022, 12:26 PM IST
ಚಿಕ್ಕಮಗಳೂರು:  ಎರಡು ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ಕುಂಕುಮ ಜಾತ್ರೆ !

ಸಾರಾಂಶ

*   ಸ್ವರ್ಣಾಂಬ ದೇವಿ ಬ್ರಹ್ಮ ರಥೋತ್ಸವ  *  ಅರಿಶಿನ ಕುಂಕುಮ ದೇವರಿಗೆ ತೂರುವ  ವಾಡಿಕೆ *  ದಕ್ಷಿಣ ಭಾರತದಲ್ಲೇ ಈ ರೀತಿ ಸಂಪ್ರಾದಯವಿಲ್ಲ   

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮೇ.14): ಭಾರತೀಯ(India) ಹಿಂದೂ(Hindu) ನಾರಿಯರ ಸೌಭಾಗ್ಯದ ಸಂಕೇತವೇ ಅರಿಶಿನ ಕುಂಕುಮ, ಈ ಮಂಗಳ ದ್ರವ್ಯಗಳಿಲ್ಲದೆ ಯಾವ ಶುಭಾ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ರೀತಿಯ ಅರಿಶಿನ ಕುಂಕುಮವನ್ನು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿನ ಜಾತ್ರೆಯಲ್ಲಿ ಸ್ವರ್ಣಾಂಬ ದೇವಿಯತ್ತ ತೂರುವ ಮೂಲಕ ವಿಶಿಷ್ಟ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. 

ಎರಡು ವರ್ಷಗಳ ನಂತರ ಅದ್ಧೂರಿಯಾಗಿ ನಡೆದ ಸ್ವರ್ಣಾಂಬ ದೇವಿ ರಥೋತ್ಸವ

ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಕಡೂರು ಪಟ್ಟಣದಿಂದ ಕೇವಲ 3 ಕಿ.ಮೀ. ಅಂತರದಲ್ಲಿ  ಮಲ್ಲೇಶ್ವರ ಎಂಬ ಪುಟ್ಟ ಗ್ರಾಮವಿದೆ. ಈ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಸ್ವರ್ಣಾಂಬ ದೇವಿಯ(Shri Swarnambha Devi) ಬೃಹತ್ ದೇವಾಲಯವಿದೆ(Temple). ದೇವಿಯು ವಿಶೇಷವಾಗಿ ಗರ್ಭಗುಡಿಯಲ್ಲಿ ಹುತ್ತದ ಮೂಲಕ ಪ್ರತಿಷ್ಠಾಪನೆಯಾಗಿದೆ. ಚೈತ್ರ ಶುದ್ಧ ಸಪ್ತಮಿಯಂದು ಸ್ವರ್ಣಾಂಬ ದೇವಿಯ ವಾರ್ಷಿಕ ರಥೋತ್ಸವ ಆಯೋಜಿಸಲಾಗುತ್ತಿದೆ. ನಿರಂತರವಾಗಿ ಕಳೆದ 50 ವರ್ಷಗಳಿಂದ ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿದ್ದ ಈ ಉತ್ಸವವೂ ಕಳೆದ ಎರಡು ವರ್ಷಗಳಿಂದ ಕೋರೋನಾದಿಂದ ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಭಾರೀ ಅದ್ದೂರಿಯಾಗಿ ಗ್ರಾಮದಲ್ಲಿ ಸ್ವರ್ಣಾಂಬ ದೇವಿ ರಥೋತ್ಸವನ್ನು(Fair) ಆಚರಣೆ ಮಾಡಲಾಯಿತು. 

Chikkamagaluru: ಬೇಸಿಗೆ ರಜೆ ಹಿನ್ನಲೆಯಲ್ಲಿ ಭದ್ರಾ ಅಭಯಾರಣ್ಯಕ್ಕೆ ಪ್ರವಾಸಿಗರ ಭೇಟಿ!

ಅರಿಶಿನ ಕುಂಕುಮ ದೇವಿಯುತ್ತ ತೂರುವ ಪದ್ದತಿ 

ಈ ರಥೋತ್ಸವದ ವಿಶೇಷವೆಂದ್ರೆ ಮಹಿಳೆಯರು ಅರಿಶಿನ ಕುಂಕುಮವನ್ನು ದೇವಿಯತ್ತ ಎಸೆದು ಧನ್ಯತಾಭಾವ ವ್ಯಕ್ತಪಡಿಸುವುದು. ಉತ್ಸವದಲ್ಲಿ ಸ್ವರ್ಣಾಂಬ, ಅರಳೀಮರದಮ್ಮ, ಚೌಡ್ಲಾಪುರದ ಕರಿಯಮ್ಮ ದೇವಿಯನ್ನು ಕಲ್ಯಾಣ ಮಂಟಪದಿಂದ ರಥಾತೋಹಣವಾಗುವ ಮುನ್ನ ಅಡ್ಡಪಲ್ಲಕ್ಕಿಯಲ್ಲಿ ಕರೆದೊಯ್ಯಲಾಗುವುದು. ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಲಾಗುವುದು. ಈ ಸಂದರ್ಭದಲ್ಲಿ ಚಿಕ್ಕಮಗಳೂರು, ಕಡೂರು, ತರೀಕೆರೆ, ತುಮಕೂರು, ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು(Devotees) ಅರಿಶಿನ ಕುಂಕುಮ್ಮ ದೇವಿಯ ವಿಗ್ರಹಗಳತ್ತ ತೂರುತ್ತಾರೆ. ಸುಮಾರು ಮುನ್ನೂರು ಕೆ.ಜಿ.ಯಷ್ಟು ಕುಂಕುಮ-ಅರಿಶಿನ ಎಸುವಂತಹ ದೃಶ್ಯ ಮಾತ್ರ ಮನೋಹರವಾಗಿರುತ್ತದೆ, ಇದ್ರಿಂದ ದೇವಿಯ ರೂಪವೇ ಕಾಣದಂತೆ ಮುಚ್ಚಿಹೋಗಿರುತ್ತದೆ. ಈ ದೇವಿಯನ್ನು ಹೊತ್ತು ತರುವವರೂ ಸಹ ಮಂಗಳ ದ್ರವ್ಯದಿಂದ ತೊಯ್ದು ಹೋಗಿರುತ್ತಾರೆ. ಈ ಅಸಾಮಾನ್ಯ ದೃಶ್ಯವನ್ನು ಕಣ್ಣಾರೆ ಕಂಡು ಅನುಭವಿಸುವ ಭಕ್ತರೇ ಧನ್ಯರಾಗಿಬಿಡುತ್ತಾರೆ.ಇಂತಹ ಸಂಪ್ರದಾಯ ಬೇರೆಲ್ಲೂ ಕಾಣಸಿಗುವುದಿಲ್ಲ

ದಕ್ಷಿಣ ಭಾರತದಲ್ಲೇ ವಿಶಿಷ್ಟ ಸಂಪ್ರದಾಯ ಇರುವ ದೇವಸ್ಥಾನ 

ದಕ್ಷಿಣ ಭಾರತದಲ್ಲೇ(South India) ಈ ರೀತಿ ಸಂಪ್ರದಾಯವಿಲ್ಲ, ಇಲ್ಲಿ ಮಾತ್ರ ಹಲವು ದಶಕಗಳಿಂದಲೂ ಆಚರಣೆ  ಮಾಡಲಾಗುತ್ತಿದೆ. ಬೇರೆ ರಥೋತ್ಸವ, ಜಾತ್ರೆಯಲ್ಲಿ ಸಮಯದಲ್ಲಿ ಭಕ್ತರು  ಬಾಳೆಹಣ್ಣು ತೂರುವ ಪದ್ದತಿ ಇದ್ದು ಇಲ್ಲಿ ಮಾತ್ರ ಅರಿಶಿನ ಕುಂಕುಮ ದೇವರಿಗೆ ತೂರುವ  ಸಂಪ್ರದಾಯವಿದೆ. ಭಕ್ತಾದಿಗಳು ದೇವಿಯ ಉತ್ಸವಮೂರ್ತಿಗಳಿಗೆ ಅದಮ್ಯವಾಗಿ ಎಸೆಯುವ ಕುಂಕುಮ ಅರಿಶಿನದ ಮೂಲಕ ಮನಸ್ಸಪೂರ್ವಕವಾಗಿ ಪೂಜಿಸಿದಂತೆ ಸಂತೃಪ್ತರಾಗುತ್ತದೆ. ಇದ್ರಿಂದ ತಾವು ಮಾಡಿಕೊಂಡಿದ್ದ ಹಲವು ಹರಕೆಗಳು ಈಡೇರುತ್ತವೆ ಎಂಬ ನಂಬುಗೆ ಭಕ್ತರದ್ದಾಗಿದೆ.ಅರಿಶಿನ ಕುಂಕುಮ ತೂರುವುದರಲ್ಲಿ ಕೇವಲ ಮಹಿಳೆಯರಲ್ಲದೆ, ಪುರುಷರು ಸಹ ಸೇರಿಕೊಂಡಿರುತ್ತಾರೆ. ಈ ಮೂಲಕ ದೇವಿಯನ್ನು ಆರಾಧಿಸಿದ ತೃಪ್ತಿ ವ್ಯಕ್ತಪಡಿಸುತ್ತಾರೆ. 

2 ತಿಂಗಳಿಂದ ಬಿಎಸ್‌ಎನ್‌ಎಲ್‌ ಸ್ವಿಚ್ಡ್‌ ಆಫ್‌..!

ಹುತ್ತದಲ್ಲಿ ಒಡಮೂಡಿರುವ ದೇವಿಯ ಕುರಿತು ಒಂದು ಕಥೆಯಿದ್ದು, ಪ್ರಾಚೀನ ಕಾಲದಲ್ಲಿ ಸಾಮಾಜಿಕ ಕಟ್ಟುಪಾಡಿನಂತೆ ಹೆಣ್ಣು ಮಕ್ಕಳನ್ನು ಖುತುಮತಿಯಾಗುವುದಕ್ಕೂ ಮುನ್ನವೇ ಮದುವೆ ಮಾಡಿಕೊಡಲಾಗುತ್ತಿತ್ತು. ಅಕಸ್ಮಾತಾಗಿ ಅಜ್ಜಂಪುರದಲ್ಲಿ ನೆಲೆಸಿದ್ದ ಬ್ರಾಹ್ಮ ಕುಟುಂಬದ ಬಾಲಕಿ ಮದುವೆಗೂ ಮುನ್ನ ಖುತುಮತಿಯಾಗಿದ್ದರಿಂದ ಭಯಭೀರಾದ ಅವರು ಮಗಳಿಗೆ ಮೃಷ್ಟಾನ್ನ ಭೋಜನ ಮಾಡಿಸಿ, ವಸ್ತಾದಿಗಳನ್ನು ತೊಡಿಸಿ ಕಾಡಿನಲ್ಲಿ ಬಿಟ್ಟು ಬಂದಿದ್ದರಂತೆ. ಕಾಡಿನಲ್ಲಿ ಓಡಿಸಿಕೊಂಡು ಬಂದಂತಹ ದುಷ್ಕರ್ಮಿಗಳಿಂದ ಪಾರಾಗಲು ಬಾಲಕಿ ಹುತ್ತದೊಳಗೆ ಬಚ್ಚಿಟ್ಟುಕೊಂಡು ಧ್ಯನಾಸಕ್ತಳಾದಳಂತೆ. ಅದ್ರ ಸ್ವರೂಪವೇ ಈ ಸ್ವರ್ಣಾಂಬ ದೇವಿ ಎಂಬ ನಂಬಿಕೆ ರೂಢಿಯಲ್ಲಿದೆ.

ಒಟ್ಟಾರೆ ಮಲ್ಲೇಶ್ವರದಲ್ಲಿ ನಡೆದ ಈ ಬೃಹತ್ ಕುಂಕುಮಾರ್ಚನೆಯಲ್ಲಿ ಭಕ್ತಾದಿಗಳು ಕೂಡ ಮಿಂದೆಂದ್ದವರಂತೆ ಕಂಡುಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು ಎಂದೇ ಹೇಳಬಹುದಾಗಿದೆ.
 

PREV
Read more Articles on
click me!

Recommended Stories

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ