ಬಿಜೆಪಿ ಸರ್ಕಾರದ ಈ ನಿರ್ಧಾರ ಹುನ್ನಾರ : ಪ್ರೊ.ಭಗವಾನ್‌ ವಿರೋಧ

By Kannadaprabha News  |  First Published Dec 16, 2020, 7:33 AM IST

ಫ್ರೊ.ಕೆ.ಎಸ್‌ ಭಗವಾನ್ ರಾಜ್ಯ ಸರ್ಕಾರದ ಈ ನಿರ್ಧಾರ ಒಂದರ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಅವರ ಆ ಅಸಮಾಧಾನವೇನು..?


ಮೈಸೂರು (ಡಿ.16): ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯ ಹಿಂದೆ ಹುನ್ನಾರವಿದೆ ಎಂದು ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌ ದೂರಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕಾದಲ್ಲಿ ಕೊಲ್ಲುವುದಕ್ಕಾಗಿಯೇ ದನಕರುಗಳನ್ನು ಸಾಕಲಾಗುತ್ತದೆ.

 ಆದರೆ, ದೇಶದಲ್ಲಿ ಗೋ ಹತ್ಯೆ ಕಾಯಿದೆಯನ್ನು ಜಾರಿಗೊಳಿಸುವ ಮೂಲಕ ವಿದೇಶಗಳಿಗೆ ಗೋ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ದುರುದ್ದೇಶವಿದೆ ಎಂದು ಆರೋಪಿಸಿದರು. ಗೋ ಮಾಂಸವನ್ನು ಮುಸ್ಲಿಮರು, ಕ್ರೈಸ್ತರು ತಿನ್ನುತ್ತಾರೆ ಎಂದು ಕಾಯ್ದೆ ಜಾರಿಗೊಳಿಸುವುದು ಸರಿಯಲ್ಲ. ನಮ್ಮ ರೈತರು ಕೂಡಾ ದನಗಳನ್ನು ಕೇವಲ ಕೊಲ್ಲುವುದಕ್ಕೆ ಸಾಕುವುದಿಲ್ಲ. ಮತೀಯ ಭಾವನೆ ದೃಷ್ಟಿಯಿಂದ ಜಾರಿಗೆ ತಂದಿರುವುದು ಸರಿಯಿಲ್ಲ ಎಂದರು.

Tap to resize

Latest Videos

ಬಿಜೆಪಿ ನಿರ್ಧಾರವನ್ನು ಖಡಕ್ ವಿರೋಧಿಸಿದ ದೇವೇಗೌಡ್ರು ..

ಮೊದಲನೆಯದಾಗಿ ಕಾಯಿದೆಯ ಬಗ್ಗೆ ವಿಸ್ತಾರವಾದ ಚರ್ಚೆ ನಡೆಸಿಲ್ಲ. ಹೀಗಾಗಿ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

click me!