* ಗವಿಮಠ ಶ್ರೀಗಳಿಂದ ಮುಂದುವರಿದ ಅಭಿವೃದ್ಧಿ ಕಾರ್ಯ
* ಜಾತ್ರೆಗೊಂದು ಸಮಾಜಮುಖಿ ಕಾರ್ಯ ಕೆರೆಕಟ್ಟೆಗಳ ಅಭಿವೃದ್ಧಿ ಕ್ರಾಂತಿಗೆ ನಾಂದಿ
* ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಗೆ ಹೊಸ ಆಯಾಮ ನೀಡಿದ ಶ್ರೀಗಳು
ಸೋಮರಡ್ಡಿ ಅಳವಂಡಿ
ಕೊಪ್ಪಳ(ಡಿ.13): ಜಲಕಾಯಕದ ಮೂಲಕ ನಾಡಿನಾದ್ಯಂತ ಹೆಸರು ಮಾಡಿ ಜಲಋಷಿ ಎಂದೇ ಖ್ಯಾತಿಯಾಗಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ(Shri Gavisiddeshwara Swamiji) ಪಟ್ಟಾಭಿಷೇಕಕ್ಕೆ ಇಂದಿಗೆ (ಡಿ.13ಕ್ಕೆ) 19 ವರ್ಷ ಪೂರ್ಣಗೊಂಡು, 20ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಜಾತ್ರೆಯ ಸಮೂಹ ಸನ್ನಿಯನ್ನೇ ಸಮಾಜಮುಖಿ ಕಾರ್ಯಕ್ಕೆ ದೂಡಿ, ಜಲಕ್ರಾಂತಿಗೆ ಕಾರಣವಾಗಿದ್ದಾರೆ. 2002 ಡಿ. 13ರಂದು ಕೊಪ್ಪಳದ(Koppal) ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಮಠದ(Gavisiddeshwara Matha) 18ನೇ ಪೀಠಾಧಿಪತಿಯಾಗಿ(Pontiff) ಪಟ್ಟವೇರಿದ್ದಾರೆ. 1977 ಜೂ. 1 ಕಲಬುರಗಿ(Kalaburagi) ಜಿಲ್ಲೆಯ ಹಾಗರಗುಂಡಿ ಗ್ರಾಮದಲ್ಲಿ ಜನಿಸಿ, ಓದುವುದಕ್ಕಾಗಿ ಗವಿಮಠಕ್ಕೆ(Gavi Matha) ಬಂದು, ಇಲ್ಲಿಯೇ ನೆಲೆಸಿದ್ದಾರೆ. 17ನೇ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರವಾಗಿ, ಅವರ ತರುವಾಯ ಪಟ್ಟಾಧಿಕಾರ ಹೊಂದಿದ್ದಾರೆ.
undefined
ಹೊಸರೂಪ:
ಗವಿಮಠದಲ್ಲಿ ಅಭಿವೃದ್ಧಿ ಕ್ರಾಂತಿಯನ್ನೇ(Development Revolution) ಮಾಡಿದ ಅವರು, ಜಾತ್ರೆಗೊಂದು(Fair) ಹೊಸರೂಪ ಕೊಟ್ಟು, ನಾಡಿನ ಶ್ರೇಷ್ಠ ಜಾತ್ರೆಗಳಲ್ಲೊಂದಾಗುವಂತೆ ಮಾಡಿದರು. ಗವಿಮಠಕ್ಕೂ ಹೊಸರೂಪ ನೀಡಿದ್ದಾರೆ. ಅದರ ಮೇಲಿದ್ದ ಸುಣ್ಣಬಣ್ಣ ತೆಗೆಸಿ, ಮೂಲರೂಪಕ್ಕೆ ತಂದಿದ್ದಾರೆ.
ತೆಪ್ಪದಲ್ಲಿ ಕುಳಿತು ಗಬ್ಬು ನಾರುತ್ತಿದ್ದ ಬ್ಯಾರೇಜ್ ಸ್ವಚ್ಛಗೊಳಿಸಿದ ಶ್ರೀ!
2000 ಸಾವಿರ ವಿದ್ಯಾರ್ಥಿಗಳು:
ಪ್ರತಿ ವರ್ಷವೂ ಒಂದು ಸಂಕಲ್ಪ ಮಾಡುತ್ತ ಮತ್ತು ಅದನ್ನು ಅನುಷ್ಠಾನ ಮಾಡುತ್ತಾ ಬಂದಿದ್ದಾರೆ. ಪ್ರಸಾದ ನಿಲಯದಲ್ಲಿದ್ದ ಇದ್ದ ವಿದ್ಯಾರ್ಥಿಗಳ(Students) ಸಂಖ್ಯೆ ಹೆಚ್ಚಳ ಮಾಡಿದರು. ಇದಕ್ಕಾಗಿ ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸುವ ನಿಲಯವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ.
2015ರಿಂದ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ಹೊಸ ಆಯಾಮ ನೀಡಿ, ಪ್ರತಿ ವರ್ಷವೂ ಒಂದು ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿದ್ದಾರೆ. ಅದರಲ್ಲಿ ಕೃಪಾದೃಷ್ಟಿ, ಲಕ್ಷ ವೃಕ್ಷೋತ್ಸವ, ಜಲದೀಕ್ಷೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಸಾಮಾನ್ಯವಾಗಿ ಮಠಗಳಲ್ಲಿ ದಾಸೋಹ ಇರುತ್ತದೆ. ಆದರೆ, ಕೊಪ್ಪಳ ಗವಿಮಠದಲ್ಲಿ ವೃಕ್ಷ ದಾಸೋಹ ಪ್ರಾರಂಭಿಸಿದ್ದಾರೆ. ಮಠಕ್ಕೆ ಬರುವ ಭಕ್ತರು(Devotees) ಆಸಕ್ತಿ ಇದ್ದರೆ ಉಚಿತವಾಗಿ ನೀಡುವ ಗಿಡಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ. ಇದರ ಜತೆಗೆ ಜಿಲ್ಲೆಯಲ್ಲಿ ಹತ್ತಾರು ಕೆರೆಗಳ ಅಭಿವೃದ್ಧಿ ಮಾಡಿದ್ದಾರೆ. ಕಳೆದ ವರ್ಷ ಕೋವಿಡ್(Covid19) ಇದ್ದಿದ್ದರಿಂದ ಸರಳ ಜಾತ್ರೆಯ ಆಚರಣೆ ಸಮಾಜಮುಖಿ ಸೇವೆಗೆ ಅರ್ಪಣೆ ಎನ್ನುವ ತತ್ವದಡಿ ಮೂರು ಸಮಾಜಮುಖಿ ಕಾರ್ಯವನ್ನು(Social Work) ಕೈಗೆತ್ತಿಕೊಂಡಿದ್ದಾರೆ.
ಗಿಣಿಗೇರಿ ಕೆರೆ ಅಭಿವೃದ್ಧಿ, ಅಡವಿಹಳ್ಳಿ ಅಭಿವೃದ್ಧಿ ಹಾಗೂ ಸ್ಪರ್ಧಾತ್ಮಕ ವಿದ್ಯಾಥಿಗಳ ಅಭ್ಯಾಸಕ್ಕಾಗಿ ಗ್ರಂಥಾಲಯ(Llibrary). ಮೂರು ಸಹ ಯಶಸ್ವಿಯಾಗಿ ಆಗಿವೆ.ಇವರು ಕೈಗೆತ್ತಿಕೊಂಡ ಹಿರೇಹಳ್ಳ ಪುನಶ್ಚೇತನ ಯೋಜನೆಯಿಂದ ನಶಿಸಿ ಹೋಗಬೇಕಾಗಿದ್ದ ಹಿರೇಹಳ್ಳ ನಳನಳಿಸುವಂತಾಗಿದೆ.
ಆಚರಣೆ ಇಲ್ಲ:
2002 ಡಿ. 13ರಂದು ಪಟ್ಟಾಧಿಕಾರ ವಹಿಸಿಕೊಂಡಿದ್ದರೂ ಪಟ್ಟಾಭಿಷೇಕ ಮಹೋತ್ಸವವನ್ನು ಇದುವರೆಗೂ ಆಚರಣೆ ಮಾಡಿಕೊಂಡಿಲ್ಲ. ಅದಕ್ಕಾಗಿ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡದೆ ಅದು ಒಂದು ಸಹಜ ದಿನದಂತೆ ಇರುತ್ತಾರೆ. ಶ್ರೀಗಳ ನಾಮಕರಣ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಮೂಲ ಹೆಸರು ಪರ್ವತಯ್ಯ. ಇವರೇ ಮುಂದಿನ ಸ್ವಾಮೀಜಿಗಳು ಎಂದು ಆಗಿನ ಶ್ರೀಗಳು ನಿಶ್ಚಯ ಮಾಡಿ, ಪರುತದೇವರು ಎಂದು ನಾಮಕರಣ ಮಾಡಿದರು. ಪಟ್ಟಾಧಿಕಾರ ವಹಿಸಿಕೊಂಡ ಮೇಲೆ ಇವರನ್ನು ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಎಂದೇ ಕರೆಯಲಾಯಿತು. ಗುಲಬುರ್ಗಾ ವಿವಿಯ ಪದವಿಯಲ್ಲಿ 6ನೇ ರ‍್ಯಾಂಕ್ ಪಡೆದಿರುವ ಇವರು, ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿಯೂ ಸ್ನಾತಕ ಪದವಿ ಪಡೆದಿದ್ದಾರೆ.
ಕೊಪ್ಪಳ ಜಾತ್ರೆಯಲ್ಲೇ ಕಣ್ಣು ದಾನ ಘೋಷಣೆ ಮಾಡಿದ ಗವಿಸಿದ್ಧೇಶ್ವರ ಶ್ರೀ
ಅವರನ್ನು ಪಡೆದಿರುವ ನಾವೇಧನ್ಯರು. ಅವರು ಪಟ್ಟಾಧಿಕಾರ ವಹಿಸಿಕೊಂಡ ಮೇಲೆ ಕೇವಲ ಗವಿಮಠ ಅಲ್ಲ, ಇಡೀ ಕೊಪ್ಪಳ ಜಿಲ್ಲೆಯೇ ಅಭಿವೃದ್ಧಿಯತ್ತ ಸಾಗುತ್ತಿದೆ. ಅವರ ಜಲಕಾಯಕ ಮರೆಯುವಂತೆ ಇಲ್ಲ ಅಂತ ವ್ಯಾಪಾರಸ್ಥ ಸಿದ್ದಣ್ಣ ನಾಲ್ವಡ ತಿಳಿಸಿದ್ದಾರೆ.
ಹಿರೇಹಳ್ಳ ಪುನಶ್ಚೇತನ ಮಾಡುವುದು ಸುಲಭ ಸಾಧ್ಯವಾಗಿರಲಿಲ್ಲ. ಸರ್ಕಾರ ಮನಸ್ಸು ಮಾಡಿದರೂ ಆಗದಂತಹ ಕಾರ್ಯವನ್ನು ಅವರು ಕೇವಲ ವರ್ಷದಲ್ಲಿಯೇ ಮಾಡಿದ್ದಾರೆ. ನಾಶವಾಗುತ್ತಿದ್ದ ಹಿರೇಹಳ್ಳವೀಗ ಮತ್ತೆ ನಳನಳಿಸುವಂತೆ ಆಗಿದೆ ಅಂತ ಗವಿಮಠದ ಭಕ್ತ ಬಸವರಾಜಪುರದ ಹೇಳಿದ್ದಾರೆ.