ಕೊಡಗಿನಲ್ಲಿ ವಾಣಿಜ್ಯ ಬೆಳೆಗಳೇ ಹೆಚ್ಚು, ರೈತರ ಆದಾಯ ಹೆಚ್ಚಿಸುತ್ತವೆಯೇ ಉಪಬೆಳೆಗಳು

By Suvarna News  |  First Published Dec 4, 2022, 5:34 PM IST

ಕೊಡಗು ಜಿಲ್ಲೆಯ ರೈತರು  ಕೊಡಗಿನ ವಾಣಿಜ್ಯ  ಬೆಳೆಗಳನ್ನೆ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅದರೆ ಇದನ್ನ ಹೊರತು ಪಡಿಸಿ ರೈತರು ಇತರ ಉಪಬೆಳೆಗಳನ್ನ ಬೆಳೆಯುವ ಮೂಲಕ ಲಾಭ ಗಳಿಸಬಹುದು ಎಂಬುದನ್ನ ರೈತರಿಗೆ ತಿಳಿಸಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ವರದಿ: ರವಿ. ಎಸ್ ಹಳ್ಳಿ , ಏಷ್ಯಾನೆಟ್ ಸುವರ್ಣನ್ಯೂಸ್

ಮಡಿಕೇರಿ (ಡಿ.4): ಕೊಡಗು ಜಿಲ್ಲೆಯ ರೈತರು  ಕೊಡಗಿನ ವಾಣಿಜ್ಯ  ಬೆಳೆಗಳನ್ನೆ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅದರೆ ಇದನ್ನ ಹೊರತು ಪಡಿಸಿ ರೈತರು ಇತರ ಉಪಬೆಳೆಗಳನ್ನ ಬೆಳೆಯುವ ಮೂಲಕ ಲಾಭ ಗಳಿಸಬಹುದು ಎಂಬುದನ್ನ ಸಾಧರ ಪಡಿಸಲಾಯಿತು. ಹಾಗಾದ್ರೆ ಕೊಡಗಿ‌ನ ರೈತರು ಕಾಫಿ ಹಾಗೂ ಕರಿಮೆಣಸು ಏಲಕ್ಕಿಯ ಜೊತೆಗೆ ಬೇರೆ ಯಾವೆಲ್ಲ ಬೆಳೆಗಳನ್ನ ಬೆಳೆಯಬಹುದು. ಬೇರೆ ರಾಜ್ಯದ ಬೆಳೆಗಳು‌ ಕೊಡಗಿನ ವಾತಾವರಣದಲ್ಲಿ ಬೆಳೆಯಲು ಸಾಧ್ಯವಾಗುತ್ತಾ ಎನ್ನುವುದನ್ನು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದಲೇ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದು ಕಡೆ ವಿವಿಧ ರಾಜ್ಯಗಳಿಂದ ಆಗಮಿಸಿದ ವಿಜ್ಞಾನಿಗಳಿಂದ ವಿಚಾರ ಸಂಕೀರ್ಣ,  ಮತ್ತೊಂದೆಡೆ ವಿವಿಧ ಹಣ್ಣುಗಳು ಹಾಗೂ ಗಿಡಗಳ ಪ್ರದರ್ಶನ ಹಾಗೂ ಮಾರಾಟ. ಹೊಸ ಹೊಸ ತೋಟಗಾರಿಕ ಬೆಳೆಗಳ ಪ್ರಯೋಜನ ಪಡೆದುಕೊಂಡ ಕೊಡಗಿನ ರೈತರು. ಇಂತಹ ರೈತೋಪಯೋಗಿ ಕಾರ್ಯಕ್ರಮ ನಡೆದಿದ್ದು ಕೊಡಗು ಜಿಲ್ಲೆ ಮಡಿಕೇರಿಯ ಕ್ರಿಸ್ಟಲ್ ಕೋರ್ಟ್‍ನಲ್ಲಿ.

Tap to resize

Latest Videos

undefined

ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಉಪ ಕೇಂದ್ರವಾಗಿರುವ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ 75 ನೇ ವರ್ಷಾಚರಣೆಯ ಪ್ರಯುಕ್ತ ಸೊಸೈಟಿ ಫಾರ್ ಪ್ರಮೋಷನ್ ಆಫ್ ಹಾರ್ಟಿಕಲ್ಚರ್ ಸಹಯೋಗದೊಂದಿಗೆ  ಭದ್ರತೆ ಹಾಗೂ ಜೀವನೋಪಾಯಕ್ಕಾಗಿ ಆರ್ದಾ ಉಷ್ಣ ವಲಯದ ತೋಟಗಾರಿಕಾ ಬೆಳೆಗಳ ‘ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ  ರಾಜ್ಯಗಳಿಂದ ಸಂಶೋಧಕರು ಆಗಮಿಸಿದ್ದು ವಿವಿಧ ರಾಜ್ಯಗಳ ವಿವಿಧ ಹಣ್ಣಿನ ಗಿಡಗಳು ಹಾಗೂ ತೋಟಗಾರಿಕಾ ಬೆಳೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನ ನೀಡಿದರು. 

ಅನುವಂಶಿಕ ವೈವಿಧ್ಯತೆ, ಸಂರಕ್ಷಣೆ, ಬಳಕೆ ಮತ್ತು ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಪದ್ಧತಿ ಮಾದರಿಗಳು ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಸಸ್ಯ ಸಂರಕ್ಷಣೆ, ಪರಾಗಸ್ಪರ್ಶಗಳು ಮತ್ತು ಜೇನುಸಾಕಾಣೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಾಮಾಜಿಕ, ಆರ್ಥಿಕ ಅಂಶಗಳು ಮತ್ತು ಮಾರುಕಟ್ಟೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ರು. ಹಾಗೂ ಕೊಡಗಿನ‌ ರೈತರು ಕೊಡಗಿನ ಕಾಫಿ, ಮೆಣಸು ಬೆಳೆಗಳ ಜೊತೆಗೆ ಇತರೆ ಉಪಬೆಳೆಗಳನ್ನ ಕೂಡ ಬೆಳೆದು ಲಾಭಗಳಿಸುವುದು ಹೇಗೆ ಎಂಬುದರ ಕುರಿತು ಕಾರ್ಯಕ್ರಮದಲ್ಲಿ ಹಣ್ಣುಗಳ ವಿಜ್ಞಾನಿ ಕೃಷ್ಣಮೂರ್ತಿ ಅವರು ಮಾಹಿತಿ ನೀಡಿದರು.

ಮುಂಗಾರು ಬೆಳೆನಷ್ಟ, ಕೈ ಹಿಡಿಯುವುದೇ ಹಿಂಗಾರು..!

ಕೊಡಗು,  ಕೇರಳ ಹಿಮಾಚಲ ಪ್ರದೇಶ ಸೇರಿದಂತೆ , ಸುಮಾರು 20 ಕ್ಕೂ ಹೆಚ್ಚು ಭಾಗದ   ಮಳಿಗೆಗಳನ್ನು ವಿಚಾರಣಾ ಸಂಕಿರಣ ಬಳಿ ಹಾಕಲಾಗಿತ್ತು. ಇದರಲ್ಲಿ ಹೊಸದಾಗಿ ಆವಿಷ್ಕರಿಸಿದ ಗಿಡಗಳು, ಹೊಸ ರೀತಿಯ ಹಣ್ಣಿನ ಗಿಡಗಳು ಹಾಗೂ ಹಣ್ಣುಗಳನ್ನ ಪ್ರದರ್ಶನ ಮಾಡಲಾಯಿತು. ಅದರಲ್ಲೂ ಮುಖ್ಯವಾಗಿ ಹಿಮಾಚಲ ಪ್ರದೇಶದಿಂದ ತಂದ ಆ್ಯಪಲ್ ಗಿಡಗಳನ್ನ ಕೂಡ ಮೇಳದಲ್ಲಿ ಮಾರಾಟ ಮಾಡಲಾಯಿತು. ಬಟರ್ ಫ್ರೂಟ್, ಕಿತ್ತಳೆ, ಚಕ್ಕೋತ, ಅಡಿಕೆ, ಜೇನು ಸೇರಿದಂತೆ ವಿವಿಧ ಜಾತಿಯ ತೋಟಗಾರಿಕ ಬೆಳೆಗಳನ್ನ ಪ್ರದರ್ಶನಕ್ಕೆ ಇಡಲಾಗಿತ್ತು. ನೀಡಿದ್ದು  ಇದರ ಪ್ರಯೋಜನವನ್ನ ಕೊಡಗಿನ‌ ರೈತರು ಪಡೆದುಕೊಂಡರು.

ರೋಗ ಬಾಧೆಗೆ ಔಷಧಿ ಮೊರೆ; ರೈತರ ಜೇಬಿಗೆ ಹೊರೆ!

ಕೊಡಗಿನಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ, ಕರಿ ಮೆಣಸು ಬೆಳೆಗಳನ್ನ ಮಾತ್ರ ಕೊಡಗಿನ ರೈತರು ಬೆಳೆಯುತ್ತಿದ್ದು ಇದರ ಜೊತೆಗೆ ಇತರ ಉಪ ಬೆಳೆಗಳನ್ನ ಕೂಡ ಬೆಳೆಯಬಹುದು ಎಂಬುದನ್ನ ತಿಳಿಸಿಕೊಟ್ಟಿರುವುದು ಬಹಳ ಸಹಕಾರಿಯಾಗಿದೆ ಅಂತ್ತಾರೆ ಕೊಡಗಿನ ರೈತ ರತೀಶ್. ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹವಾಗುಣ ವೈಪರೀತ್ಯಗಳಿಂದ ಕೊಡಗಿನ ರೈತರು ಕೊಡಗಿನ ವಾಣಿಜ್ಯ ಬೆಳೆಗಳಲ್ಲಿ ಅಧಿಕ ಲಾಭ ಕಾಣದೆ ನಷ್ಟದಸುಳಿಯಲ್ಲಿ ಸಿಲುಕುತ್ತಿದ್ದಾರೆ.‌ ಈ ರೀತಿಯ ಉಪ ಬೆಳೆಗಳು  ರೈತರ ಬಾಳಿಗೆ ನಿಜಕ್ಕೂ ಆಸರೆಯಾಗಲಿವೆಯ ಎಂಬುದನ್ನ ಕಾದುನೋಡಬೇಕಿದೆ.

click me!