ಕಸ್ತೂರಿ ರಂಗನ್ ವರದಿ ಪುನರ್ ಪರಿಶೀಲನೆ ಸಮಿತಿ ರಚನೆ ಮಾಡಿರೋದು ಸಂತೋಷದ ಸಂಗತಿಯಾದ್ರು ಜನರ ಆತಂಕ ಮಾತ್ರ ದೂರಾಗಿಲ್ಲ. ಪುನರ್ ಪರಿಶೀಲನ ಸಮಿತಿ ರಚಿಸೋದಷ್ಟೆ ಅಲ್ಲ. ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಜನರ ಒತ್ತಾಯ
ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಅ.14): ಕಸ್ತೂರಿ ರಂಗನ್ ವರದಿ. ಈ ಹೆಸರು ಕೇಳ್ತಿದ್ದಂತೆ ರಾಜ್ಯದ 10 ಜಿಲ್ಲೆ ಜೊತೆ ಕಾಫಿನಾಡ ಅರ್ಧಕ್ಕಿಂತ ಹೆಚ್ಚು ಜನ ನಿಂತಲ್ಲೇ ದಂಗಾಗ್ತಾರೆ. ಎಲ್ಲಿ-ಯಾವಾಗ-ಹೇಗೆ ಬದುಕು ಬೀದಿಗೆ ಬರುತ್ತೋ ಅಂತ ಕಂಗಾಲಾಗ್ತಾರೆ. ಆದ್ರೆ, ಜನ ಮಾತ್ರ ಹೋರಾಟ ನಿಲ್ಸಿಲ್ಲ. ಎರಡು ವರ್ಷದಿಂದ ನಿರಂತರವಾಗಿ ಹೋರಾಡ್ತಿದ್ದಾರೆ. ಜನರ ಹೋರಾಟದ ಫಲವಾಗಿ ಸರ್ಕಾರವೀಗ ಕಸ್ತೂರಿ ರಂಗನ ವರದಿಯ ಪುನರ್ ಪರಿಶೀಲನ ಸಮಿತಿ ರಚನೆ ಮಾಡಿರೋದು ಸಂತೋಷದ ಸಂಗತಿಯಾದ್ರು ಜನರ ಆತಂಕ ಮಾತ್ರ ದೂರಾಗಿಲ್ಲ. ಯಾಕಂದ್ರೆ, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಎಲ್ಲೋ ಕೂತು ಸೆಟಲೈಟ್ ಆಧಾರದ ಮೇಲೆ ಒಂದು ವರ್ಷ ಬಿಟ್ಟು ವರದಿ ನೀಡಿದ್ರೆ ನಮ್ಮ ಬದುಕು ಬೀದಿಗೆ ಬೀಳೋದು ಗ್ಯಾರಂಟಿ. ಅವರು ಬರಲಿ ಜನ ಮಾಡಿದ ತೋಟ ಯಾವ್ದು, ಸರ್ಕಾರದ ಕಾಡ್ಯಾವುದು. ಕಾಫಿ-ಅಡಿಕೆ-ತೆಂಗು ಯಾವ್ದು ಅಂತ ನೋಡಬೇಕು. ಸೆಟಲೈಟ್ ಆಧಾರದ ಮೇಲೆ ಕಣ್ಣಿಗೆ ಕಂಡ ಹಸಿರೆಲ್ಲಾ ಕಾಡೇ ಅಂದ್ರೆ ಜನ ಎಲ್ಲಿಗೆ ಹೋಗಬೇಕು. ಹಾಗಾಗಿ, ಪುನರ್ ಪರಿಶೀಲನ ಸಮಿತಿ ರಚಿಸೋದಷ್ಟೆ ಅಲ್ಲ. ಅವರು ಸ್ಥಳಕ್ಕೆ ಬರಬೇಕು. ಇಲ್ಲಿನ ವಾಸ್ತವ ಅಂಶವನ್ನ ಮನಗಂಡು ಸರ್ಕಾರಕ್ಕೆ ವರದಿ ನೀಡಬೇಕೆಂದು ಹೋರಾಟ ಸಮತಿ ಅಧ್ಯಕ್ಷ ವಿಜಯ್ ಕುಮಾರ್ ಮನವಿ ಮಾಡಿದ್ದಾರೆ.
undefined
ಮಲೆನಾಡಿನ ಜನರಲ್ಲಿ ನಿರಂತರವಾಗಿ ಭೀತಿ ಹುಟ್ಟುಸುತ್ತಿರುವ ವರದಿ
10 ಕಿ.ಮೀ. ಬಫರ್ ಜ್ಹೋನ್ ಎಂದು ಹೇಳಿದ್ದಾರೆ. ಸೂಕ್ಷ್ಮ ಪ್ರದೇಶ ಎಂದು ಗುರುತು ಮಾಡಿದ ಗಡಿಯ ಸುತ್ತಲೂ 10 ಕಿ.ಮೀ. ಬಫರ್ ಜ್ಹೋನ್ ಇರುತ್ತೆ. ಕೋರ್ ಜ್ಹೋನ್ಗೆ ಯಾವ ಕಾನೂನು ಅಪ್ಲೈ ಆಗುತ್ತೋ ಅದೆಲ್ಲಾ ಬಫರ್ ಜ್ಹೋನಿಗೂ ಅಪ್ಲೈ ಆಗುತ್ತೆ. ಅದು ಜಾರಿಯಾದ್ರೆ ಚಿಕ್ಕಮಗಳೂರು ನಗರ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಪಟ್ಟಣ ಇರೋದಿಲ್ಲ. ಹಾಗಾಗಿ, ಅಧಿಕಾರಿಗಳು ಎಲ್ಲೋ ಕೂತು ಉಪಗ್ರಹ ಫೋಟೋ ಆಧಾರದಲ್ಲಿ ವರದಿ ನೀಡದೆ ಸ್ಥಳ ಪರಿಶೀಲನೆ ಮಾಡಿ ನ್ಯಾಯಯುತವಾಗಿ ಜನರ ಬದುಕಿಗೆ ತೊಂದರೆಯಾಗದಂತಹಾ ವೈಜ್ಞಾನಿಕ ಬಫರ್ ಜ್ಹೋನ್ ಅಳವಡಿಸಿ ಎಂದು ಮನವಿ ಮಾಡಿದ್ದಾರೆ.
ಪಶ್ಚಿಮಘಟ್ಟ ಬಗ್ಗೆ ಚರ್ಚೆಗೆ ಜು.18ರಂದು ಮಲೆನಾಡು ಶಾಸಕರ ಸಭೆ
ಹಾಗಾಗಿ, ಈಗಾಗಲೇ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಜನಜಾಗೃತಿಗೆ ಸನ್ನದ್ಧವಾಗಿದೆ. ಅಲ್ಲಿ ರಾಜಕೀಯ ನಾಯಕರಿಗೆ ಅವಕಾಶ ಇರುವುದಿಲ್ಲ. ಅವರ ಪುಕ್ಕಟೆ ಪ್ರಚಾರ ಕೊಡಲ್ಲ. ನಮಗೆ ಹೋರಾಟ ಹೊಸದಲ್ಲ. ನಿರಂತರವಾಗಿದೆ. ಇರುತ್ತೆ. ಸೂಕ್ತ ನ್ಯಾಯ ಸಿಗುವವರೆಗೂ ಅದು ನಿಲ್ಲಲ್ಲ. ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಯನ್ನ ಬಹಿಷ್ಕರಿಸಿದ್ವಿ. ಹೀಗೆ ಮುಂದುವರೆದರೆ ಎಂ.ಎಲ್.ಎ. ಎಂ.ಪಿ. ತಾಪಂ, ಜಿಪಂ ಯಾವ ಎಲೆಕ್ಷನ್ ಮತ ಹಾಕದಂತೆಯೂ ನಿರ್ಧಾರ ಮಾಡ್ತೀವಿ ಅಂತಾರೆ ಬದುಕಿನ ಭಯದಲ್ಲಿರುವ ಹೋರಾಟಗಾರಾದ ವಾಸು ಪೂಜಾರಿ.
Uttara Kannada; ಆರ್.ವಿ. ದೇಶ್‌ಪಾಂಡೆ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ
ಒಟ್ಟಾರೆ, ದೊಡ್ಡ-ದೊಡ್ಡ ಅಧಿಕಾರಿಗಳು ಎಸಿಯ ಕೂಲ್ ರೂಂನಲ್ಲಿ ಹಾಟ್ ಕಾಫಿ ಕುಡಿಯುತ್ತಾ ವರದಿ ನೀಡೋದು ಡೆಡ್ ಈಜಿ. ಆದ್ರೆ, ಆ ವರದಿ ಜನರ ಬದುಕಿನ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಅನ್ನೋದನ್ನ ಯೋಚನೆ ಮಾಡಬೇಕಿದೆ. ಅವರು ವರದಿ ನೀಡಿ ಬಿಲ್ಡಿಂಗ್ ಮನೆಗೆ ಹೋಗ್ತಾರೆ. ಅದು ಜಾರಿಯಾದ್ರೆ ಜನ ಬೀದಿಗೆ ಬಂದು ನಿಲ್ಬೇಕಾಗುತ್ತೆ. ಪ್ರಕೃತಿ ಉಳಿಸ್ಬೇಕು ನಿಜ. ಹಾಗಾಂತ ಶತಮಾನದಿಂದ ಬದುಕಿದ ಜನರನ್ನ ಬೀದಿಗೆ ತಂದಲ್ಲ. ಹಾಗಾಗಿ, ಅಧಿಕಾರಿಗಳು ಎಲ್ಲೋ ಕೂತು ವರದಿ ನೀಡೋ ಬದಲು ಸ್ಥಳಪರಿಶೀಲನೆ ಮಾಡಿ ವರದಿ ನೀಡಿದ್ರೆ ಬಡವರ ಬದುಕು ಉಳಿಯುತ್ತೆ.