ಕಳೆದ ಒಂದೂವರೆ ದಶಕದಲ್ಲಿ ಮೂರು ಮಹಾ ಪ್ರವಾಹಗಳನ್ನು ಎದುರಿಸಿದ ಉತ್ತರ ಕರ್ನಾಟಕದ ಮಂದಿ, ಅದಕ್ಕೊಂದು ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿದ್ದರು. ಆದರೆ, ‘ಉತ್ತರ ಕರ್ನಾಟಕ’ದ ನದಿ ತೀರದ ಜನತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮತ್ತೊಮ್ಮೆ ನಿರಾಸೆಗೊಳಿಸಿದ್ದಾರೆ.
(ಬಜೆಟ್ ವಿಶ್ಲೇಷಣೆ - ಹುಬ್ಬಳ್ಳಿ)
ಹುಬ್ಬಳ್ಳಿ (ಜು.8) : ಕಳೆದ ಒಂದೂವರೆ ದಶಕದಲ್ಲಿ ಮೂರು ಮಹಾ ಪ್ರವಾಹಗಳನ್ನು ಎದುರಿಸಿದ ಉತ್ತರ ಕರ್ನಾಟಕದ ಮಂದಿ, ಅದಕ್ಕೊಂದು ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿದ್ದರು. ಆದರೆ, ‘ಉತ್ತರ ಕರ್ನಾಟಕ’ದ ನದಿ ತೀರದ ಜನತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮತ್ತೊಮ್ಮೆ ನಿರಾಸೆಗೊಳಿಸಿದ್ದಾರೆ.
undefined
ಪಂಚ ನದಿಗಳ ಬೀಡು ಉತ್ತರ ಕರ್ನಾಟಕ ಈ ನದಿಗಳಿಂದ ಸಮೃದ್ಧಿ ಕಾಣುವುದಕ್ಕಿಂತ ಸಂಕಷ್ಟಎದುರಿಸಿದ್ದೇ ಹೆಚ್ಚು. 2009, 2011, 2017ರ ಸಾಲಿನಲ್ಲಿ ಈ ನದಿಗಳು ಉಕ್ಕೇರಿ ಉಂಟು ಮಾಡಿದ್ದ ಸಾವು-ನೋವು ಅಷ್ಟಿಷ್ಟಲ್ಲ. ಆಗ ಬೀದಿಪಾಲಾಗಿದ್ದ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ನೀಡಿದ್ದ ಅಂದಿನ ಸರ್ಕಾರ, ಈ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿತ್ತು.
Karnataka budget 2023: ಕಾಫಿ ನಾಡಿಗೆ ಕೈ ಕೊಟ್ಟರಾಜ್ಯ ಸರ್ಕಾರ: ಜಿಲ್ಲೆಗೆ ಬಿಗ್ ಝೀರೋ ಶಾಕ್
ಕೃಷ್ಣಾ, ಭೀಮಾ, ದೋಣಿ, ಮಲಪ್ರಭಾ, ಘಟಪ್ರಭಾ, ವರದಾ ನದಿಗಳು ಮತ್ತು ಬೆಣ್ಣಿ ಹಳ್ಳ, ತುಪ್ರಿ ಹಳ್ಳಗಳ ಸಮೀಕ್ಷೆ ಮಾಡಿ, ಗಡಿ ಗುರುತಿಸಿ, ಒತ್ತುವರಿ ತೆರವು ಮಾಡುವುದು ಮತ್ತು ಹೊಳೆ-ಹಳ್ಳಗಳ ಮಧ್ಯದ ಕಂಟಿ, ಕಲ್ಲುಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದು. ಸಾಧ್ಯವಿದ್ದೆಡೆ ಸಣ್ಣ, ಸಣ್ಣ ಬ್ಯಾರೇಜುಗಳನ್ನು ನಿರ್ಮಿಸಿ ಪ್ರವಾಹದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ.
ಆದರೆ, ಈವರೆಗೆ ಬೆಣ್ಣಿಹಳ್ಳ ಮತ್ತು ತುಪ್ರಿ ಹಳ್ಳಗಳಲ್ಲಿ ಈ ಯೋಜನೆ ಅನ್ವಯಿಸಿ ಕೆಲವಷ್ಟುಕಾಮಗಾರಿಗಳು ಆಗಿವೆ. ಉಳಿದ ನದಿಗಳ ವಿಷಯದಲ್ಲಿ ನೆರೆ ಸಮಸ್ಯೆಯೇ ಮರೆತು ಹೋದಂತೆ ಸರ್ಕಾರಗಳು ವರ್ತಿಸುತ್ತ ಬಂದಿವೆ. ಹಾಗಾಗಿ, ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ನೆರೆ ಸಂತ್ರಸ್ತರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಈಗ ಅದೂ ಹುಸಿಯಾಗಿದೆ.
ಕಳಸಾ-ಬಂಡೂರಾ ಬಗ್ಗೆಯೂ ಸ್ಪಷ್ಟನಿಲುವಿಲ್ಲ:
ಕಳಸಾ-ಬಂಡೂರಾ ಹಳ್ಳಗಳ ನೀರನ್ನು ಮಲಪ್ರಭೆಗೆ ತಿರುಗಿಸಿ, ಅದರಿಂದ 3.90 ಟಿಎಂಸಿ ಕುಡಿಯುವ ನೀರು ಬಳಸಿಕೊಳ್ಳುವ ಯೋಜನೆ ಕುರಿತಂತೆಯೂ ಯಾವುದೇ ಸ್ಪಷ್ಟನಿಲುವನ್ನು ಸರ್ಕಾರ ತಾಳಿಲ್ಲ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಗಳ ವಿಷಯದಲ್ಲಿ ತುಸು ಆಸಕ್ತಿದಾಯಕ ಎನಿಸುವಷ್ಟುಸ್ಪಂದಿಸಿದೆ. ಕೇಂದ್ರದಿಂದ ಸಕ್ಷಮ ಪ್ರಾಧಿಕಾರದ ತೀರುವಳಿ ಪಡೆಯುವುದು ಮತ್ತು ತಿಮ್ಮಾಪುರ ಏತ ನೀರಾವರಿಗೆ ಆದ್ಯತೆ, ತುಂಗಭದ್ರಾ ನದಿಗೆ ಅಡ್ಡಲಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವುದಕ್ಕೂ ತುಸು ಉತ್ಸಾಹ ತೋರಿದೆ.
ದೋಷಯುಕ್ತ ಮೊಬೈಲ್ ಸರಬರಾಜು; ಆಸುಸ್ ಕಂಪನಿಗೆ .78 ಸಾವಿರ ದಂಡ ಮತ್ತು ಪರಿಹಾರ
ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಒತ್ತು:
ಇನ್ನು, ಹಂಪಿ, ಗೋಲಗುಮ್ಮಜ, ಬಾದಾಮಿ ಗುಹಾಲಯ, ಕಿತ್ತೂರು ಕೋಟೆ, ಸವದತ್ತಿ, ಲಕ್ಕುಂಡಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿರುವುದು ಈ ಭಾಗದ ಜನತೆಯಲ್ಲಿ ತುಸು ನೆಮ್ಮದಿ ತರಿಸಿದೆ. ಉಳಿದಂತೆ ಈ ಭಾಗದ ಅಭಿವೃದ್ಧಿಗೆ ಹೇಳಿಕೊಳ್ಳುವಂತಹ ಯಾವುದೇ ಯೋಜನೆಯ ಘೋಷಣೆಯೂ ಬಜೆಟ್‌ನಲ್ಲಿ ಇಲ್ಲ.