ರಾಯಚೂರು: ನೆಚ್ಚಿನ ಶಿಕ್ಷಕ ಸಾವು, ಶಾಲೆ ಬಿಟ್ಟು ಅಂತ್ಯಕ್ರಿಯೆಗೆ ಬಂದ ನೂರಾರು ಮಕ್ಕಳು..!

By Girish Goudar  |  First Published Aug 29, 2023, 6:49 AM IST

ಏಕಾಏಕಿ ಶಿಕ್ಷಕ ಕೃಷ್ಣಜಿ ಸಾವು ಇಡೀ ಶಾಲೆ ಮತ್ತು ಗ್ರಾಮಸ್ಥರಿಗೆ ಶಾಕ್ ಆಗಿತ್ತು. ನೆಚ್ಚಿನ ಶಿಕ್ಷಕರನ್ನ ಕಳೆದುಕೊಂಡ ‌ಮಕ್ಕಳು ಮತ್ತು ಶಿಕ್ಷಕರು ಎಲ್ಲರೂ ಸೇರಿ ಶಿಕ್ಷಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. 


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಆ.29):  ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಶಿಕ್ಷಕ ಕೃಷ್ಣಜಿ ಕುಲಕರ್ಣಿ ಏಕಾಏಕಿ ಸಾವನ್ನಪ್ಪಿದರು. ಶಿಕ್ಷಕ ಸಾವಿನ ಸುದ್ದಿ ತಿಳಿದು ಶಿಕ್ಷಕರು ಮತ್ತು ಮಕ್ಕಳು ಕಣ್ಣೀರು ಹಾಕಿದ್ರು. ಅಷ್ಟೇ ಅಲ್ಲದೆ ತರಗತಿ ಬಿಟ್ಟು ಮಕ್ಕಳು ಶಿಕ್ಷಕರ ಸ್ವಗಾಮಕ್ಕೆ ಆಗಮಿಸಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು.

Latest Videos

undefined

ಯಾರು ಈ ಕೃಷ್ಣಜಿ ಕುಲಕರ್ಣಿ ಶಿಕ್ಷಕ?

ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಆನೆಹೊಸೂರು ಗ್ರಾಮದ ಕೃಷ್ಣಜಿ, ಶಿಕ್ಷಕರಾಗಿ 1993ರಲ್ಲಿ ಲಿಂಗಸೂಗೂರು ತಾಲೂಕಿನ ನೀರಲಕೇರಿ ಗ್ರಾಮದ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ಸೇರಿದ್ರು. ಅಂದಿನಿಂದ ಇಂದಿನವರೆಗೆ ಅಂದ್ರೆ ಸುಮಾರು 30ವರ್ಷಗಳ ಕಾಲ‌ ಒಂದೇ ಗ್ರಾಮದಲ್ಲಿ ಸುದೀರ್ಘ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಇಡೀ ನೀರಲಕೇರಿ ಗ್ರಾಮದ ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಾಗಿದ್ರು. ಅಷ್ಟೇ ಅಲ್ಲದೆ ಇಡೀ ಶಾಲೆಯ ಎಲ್ಲಾ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಆದ್ರೆ ಏಕಾಏಕಿ ಶಿಕ್ಷಕ ಕೃಷ್ಣಜಿ ಸಾವು ಇಡೀ ಶಾಲೆ ಮತ್ತು ಗ್ರಾಮಸ್ಥರಿಗೆ ಶಾಕ್ ಆಗಿತ್ತು. ನೆಚ್ಚಿನ ಶಿಕ್ಷಕರನ್ನ ಕಳೆದುಕೊಂಡ ‌ಮಕ್ಕಳು ಮತ್ತು ಶಿಕ್ಷಕರು ಎಲ್ಲರೂ ಸೇರಿ ಶಿಕ್ಷಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. 

Raichur: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ

ಸಮಯದ ಜೊತೆಗೆ ಶಿಸ್ತು ಬೋಧಿಸಿದ ಶಿಕ್ಷಕ ಕೃಷ್ಣಜಿ:

ಎಲ್ಲಾ ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುವುದು ಕಾಮಾನ್. ಆದ್ರೆ ಕೃಷ್ಣಜಿ ಪಾಠದ ಜೊತೆಗೆ ತಾವೇ ಸಮಯ ಪಾಲನೆ ಜೊತೆಗೆ ಶಿಸ್ತಿನ ಸಿಪಾಯಿ ಆಗಿದ್ರು. ಶಾಲೆಗೆ ಬಂದಾಗ ತಾವು ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಶಿಕ್ಷಕರಿಗೂ ಸಹ ಆದರ್ಶದ ಮಾತುಗಳು ಹೇಳುತ್ತಿದ್ದರು. ಇನ್ನೂ ಶಿಕ್ಷಕ ಕೃಷ್ಣಜಿ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಮಹಾಭಾರತ, ರಾಮಾಯಣ,ಹಾಸ್ಯ,ಸಣ್ಣಕಥೆಗಳನ್ನು ಹೇಳಿ ಮಕ್ಕಳಿಗೆ ‌ಬದುಕಿನ ಪಾಠ ಕಲಿಸಿದರು.

ನೀರಲಕೇರಿ ಗ್ರಾಮದ ಮರೆಯದ ಮಾಣಿಕ್ಯ: 

ಮೃತ ಕೃಷ್ಣಜಿ ಸರ್ಕಾರಿ ಶಾಲೆಯ ಶಿಕ್ಷಕರು ಆಗಿದ್ರು. ಆದ್ರೂ ಇಡೀ ನೀರಲಕೇರಿ ಗ್ರಾಮಕ್ಕೆ ಚಿರಪರಿಚಿತವಾಗಿದ್ರು. ಯಾರು ಯಾವುದೇ ಚಟಕ್ಕೆ ಬಲಿಯಾಗುತ್ತಿದ್ರೆ ಅಂತವರಿಗೆ ಕರೆದು ಚಟದಿಂದ ಆಗುವ ದುಷ್ಟ ಪರಿಣಾಮಗಳ ಬಗ್ಗೆ ಹೇಳಿ ಚಟಗಳು ಬಿಡಿಸಿದ್ದು ಇದೆ. ಸಂಬಂಧದ ಮಹತ್ವ  ಸಮಾಜದೊಂದಿನ ನಂಟಿನ ಬಗ್ಗೆ, ಸ್ನೇಹ ಸಂಬಂಧ, ನೇರೆಹೋರೆ ಅವರಿಗೆ ನಡೆದುಕೊಳ್ಳುವ ಬಗ್ಗೆಯೂ ಶಿಕ್ಷಕರು ತಿಳಿಹೇಳುತ್ತಿದ್ರು‌. ಕೃಷ್ಣಜಿ ಅವರ ಪ್ರಯತ್ನದ ಫಲವಾಗಿ ಗ್ರಾಮೀಣ ಮಕ್ಕಳು ಅಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿವಹಿಸಿದ್ರು. ಒಂದು ಬಾರಿ ಖೋ ಖೋ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಮಾಡಿದ್ದು ಇದೆ. ಇನ್ನೂ ನಾವು ಬದುಕಲ್ಲಿ ಹೇಗಿರಬೆಕು ಅನ್ನುವುದನ್ನ ಅಸಂಖ್ಯಾತ ವಿದ್ಯಾರ್ಥಿಗಳ ಜೀವನವನ್ನ ಕಲಿಸಿಕೊಟ್ಟ ಶಿಕ್ಷಕ ಈಗ ನೆನಪು ಮಾತ್ರ.

click me!