ಮೂಳೆಗಳು, ಹಲ್ಲು, ಹೊಟ್ಟೆ, ಕರುಳು ನೋವು, ತಲೆ ಸುತ್ತುವುದು ಅಧಿಕ ರಕ್ತದ ಒತ್ತಡ ಹೃದಯ ಸಂಬಂಧಿಸಿದ ಕಾಯಿಲೆ, ಕಿಡ್ನಿ, ಲೀವರ್ ಶ್ವಾಸಕೋಶದ ಜೊಂಡಿಸ್, ಟೈಪರ್ಡ್, ಚರ್ಮ ಕಾಯಿಲೆ, ತಲೆ ಕೂದಲು ಉದುರುವಿಕೆ ಸಂಬಂಧಿಸಿದ ಕಾಯಿಲೆಗಳು ಕಂಡು ಬರುತ್ತಿರುವುದು ಸಾಮಾನ್ಯವಾಗಿವೆ.
ಸಿ.ಎ.ಇಟ್ನಾಳಮಠ
ಅಥಣಿ(ಡಿ.03): ಅಥಣಿ ಮತ್ತು ಕಾಗವಾಡ ಎರಡು ವಿಧಾನಸಭಾ ಮತಕ್ಷೇತ್ರದಲ್ಲಿ ನಾವು ಕೊಳವೆ ಬಾವಿಗಳಿಂದ ಕುಡಿಯುವ ನೀರು ಎಷ್ಟರ ಮಟ್ಟಿಗೆ ಆರೋಗ್ಯ ಹಿತವನ್ನು ನೀಡಬಲ್ಲದು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಸದ್ಯಕ್ಕೆ ಗ್ರಾಮೀಣ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ ಅಂಕಿ ಅಂಶಗಳ ಪ್ರಕಾರ ಸರ್ಕಾರ 1,150 ಕೊಳವೆ ಬಾವಿಗಳಿದ್ದು, ಇವುಗಳ ಪೈಕಿ ಶೇ.27 ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಇವುಗಳಲ್ಲಿ ಗಡಸು ನೀರಿನ ಪ್ರಮಾಣ ಮತ್ತು ಕ್ಯಾಲ್ಸಿಯಂ, ಮೇಗ್ನಿಷಿಯಂ, ಸೋಡಿಯಂ ನೈಟ್ರೀಟಿಸ್ ಸ್ವಲ್ಪ ಮಟ್ಟಿನ ಪ್ಲೊರೈಡ್ ಅಂಶ ಇರುವುದರಿಂದ ಇಂಥ ನೀರನ್ನು ನಿತ್ಯ ಕುಡಿಯುವುದರಿಂದ ಆರೋಗ್ಯದ ಮೇಲೆ ಕಾಲಾಂತರದಲ್ಲಿ ಅಪಾಯವನ್ನುಂಟು ಮಾಡುತ್ತವೆ.
ಮೂಳೆಗಳು, ಹಲ್ಲು, ಹೊಟ್ಟೆ, ಕರುಳು ನೋವು, ತಲೆ ಸುತ್ತುವುದು ಅಧಿಕ ರಕ್ತದ ಒತ್ತಡ ಹೃದಯ ಸಂಬಂಧಿಸಿದ ಕಾಯಿಲೆ, ಕಿಡ್ನಿ, ಲೀವರ್ ಶ್ವಾಸಕೋಶದ ಜೊಂಡಿಸ್, ಟೈಪರ್ಡ್, ಚರ್ಮ ಕಾಯಿಲೆ, ತಲೆ ಕೂದಲು ಉದುರುವಿಕೆ ಸಂಬಂಧಿಸಿದ ಕಾಯಿಲೆಗಳು ಕಂಡು ಬರುತ್ತಿರುವುದು ಸಾಮಾನ್ಯವಾಗಿವೆ.
ಉತ್ತರ ಕರ್ನಾಟಕದ ಸಮಸ್ಯೆ ನಿವಾರಣೆಗೆ ಆಗ್ರಹ: ಬೆಳಗಾವಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ
ಗ್ರಾಮೀಣ ಪ್ರದೇಶದಲ್ಲಿ ಶೇ.85 ಜನರು ಕೃಷಿ ಚಟುವಟಿಕೆ ಹಿಡಿದು ನಿತ್ಯ ಬಳಕೆಗೆ ಬೇಕಾಗುವ ನೀರನ್ನು ಕೊಳವೆ ಬಾವಿಯಿಂದ ಅವಲಂಬಿತರಾಗಿದ್ದಾರೆ. ಅಥಣಿ ಮತ್ತು ಕಾಗವಾಡ ಮತಕ್ಷೇತ್ರ ಸೇರಿ ಸುಮಾರು 2 ಲಕ್ಷ ಕೊಳವೆ ಭಾವಿಗಳು ಅನಧಿಕೃತವಾಗಿವೆ. ಅದಲ್ಲದೇ ಅವುಗಳಲ್ಲಿ ನೀರು ಉಪಯೋಗಕ್ಕೆ ಶುದ್ಧ ಇಲ್ಲವೇ, ಅಶುದ್ಧ ಎಂಬುವುದನ್ನು ಪ್ರಯೋಗಲಾಯದಿಂದ ಪರೀಕ್ಷೆ ಮಾಡಿಸಿಕೊಳ್ಳದೇ ಬಳಸುತಿದ್ದಾರೆ. ಅಧಿಕೃತ ಕೊಳವೆ ಬಾವಿ ಕೇವಲ 1,150 ಗಳಲ್ಲಿ ಶೇ.27 ಪ್ರತಿಶತ ಕುಡಿಯಲು ಯೋಗವಲ್ಲದಾಗಿವೆ. ಇನ್ನೂ ಅನಧಿಕೃತ ಬೋರ್‌ಗಳ ನೀರು ಎಷ್ಟು ಪ್ರಮಾಣದಲ್ಲಿ ಅನಧಿಕೃತವಾಗಿದ್ದ ಕೊಳವೆ ಬಾವಿಗಳಿಗೆ ಲೆಕ್ಕವೇ ಇಲ್ಲ. ಎಷ್ಟೋ ಸರ್ಕಾರಿ ಕಚೇರಿ ಆವರಣದಲ್ಲಿ, ಕನ್ನಡ ಶಾಲೆ ಮತ್ತು ಹೈಸ್ಕೂಲ್ ಕಾಲೇಜ್ ಆವರಣದಲ್ಲಿ ಕೊರೆದ ಕೊಳವೆ ಬಾವಿಗಳು ಸರ್ಕಾರದಲ್ಲಿ ದಾಖಲೆ ಇಲ್ಲ ಮತ್ತು ಪ್ರಯೋಗಾಲುದ ಪರೀಕ್ಷೆ ಆಗಿಲ್ಲ. ಅವು ಸಹ ಅನಧಿಕೃತವಾಗಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಸರ್ಕಾರ ನಿಯಮ ಪ್ರಕಾರ ಕಂದಾಯ ಇಲಾಖೆ ಖಾಸಗಿ ಮತ್ತು ಸರ್ಕಾರಿ ಕೊಳವೆ ಬಾವಿ ದಾಖಲೆ ಇಡಬೇಕು. ಅಷ್ಟೆ ಏಕೆ ಒಬ್ಬ ಖಾಸಗಿ ವ್ಯಕ್ತಿ ತನ್ನ ಮನೆ ಇಲ್ಲವೇ ಹೊಲದಲ್ಲಿ ಕೊಳವೆ ಬಾವಿ ತೆಗೆಸಲು ಕಂದಾಯ ಇಲಾಖೆ ಅನುಮತಿ ಪತ್ರ ನೀಡಬೇಕು. ಆಶ್ಚರ್ಯವೆಂದರೇ ಸರ್ಕಾರದ ಅನುಮತಿ ಪತ್ರ ಇಲ್ಲದೆ ಕೊಳವೆ ಬಾವಿ ತೆಗೆದವರಿಗೆ ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕಕ್ಕೆ ಲಂಚ ಪಡೆದು ಹೆಸ್ಕಾಂ ಅಧಿಕಾರಿಗಳು ನೀಡುತ್ತಲೇ ಇದ್ದಾರೆ.
ಕಂದಾಯ ಇಲಾಖೆ ಈ ವಿಭಾಗದ ಉಸ್ತುವಾರಿ ಗುಮಾಸ್ತರಾದ ದೀಪಾ ಸಾವಂತ ನಮ್ಮಿಂದ ದಾಖಲೆ ಸಿಗಲು ಸಾಧ್ಯವಿಲ್ಲ ಎಂದು ಕಡ್ಡಿ ಮುರದಂತೆ ಹೇಳುತ್ತಿದ್ದಾರೆ.
ಒಟ್ಟಾರೇ ಶುದ್ಧ ಕುಡಿಯುವ ನೀರಿನ ಬಗ್ಗೆ ಜಾಗೃತಿ ಇಲ್ಲದಕ್ಕೆ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದರೆ, ಅದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜನರು ನೀರಿನ ಮಹತ್ವ ಅರಿತು ತಮ್ಮ ಕೊಳವೆಬಾವಿ ಇರಲಿ, ಯಾವುದೇ ಮೂಲದ ನೀರು ಇರಲಿ, ಅದನ್ನು ಪ್ರಯೋಗಾಲದಿಂದ ಪರೀಕ್ಷೆ ಮಾಡಿದ ನಂತರ ಬಳಕೆ ಮಾಡಬೇಕು. ಸರ್ಕಾರ ಮಾತ್ರ ಕಡ್ಡಾಯವಾಗಿ ಎಲ್ಲ ಖಾಸಗಿ ವ್ಯಕ್ತಿಗಳ ನೀರಿನ ಪರೀಕ್ಷೆ ಮಾಡಿಸುವಂತೆ ಕಡ್ಡಾಯವಾಗಿ ಕಾನೂನ ಜಾರಿ ಮಾಡಬೇಕು. ಇಲ್ಲವಾದರೇ ತಾಲೂಕಿನ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು.
ಕೆಲವು ಪ್ರದೇಶದಲ್ಲಿ ಕೊಳವೆ ಬಾವಿ ನೀರು ಕುಲಷಿತ ಇರುವುದು ಗೊತ್ತು. ಈ ವರದಿಯ ಅಧ್ಯಯನ ಮಾಡಿದ್ದೇನೆ. ಜನರಿಗೆ ಶುದ್ಧ ಕುಡಿಯುವ ನೀರು ಸಿಗುವುದಕ್ಕೆ ಸುಮಾರು ₹90 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿಯ ಯೋಜನೆಯಲ್ಲಿ ಕೃಷ್ಣಾ ನದಿಯ ಶುದ್ಧ ಪೀಲ್ಟರ್ ನೀರು ದೊರೆಯುವ ವ್ಯವಸ್ಥೆ ಮಾಡಲಾಗಿ. ಈ ಕೆಲಸ ಪ್ರಾರಂಭವಾಗಿದೆ. ಇದರಿಂದ ಸುಮಾರು 11 ಗ್ರಾಮಗಳಿಗೆ ಮತ್ತು ತೋಟದ ವಸತಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಿಗುವಂತೆ ಮಾಡಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸರ್ಕಾರಿ ಬೊರ್‌ವೆಲ್‌ಗಳ ಪೈಕಿ ಶೇ.27 ಕುಡಿಯಲು ಯೋಗ್ಯವಾಗಿಲ್ಲ. ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅದಲ್ಲದೆ ಈ ರೀತಿ ನೀರು ಕುಲಷಿತವಾಗಲು ಮುಖ್ಯ ಕಾರಣ ಕಾರ್ಖಾನೆಗಳ ತ್ಯಾಜ್ಯ ನದಿಯ ನೀರಿಗೆ ಬಿಡುವುದರಿಂದ ಹೆಚ್ಚು ಇಳುವರಿ ಆಶೆಗಾಗಿ ರೈತರು ಅತಿಯಾದ ಗೊಬ್ಬರ ಮತ್ತು ಕೆಮಿಕಲ್ ಬಳಕೆ ಮತ್ತು ಸಕ್ಕರೆ ಕಾರ್ಖಾನೆಯವರು ಮಳಲಿಯನ್ನು ಭೂಮಿಗೆ ಹರಿದು ಬಿಡುವುದರಿಂದ ಕಾರಣವಾಗಿದೆ ಎಂದು ಗ್ರಾಮೀಣ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲೀಕರ ಮುಖ್ಯ ಇಂಜಿನಿಯರ್ ರವೀಂದ್ರ ಮುರಗಾಲಿ ಹೇಳಿದ್ದಾರೆ.
ಎರಡು ಮತಕ್ಷೇತ್ರದಲ್ಲಿ ಕೊಳವೆ ಬಾವಿಗಳ ನೀರನ್ನು ಪರೀಕ್ಷೆ ಇಲ್ಲದೇ ಬಳಸುತ್ತಿರುವುದು ಸತ್ಯ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿರುವುದು ಅಷ್ಟೇ ಸತ್ಯ. ನೀರಿನ ಟಿಡಿಎಸ್ ಪರೀಕ್ಷೆ ಅತೀ ಅವಶ್ಯಕತೆ ಇದೆ. ನಿರ್ಲಕ್ಷ್ಯ ಮಾಡಿದರೇ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಹೆಚ್ಚುತ್ತ ಹೋಗುತ್ತದೆ ಎಂದು ಹಿರಿಯ ವೈದ್ಯ ಮತ್ತು ವೈದ್ಯ ಸಾಹಿತಿ ಡಾ.ಎ.ಎ.ಪಾಂಗಿ ತಿಳಿಸಿದ್ದಾರೆ.
ಶುದ್ಧ ಆಹಾರ ಆರೋಗ್ಯಕ್ಕೆ ಎಷ್ಟು ಮುಖ್ಯ ಅಷ್ಟೇ ಮುಖ್ಯ. ನೀರು ಸಹ ಸಾಮಾನ್ಯವಾಗಿ ಜನರಲ್ಲಿ ಕೊಳವೆ ಬಾವಿ ನೀರು ಶುದ್ಧ ಎಂಬ ನಂಬಿಕೆಯಿಂದ ಜನರು ಪರೀಕ್ಷೆ ಮಾಡಿಸುವುದಿಲ್ಲ. ಅದಕ್ಕಾಗಿ ಜನರಲ್ಲಿ ಇದರ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ಹಿರಿಯ ವೈದ್ಯರು ಡಾ.ಮಲ್ಲಿಕಾರ್ಜುನ ಹಂಜಿ ಹೇಳಿದ್ದಾರೆ.
ಬೆಳಗಾವಿ: ಸುವರ್ಣ ಕರ್ನಾಟಕ ಸಂಭ್ರಮದಲ್ಲೇ ಪ್ರತ್ಯೇಕ ಉಕ ರಾಜ್ಯಕ್ಕೆ ಕೂಗು..!
ಅಥಣಿ ತಾಲೂಕಿನಲ್ಲಿ ಕುಲಷಿತ ನೀರು ಹೊಂದಿರುವ ಕೊಳವೆ ಬಾವಿಗಳು ಇರುವುದು ಸತ್ಯ. ಇದಕ್ಕೆ ಮುಖ್ಯ ಕಾರಣ ಇಲ್ಲಿ ಕೆಲವು ಭಾಗದಲ್ಲಿ ಸೇಡಿ ಮಣ್ಣು, ಇನ್ನೂ ಕೆಲವು ಭಾಗದಲ್ಲಿ ಕರಿ ಮಣ್ಣು ಮತ್ತು ಕೆಲವು ಕಡೆ ಗಟ್ಟಿ ಗರಸು ಮತ್ತು ಕಲ್ಲಿನ ಪ್ರದೇಶ ಇದೆ. ಇದರಿಂದ ಕೊರೆದ ಎಲ್ಲ ಕೊಳವೆ ಭಾವಿಗಳು ಶುದ್ಧ ನೀರು ಕೊಡುತ್ತಿಲ್ಲ. ಅತ್ಯಂತ ಗಡಸು ನೀರು ಇದೆ. ಇದು ಆರೋಗ್ಯಕ್ಕೆ ಯೋಗ್ಯವಾಗಿಲ್ಲ ಎಂದು ವೈದ್ಯರು ಡಾ.ಅವಿನಾಶ ನಾಯಕ ಹೇಳಿದ್ದಾರೆ.
ಪ್ರತೀ ಗ್ರಾಮ ಪಂಚಾಯತಿ ಪಿಡಿಒಗಳ ಮೂಲಕ ಖಾಸಗಿ ಬೋರ್‌ವೆಲ್‌ಗಳ ವಿವರಣೆ ಪಡೆಯುತ್ತೇನೆ. ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಚಿಕ್ಕೋಡಿ ಉಪ-ವಿಭಾಗಧಿಕಾರಿ ಸುಭಾಷ ಸಂಪಗಾಂವಿ ತಿಳಿಸಿದ್ದಾರೆ.