ಅಜ್ಜಂಪುರ ಭಾಗದಲ್ಲಿ ತೆಂಗು ಬೆಳೆಗೆ ಕಪ್ಪು ಹುಳು ತಲೆ ಹುಳು ಬಾಧೆ ಕಾಣಿಸಿಕೊಂಡಿರುವುದು ರೈತರಲ್ಲಿ ಅತಂಕ ಮೂಡಿಸಿದ್ದ ಹಿನ್ನೆಲೆಯಲ್ಲಿ ತೋಟಗಾರಿಕೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು ತೆಂಗು ತೋಟಗಳಿಗೆ ಭೇಟಿ ನೀಡಿ ಕಪ್ಪು ತಲೆ ಹುಳು ಬಾಧೆ ಬಗ್ಗೆ ರೈತರೊಡನೆ ಚರ್ಚಿಸಿ ರೋಗ ಹತೋಟಿ ಬಗ್ಗೆ ಮಾಹಿತಿ ನೀಡಲಾಯಿತು ಎಂದು ತರೀಕೆರೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್‌ ತಿಳಿಸಿದ್ದಾರೆ.

ತರೀಕೆರೆ ಜೂ.23) ಅಜ್ಜಂಪುರ ಭಾಗದಲ್ಲಿ ತೆಂಗು ಬೆಳೆಗೆ ಕಪ್ಪು ಹುಳು ತಲೆ ಹುಳು ಬಾಧೆ ಕಾಣಿಸಿಕೊಂಡಿರುವುದು ರೈತರಲ್ಲಿ ಅತಂಕ ಮೂಡಿಸಿದ್ದ ಹಿನ್ನೆಲೆಯಲ್ಲಿ ತೋಟಗಾರಿಕೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು ತೆಂಗು ತೋಟಗಳಿಗೆ ಭೇಟಿ ನೀಡಿ ಕಪ್ಪು ತಲೆ ಹುಳು ಬಾಧೆ ಬಗ್ಗೆ ರೈತರೊಡನೆ ಚರ್ಚಿಸಿ ರೋಗ ಹತೋಟಿ ಬಗ್ಗೆ ಮಾಹಿತಿ ನೀಡಲಾಯಿತು ಎಂದು ತರೀಕೆರೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್‌ ತಿಳಿಸಿದ್ದಾರೆ.

ಅಜ್ಜಂಪುರದ ಸೊಲ್ಲಾಪುರ ಗ್ರಾಪಂ ವಿವಿಧ ಗ್ರಾಮಗಳ ತೆಂಗು ತೋಟಗಳಿಗೆ ವಿಜ್ಞಾನಿಗಳೊಡನೆ ಭೇಟಿ ನೀಡಿದ ನಂತರ ಈ ಮಾಹಿತಿ ನೀಡಿದರು.

9747 ಹೆ.ಪ್ರದೇಶದಲ್ಲಿ ತೆಂಗು ಬೆಳೆ: ರಾಜ್ಯದ ಮುಖ್ಯ ವಾಣಿಜ್ಯ ಬೆಳೆಗಳಲ್ಲೊಂದಾದ ತೆಂಗನ್ನು ಪ್ರಸ್ತುತ ತರೀಕೆರೆ- ಅಜ್ಜಂಪುರ ತಾಲೂಕಿನಲ್ಲಿ ಒಟ್ಟು 9747 ಹೆ. ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅಜ್ಜಂಪುರದಲ್ಲಿ ಈ ಬೆಳೆಗೆ ಕಪ್ಪು ತಲೆ ಹುಳುವಿನ ಬಾಧೆ ವ್ಯಾಪಕವಾಗಿದ್ದು ರೈತರಲ್ಲಿ ಆತಂಕ ಸೃಷ್ಠಿಸಿದೆ. ಇದರ ಜೊತೆಗೆ ಕಾಂಡ ಸೋರುವ ರೋಗ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದೆ. ಇದನ್ನು ಮನಗಂಡ ತೋಟಗಾರಿಕೆ ಇಲಾಖೆ ಅಧಿಕಾರಿ, ಕೃಷಿ ವಿಜ್ಞಾನಿಗಳ ಸಹಯೋಗದಲ್ಲಿ ಸೊಲ್ಲಾಪುರ ಗ್ರಾಪಂ ವಿವಿಧ ಗ್ರಾಮಗಳ ಕಪ್ಪು ತಲೆ ಹುಳುನ ಬಾದಿತ ತೋಟಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ. ಕಪ್ಪು ತಲೆ ಹುಳು ಗರಿಗಳ ತಳ ಭಾಗದಲ್ಲಿ ದಟ್ಟಬಲೆಯೊಳಗೆ ಸೇರಿ ಗರಿಯ ಹಸಿರು ಭಾಗ ಕೆರೆದು ತಿನ್ನುತ್ತದೆ ಇದರಿಂದ ಗರಿಗಳ ಮೇಲೆ ಒಣ ಹುಲ್ಲಿನ ಬಣ್ಣದ ಮಚ್ಚೆಗಳಾಗಿ ನಂತರ ಇಡೀ ಗರಿ ಒಣಗುತ್ತದೆ ಎಂದು ವಿವರಿಸಿದರು.

Chitradurga rains: ಚಳ್ಳಕೆರೆಯಲ್ಲಿ ಭಾರೀ ಮಳೆಗೆ ಬೆಳೆ ನಾಶ: ಲಕ್ಷಾಂತರ ರು. ನಷ್ಟ!

ಈ ಹುಳುವಿನ ಜೊತೆಗೆ ರುಗೋಸ್‌ ಸುರುಳಿ ಸುತ್ತುವ ಬಿಳಿ ನೊಣ ತೆಂಗಿನ ಎಲೆಗಳ ತಳ ಭಾಗದಲ್ಲಿ ಕುಳಿತು ರಸ ಹೀರುತ್ತವೆ. ಸಿಹಿ ದ್ರವ ಸ್ರವಿಸುತ್ತದೆ. ಈ ದ್ರವ ಎಲೆಗಳ ಮೇಲ್ಭಾಗದಲ್ಲಿ ಮತ್ತು ಅಂತರ ಬೆಳೆಗಳ ಮೇಲೆ ಸಂಗ್ರಹವಾಗಿ ಕ್ಯಾಪೋ›ಡಿಯಂ ಎಂಬ ಶಿಲೀಂಧ್ರದ ಬೆಳೆದು(ಕಪ್ಪು ಬೂದಿ) ಮಸಿ ಬಳಿದಂತೆ ಕಾಣುತ್ತದೆ. ಈ ನೊಣ ತೆಂಗಿನ ತಳ ಭಾಗದಲ್ಲಿ ಬೆಳ್ಳನೆ ಬೂದಿಯಂತೆ ಕಾಣಿಸುತ್ತದೆ ಪ್ರಸ್ತುತ ಈ ನೊಣ ಯಾವುದೇ ಆರ್ಥಿಕ ನಷ್ಟಉಂಟು ಮಾಡದಿರುವುದರಿಂದ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಕಾಂಡ ಸೋರುವ ರೋಗ / ಅಣಬೆ ರೋಗದಿಂದ ತೆಂಗಿನ ಬುಡದಲ್ಲಿ ಕೆಂಪು ಮಿಶ್ರಿತ ಕಂದು ಬಣ್ಣದ ಅಂಟು ದ್ರವ ಸೋರಿ ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ರೋಗ ಬಂದ ಗಿಡಗಳ ಕೆಳ ಭಾಗದ ಎಲೆಗಳು ಒಣಗಿ ಜೋತು ಬೀಳುತ್ತವೆ. ತೀವ್ರತೆ ಹೆಚ್ಚಾದಲ್ಲಿ ಎಲೆ, ಹೂವು, ಕಾಯಿ ಕೂಡ ಬೀಳುತ್ತದೆ. ಈ ರೋಗದಿಂದ ಮರದ ಬುಡ ಭಾಗದಲ್ಲಿ ಅಣಬೆ ಕಾಣಿಸಿಕೊಳ್ಳುತ್ತದೆ.

ಮೂಡಿಗೆರೆ ಕæವಿಕæ ಕೀಟ ಶಾಸ್ತ್ರದ ವಿಜ್ಞಾನಿ ಗಿರೀಶ್‌ ಸ್ಥಳಕ್ಕೆ ಭೇಟಿ ನೀಡಿ ರೋಗ ಪರಿಶೀಲಿಸಿ ತೋಟಗಳಲ್ಲಿ ಇರುವ ಸಮಸ್ಯೆಗಳಿಗೆ ಔಷಧಿ ಸಿಂಪಡಣೆ ಮಾಡುವಂತೆ ಸಲಹೆ ನೀಡಿದ್ದಾರೆ.

ಕಪ್ಪು ತಲೆ ಹುಳು ಬಾಧೆ- ಕಾಂಡ ಸೋರುವಿಕೆ:

ಹತೋಟಿ ಕ್ರಮಗಳು: ತೆಂಗಿನ ಮರದ ಬೇರಿನ ಮುಖಾಂತರ 100 ಮಿಲಿ ನೀರು ಮೊನೋಕ್ರೊಟೋಫಾಸ್‌ 2 ಮಿಲಿ ಹಾಗೂ ಹೆಕ್ಸಾಕೋನಜೋಲ್‌ 2 ಮಿಲಿ ಮಿಶ್ರಣ ಮಾಡಿ ಆರೋಗ್ಯವಂತ ಬೇರಿನ ಮೂಲಕ ನೀಡಬೇಕು ಹಾಗೂ ಕಪ್ಪು ತಲೆ ಹುಳುನ ಬಾಧೆಗೊಳಗಾದ 5 ವರ್ಷ ಕೆಳಗಿನ ತೆಂಗಿನ ಮರಗಳಿಗೆ ಪ್ರತೀ ಲೀಟರ್‌ ನೀರಿಗೆ 2 ಮಿಲಿ ಮೊನೋ ಕ್ರೊಟೋಫಾಸ್‌ ಔಷಧಿ ಮಿಶ್ರಣದ ಸಿಂಪಡಣೆ ಕೈಗೊಳ್ಳಬಹುದು ಎಂದು ತಿಳಿಸಿದರು.

ಕಾಂಡದ ಮುಖಾಂತರ ಇಂಜೆಕ್ಷನ್‌ ನೀಡಲು ಮೊನೋಕ್ರೊಟೋಫಾಸ್‌ 2 ಮಿಲಿ-ಹೆಕ್ಸಾಕೋನಜೋಲ್‌ 2 ಮಿಲಿಯನ್ನು 100 ಮಿಲಿ ನೀರಿನಲ್ಲಿ ಮಿಶ್ರಣ ಮಾಡಿ ಇದರಲ್ಲಿ 5 ಮಿಲಿ ಮಿಶ್ರಣವನ್ನು ಗಿಡದ ಬುಡಕ್ಕೆ (ಭೂಮಿಯಿಂದ 3 ಅಡಿ ಮೇಲ್ಬಾಗದಲ್ಲಿ 45 ಡಿಗ್ರಿ ಕೋನದಲ್ಲಿ ರಂಧ್ರ ಮಾಡಿ ನೀಡುವುದು) ಚುಚ್ಚುವ ಮೂಲಕ ನೀಡುವುದು.

ಪ್ರತಿ ಗಿಡದ ಬುಡಕ್ಕೆ ಹೆಕ್ಸಾಕೋನಜೋಲ್‌ 2 ಮಿಲಿ ಜೌಷಧಿಯನ್ನು ಪ್ರತೀ ಲೀ. ನೀರಿನಲ್ಲಿ ಬೆರೆಸಿ ಪ್ರತೀ ಗಿಡಕ್ಕೆ 10 ಲೀ. ಮಿಶ್ರಣವನ್ನು ಗಿಡದ ಬುಡದಿಂದ 5 ಅಡಿ ಅಂತರದಲ್ಲಿ ಗಿಡದ ಸುತ್ತ ಸುರಿಯುವುದರಿಂದ ರೋಗ , ಕೀಟ ಬಾಧೆ ಹತೋಟಿ ಮಾಡಬಹುದು ಎಂದು ಸಲಹೆ ನೀಡಿದರು. ಈ ಔಷಧಿಗಳನ್ನು ನೀಡಿದ 2 ತಿಂಗಳವರೆಗೆ ಎಳನೀರು- ತೆಂಗಿನ ಕಾಯನ್ನು ಉಪಯೋಗಿಸದಂತೆ ಸೂಚಿಸಿದ್ದು, ಔಷಧಿ ಸಿಂಪಡಣೆ ಜೊತೆ ಅಗತ್ಯ ಪೋಷಕಾಂಶ ನಿರ್ವಹಣೆಗೆ ಕೈಗೊಳ್ಳಬೇಕೆಂದು ತಿಳಿಸಿದÜರು.

ಎರಡೂವರೆ ದಶಕದಿಂದ ರೈತರಿಗೆ ಸಮಸ್ಯೆ; ಜಿಂಕೆ ಸಂರಕ್ಷಣಾ ವನ ನಿರ್ಮಾಣ ಯಾವಾಗ?

ಭೇಟಿ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ರೈತರು ಹಾಜರಿದ್ದು ರೈತರು ಸಾಮೂಹಿಕವಾಗಿ ಕಪ್ಪು ತಲೆ ಹುಳುನ ಹತೋಟಿಗೆ ಕ್ರಮ ಕೈಗೊಳ್ಳಬೇಕೆಂದು ಇಲಾಖೆ ಅಧಿಕಾರಿಗಳು ನೆರೆದಿದ್ದ ರೈತರಲ್ಲಿ ಮನವಿ ಮಾಡಿದರು.