Holi Festival ಯಲಬುರ್ಗಾದಲ್ಲಿ ಭಾವೈಕ್ಯತೆಯ ಹೋಳಿ ಹಬ್ಬ

By Suvarna News  |  First Published Mar 18, 2022, 11:35 PM IST

* ನಾಡಿನೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ
* ಯಲಬುರ್ಗಾದಲ್ಲಿ ಭಾವೈಕ್ಯತೆಯ ಹೋಳಿ ಹಬ್ಬ
 * ಕಲ್ಯಾಣ ಕರ್ನಾಟಕದಲ್ಲಿಯೇ ಭಾವೈಕ್ಯದ ಪ್ರತೀಕ


ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
 

ಕೊಪ್ಪಳ, (ಮಾ.18): ನಾಡಿನೆಲ್ಲೆಡೆ ಹೋಳಿ ಹಬ್ಬದ ಸಂಭ್ರಮವಿದ್ದು,ಇತ್ತ ಕೊಪ್ಪಳದ ಯಲಬುರ್ಗಾ ಪಟ್ಟಣದಲ್ಲಿ ಹೋಳಿ ಹಬ್ಬ ಭಾವೈಕ್ಯತೆಯ ಸಂಕೇತವಾಗಿದೆ. ಈ ಹೋಳಿ ಹಬ್ಬವು  ಯಲಬುರ್ಗಾ ಪಟ್ಟಣದಲ್ಲಿ ಹಲವಾರು ದಶಕಗಳಿಂದ ಅತ್ಯಂತ ರಂಜಿತ ಹಬ್ಬವಾಗಿ ಕಲ್ಯಾಣ ಕರ್ನಾಟಕದಲ್ಲಿಯೇ ಭಾವೈಕ್ಯದ ಪ್ರತೀಕವಾಗಿ ಬೆಳೆದಿದೆ ಎನ್ನಬಹುದು. 

Latest Videos

undefined

ಈ ಹೋಳಿ ಹಬ್ಬವು ಉಳಿದೆಡೆ ಒಂದೇ ದಿನ ವಿಶೇಷ ಎನಿಸಿದರೆ ಯಲಬುರ್ಗಾದಲ್ಲಿ ಮಾತ್ರ 5 ದಿನಗಳ ಕಾಲ ಅನನ್ಯವಾಗಿ  ಇವತ್ತಿಗೂ ಜಾತ್ಯಾತೀತವಾಗಿ ಎಲ್ಲಾ ಜನರು ಒಂದೆ ಎಂಬಾ ಭಾವನೆಯೊಂದಿಗೆ ಹೋಳಿ ಹಬ್ಬವನ್ನು ಅಚರಿಸುತ್ತಾ ಜನರ ಮನಸ್ಸನ್ನು ರಂಜಿಸುತ್ತಾ ಬಂದಿದೆ. 

Holi Festival: ದೇಶದಲ್ಲೇ ಬಾಗಲಕೋಟೆ ಹೋಳಿ ಹಬ್ಬ ಫೇಮಸ್ ಯಾಕೆ ಗೊತ್ತಾ?

ಯಲಬುರ್ಗಾದಲ್ಲಿ ಹೋಳಿ ಹುಣ್ಣಿಮೆಯ ಮುನ್ನಾ   ಐದು ದಿನಗಳ ಮುಂಚೆ ಕಾಮ,ರತಿ,ಭೀಮನ ಮೂರ್ತಿಗಳನ್ನು  ಪ್ರತಿಷ್ಠಾಪಿಸುತ್ತಾರೆ. ವಿವಿದ ರೀತಿಯಲ್ಲಿ ಅಲಂಕರಿಸಿ ಒಂದು ಸುಂದರ ಮಂಟಪ ತಯಾರಿಸಿ, ಅದರಲ್ಲಿ ಮೂರು ಮೂರ್ತಿಗಳನ್ನು ಪದ್ದತಿ ಪ್ರಕಾರ ಕೂಡ್ರಿಸಿ. ಪ್ರತಿದಿನ ಅವುಗಳನ್ನು ಪ್ರದರ್ಶಿಸುತ್ತಾರೆ. ಆ ಮೂರ್ತಿ ನೋಡುಗರ ಗಮನ ಸೇಳೆಯುವಂತ್ತಿರುತ್ತವೆ. ಈ ಭಾಗದ ಯುವಕರಿಗೆ ಸಡಗರವೇ ಸಡಗರ ಹರಕಲು ಬಟ್ಟೆಯನ್ನು ಧರಿಸಿಕೊಂಡು ಬಣ್ಣಾದಾಟದೊಂದಿಗೆ 'ಹೋಳಿ ಹುಣ್ಣಿಮೆ ಬಂತು, ತುಪ್ಪಾಣ್ಣುವುದು ಬಂತೋ, ಅಲ್ಲದೇ ಕಾಮ ಸತ್ತ  ಭೀಮ ಉಳಿದಾ ರತಿದೇವಿ ರಂಡಿ ಮೂಂಡಿ ಆದೋಳೋಪ್ಪೋ" ಅಂತಾ ಹೇಳುತ್ತಾ ಯುವಕರು ಹೊಯ್ಕೋಳುತ್ತಾ  ಒಟ್ಟು ಐದು ದಿನಗಳವರೆಗೆ ಹೋಲಗದ್ದಿಗಳಿಗೆ ತೆರಳಿ, ಮನೆಯವರನ್ನು ಕಣ್ಣು ತಪ್ಪಿಸಿ, ಕಟ್ಟಿಗೆ , ಕುಳ್ಳು ಸೇರಿದಂತೆ ಕಟ್ಟಿಗೆ ವಸ್ತುಗಳನ್ನು ಕಳವು ಮಾಡಿ ಆಯಾ ಓಣಿಯ ಯುವಕರು ಕೂಡಿ ಹಾಕುತ್ತಾರೆ. 

ಈ ಮೂತಿಗಳನ್ನು ಹಳ್ಳಗರ ಮನದಾಳದಲ್ಲಿ ಹುದುಗಿ ಹೋರಗಡೆ  ಬರಲಾರದೆ ಚಡಪಡಿಸುವ ಮನಸ್ಸಿನ ಪ್ರತಿರೂಪಾವಾಗಿ ಕಾಣುತ್ತಾರೆ.  ಇನ್ನು‌ಹಬ್ಬದ ಸಮಯದಲ್ಲಿ ಮೆರವಣಿಗೆಯಲ್ಲಿ '' ಕಳ ಬೇಡ " ಎಂಬ ಸೋಗು ಬಹು ಅಕರ್ಷಿಕ. 

ಕಳಬೇಡ ಬಂದಾ ದಾರಿ ಬೀಡಿ
 ಹೋಳಿ ಹುಣ್ಣಿಮೆಯಂದು ಮಾ 18 ರಂದು ರಾತ್ರಿ ಸಮಯದಲ್ಲಿ ಜರಗುವ ಮೆರವಣಿಗೆಯಲ್ಲಿ '' ಕಳ ಬೇಡ " ಎಂಬ ಸೋಗು ಬಹು ಅಕರ್ಷಿಕ. ಕಳಬೇಡ ಎಂದರೆ ಒಬ್ಬ ವ್ಯಕ್ತಿಗೆ ಮುಖಕ್ಕೆ ಮೈಗೆ ಅಚ್ಚುಕಟ್ಟಾಗಿ ಬಣ್ಣ  ಬಡಿದು ,ಅತನನ್ನು ವಿಕೃತವಾಗಿ ಕಾಣುವಂತೆ ಮಾಡಿ. ಉದ್ದನೆಯ ನಾರಿಗೆ ಕಪ್ಪು ಬಣ್ಣ ಹಚ್ಚಿ ಅದನ್ನು ಅವನ ತಲೆಗೆ ತೋಡಸಿ ನಂತರ ಅವನ ಬಾಯಿಯೋಳಗೆ ಕೆಂಪನೆಯ ಬ್ಯಾಗಡಿ ಹಾಳಿಯನ್ನು ನಾಲಿಗೆ ತರಹವೇ ಮಾಡಿ ಅವನ ಕೈಯಲ್ಲಿ ಕಟ್ಟಿಗೆಯ ಖಡ್ಗವನ್ನು ಕೊಟ್ಟು ಸೋಟಕ್ಕೆ , ಕಾಲಿಗೆ ಗೆಜ್ಜೆ ಸರವನ್ನು ಕಟ್ಟಿ ಅವನೊಬ್ಬ ತದ್ರೂಪಿ ರಾಕ್ಷಸ ತರವೆ ಕಾಣುವಂತೆ ಮಾಡುತ್ತಾರೆ. ಈತನ ಹಾವಭಾವ ಥೇಟ್ ರಾಕ್ಷಸನಂತಿದ್ದು,  ಬಾಗಿದವರ ಬೆನ್ನ ಮೇಲೆ ಹೆಜ್ಜೆ ಇಡುತ್ತಾ 'ಕಳಬೇಡ' ಮುನ್ನುಗ್ಗುತ್ತಾನೆ, ನಗರದಲ್ಲಿನ ನಾಲ್ಕು 'ಕಳಬೇಡ' ವೇಷಧಾರಿಗಳು ಸರದಿ ಪ್ರಕಾರ ಪ್ರತಿಯೊಂದು ಕಾಮನ ಕಟ್ಟೆಗೆ ದರ್ಶನ ಕೊಟ್ಟುಬರುವುದು ಸಂಪ್ರದಾಯ. 

 ಅಪಾರ ಜನಸ್ತೋಮದ ಮಧ್ಯೆ ಸಾಯಂಕಾಲವಾಗುತ್ತಿದ್ದಂತೆ ಪ್ರಥಮವಾಗಿ ಗಾಳಿಯರ್ ಓಣಿಯ ಜನ ಆಟ ಆರಂಭಿಸುತ್ತಾರೆ. ಬಣ್ಣ ಬಣ್ಣದ ಹೂಗಳಿಂದ ಶೃಂಗಾರಗೊಂಡ ಕಟ್ಟೆಯಿಂದ ಕಳಬೇಡ ವೇಷಧಾರಿ ಯುವಕನ ಬೆನ್ನ ಮೇಲೆ ಕಾಲಿಟ್ಟು ನೆಲಕ್ಕೆ ಜಿಗಿದು ಗೆಜ್ಜೆಗಳನ್ನು ಅಲುಗಾಡಿಸುತ್ತಾ ಕುಣಿತ ಆರಂಭಿಸುತ್ತಾನೆ, ಬೆನ್ನ ಮೇಲೆ ಗಜ್ಜೆ ಶಬ್ದ ಮಾಡುತ್ತಾ ನಿಲ್ಲುತ್ತಾನೆ, ಉರಿಯ ಪಂಜಿಗೆ ಬಾಯಿಯಲ್ಲಿನ ಸೀಮೆ ಎಣ್ಣೆಯನ್ನು ಜನ ಜೋರಾಗಿ ಉಗುಳುತ್ತಿದ್ದಂತೆ ದಿಗ್ಗನೆ ಉರಿ ಕಳಬೇಡನ ಮೈಮುಖಕ್ಕೆ ಸಾಗುತ್ತದೆ. ಉರಿಯ ಉಂಡಿಗೆ ಮೈಯೊಡ್ಡಿ ಅದನ್ನು ಛೇಧಿಸಿ ಬಗ್ಗಿದವರ ಮೇಲೆ ಹೆಜ್ಜೆ ಹಾಕುತ್ತಾನೆ ಕಳಬೇಡ. ಆದರೆ ಇದು ಅಷ್ಟೇ ಭಯಾನಕ ವಾಗಿರುತ್ತದೆ.  ಗಾಳಿಯಾರ್ ಓಣಿಯ ನಂತರ ಕಂಡೇರ, ದೈವ ಹಾಗೂ ಸರಕಾರಿ ಕಾಮದವರು 'ಕಳಬೇಡ' ವೇಷವನ್ನು ಕ್ರಮವಾಗಿ ಆಚರಿಸುತ್ತಾರೆ. ಇದೆಲ್ಲ ಆಚರಣೆ ಮುಗಿಯುವಷ್ಟರಲ್ಲೇ  ಮಾ 19 ಬೆಳಗಿನ ಆರು ಗಂಟೆಯಾಗಿರುತ್ತದೆ. ಸಂಜೆಯಿಂದ ಮುಂಜಾನೆ ತನಕ ಹಬ್ಬದ ಸಂಭ್ರಮ. ನೆರೆದ ಸಾವಿರಾರು ಜನರಿಗೆ ಒಂದು ತರಹದ ವಿಚಿತ್ರ ಆಕರ್ಷಣೆ ಮಾಡುತ್ತ  ಜನಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾನೆ.
 
ಭಯಾನಕ ಭೀಭತ್ಸ ವಿಚಿತ್ರ ಕುಣಿತದ ನಂತರ ಬರುವುದು ನಗೆ ರಸ ಉಕ್ಕಿಸುವ ಹಾಸ್ಯ ಪ್ರಸಂಗ ಅಣುಕು ಶವಯಾತ್ರೆ ಹೊತ್ತು ತರುವ ಚಕ್ಕಡಿಯಲ್ಲಿ ಸ್ತ್ರೀವೇಷದಾರಿ ಪುರುಷರು ಹಾಡಿಹಾಡಿ ಅಳುವ ದೃಶ್ಯವಂತೂ ನೋಡುಗರಲ್ಲಿ ಕಚಗುಳಿ ಇಡುತ್ತದೆ. ಹಿಂದಿನ ಚಕ್ಕಡಿಯಲ್ಲಿ ಬಣ್ಣ ತುಂಬಿದ ಬ್ಯಾರೆಲಗಳಿರುತ್ತದೆ. ನೋಡುಗರ ಮೇಲೆ ಓಕುಳಿಯಾಡುತ್ತಾರೆ. ಒಟ್ಟಿನಲ್ಲಿ ಯಲಬುರ್ಗಾದ ಈ ಹೋಳಿ ಹಬ್ಬ ಜಾತಿ ಮತ ಎನ್ನದೆ ಸರ್ವರೂ ಒಂದೇ ಎನ್ನುವ ಮನೋಭಾವನೆ ಇಲ್ಲಿಯ ಜನರದು. ಬಹು ಕಾಲದಿಂದಲೂ ಹೀಗೆ ನಡೆದುಕೊಂಡು ಬಂದಿರುವ ಯಲಬುರ್ಗಾದ ಕಾಮನ ಹಬ್ಬ ಇವತ್ತಿಗೂ ಜನಾಕರ್ಷನೆ ಪಡೆಯುತ್ತ ಬಂದಿದೆ ಎಂದರೆ ನಿಜಕ್ಕೂ ತಪ್ಪಾಗಲಾರದು.

click me!