ಧಾರವಾಡ ಸೆ.18 : ಹಿಂಗಾರು ಹಂಗಾಮಿಗೆ ಪೂರಕವಾಗಿ ಇಲ್ಲಿಯ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಶನಿವಾರದಿಂದ ರೈತರ ಜಾತ್ರೆ ಎಂದೇ ಕರೆಯುವ ಕೃಷಿ ಮೇಳೆ ಶುರುವಾಗಿದೆ. ಮೊದಲ ದಿನ ಬೀಜಮೇಳ, ಫಲಪುಷ್ಪ ಪ್ರದರ್ಶನ, ಗೆಡ್ಡೆ ಗೆಣಸು ಪ್ರದರ್ಶನ, ಕೀಟ ಪ್ರಪಂಚ ಹಾಗೂ ಸಾಕು ಪ್ರಾಣಿಗಳ ಪ್ರದರ್ಶನಕ್ಕೆ ಚಾಲನೆ ದೊರೆಯಿತು. ಭಾನುವಾರ ಕೃಷಿ ಸಚಿವ ಬಿ.ಸಿ. ಪಾಟೀಲ್ ಅಧಿಕೃತವಾಗಿ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
Savings Tips: ಈ ಯೋಜನೆಗೆ ಸೇರ್ಪಡೆಯಾದ್ರೆ ರೈತರಿಗೆ ಸಿಗುತ್ತೆ ತಿಂಗಳಿಗೆ 3000ರೂ. ಪಿಂಚಣಿ
ಬೀಜ ಮೇಳಕ್ಕೆ ಚಾಲನೆ ನೀಡಿದ ರಾಜ್ಯ ಕೃಷಿ ಸಮಾಜದ ಅಧ್ಯಕ್ಷ ಡಾ. ಶಿವನಗೌಡ ಪಾಟೀಲ, ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದಾಗ್ಯೂ ಸಹ ಆಹಾರ ಭದ್ರತೆಗೆ ಬೀಜದ ಭದ್ರತೆಯೂ ಅಗತ್ಯ. ಉತ್ತಮ ಹಾಗೂ ಪ್ರಮಾಣಿಕೃತ ಬೀಜ ರೈತರಿಗೆ ಅತ್ಯಗತ್ಯ ಎಂದರು.
ರೈತರು ಬಿತ್ತನೆ ಬೀಜಕ್ಕೆ ಕೈಯೊಡ್ಡದೇ, ಸ್ವತಃ ಬೀಜೋತ್ಪಾದನೆ ಮಾಡಬೇಕು. ಇಂತಹ ಬೀಜಗಳಿಂದ ಮಾತ್ರವೇ ಉತ್ಪಾದನೆ ನಿರೀಕ್ಷಿಸಲು ಸಾಧ್ಯ. ಕಳಪೆ ಬೀಜಗಳು ರೈತರ ಶ್ರಮ ವ್ಯರ್ಥ ಮಾಡುವುದರ ಜತೆಗೆ ಉತ್ಪಾದನೆ ಕುಗ್ಗುತ್ತದೆ. ಈ ಹಿನ್ನೆಲೆ ರೈತರು ಬೀಜ ಸ್ವಾವಲಂಬನೆ ಅಥವಾ ಕೃಷಿ ವಿವಿಗಳ ಗುಣಮಟ್ಟದ ಬೀಜಗಳನ್ನು ಬಿತ್ತಬೇಕು. ಕೃವಿವಿಗಳು ಸುಧಾರಿತ ತಳಿಗಳು ಸಂಶೋಧಿಸಿ ರೈತರಿಗೆ ಪರಿಚಯಿಸಬೇಕು ಎಂದರು. ಕೃಷಿ ವಿವಿ ವ್ಯವಸ್ಥಾಪನ ಮಂಡಳಿ ಸದಸ್ಯ ಎನ್.ಎಸ್. ಅಜಗಣ್ಣವರ, ಸ್ವಾತಂತ್ರ್ಯದ ನಂತರ ವಿದೇಶಿಗರು ಪೂರೈಸಿದ ಕಳಪೆ ಆಹಾರ ಸೇವಿಸಿದ ಭಾರತ ಹಸಿರುಕ್ರಾಂತಿ ಹಾಗೂ ಕ್ಷೀರಕ್ರಾಂತಿ ಪರಿಣಾಮದಿಂದ ಆಹಾರ ಸ್ವಾಲಂಬನೆ ಸಾಧಿಸಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮಾಜಿ ಸದಸ್ಯ ಈಶ್ವರಚಂದ್ರ ಹೊಸಮನಿ, ಕೃಷಿ ಪ್ರಧಾನ ಭಾರತ, 135 ಕೋಟಿ ಜನಕ್ಕೆ ಹೊಟ್ಟೆತುಂಬುವಷ್ಟುಆಹಾರ ಉತ್ಪಾದಿಸುವ ಜತೆಗೆ ವಿದೇಶಗಳಿಗೆ ರಫ್ತು ಮಾಡುತ್ತಿದೆ. ರೈತ ಬೇಡಿ ಬದುಕಿಲ್ಲ, ಕೊಟ್ಟು ಬದುಕಿದ್ದಾನೆ. ಅವನು ಇನ್ನಷ್ಟುಸ್ವಾವಲಂಬಿ ಸಾಧಿಸಬೇಕು ಎಂದರು. ರಸಗೊಬ್ಬರ, ಬೀಜಗಳು, ತಾಂತ್ರಿಕತೆಗಳು, ವಿವಿಧ ಕೃಷಿ ಪದ್ಧತಿ, ಕೀಟ ನಿರ್ವಹಣೆಯ ಬಗ್ಗೆ ಮಾಹಿತಿ ನೀಡುವ ಕೃಷಿ ಮೇಳ ರೈತರ ಆಶಾಕಿರಣ. ರೈತರು ಕಳಪೆ ಬೀಜಗಳ ಬಗ್ಗೆ ಜಾಗೃತಿ ವಹಿಸಬೇಕು. ಉತ್ತಮ ಸುಧಾರಿತ ತಳಿಗಳ ಬೀಜ ಸಂರಕ್ಷಿಸಬೇಕೆಂದು ಸಲಹೆ ನೀಡಿದರು.
ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಕುಂದಗೋಳ ಇದ್ದರು. ವ್ಯವಸ್ಥಾಪನಾ ಮಂಡಳಿ ಸದಸ್ಯ ಶಶಿಮೌಳಿ ಕುಲಕರ್ಣಿ, ಡಾ. ಜೆ.ಎಸ್. ಹಿಳ್ಳಿ, ಬೀಜ ನಿಗಮದ ನಿರ್ದೇಶಕ ಡಾ. ಜಿ.ಟಿ. ಪುತ್ರ, ಡಾ. ಕರುಣಾಕರ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ವಿವೇಕ ಮೋರೆ ಹಾಗೂ ಕುಲಪತಿ ಡಾ. ಬಸವರಾಜಪ್ಪ ಇದ್ದರು. ಇದೇ ಸಂದರ್ಭದಲ್ಲಿ ಜೋಳ, ಗೋದಿ, ಕುಸುಬೆ, ಕಡಲೆ ಹಿಂಗಾರಿ ಬೆಳೆÜಗಳ ಬೀಜೋತ್ಪಾದನಾ ತಾಂತ್ರಿಕತೆಗಳ ಹಸ್ತ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದರು.
ಫಲಪುಷ್ಪ ಪ್ರದರ್ಶನ: ಫಲಪುಷ್ಪ ಪ್ರದರ್ಶನದಲ್ಲಿ ಲಾಭದಾಯಕವಾದ ಕತ್ತರಿಸಿದ ಹೂಗಳು, ಬಿಡಿ ಹೂಗಳು ವಿವಿಧ ಹಣ್ಣು ಮತ್ತು ತರಕಾರಿಗಳು, ಬೊನ್ಸಾಯ್ ಗಿಡಗಳು, ವಿವಿಧ ಹೂವು ಜೋಡಣೆಗಳು, ಒಣ ಹೂಗಳ ಜೋಡಣೆ, ಇತರೆ ಉದ್ಯಾನ ಹೂಗಳು, ವಿವಿಧ ತರಕಾರಿ ಗಮನ ಸೆಳೆದವು. ವಿವಿಧ ಆಧುನಿಕ ಕತ್ತರಿಸಿದ ಹೂಗಳಾದ ಆರ್ಕಿಡ್‌್ಸ, ಕಾರ್ನೇಶನ್, ಅಂಥೋರಿಯಮ್, ಜರ್ಬೇರಾ, ಡಚ್ ಗುಲಾಬಿ, ರೆಡ್ ಜಿಂಜರ್, ಬಡ್Üರ್ ಆಪ್ ಪ್ಯಾರಾಡೈಸ್, ಹೆಲಿಕೊನಿಯಾ, ಗ್ಲ್ಯಾಡಿಯೋಲಸ್, ಶಾವಂತಿಗೆ, ಲಿಲ್ಲಿ (ಎಸಿಯಾಟಿಕ್) ಬಿಡಿ ಹೂಗಳಾದ ವಿವಿಧ ಶೇವಂತಿಗೆ, ಸುಗಂಧರಾಜ ಹಾಗೂ ವಿವಿಧ ಹಣ್ಣುಗಳು, ಉದ್ಯಾನ ಹೂಗಳು ಮತ್ತು ಗೆಡ್ಡೆಗೆಣಸುಗಳು ಪ್ರದರ್ಶನದಲ್ಲಿ ಜನರ ಮೆಚ್ಚುಗೆಯನ್ನು ಪಡೆದುಕೊಂಡವು.
ಎಸ್ ಬಿಐ, ಎಚ್ ಡಿಎಫ್ ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಗಳ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು?
192 ಕ್ವಿಂಟಲ್ ಬೀಜ ಮಾರಾಟ: ಮೇಳದ ಮೊದ ದಿನ ಬೀಜ ಘಟಕದಿಂದ 192 ಕ್ವಿಂಟಲ್ ಹಿಂಗಾರಿ ಬೆಳೆಗಳ ಬೀಜಗಳನ್ನು ಸುಮಾರು . 14.35 ಲಕ್ಷ ಮಾರಾಟ ಮಾಡಲಾಗಿದೆ. ಮೇಳದ ಅಂತ್ಯದಲ್ಲಿ ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ 547 ರೈತರು ಭೇಟಿ ನೀಡಿದ್ದಾರೆ. ಸುಮಾರು 74,000 ರೈತರಿಗೆ, ವಿದ್ಯಾರ್ಥಿಗಳಿಗೆ, ರೈತ ಮಹಿಳೆಯರಿಗೆ, ವಿಸ್ತರಣಾ ಕಾರ್ಯಕರ್ತರಿಗೆ, ಇಲಾಖೆ ಅಧಿಕಾರಿಗಳಿಗೆ ತಮ್ಮ ತಮ್ಮ ಪರಿಕರಗಳ ಹಾಗೂ ತಾಂತ್ರಿಕತೆಗಳ ಬಗ್ಗೆ ಪರಿಚಯಿಸುವ ಹಸ್ತಪ್ರತಿಗಳು ಹಾಗೂ ಪ್ರಾತ್ಯಕ್ಷಿಕೆ ನೀಡಲಾಯಿತು.