ಚಿಕ್ಕಬಳ್ಳಾಪುರ: ವಿಜಯದಶಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

By Kannadaprabha News  |  First Published Oct 7, 2019, 12:27 PM IST

ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಹೂವು, ಹಣ್ಣಿನ ಬೆಲೆ ಗಗನಕ್ಕೇರಿದೆ. ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ನಗರದ ಮಾರುಕಟ್ಟೆಗಳಲ್ಲಿ ಬಾಳೆ ಕಂಬ ಹಾಗೂ ಬೂದುಗುಂಬಳ ರಾಶಿಯೇ ಬಂದಿಳಿದಿದ್ದು, ಭಾನುವಾರ ವಸ್ತುಗಳ ಮಾರಾಟ, ಖರೀದಿ ಭರಾಟೆ ಭರದಿಂದ ಸಾಗಿತು.


ಚಿಕ್ಕಬಳ್ಳಾಪುರ(ಅ.07): ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ನಗರದ ಮಾರುಕಟ್ಟೆಗಳಲ್ಲಿ ಬಾಳೆ ಕಂಬ ಹಾಗೂ ಬೂದುಗುಂಬಳ ರಾಶಿಯೇ ಬಂದಿಳಿದಿದ್ದು, ಭಾನುವಾರ ವಸ್ತುಗಳ ಮಾರಾಟ, ಖರೀದಿ ಭರಾಟೆ ಭರದಿಂದ ಸಾಗಿತು.

ನಗರದ ಬಿಬಿ ರಸ್ತೆ, ಸಂತೆ ಮಾರುಕಟ್ಟೆ, ಬಜಾರ್‌ ರಸ್ತೆ, ಎಂಜಿ ರಸ್ತೆ, ಎಪಿಎಂಸಿ ಮಾರುಕಟ್ಟೆಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ಬದಿ ಬೆಳಿಗ್ಗೆಯಿಂದಲೇ ಹಬ್ಬದ ವ್ಯಾಪಾರ ಜೋರಾಗಿತ್ತು. ಜನರು ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ತರಕಾರಿ, ಬೂದು ಕುಂಬಳಕಾಯಿ, ಬಾಳೆ ಕಂಬಗಳ ಖರೀದಿಯಲ್ಲಿ ನಿರತರಾಗಿದ್ದರು.

Tap to resize

Latest Videos

ಹೂವಿನ ಬೆಲೆ ದಿಢೀರ್‌ ಹೆಚ್ಚಳ

ರಸ್ತೆಯ ಇಕ್ಕೆಲಗಳಲ್ಲಿ ಹಣ್ಣು, ಹೂ, ಬಾಳೆ ಕಂಬ, ಮಾವಿನಸೊಪ್ಪು, ತೆಂಗಿನಕಾಯಿ, ಸಿಹಿ ತಿನಿಸುಗಳ ತಾತ್ಕಾಲಿಕ ಅಂಗಡಿ ತೆರೆದ ವ್ಯಾಪರಸ್ಥರು, ರಸ್ತೆಯಲ್ಲಿ ಸಾಗುತ್ತಿದ್ದ ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸಿದರು. ಆಯುಧ ಪೂಜೆ ದಿನ ವಾಹನ, ಯಂತ್ರೋಪಕರಣಗಳನ್ನು ಹೂವಿನಿಂದ ಅಲಂಕಾರ ಮಾಡುವುದರಿಂದ ಸದ್ಯ ಹೂವಿನ ಬೆಲೆ ಏರಿಕೆಯಾಗಿದ್ದು, ಹಣ್ಣು ಮತ್ತು ತರಕಾರಿಗಳ ಬೆಲೆಗಳಿಗೆ ಹೋಲಿಕೆ ಮಾಡಿದರೆ ಹೂವಿನ ಬೆಲೆಯಲ್ಲಿ ಏಕಾಏಕಿ ಏರಿಕೆ ಕಾಣಿಸಿದೆ.

'ಪ್ರಚಾ​ರ​ ಸಿಗುತ್ತೆ ಎಂದು ಚೆಲುವರಾಯಸ್ವಾಮಿ ಬಾಯಿಗೆ ಬಂದಂತೆ ಮಾತಾಡ್ತಾರೆ'

ಭಾನುವಾರ ಮಾರುಕಟ್ಟೆಯಲ್ಲಿ ಒಂದು ಕೆಜಿ ಮಲ್ಲಿಗೆ 850, ಕನಕಾಂಬರ ಹೂವು 800, ಕಾಕಡ 700, ಸೇವಂತಿಗೆ 300, ಗುಲಾಬಿ 200, ಬಟನ್ಸ್‌ 220ಕ್ಕೆ ಮಾರಾಟವಾಗುತ್ತಿದ್ದವು. ಆಯುಧ ಪೂಜೆ ದಿನ ವಾಹನ, ಯಂತ್ರೋಪಕರಣಗಳಿಗೆ ಹೂವಿನಿಂದ ಅಲಂಕರಿಸಲು ಹೂವಿನ ಹಾರಗಳ ಮಾರಾಟ ಜೋರಾಗಿ ಸಾಗಿತ್ತು. ಒಂದು ಜೊತೆ ಸೇವಂತಿಗೆ ಹೂವಿನ ಹಾರಗಳು 500, ಬಟನ್ಸ್‌ 150ಕ್ಕೆ ಬಿಕರಿಯಾಗುತ್ತಿದ್ದವು. ಗುಲಾಬಿ 8 ಅಡಿ ಮಾಲೆ 650 ರಿಂದ 700 ಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಹಣ್ಣುಗಳ ಬೆಲೆಯೂ ದುಬಾರಿ

ಇನ್ನು ಕೆಜಿ ಪಚ್ಚ ಬಾಳೆಹಣ್ಣು 50, ಏಲಕ್ಕಿ ಬಾಳೆ 100, ಸೇಬು 130, ಒಂದು ಜೊತೆ ಅನಾನಸ್‌ 70, ದಾಳಿಂಬೆ 120, ಮೂಸಂಬಿ 60ಕ್ಕೆ ಮಾರಾಟವಾಗುತ್ತಿದ್ದರೆ, ಬಾಳೆಕಂಬ ಜೋಡಿಗೆ 50ಕ್ಕೆ ಮಾರಾಟವಾಗುತ್ತಿದ್ದವು. ಇನ್ನು ಬೂದುಗುಂಬಳಕಾಯಿ ಕೆಜಿಗೆ 30 ರವರೆಗೆ ಮಾರಾಟವಾಗುತ್ತಿದ್ದವು.

ಅದ್ಧೂರಿ ದಸರಾಗೆ ಸಿದ್ಧತೆ

ಪ್ರಸ್ತುತ ವರ್ಷ ಮುಂಗಾರು ಆರಂಭದಿಂದಲೂ ಮುನಿಸಿಕೊಂಡಿದ್ದ ವರುಣ ಕಳೆದ ಒಂದು ವಾರದಿಂದ ಕರುಣೆ ತೋರಿದ್ದು, ಕೈ ತಪ್ಪಿ ಹೋಗಲಿದೆ ಎಂದೇ ಭಾವಿಸಿದ್ದ ರಾಗಿ ಮತ್ತು ಜೋಳದ ಬೆಳೆಗಳು ನಳನಳಿಸುತ್ತಿವೆ. ಇದರಿಂದಾಗಿ ಕಳೆದ 10 ವರ್ಷಗಳಿಂದ ಬೆಳೆ ಕೈಗೆ ಸಿಗದೆ ನಿರಾಶೆ ಹೊಂದಿದ್ದ ರೈತರಿಗೆ ಪ್ರಸ್ತುತ ಉತ್ತಮ ಬೆಳೆ ಕೈಗೆ ಸಿಗುವ ನಿರೀಕ್ಷೆಗೆ ವರುಣ ಬೆಂಬಲಿಸಿದಂತಿದೆ.

ಬಾಗೇಪಲ್ಲಿಯಲ್ಲಿ ಮಳೆ: ಸಂಚಾರ ಅಸ್ತವ್ಯಸ್ತ

ಇದರಿಂದಾಗಿ ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈವರೆಗೆ ಇದ್ದ ರಾಸುಗಳು ನೇಗಿಲು ಮಾಯವಾಗಿ ಆ ಜಾಗದಲ್ಲಿ ಟ್ರ್ಯಾಕ್ಟರ್‌ ಸ್ಥಾನ ಪಡೆದುಕೊಂಡಿದ್ದು, ಕೃಷಿಗೆ ಸಹಕಾರಿಯಾಗಿರುವ ಟ್ರ್ಯಾಕ್ಟರ್‌ ಸೇರಿದಂತೆ ಇತರೆ ವಾಹನಗಳ ಪೂಜಜೆಗಳಿಗೆ ರೈರು ಸಿದ್ಧತೆ ನಡೆಸಿದ್ದಾರೆ.

ಇನ್ನು ನಗರ ವ್ಯಾಪ್ತಿಯಲ್ಲಿಯೂ ಹಬ್ಬದ ಸಂಭ್ರಮ ಜೋರಾಗಿದ್ದು, ಕಚೇರಿಗಳು, ಅಂಗಡಿ ಮಳಿಗೆಗಳು ಸೇರಿದಂತೆ ಇತರೆ ಪೂಜೆಗಳಿಗೆ ಸಿದ್ಧತೆಗಳನ್ನು ನಡೆಸಿದ್ದು, ಬೇಡಿಕೆ ಹೆಚ್ಚಾದ ಕಾರಣ ಸಹಡವಾಗಿಯೇ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣತೊಡಗಿದೆ.

ನಾನು ರಾಜೀನಾಮೆ ನೀಡಲು ಇದೇ ಪ್ರಮುಖ ಕಾರಣ: ಡಾ.ಕೆ. ಸುಧಾಕರ್‌

ಇನ್ನು ಆಯುಧ ಪೂಜೆ ಎಂದರೆ ಗ್ರಾಮೀಣ ಪ್ರದೇಶದಲ್ಲಿ ಬಾಡೂಟವಾಗಿದ್ದು, ವಾಹನಗಳಿಗೆ ಬೂದುಹಗುಂಬಳದ ಜೊತೆಗೆ ಕುರಿ, ಕೋಳಿ ಕಡಿದು ಹಬ್ಬ ಆಚರಿಸುವುದು ಸಾಮಾನ್ಯವಾಗಿದೆ. ಹಾಗಾಗಿ ಸಂತೆಗಳಲ್ಲಿ ಕುರಿಗಳ ಬೆಳೆಯೂ ಅಧಿಕವಾಗಿದೆ.

click me!