ಮೀನು ವ್ಯಾಪಾರಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ| ಬಳ್ಳಾರಿ ಜಿಲ್ಲೆಯ ದೇವಲಾಪುರ ಗ್ರಾಮದ ಬಳಿ ನಡೆದ ಘಟನೆ| ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು|
ಕುರುಗೋಡು(ಮೇ.14): ಮೀನು ವ್ಯಾಪಾರಕ್ಕೆ ದ್ವಿಚಕ್ರ ವಾಹನದ ಮೂಲಕ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ಬುಧವಾರ ನಸುಕಿನ ಜಾವ ಜರುಗಿದೆ. ದೇವಲಾಪುರ ಗ್ರಾಮದ ತುಂಬಳದ ನಾಯಕರ ಹುಚ್ಚಪ್ಪ (28) ಹತ್ಯೆಗೊಳಗಾದ ವ್ಯಕ್ತಿ.
ಈತ ತನ್ನ ಸ್ವಗ್ರಾಮದಿಂದ ದೇವಸಮುದ್ರ ಕ್ರಾಸ್‌ನಿಂದ ಬಾಳಾಪುರ ಮತ್ತು ಹಳೆ ನೆಲ್ಲೂಡಿ ಮಾರ್ಗದವಾಗಿ ದ್ವಿಚಕ್ರ ವಾಹನದಲ್ಲಿ ಮಿನು ಮಾರಾಟಕ್ಕೆಂದು ಸಿರಿಗೇರಿಗೆ ಹೋಗುವ ಸಂದರ್ಭದಲ್ಲಿ ಬಳಾಪುರ ಮತ್ತು ಹಳೆ ನೆಲ್ಲೂಡಿ ಮುಖ್ಯ ಮಾರ್ಗದಲ್ಲೇ ಈ ಘಟನೆ ನಡೆದಿದೆ.
ಜೇವರ್ಗಿಯಲ್ಲಿ ಸಹೋದರರಿಬ್ಬರ ಬರ್ಬರ ಕೊಲೆ: ಕಾರಣ..?
ಸ್ಥಳಕ್ಕೆ ಬಳ್ಳಾರಿ ಅಡಿಷನಲ್ ಎಸ್ಪಿ ಲಾವಣ್ಯ ಮತ್ತು ಡಿವೈಎಸ್ಪಿ ಆರುಣ್ ಕುಮಾರ್ ಕೋಳೂರು ಹಾಗೂ ಕುರುಗೋಡು ಸಿಪಿಐ ಚಂದನ್ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಮಾಹಿತಿ ಮತ್ತು ಹತ್ಯೆಗೈದ ಆರೋಪಿಗಳು ಪತ್ತೆಯಾಗಿಲ್ಲ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.