Koppal: ಬಿಜೆಪಿ ಮುಖಂಡ ಮಾಲೀಕತ್ವದ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್‌: ರೈತರಿಗೆ ಗಾಯ

By Kannadaprabha News  |  First Published Jan 13, 2022, 12:45 PM IST

*  ಕ್ವಾರಿಯ 200 ಮೀಟರ್‌ ವ್ಯಾಪ್ತಿಯಲ್ಲಿ ಬಿದ್ದಿರುವ ಕಲ್ಲುಗಳು
*  ರೈತರಿಂದ ಠಾಣೆಯಿಂದ ದೂರು, ಅಧಿಕಾರಿಗಳ ಪರಿಶೀಲನೆ
*  ಪರವಾನಗಿ ಪಡೆದುಕೊಂಡು ಕಲ್ಲುಕ್ವಾರಿಯಲ್ಲಿ ನಿಯಮಾನುಸಾರ ಬ್ಲಾಸ್ಟ್‌ 
 


ಕೊಪ್ಪಳ(ಜ.13): ತಾಲೂಕಿನ ಟಣಕನಕಲ್‌ ಬಳಿಯ ಬಿಜೆಪಿ(BJP) ಮುಖಂಡ ಡಿ. ಮಲ್ಲಣ್ಣ(D Mallanna) ಅವರ ಮಾಲೀಕತ್ವದ ಗಂಗಾಸ್ಟೋನ್‌ ಕ್ರಷರ್‌ನಲ್ಲಿ(Ganga Stone Crusher) ಮಂಗಳವಾರ ಸಂಜೆ ಕಲ್ಲುಕ್ವಾರಿಯಲ್ಲಿ(Stone quarry) ಬ್ಲಾಸ್ಟ್‌ ಮಾಡಿದ್ದರಿಂದ ಸುತ್ತಲಿನ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರ(Farmers) ಮೇಲೆ ಕಲ್ಲು ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ.

ಹಲವು ದಿನಗಳಿಂದ ಕಲ್ಲು ಕ್ವಾರಿ ನಡೆಸಲಾಗುತ್ತಿದ್ದು, ಬ್ಲಾಸ್ಟ್‌(Blast) ಮಾಡಿದಾಗ ರೈತರು ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು. ಆದರೆ, ಈ ವರೆಗೂ ಕ್ರಮಕೈಗೊಂಡಿಲ್ಲ. ಮಂಗಳವಾರ ಸಂಜೆಯಾಗಿರುವ ಬ್ಲಾಸ್ಟ್‌ ಕುರಿತು ವೀಡಿಯೋ ಮಾಡಿಕೊಂಡಿರುವ ರೈತರು ಕೊಪ್ಪಳ(Koppal) ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ. ಬ್ಲಾಸ್ಟ್‌ ದೊಡ್ಡ ಪ್ರಮಾಣದಲ್ಲಿಯೇ ಆಗಿದ್ದು ಕ್ವಾರಿಯ ಸುತ್ತಮುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ಕಲ್ಲುಗಳು ಬಿದ್ದಿವೆ ಎಂದು ರೈತರು ದೂರಿದ್ದಾರೆ.

Tap to resize

Latest Videos

ಯಾದಗಿರಿ: ಕಲ್ಲು ಕ್ವಾರಿ ಮೇಲೆ ದಾಳಿ, ಸ್ಫೋಟಕ್ಕೆ ಬಳಸುವ 750 ಕೆಜಿ‌ ಬೂಸ್ಟರ್‌ ಜಪ್ತಿ

ಅಧಿಕಾರಿಗಳ ಭೇಟಿ:

ಬುಧವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿರುವ ತಹಸೀಲ್ದಾರ್‌ ಅಮರೇಶ ಬಿರಾದರ ಹಾಗೂ ಇತರೆ ಅಧಿಕಾರಿಗಳ ತಂಡ ರೈತರಿಂದಲೂ ಅಹವಾಲು ಸ್ವೀಕರಿಸಿ ಸಮಗ್ರ ಪರಿಶೀಲನೆ ನಡೆಸಿತು.

ಬ್ಲಾಸ್ಟ್‌ ಪದೇ ಪದೇ ಮಾಡುತ್ತಿದ್ದು ಕ್ವಾರಿಯ ಸುತ್ತಲೂ ಇರುವ ಜಮೀನುಗಳಲ್ಲಿ(Land) ಕಲ್ಲುಗಳು ಬೀಳುತ್ತಿವೆ. ಇದರಿಂದ ಸಾಕಷ್ಟು ಪ್ರಮಾಣದ ಹಾನಿಯಾಗುತ್ತಿದ್ದು ಬ್ಲಾಸ್ಟ್‌ ತಡೆಯುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ ಅಂತ ಗುಡ್ಲಾನೂರು ರೈತ ಬಸವರಾಜ ತಿಳಿಸಿದ್ದಾರೆ. 

ಕಲ್ಲುಕ್ವಾರಿಯಲ್ಲಿ ಬ್ಲಾಸ್ಟ್‌ ಮಾಡಿದ್ದರಿಂದ ರೈತರ ಹೊಲದಲ್ಲಿ ಕಲ್ಲುಗಳು ಬಿದ್ದಿರುವುದು ನಿಜ. ಪರಿಶೀಲಿಸಿದ್ದು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಅಂತ ಕೊಪ್ಪಳ ತಹಸೀಲ್ದಾರ್‌ ಅಮರೇಶ ಬಿರಾದಾರ ತಿಳಿಸಿದ್ದಾರೆ. 
ಪರವಾನಗಿ ಪಡೆದುಕೊಂಡು ಕಲ್ಲುಕ್ವಾರಿಯಲ್ಲಿ ನಿಯಮಾನುಸಾರ ಬ್ಲಾಸ್ಟ್‌ ಮಾಡಲಾಗಿದೆ. ವಿನಾಕಾರಣ ರೈತರು ಆರೋಪ ಮಾಡುತ್ತಿದ್ದಾರೆ ಅಂತ ಕ್ರಷರ್‌ ಮಾಲೀಕ ಡಿ. ಮಲ್ಲಣ್ಣ ಹೇಳಿದ್ದಾರೆ. 

ಕಲ್ಲು ಕ್ವಾರಿಯಲ್ಲಿ ಸ್ಫೋಟ​ಕ್ಕೆ ಬೆಳೆ ಹಾನಿ: ಹಲ​ವ​ರಿಗೆ ಗಾಯ

ಮರಿಯಮ್ಮನಹಳ್ಳಿ: ಕ್ವಾರಿಯಲ್ಲಿ ಬುಧ​ವಾರ ಏಕಾ​ಏಕಿ ಕಲ್ಲು ಸ್ಫೋಟಿ​ಸಿ​ದ್ದ​ರಿಂದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲ​ವರು ಕಲ್ಲು ಬಿದ್ದು ಗಾಯ​ಗೊಂಡರೆ ಬೆಳೆ ಹಾಗೂ ಕೋಳಿ ಫಾರಂ ಶೆಡ್‌ ನೆಲಕ್ಕುರು​ಳಿ​ರುವ ಘಟನೆ ಕಳೆದ ವರ್ಷ ಆ.4 ರಂದು ಸಮೀಪದ ಲೋಕಪ್ಪನಹೊಲ(ನಾಣಿಕೆರೆ) ಗ್ರಾಮದ ಬಳಿ ನಡೆದಿತ್ತು. 

ಕರ್ನಾಟಕದಲ್ಲಿವೆ ಸುಮಾರು 5000ಕ್ಕೂ ಹೆಚ್ಚು ಕಲ್ಲು ಕ್ವಾರಿಗಳು, ಅರ್ಧಕ್ಕರ್ಧ ಅಕ್ರಮ!

ನಿತ್ಯಾನಂದ ಅವರಿಗೆ ಸೇರಿದ ಕ್ರಷರ್‌ನಿಂದ ಸದ್ಯ ಕಲ್ಲು ಗಣಿಗಾರಿಕೆ ಆರಂಭವಾಗಿದ್ದು, ಇಲ್ಲಿ ವರೆಗೂ ಸ್ತಬ್ಧವಾಗಿದ್ದ ಬ್ಲಾಸ್ಟಿಂಗ್‌ ದಿಢೀರ್‌ ಆರಂಭ​ವಾ​ಗಿ​ತ್ತು.  ಲೋಕಪ್ಪನ ಹೊಲ ಗ್ರಾಮ ಬಳಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದಲ್ಲದೆ ಬ್ಲಾಸ್ಟಿಂಗ್‌ ಮೂಲಕ ಸುತ್ತಲಿನ ಬೆಳೆ ಹಾನಿಯುಂಟಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಹೊಲದಲ್ಲಿದ್ದ ಕೋಳಿ ಶೆಡ್‌ ಹಾಗೂ ಆಕಳು ಸಾಕಾಣಿಗೆ ಶೆಡ್‌ ಸಹ ಸಂಪೂರ್ಣ ಹಾಳಾಗಿತ್ತು. ಬ್ಲಾಸ್ಟಿಂಗ್‌ ರಭಸಕ್ಕೆ ಸುಮಾರು ಒಂದು ಕಿಮೀ ನಷ್ಟು ದೂರದವರೆಗೂ ಕಲ್ಲುಗಳು ಹರಡಿದ್ದವು.

ತಮ್ಮ ಹೊಲಕ್ಕೆ ತೆರಳಿದ್ದ ಯುವಕನೋರ್ವನ ಕಾಲಿಗೆ ಕಲ್ಲು ಬಿದ್ದು ಗಾಯವಾಗಿದೆ. ಇದೇ ವೇಳೆ ಹೊಲದಲ್ಲಿ ಕೆಲಸದಲ್ಲಿ ತೊಡಗಿದ್ದವರು ಏಕಾಏಕಿ ಆದ ಬ್ಲಾ​ಸ್ಟ್‌ ಶಬ್ದದಿಂದ ದಿಕ್ಕೆಟ್ಟು ಓಡಿದ್ದಾರೆ ಎಂದು ಸ್ಥಳದಲ್ಲೇ ಇದ್ದ ರೈತರು ತಿ​ಳಿ​ಸಿ​ದ್ದರು. 
ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಿಂದ ಸಾವಿರಾರು ಎಕರೆ ಜಮೀನಿಗೆ ಹೋಗಿರುವ ವ್ಯಾಸನಕೆರೆ ಏತ ನೀರಾವರಿ ಯೋಜನೆ ಕಾಲುವೆ ಹಾಳಾಗಿದೆ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ತುಂಗಭದ್ರಾ ಹಿನ್ನೀರಿರುವ ವ್ಯಾಪ್ತಿಯಲ್ಲಿ ಐತಿಹಾಸಿಕ ದೇವಾಲಯಗಳಿವೆ. ಸುಮಾರು ವರ್ಷಗಳಿಂದ ಇಲ್ಲದ ಕಲ್ಲು ಗಣಿಗಾರಿಕೆ ದಿಢೀರ್‌ ಆರಂಭವಾಗಿದೆ. ಈ ಗಣಿಗಾರಿಕೆಯಿಂದ ಬೆಳೆಗಳು ಹಾಳಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
 

click me!