ಲಾಕ್‌ಡೌನ್‌ಗೆ ನಲುಗಿದ ಕರ ಕುಶಲಕರ್ಮಿಗಳು

By Kannadaprabha NewsFirst Published May 28, 2021, 1:12 PM IST
Highlights
  • ಕೊರೋನಾ ಮಾರಿಯಿಂದ ವಿವಿಧ ವಲಯಗಳ ಮೇಲೆ ಭಾರೀ ದುಷ್ಪರಿಣಾಮ
  • ಕೊರೋನಾ ಹೊಡೆತಕ್ಕೆ ಸಿಲುಕಿ ನಲುಗಿದ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕುತ್ತಿದ್ದ ಕರಕುಶಲ ಕುಟುಂಬಗಳು
  • ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಟ

 ಚಿಕ್ಕಬಳ್ಳಾಪುರ (ಮೇ.28):  ಕೊರೋನಾ ಮಾರಿ ವಿವಿಧ ವಲಯಗಳ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. ಅದರಲ್ಲೂ ತಮ್ಮ ಕೈ ಚಳಕದ ಮೂಲಕದ ಮೂಲಕ ಬಗೆಬಗೆಯ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕುತ್ತಿದ್ದ ಹಲವು ಕರಕುಶಲ ಕುಟುಂಬಗಳು ಕೊರೋನಾ ಹೊಡೆತಕ್ಕೆ ಸಿಲುಕಿ ಸಂಕಷ್ಟಕ್ಕೀಡಾಗಿವೆ.

ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕರಕುಶಲಕರ್ಮಿಗಳ ಕುಟುಂಬಗಳು ಸಹಸ್ರಾರು ಸಂಖ್ಯೆಯಲ್ಲಿದ್ದು ಕೊರೋನಾ 2ನೇ ಅಲೆಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಘೋಷಿಸಿರುವ ಸೆಮಿ ಲಾಕ್‌ಡೌನ್‌ ಹಾಗೂ ಸಂಪೂರ್ಣ ಲಾಕ್‌ಡೌನ್‌ ಹೊಡೆತಕ್ಕೆ ಈಗ ಕರಕುಶಲಕರ್ಮಿಗಳು ತಮ್ಮ ಬದುಕು ಕಳೆದುಕೊಂಡು ತತ್ತರಿಸುವಂತಾಗಿದೆ.

ಮೈಸೂರು ಜಿಲ್ಲೆಯ 343 ಗ್ರಾಮಗಳಲ್ಲಿ ಸೋಂಕೆ ಇಲ್ಲ! .

ಜಿಲ್ಲೆಯಲ್ಲಿ ವಿಶೇಷವಾಗಿ ಅಲೆ ಮಾರಿ ಹಾಗೂ ಅರೆ ಅಲೆಮಾರಿಗಳ ಜೊತೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ಆಟಿಕೆ, ಗೃಹ ಬಳಕೆ ವಸ್ತುಗಳು, ಅಲಂಕಾರಿಕ ವಸ್ತುಗಳು ಸಿದ್ದಪಡಿಸುವಲ್ಲಿ ಕರಕುಶಲಕರ್ಮಿಗಳು ಎತ್ತಿದ ಕೈ. ಅದೇ ರೀತಿ ಬಿದಿರು ಬಳಸಿಕೊಂಡು ಕೃಷಿ ಚಟುವಟಿಕೆಗಳಿಗೆ ಹಾಗೂ ಮನೆ ಬಳಕೆಗೆ ಅಗತ್ಯವಾದ ತರಹೇವಾರಿ ವಸ್ತುಗಳನ್ನು ಸಿದ್ದಪಡಿಸಿ ಅವುಗಳನ್ನು ಸಂತೆ, ಜನದಟ್ಟಣೆ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ಇವರ ವೃತ್ತಿಗೆ ಕೊರೋನಾ ಕಂಟಕವಾಗಿದೆ. ಅದರಲ್ಲೂ ಕುಂಬಾರಿಕೆಯಲ್ಲಿ ತೊಡಗಿರುವ ಬಹಳಷ್ಟುಕುಟುಂಬಗಳು ಮಡಿಕೆ ವ್ಯಾಪಾರ ಇಲ್ಲದೇ ಕುಂಬಾರಿಕೆ ನಿಲ್ಲಿಸಿವೆ.

ಜಿಲ್ಲೆಯಲ್ಲಿ ಮುಂಗಾರು ಆರಂಭಗೊಳ್ಳುವ ಈ ಸಮಯದಲ್ಲಿ ಕರಕುಶಲಕರ್ಮಿಗಳು ರೈತರಿಗೆ ಅವಶ್ಯಕವಾದ ಹಗ್ಗಗಳನ್ನು ಹಾಗೂ ಮಂಕರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಗರ ಪ್ರದೇಶಗಳಿಗೆ ತಂದು ವಾರದ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದಾಗ ವ್ಯಾಪಾರ ಸ್ಥಗಿತಗೊಂಡಿದೆ.

ಗ್ರಾಮೀಣ ಭಾಗದಲ್ಲಿ ಅಂತೂ ವಯಸ್ಸಾದ ವಯೋವೃದ್ದ ಕರ ಕುಶಲ ಕರ್ಮಿಗಳು ಗುಡ್ಡು ಗಾಡು ಪ್ರದೇಶಗಳಲ್ಲಿ ತಿರುಗಾಡಿ ಬಿದಿರಿನ ಹಾಗೂ ಈಚಲು ಮರದ ಕಡ್ಡಿಗಳನ್ನು ಕತ್ತರಿಸಿಕೊಂಡು ಬಂದು ತಮ್ಮ ಕೈ ಚಳಕದಿಂದ ಆಧುನಿಕತೆಗೆ ಸವಾಲ್ಡೊಡುವ ರೀತಿಯಲ್ಲಿ ಕೃಷಿ ಹಾಗೂ ಗೃಹ ಬಳಕೆಗೆ ಪೂರಕವಾಗಿ ಮಂಕರಿ, ಮೊರ, ಗಾಳಿ ಬಿಸುವ ಬೀಸಾಣಿಗೆ, ಏಣಿ, ತೊಗೂವ ತೊಟ್ಟಿಲು ಸಿದ್ದಪಡಿಸಿಕೊಂಡು ದಿನವೀಡಿ ಮಾರಾಟ ಮಾಡಿ ಬಂದ ಆದಾಯದಲ್ಲಿ ಕುಟುಂಬ ಪೋಷಣೆ ಮಾಡುತ್ತಿದ್ದರು. ಆದರೆ ಕೊರೋನಾ ಸೃಷ್ಟಸಿರುವ ಅವಾಂತರ ಕರಕುಶಲ ಕರ್ಮಿಗಳಿಗೆ ದಿಕ್ಕು ತೋಚದಂತಹ ಸ್ಥಿತಿ ನಿರ್ಮಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!