ಶಿಕ್ಷೆ ಅನುಭವಿಸುವ ಚಿಕ್ಕಮಗಳೂರು ಸೆರೆಮನೆಯ ಚಿತ್ರಣವೇ ಬದಲು, ಖೈದಿಗಳ ಮನಪರಿವರ್ತಿಸುವ ಸುಂದರ ತಾಣ!

By Gowthami K  |  First Published Mar 10, 2023, 9:13 PM IST

ಚಿಕ್ಕಮಗಳೂರು ಜಿಲ್ಲೆಯ ರತ್ನಗಿರಿಬೋರೆ ಸಮೀಪದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಆಧುನಿಕ ಸ್ಪರ್ಶ ದೊರೆತಿದ್ದು, ಕಾರಾಗೃಹ ವಾಸಿಗಳ ಮನಪರಿವರ್ತಿಸುವ ಸುಂದರ ತಾಣವಾಗಿ ಹೊರಹೊಮ್ಮಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.10): ಜೈಲುಗಳೆಂದರೆ ಶಿಕ್ಷೆಅನುಭವಿಸುವ ಸ್ಥಳವೆಂಬ ಭಾವನೆ ಸಾಮಾನ್ಯಜನರ ಭಾವನೆಯಾಗಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ರತ್ನಗಿರಿಬೋರೆ ಸಮೀಪದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಆಧುನಿಕ ಸ್ಪರ್ಶ ದೊರೆತಿದ್ದು, ಕಾರಾಗೃಹ ವಾಸಿಗಳ ಮನಪರಿವರ್ತಿಸುವ ಸುಂದರ ತಾಣವಾಗಿ ಹೊರಹೊಮ್ಮಿದೆ. ಕಾರಾಗೃದೊಳಗೆ ಕಾಲಿಟ್ಟೊಡನೆ ಸೆರೆಮನೆ ಎಂಬ ಭಾವನೆ ದೊರವಾಗಿ ಎಲ್ಲೋ ನಗರ ಅಥವಾ ದೊಡ್ಡ ಪಟ್ಟಣದಲ್ಲಿರುವ ಹೊಸ ಉದ್ಯಾನವನಕ್ಕೊ, ಗಿರಿಶ್ರೇಣಿಯಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಿರುವ ಭಾವನೆ ಮೂಡುತ್ತದೆ. 

Tap to resize

Latest Videos

ಜೈಲಿಗೆ ಬಂದವರಿಗೆ ಸ್ವಾಗತಕೋರುತ್ತವೆ ಸಸ್ಯರಾಶಿ: 
ಸೆರೆಮನೆಯ ಖಾಲಿ ಜಾಗದಲ್ಲಿ ಗಿರಿಶಿಖರ ನಿರ್ಮಾಣಗೊಂಡಿದೆ. ಬೆಟ್ಟದ ಮೇಲೆ ದೇವಾಲಯವಿದೆ. ಕೆಳಗಿನಿಂದ ಮೇಲೆ ಪುಟಿದೇಳುವ ಕಾರಂಜಿ ಇದೆ. ವಿವಿಧ ಬಣ್ಣಗಳ ಹೂವುಗಳು ಅರಳಿನಿಂತಿದೆ. ಶಿಕ್ಷಣವೇಶಕ್ತಿ, ಅರಿವೆ ಗುರು ಎನ್ನುವ ಶಾಲೆಯೊಂದು ತಲೆ ಎತ್ತಿದೆ. ಗ್ರಾಮೀಣ ಸೊಗಡನ್ನು ಬಿಂಬಿಸಲಾಗಿದೆ. ತಾಯಿ, ಮಗುವಿನ ಪ್ರೀತಿಯನ್ನು ತೋರಿಸಲಾಗಿದೆ. ಕಾರಾಗೃಹದೊಳಗೆ ಕಾಲಿಟ್ಟರೆ ಮೊಬೈಲನ್ನು ನಿಗದಿತ ಸ್ಥಳದಲ್ಲಿಡಬೇಕಾಗುತ್ತದೆ. ಖೈದಿಗಳಿಗೆ ತಂದಿರುವ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಆಧುನಿಕ ತಂತ್ರಜ್ಞಾನದಿಂದ ಪರಿಶೀಲನೆ ಮಾಡಲಾಗುತ್ತದೆ.

ಅವುಗಳೆಲ್ಲ ಪೂರ್ತಿಯಾಗಿ ಸ್ಕ್ಯಾನ್ಆದ ಮೇಲೆ ಜೈಲಿನ ಆವರಣ ಸಾಗುವ ಮಾರ್ಗದರ್ಶಿ ಕವಿಗಳು,ದಾರ್ಶನಿಕರ ಹೇಳಿರುವ ಮನಪರಿವರ್ತನೆ, ನೀತಿಬೋಧನೆ, ಸುಂದರ ಬದುಕು ರೂಪಿಸುವ, ಕಟ್ಟಿಕೊಳ್ಳುವಂತಹ ಬರಹಗಳು ಕಂಡುಬರುತ್ತವೆ. ಜಿಲ್ಲಾ ಕಾರಾಗೃಹ ಅಧೀಕ್ಷಕರ ಕಚೇರಿ, ಸೂಪರಿಡೆಂಟ್ಗಳ ಕಚೇರಿ ಸಿಗುತ್ತದೆ. ಈ ಕಚೇರಿಯ ಹೊರಾಂಡವನ್ನು ನೋಡಿದವರಿಗೆ ಕಾರಾಗೃಹ ಸಂಪೂರ್ಣವಾಗಿ ಬದಲಾವಣೆಗೊಂಡಿರುವುದು ತಕ್ಷಣತಿಳಿಯುತ್ತದೆ. ವಿವಿಧ ಜಾತಿಯ ಹೂವುಗಳ ಅರಳಿನಿಂತು ಗಾಳಿ ಬೀಸಿದೊಡನೆ ತಲೆದೂಗುವ ಮೂಲಕ ಜೈಲಿಗೆ ಬಂದವರಿಗೆ ಸ್ವಾಗತ ಕೋರುತ್ತವೆ. ಸಸ್ಯರಾಶಿಗಳಿವೆ. ವಿವಿಧ ಸೊಪ್ಪುಗಳನ್ನು ಬೆಳೆಯಲಾಗುತ್ತಿದೆ.

ಕಾರಾಗೃಹದ ಒಳಗೆ ಇದೆ ಬೃಂದಾವನ:
ಕಾರಾಗೃಹದ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಾಣಗೊಂಡಿದೆ. ಬಾವಿ,  ಕಾರಂಜಿನಿರ್ಮಾಣವಾಗಿದೆ. ಇಲ್ಲಿರುವ ಸುಂದರ ಪರಿಸರ ಕಣ್ತುಂಬಿಕೊಳ್ಳಲು ಅರಾಮವಾಗಿ ಕುಳಿತುಕೊಳ್ಳಲು ಬೆಂಚ್ಹಾಕಲಾಗಿದೆ. ಹಳೇ ಫ್ಯಾನನ್ನು ಎತ್ತರದ ಕಂಬಕ್ಕೆ ಕಟ್ಟಿದ್ದು, ಹಾಳಿಬಂದಾಗ ತಿರುಗುತ್ತದೆ. ಗಾಳಿಯಂತ್ರದ ಅಣಕು ಪ್ರದರ್ಶನಗೊಂಡಿದೆ. ಇದರಿಂದ ಪವನ ವಿದ್ಯುತ್ ತಯಾರಿಸಬಹುದೆಂಬ ತಿಳುವಳಿಕೆಯನ್ನು ನೀಡಿದಂತಾಗಿದೆ.

ಗ್ರಾಮೀಣ ಜನಜೀವನ ದರ್ಶನ:
ಈ ಕಾರಾಗೃಹದಲ್ಲಿ ಹಳ್ಳಿಯಜನಜೀವನದ ದರ್ಶನ ಮಾಡಿಸಲಾಗಿದೆ. ಹುಲ್ಲಿನ ಮನೆ ನಿರ್ಮಾಣಗೊಂಡಿದೆ. ಮಹಿಳೆಯೋರ್ವರು ಮನೆಯಮುಂದೆ ಮೊರದಲ್ಲಿ ವಸ್ತುಗಳನ್ನು ವಪ್ಪಮಾಡುತ್ತಿದ್ದರೆ, ಮನೆಯೊಡಯ ಹೆಗಲಮೇಲೆ ನೇಗಿಲುಹೊತ್ತು ಹೊಲಗದ್ದೆಊಳಲು ತೆರಳುತ್ತಿರುವುದು, ಕೋಳಿಯೊಂದು ಮೇವಿಗೆ ಹುಡುಕುತ್ತಿರುವುದು, ಪಕ್ಕದಲ್ಲೇಶಾಲೆ ಶಿಕ್ಷಣವೇ ಶಕ್ತಿ, ಅರಿವೇ ಗುರು ನಾಮಫಕಹೊಂದಿರುವ ಶಾಲೆಯೊಂದು ತಲೆಎತ್ತಿದೆ. ಸಹೋದರನೊಬ್ಬ ಸಹೋದರಿಯನ್ನು ಕೈಹಿಡಿದು ಶಾಲೆಗೆ ಕರೆದೊಯ್ಯುತ್ತಿರುವುದನ್ನು ಕಾಣಬಹುದು.

ಕರುಳುಬಳ್ಳಿಯ ಸಂಬಂಧ:
ಮಹಿಳಾ ಕಾರಾಗೃಹದ ಮುಂಭಾಗದಲ್ಲಿ ಕೊಳದಲ್ಲಿ ಈಜಾಡಲು ಬಾತುಕೋಳಿರೆಡಿಯಾಗಿದ್ರೆ  ಮತ್ತೊಂದಡೆ ಮಹಿಳೆಯೊಬ್ಬರು ಕೊಡದಲ್ಲಿ ನೀರುಮೊಗೆದು ಸೊಂಟಕ್ಕೆ ಎತ್ತಿಕೊಳ್ಳುತ್ತಿರುವುದು, ತಾಯಿಬಂದಾಗ ಹಸಿವನ್ನು ನೀಗಿಸಿಕೊಳ್ಳಲು ಕರುವೊಂದು ಹುಸುವಿನ ಹೆಚ್ಚಲಿಗೆ ಬಾಗಿಹಾಕಿ  ಹಾಲುಕುಡಿಯುವ ದೃಶ್ಯ ನಿರ್ಮಾಣ ಗೊಂಡಿದ್ದು, ತಾಯಿಮಗುವಿನ ಸಂಬಂಧವನ್ನು ಸೂಚ್ಯವಾಗಿ ತಿಳಿಸಿಕೊಡಲಾಗಿದೆ.ಅಡುಗೆ ಮನೆಮುಂಭಾಗದಲ್ಲಿ ಮತ್ತೊಂದು ಉದ್ಯಾನವಿದ್ದು ಕೊಳದ ಮೇಲೆ  ಆದಿಶೇಷನನ್ನು ನಿರ್ಮಿಸಿದ್ದು, ಹೆಡೆಯ ಕೆಳಗಡೆ ಕೃಷ್ಣಕೊಳಲ ನೂದುತ್ತಿರುವುದು, ಅದರ ಪಕ್ಕದಲ್ಲಿ ನವಿಲು, ಹಂಸವೂ ಇದೆ. ಕೊಳೆ ದಂಡೆಯ ಮೇಲೆ ಉದ್ದನೆಯ ಕೊಳಲಿನ ಮಾದರಿ ಇಡಲಾಗಿದೆ.

ಜೈಲಲ್ಲೆ ಸಿಸೋಡಿಯಾ ಹತ್ಯೆಯಾಗುವ ಸಾಧ್ಯತೆ, ಬಿಜೆಪಿ ವಿರುದ್ಧ ಗುಡುಗಿದ ಆಪ್!

ಅಲಂಕಾರಿಕಾ ಕಾಫಿ ಬೊಡ್ಡೆಗಳು ಉದ್ಯಾನದ ಅಂದ ಹೆಚ್ಚಿಸಿವೆ. ಝುಳುಝಳು ನೀನಾದದೊಂದಿಗೆ ಹರಿಯುವ ಜಲಪಾತದ ಸ್ವಲ್ಪ ದೂರದಲ್ಲಿ ತಾಯಿಮಗುವಿಗೆ ಕಾಲುಣಿಸುತ್ತಿರುವುದನ್ನು ನೋಡಬಹುದಾಗಿದೆ. ಇನ್ನೊಂದೆಡೆ ಘರ್ಜಿಸುವ ವ್ಯಾರ್ಘನನ್ನು ಕಾಣಬಹುದು. ಕನ್ನಡ ನಕ್ಷೆ ಅದರ ಮುಂದೆ ಭುವನೇಶ್ವರಿಯ ಚಿತ್ರವಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಮಾಣಿಕ್ಯಾಧಾರ, ದೇವಿರಮ್ಮನಬೆಟ್ಟ, ಹೆಬ್ಬೆ ಜಲಪಾತವನ್ನೇ ಸೃಷಿ ಮಾಡಿದ್ದಾರೆ. ಜೈಲಿನಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿ ಈ ಸುಂದರ ಉದ್ಯಾನ ನಿರ್ಮಾಣಗೊಂಡಿದೆ.

ಜೈಲು ಶಿಕ್ಷೆ ಬದಲಿಗೆ ಉಚಿತ ಸೇವೆಗೆ ಆದೇಶ: ಮಾನವೀಯತೆ ಮೆರೆದ ಹೈಕೋರ್ಟ್‌

ಇವುಗಳನ್ನೆಲ ನಿರ್ಮಾಣಕ್ಕೆ ಹೊರಗಿನಿಂದ ಯಾರನ್ನೂ ಕರೆಸಿಲ್ಲ ಇಲ್ಲಿರುವ ಕಾರಾಗೃಹವಾಸಿಗಳ ಕೌಶಲವನ್ನು ಬಳಸಿಕೊಳ್ಳಲಾಗಿದೆ. ಈ ಕಾರಾಗೃಹದಲ್ಲಿ 300ಕ್ಕೂ ಹೆಚ್ಚು ಖೈದಿಗಳು ಇದ್ದು ಅಧೀಕ್ಷಕ ಶ್ರೀಶೈಲಾ ಎಸ್.ಮೇಟಿಯವರು ಉತ್ತಮ ರೀತಿಯಲ್ಲಿ ನಿರ್ವಹಣೆ ಜೊತೆಗೆ  ಮತ್ತಷ್ಟು ಆಕರ್ಷಕ ರೂಪ ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಕಾರಾಗೃಹ ಮನಪರಿವರ್ತನೆಯಾಗುವ ತಾಣವಾಗಿದೆ. ಖೈದಿಗಳನ್ನು ಭೇಟಿಗೆ ಬರುವ ಜನರು ಇಲ್ಲಿನ ವಾತಾವರಣವನ್ನು ನೋಡಿ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.

click me!