Chikkamagaluru: ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ದಿನಕ್ಕೊಂದು ರೂಪ ಪಡೆಯುತ್ತಿರೋ ವಿವಾದ!

By Govindaraj S  |  First Published Jan 6, 2024, 7:39 PM IST

ಕಳೆದ 4 ದಿನದಿಂದ ಕಾಫಿನಾಡ ಗೊಲ್ಲರಹಟ್ಟಿ ಗ್ರಾಮ ಭಾರೀ ಸದ್ದು-ಸುದ್ದಿ ಮಾಡುತ್ತಿದೆ. ಮೂಢನಂಬಿಕೆ ಹಾಗೂ ವಿವಿಧ ಮೌಢ್ಯ ಆಚರಣೆಗಳನ್ನ ಪಾಲನೆ ಮಾಡುತ್ತಾರೆಂದು ದಲಿತ ಪರ ಸಂಘಟನೆಗಳು ಗಂಭೀರ ಆರೋಪ ಮಾಡಿದ್ದವು.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.06): ಕಳೆದ 4 ದಿನದಿಂದ ಕಾಫಿನಾಡ ಗೊಲ್ಲರಹಟ್ಟಿ ಗ್ರಾಮ ಭಾರೀ ಸದ್ದು-ಸುದ್ದಿ ಮಾಡುತ್ತಿದೆ. ಮೂಢ ನಂಬಿಕೆ ಹಾಗೂ ವಿವಿಧ ಮೌಢ್ಯ ಆಚರಣೆಗಳನ್ನ ಪಾಲನೆ ಮಾಡುತ್ತಾರೆಂದು ದಲಿತ ಪರ ಸಂಘಟನೆಗಳು ಗಂಭೀರ ಆರೋಪ ಮಾಡಿದ್ದವು. ಗ್ರಾಮಕ್ಕೆ ದಲಿತ ಯುವಕ ಬಂದನೆಂದು ಹಲ್ಲೆಗೈದು ದಂಡ ವಿಧಿಸಿದ್ದರೆಂಬ ಆರೋಪದ ಬೆನ್ನಲ್ಲೇ, ಮಕ್ಕಳ ಶೂ ಸದ್ದು ಮಾಡುತ್ತಿದೆ. 

Latest Videos

undefined

ಮೌಢ್ಯತೆಯಿಂದ ಚಪ್ಪಲಿ ಹಾಕಿಲ್ಲ ಅನ್ನೋದು ಶುದ್ಧ ಸುಳ್ಳು: ಜಗತ್ತು ಎಷ್ಟೇ ಮುಂದುವರೆದರು ಸಮಾಜದಲ್ಲಿ ಅನಿಷ್ಠ ಪದ್ಧತಿ ಮುಂದುವರೆಯುತ್ತಲೇ ಇದೆ. ಆದ್ರೆ,  ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ಜನ 5 ದಿನದ ಹಿಂದೆ ದಲಿತ ಯುವಕ ಪ್ರವೇಶ ಮಾಡಿದ್ದಾನೆಂದು ಥಳಿಸಿ, ದಂಡ ವಸೂಲಿ ಮಾಡಿದ್ದಾರೆ ಎಂಬ ಆರೋಪವನ್ನ ದಲಿತ ಪರ ಸಂಘಟನೆಗಳು ಮಾಡಿದ್ದವು. ಈ ವೇಳೆ ದೇವಸ್ಥಾನ ಮೈಲಿಗೆ ಆಗಿದೆ ಎಂದು ದೇವಸ್ಥಾನಕ್ಕೆ ಗ್ರಾಮದ ಜನರು ಬೀಗ ಹಾಕಿದ್ದಾರೆ ಎಂಬ ಆರೋಪವು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ವಿಷಯ ಈ ಗ್ರಾಮದಲ್ಲಿ ಬಾರಿ ಸದ್ದು ಮಾಡುತ್ತಿದೆ. ಸರ್ಕಾರ ಮಕ್ಕಳಿಗೆ ಶೂ ಭಾಗ್ಯ ನೀಡಿದರೂ ಮಕ್ಕಳು ಶೂ ಧರಿಸಿ ಶಾಲೆಗೆ ಬರುತ್ತಿಲ್ಲ. ಗೊಲ್ಲರ ಹಟ್ಟಿಯ ಮಕ್ಕಳ ಶೂ ದಲಿತ ಮಕ್ಕಳಿಗೆ ತಗುಲಿದರೆ ಮೈಲಿಗೆ ಆಗುತ್ತದೆ. 

ಬಿಜೆಪಿಯಿಂದ ಕ್ರಿಮಿನಲ್‌ ಆರೋಪಿಗಳಿಗೆ ರಕ್ಷಣೆ ಕೊಟ್ಟು ಬೆಳೆಸುವ ಪ್ರಯತ್ನ: ಜಗದೀಶ್ ಶೆಟ್ಟರ್‌

ಮೈಲಿಗೆ ನಿವಾರಣೆಗೆ ತಗಲುವ ವೆಚ್ಚ ದಂಡದ ರೂಪದಲ್ಲಿ ನೀಡಬೇಕಾಗುತ್ತದೆ ಎಂದು ಮಕ್ಕಳು  ಶೂ ಧರಿಸದೆ ಶಾಲೆಗೆ ಬರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಆದರೆ, ತರೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯ ಪ್ರತಿಯೊಬ್ಬ ಮಕ್ಕಳಿಗೂ ಶೂ ಹಾಗೂ ಸಮವಸ್ತ್ರ ವಿತರಣೆ ಮಾಡಿದ್ದೇವೆ. ಇಂದು ನಾನು ಶಾಲೆಗೆ ಭೇಟಿ ನೀಡಿದಾಗ ನಾಲ್ಕು ಜನ ಮಕ್ಕಳು ಮಾತ್ರ ಬರಿಗಾಲಿನಲ್ಲಿ ಬಂದಿದ್ದರು. ಕೇಳಿದ್ದಕ್ಕೆ ಚಪ್ಪಲಿ ಕಿತ್ತು ಹೋಗಿದೆ ಎಂದಿದ್ದಾರೆ. ಈ ಶಾಲೆಯಲ್ಲಿ ಯಾವುದೇ ಮೌಢ್ಯತೆ ಆಚರಣೆಯಲ್ಲಿಲ್ಲ. ಇಲ್ಲಿ 71 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಈ ಆರೋಪ ಶುದ್ಧ ಸುಳ್ಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪಪ್ ಸ್ಪಷ್ಟನೆ ನೀಡಿದ್ದಾರೆ. 

ಸಾರಾಸಗಟಾಗಿ ತಿರಸ್ಕರಿಸಿದ ಗ್ರಾಮಸ್ಥರು: ಇನ್ನು ಗ್ರಾಮದ ಮಹಿಳೆಯರು ಕೂಡ ಈ ಆರೋಪವನ್ನ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ನಮ್ಮ ಮಕ್ಕಳು ಎಲ್ಲರಂತೆ ಇರಬೇಕು ಎಂಬ ಆಸೆ ನಮಗೂ ಇದೆ. ಆ ಶಾಲೆಯಲ್ಲಿ ಗೊಲ್ಲ ಸಮುದಾಯದ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ನಮ್ಮ ಮಕ್ಕಳು ವಾರದಲ್ಲಿ ಐದು ದಿನ ಶೂ ಧರಿಸಿಕೊಂಡು ಹೋಗುತ್ತಾರೆ. ಮಕ್ಕಳು ಶೂ ಧರಿಸದೆ ಶಾಲೆಗೆ ಹೋದರೆ ದೈಹಿಕ ಶಿಕ್ಷಕರು ಅವರಿಗೆ ಮನೆಗೆ ಕಳುಹಿಸುತ್ತಾರೆ. ನಾವು ನಮ್ಮ ಮಕ್ಕಳಿಗೆ ಮೌಢ್ಯತೆಯನ್ನ ತುಂಬುತ್ತಿಲ್ಲ. ಎಲ್ಲರಂತೆ ಬೆಳೆಸುತ್ತಿದ್ದೇವೆ. ಬರೀಗಾಲಲ್ಲಿ ಹೋದ್ರೆ ಮಕ್ಕಳಿಗೆ ನಾನಾ ರೀತಿ ಸಮಸ್ಯೆ ಕಾಡುತ್ತದೆ. 

371 ಜೆ ಅಡಿ ಖಾಲಿ ಹುದ್ದೆಗಳ ಮುಂಬಡ್ತಿ ಪ್ರಕ್ರಿಯೆ ಆರಂಭಿಸಲು ಪ್ರಿಯಾಂಕ್ ಖರ್ಗೆ ಸೂಚನೆ

ಅದು ನಮಗೂ ಗೊತ್ತು. ನಮ್ಮ ಮಕ್ಕಳು ಶೂ, ಚಪ್ಪಲಿ ಧರಿಸದೆ ಶಾಲೆಗೆ ಹೋಗಲ್ಲ ಅಂತ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ಶಿಕ್ಷಕರು ಹಾಗೂ ಗ್ರಾಮಸ್ಥರು ಈ ಆರೋಪವನ್ನು ತಿರಸ್ಕಾರ ಮಾಡಿದ್ದು, ಪ್ರತಿ ಮಕ್ಕಳು ಶೂ ಧರಿಸಿ ಶಾಲೆಗೆ ಹೋಗುತ್ತಾರೆ. ಈ ಆರೋಪ ಗ್ರಾಮಸ್ಥರೇ ನಯವಾಗಿ ತಿರಸ್ಕರಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಕೂಡ ಮಕ್ಕಳು ಚಪ್ಪಲಿ ಇಲ್ಲದೆ ಬರ್ತಿದ್ದಾರೆ ಅನ್ನೋದು ಸುಳ್ಳು ಎಂದಿದ್ದಾರೆ. ಈ ಗ್ರಾಮದಲ್ಲಿ ಯಾವುದೇ ರೀತಿಯ ಮೂಡನಂಬಿಕೆ ಆಚರಣೆ ಇಲ್ಲ. ನಾವು ಪ್ರಜ್ಞಾವಂತರಿದ್ದೇವೆ. ಶಿಕ್ಷಣ ಪಡೆದಿ ದ್ದೇವೆ ಎಂಬ ಮಾತುಗಳು ಗ್ರಾಮಸ್ಥರ ಬಾಯಿಂದಲೇ ಕೇಳಿ  ಬಂದಿದ್ದು, ವಿನಾಕಾರಣ ಗ್ರಾಮ ಹಾಗೂ ಗ್ರಾಮದ ಜನತೆ ಮೇಲೆ ಏಕೆ ಈ ರೀತಿ ಆರೋಪಗಳು ಕೇಳಿ ಬರುತ್ತಿದೆ ಅನ್ನೋದನ್ನ ಸೂಕ್ತ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

click me!