ರಾಜ್ಯದಲ್ಲೇ ಭೀಕರ ಕೃತ್ಯ : ಬಿಜೆಪಿ ಕಾರ‍್ಯಕರ್ತನ ರುಂಡ ಕತ್ತರಿಸಿ ಬರ್ಬರ ಹತ್ಯೆ

By Kannadaprabha News  |  First Published Mar 22, 2021, 7:25 AM IST

ರಾಜ್ಯದಲ್ಲಿಯೇ ಭೀಕರ ಕೃತ್ಯ ಒಂದು ನಡೆದಿದೆ. ಬಿಜೆಪಿ ಮುಖಂಡನ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕತ್ತು ಕತ್ತರಿಸಿ ಕೊಲೆಗೈಯ್ಯಲಾಗಿದೆ. 


ಕಲಬುರಗಿ (ಮಾ.22): ಜೇವರ್ಗಿ ತಾಲೂಕಿನ ಯಾತನೂರ ಬಳಿ ಶನಿವಾರ ತಡರಾತ್ರಿ ಬಿಜೆಪಿ ಕಾರ್ಯಕರ್ತನ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಸಂಗನಗೌಡ ನಿಂಗನಗೌಡ ಪೊಲೀಸ್‌ ಪಾಟೀಲ (32) ಹತ್ಯೆಗೀಡಾತ. ಜೇರಟಗಿಯಲ್ಲಿ ಅಡತ್‌(ಸಗಟು ವ್ಯಾಪಾರಿ) ವ್ಯಾಪಾರ ಮಾಡಿಕೊಂಡಿದ್ದರು. 

Tap to resize

Latest Videos

ಕೆಲಸ ಮುಗಿಸಿ ಶನಿವಾರ ರಾತ್ರಿ ಬೈಕ್‌ನಲ್ಲಿ ಯಾತನೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಊರಿನ ಹೊರವಲಯದಲ್ಲಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. 

ಕಲಬುರಗಿ: ಎಣ್ಣೆ ಹೊಡೆಯಲು ಹಣ ನೀಡದ್ದಕ್ಕೆ ಹೆತ್ತವ್ವನನ್ನೇ ಕೊಂದ ಪಾಪಿ ಮಗ

ಮೂರು ಬೈಕುಗಳಲ್ಲಿ ಬಂದಿದ್ದ ಹಂತಕರು ಹರಿತ ಆಯುಧಗಳಿಂದ ಕತ್ತು ಕತ್ತರಿಸಿದ್ದಾರೆ. ಬಳಿಕ ದೊಡ್ಡ ವಾಹನವೊಂದನ್ನು ದೇಹದ ಮೇಲೆ ಹಾಯಿಸಿ ರಸ್ತೆ ಅಪಘಾತ ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ನಿಜವಾದ ಕಾರಣ ಇನ್ನೂ ಗೊತ್ತಾಗಿಲ್ಲ. ನೆಲೋಗಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

click me!