ಬೆಂಗಳೂರು ವಾಹನ ಸವಾರರ ಮೇಲೆ 68 ಲಕ್ಷ ಟ್ರಾಫಿಕ್‌ ರೂಲ್ಸ್ ಉಲ್ಲಂಘನೆ ಕೇಸ್‌ ಹಾಕಿದ ಸಂಚಾರಿ ಪೊಲೀಸರು!

By Sathish Kumar KH  |  First Published Nov 5, 2023, 6:53 PM IST
  • ಬೆಂಗಳೂರು ಸಂಚಾರಿ ನಿಯಮ ಉಲ್ಲಂಘನೆ ಕೇಸ್‌ ವಿವರ:
  • ಹೆಲ್ಮೆಟ್ ರಹಿತ ಬೈಕ್ ಚಾಲನೆ 31.49 ಲಕ್ಷ
  • ಹೆಲ್ಮೆಟ್ ಧರಿಸದ ಹಿಂಬದಿ ಸವಾರ 8.97 ಲಕ್ಷ
  • ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಕ್ಕೆ 8.46 ಲಕ್ಷ
  • ತಪ್ಪಾಗಿ ಪಾರ್ಕಿಂಗ್‌ ಮಾಡಿದ ವಾಹನಗಳ ಮೇಲೆ 8.91 ಲಕ್ಷ
  • ನೋ ಎಂಟ್ರಿಯಲ್ಲಿ ವಾಹನ ಚಲಾಯಿಸಿದ 1.15 ಲಕ್ಷ
  • ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದು 6.15 ಲಕ್ಷ 

ಬೆಂಗಳೂರು (ನ.05): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 1.2 ಕೋಟಿ ವಾಹನಗಳಿವೆ ಎಂಬ ಮಾಹಿತಿಯಿದೆ. ಅದರಲ್ಲಿಯೂ ಬೈಕ್‌ ಮತ್ತು ಕಾರುಗಳ ಸಂಖ್ಯೆಯೇ ಅತ್ಯಧಿಕವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್‌ ಪೊಲೀಸರು ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಕೇಳುತ್ತಿಲ್ಲವೆಂದು ವಾಹನ ಸವಾರರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಆದರೆ, ಟ್ರಾಫಿಕ್‌ ಪೊಲೀಸರು ಡಿಜಿಟಲ್‌ ತಂತ್ರಜ್ಞಾನದ ಕ್ಯಾಮೆರಾಗಳ ಮೂಲಕ 2023ರ ಜನವರಿಯಿಂದ ಅಕ್ಟೋಬರ್‌ವರೆಗೆ ಬರೋಬ್ಬರಿ 68 ಲಕ್ಷಕ್ಕೂ ಅಧಿಕ ಸಂಚಾರಿ ನಿಯಮ ಉಲ್ಲಂಘನೆ ಕೇಸ್‌ಗಳನ್ನು ದಾಖಲಿಸಿದ್ದಾರೆ.

ಬೆಂಗಳೂರಿನ ರಸ್ತೆ ಮೇಲೆ ಪೊಲೀಸರು ಕಣ್ಮರೆಯಾಗಿದ್ದೆ ತಡ ವಾಹನ ಸವಾರರಿಗೆ ಹಬ್ಬವೋ ಹಬ್ಬ.! ಕಳೆದ ಕೆಲವು ತಿಂಗಳಿನಿಂದ ಬೆಂಗಳೂರು ಟ್ರಾಫಿಕ್‌ ಪೊಲೀಸರು ರಸ್ತೆಯಲ್ಲಿ ಚೆಕ್ಕಿಂಗ್ ಮಾಡುವುದನ್ನ ನಿಲ್ಲಿಸಿದ್ದಾರೆ. ಹೀಗಾಗಿ, ಪೊಲೀಸರು ರಸ್ತೆಯಲ್ಲಿ ಕಾಣೋಲ್ಲ ಅಂತಾ ರೂಲ್ಸ್ ಬ್ರೇಕ್ ಮಾಡಿದ್ದೆ ಮಾಡಿದ್ದು. ಕೇವಲ 10 ತಿಂಗಳಲ್ಲಿ ಬರೋಬ್ಬರಿ 68 ಲಕ್ಷಕ್ಕೂ ಅಧಿಕ ಟ್ರಾಫಿಕ್ ರೂಲ್ಸ್ ಬ್ರೇಕ್ ಕೇಸ್ ದಾಖಲು‌ ಮಾಡಿದ್ದಾರೆ. ಪೊಲೀಸರು ತಂತ್ರಜ್ಞಾನ ಬಳಸಿ ಕೇಸ್ ಮಾಡಿ, ನಂತರ ದಂಡ ವಸೂಲಿಗೆ ಮುಂದಾಗಿದ್ದಾರೆ.

Tap to resize

Latest Videos

undefined

ಬೆಂಗಳೂರು ಸೈಟ್‌ ಮಾಲೀಕರೇ ಎಚ್ಚರ: ಪೊದೆ ಬೆಳೆಸಿಕೊಂಡ್ರೆ ದಂಡ ವಿಧಿಸುತ್ತೆ ಬಿಬಿಎಂಪಿ!

ನಗರದಲ್ಲಿ ಸಂಚಾರ ಮಾಡುವಾಗ ಯಾವುದೇ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾದ್ರೆ ಪೋಟೊ ಸಮೇತ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ಟ್ರಾಫಿಕ್ ಸಿಸಿಟಿವಿ ಪರಿಶೀಲನೆ ನಡೆಸಿ ಕೇಸ್ ಹಾಕ್ತಿದ್ದ ಪೊಲೀಸರು. ತಂತ್ರಜ್ನಾನದ ಮೂಲಕ ಕೇಸ್ ಹಾಕಿ ದಂಡ ವಸೂಲಿಗೆ ಫ್ಲಾನ್ ಮಾಡಿದ್ದಾರೆ. ಆದರೆ, ಟ್ರಾಫಿಕ್ ಪೊಲೀಸರ ಟೆಕ್ನಾಲಜಿಗೆ ವಾಹನ ಸವಾರರು ಡೋಂಟ್ ಕೇರ್ ಎಂದಿದ್ದಾರೆ. 2023ರ ಹತ್ತು ತಿಂಗಳಲ್ಲಿ ಹೆಲ್ಮೆಟ್ ಧರಿಸದೇ ಓಡಾಡುವವರ ಸಂಖ್ಯೆಗೆ ಮೀತಿಯೆ ಇಲ್ಲ. ಹೆಲ್ಮೆಟ್ ರಹಿತ ಬೈಕ್ ಚಾಲನೆ 31.49 ಲಕ್ಷ ಕೇಸ್ ದಾಖಲು ಮಾಡಲಾಗಿದೆ. ಹೆಲ್ಮೆಟ್ ಧರಿಸದ ಹಿಂಬದಿ ಸವಾರ 8.97 ಲಕ್ಷ ಕೇಸ್ ದಾಖಲಿಸಲಾಗಿದ್ದು, ಬೈಕ್‌ ಸವಾರರಿಂದ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಕ್ಕೆ 8.46 ಲಕ್ಷ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು ನಗರದ ನೋ ಪಾರ್ಕಿಂಗ್ ರಸ್ತೆಯಲ್ಲಿ ತಪ್ಪಾಗಿ ಪಾರ್ಕಿಂಗ್‌ ಮಾಡಿದ ವಾಹನಗಳ ಮೇಲೆ 8.91 ಲಕ್ಷ ಕೇಸ್ ದಾಖಲು ಮಾಡಲಾಗಿದೆ. ನೋ ಎಂಟ್ರಿಯಲ್ಲಿ ವಾಹನ ಚಲಾಯಿಸಿದ 1.15 ಲಕ್ಷ ಪ್ರಕರಣ, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದು 6.15 ಲಕ್ಷ ಪ್ರಕರಣ ಸೇರಿದಂತೆ ಒಟ್ಟಾರೆ 2023ರ ಜನವರಿಯಿಂದ ಈವರೆಗೆ 68.30 ಲಕ್ಷ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ, ಸದರಿ ವರ್ಷದಲ್ಲಿ ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸರ್ಕಾರದಿಂದ ಅವಕಾಶ ನೀಡಿಲ್ಲ.

ಶಿವಮೊಗ್ಗದ ಡೈನಾಮಿಕ್‌ ಲೇಡಿ ಕೆಎಎಸ್‌ ಆಫೀಸರ್‌ ಪ್ರತಿಮಾಳನ್ನು ಬೆಂಗಳೂರಲ್ಲಿ ಕತ್ತು ಸೀಳಿದ ದುಷ್ಕರ್ಮಿಗಳು!

ಸಿಲಿಕಾನ್‌ ಸಿಟಿ ಟ್ರಾಫಿಕ್‌ ಪೊಲೀಸರು ಒಂದೆಡೆ ಪೇಪರ್ ಲೇಸ್ ಕೇಸ್ ಹಾಕುವ ಸಲುವಾಗಿ ತಂತ್ರಜ್ನಾನದ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ತಂತ್ರಜ್ನಾನ, ಸಿಸಿಟಿವಿ ಏನೇ ಇದ್ರು ನಾವು ನೋಡಲ್ಲ ಅಂತಾ ಓಡಾಡೋ ವಾಹನ ಸವಾರರು. ಜೊತೆಗೆ, ವಾಹನ ಸವಾರರಿಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಬಗ್ಗೆ ಜಾಗೃತಿ ಕೊರತೆಯೂ ಉಂಟಾಗಿದೆ. ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸದ ಪರಿಣಾಮ ಟ್ರಾಫಿಕ್ ರೂಲ್ಸ್ ಬ್ರೇಕ್ ಆಗ್ತಿರೋ ಸಾಧ್ಯತೆಯಿದೆ. ಆದರೆ, ವಾಹನ ಸವಾರರು ಮಾತ್ರ ದುಬಾರಿ ಬೆಲೆಯ ದಂಡ ತೆರುವುದನ್ನೂ ಖಚಿತ ಆಗುತ್ತಿದೆ.

click me!