ಬೆಳಗಾವಿಯಲ್ಲಿ 9 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಮೃತ ಮಹಿಳೆಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಐದನೇ ಮಗುವಿಗೆ ಜನ್ಮ ನೀಡಬೇಕಿತ್ತು.
ಬೆಳಗಾವಿ (ಡಿ.21): ಬೆಳ್ಳಂಬೆಳಗ್ಗೆ ಬೆಳಗಾವಿಯಲ್ಲಿ ದಾರುಣ ಘಟನೆ ನಡೆದಿದ್ದು, ಇನ್ನೊಂದು ವಾರದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 9 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹಾರೊಗೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ 33 ವರ್ಷದ ಗರ್ಭಿಣಿ ಸುವರ್ಣ ಮಾಂತಯ್ಯ ಮಠಪತಿ ಸಾವು ಕಂಡಿದ್ದಾರೆ. ಮನೆಯಲ್ಲಿ ಯಾರು ಇಲ್ಲ ಸಂದರ್ಭ ನೋಡಿಕೊಂಡು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆದಿದೆ.
ಮೃತ ಮಹಿಳೆಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಅವರನ್ನು 15 ವರ್ಷದ ಸಾಕ್ಷಿ, 12 ವರ್ಷದ ಸಾಂಯವ್ವಾ, 9 ವರ್ಷದ ಶ್ರಾವಣಿ ಹಾಗೂ 6 ವರ್ಷದ ಸುರಕ್ಷಾ ಎಂದು ಗುರುತಿಸಲಾಗಿದೆ. ಇನ್ನೊಂದು ವಾರದಲ್ಲಿ ಈಕೆ ಐದನೇ ಮಗುವಿಗೆ ಜನ್ಮ ನೀಡಬೇಕಿತ್ತು. ಮುಂದಿನ ಒಂದು ವಾರದಲ್ಲಿ ಹೆರಿಗೆಗೆ ದಿನಾಂಕವನ್ನು ವೈದ್ಯರು ನಿಗದಿ ಮಾಡಿದ್ದರು.
undefined
'ನನ್ನ ಗರ್ಲ್‌ಫ್ರೆಂಡ್ ನಿಂಗೆ, ನಿಂದು ನನಗೆ..' ಬೆಂಗ್ಳೂರಲ್ಲಿ ಹೊಸ ವರ್ಷಕ್ಕೆ ನಡೀತಾ ಇದೆ ಸ್ವ್ಯಾಪಿಂಗ್ ದಂಧೆ!
ಆದರೆ, ಶನಿವಾರ ಮನೆಯಲ್ಲಿ ಯಾರು ಇಲ್ಲದ ಸಂಧರ್ಭದಲ್ಲಿ ಹರಿತ ಆಯುಧಿಂದ ಸುವರ್ಣ ಹತ್ಯೆ ಮಾಡಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಮೃತ ಸುವರ್ಣ 18 ವರ್ಷಗಳ ಹಿಂದೆ, ಮಹಾಂತಯ್ಯಾ ದುಂಡಯ್ಯಾ ಮಠಪತಿ ಅವರನ್ನು ವಿವಾಹವಾಗಿದ್ದರು.
ವರದಕ್ಷಿಣೆ ಕಿರುಕುಳ: ಊಟ ಮಾಡಲು ಕುಳಿತಿದ್ದ ಪತ್ನಿಯ ಕತ್ತು ಹಿಸುಕಿ ಕೊಂದ ಪಾಪಿ!