ಅರೆಭಾಷೆ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಪ್ರಯತ್ನಿಸಿ: ಡಾ. ಅಂಬಳಿಕೆ ಹಿರಿಯಣ್ಣ

By Kannadaprabha News  |  First Published Jul 24, 2022, 9:47 AM IST

. ಪಾರಂಪರಿಕ ವಸ್ತುಗಳು ಅರೆಭಾಷೆ ಸಂಸ್ಕೃತಿಯನ್ನು ಒಳಗೊಂಡಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಹೆಚ್ಚಿನ ಜನರಿಗೆ ಪರಿಚಯಿಸುವಲ್ಲಿ ಮತ್ತಷ್ಟುಪ್ರಯತ್ನಗಳು ನಡೆಯಬೇಕು  ಅಂಬಳಿಕೆ ಹಿರಿಯಣ್ಣ ಹೇಳಿದರು.


ಮಡಿಕೇರಿ (ಜು.24) :ಅರೆಭಾಷೆ ಪಾರಂಪರಿಕ ವಸ್ತುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಅರೆಭಾಷೆ ವಸ್ತುಸಂಗ್ರಹಾಲಯ ನಿರ್ಮಾಣ ಮಾಡುವಂತಾಗಬೇಕು ಎಂದು ಶಿಗ್ಗಾವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಅವರು ಸಲಹೆ ಮಾಡಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಂದಿರುವ ‘ಅರೆಭಾಷೆ ಪಾರಂಪರಿಕ ವಸ್ತುಕೋಶ’ ಹೊತ್ತಿಗೆಯನ್ನು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಕುಕ್ಕೆ(ಬುಟ್ಟಿ)ಯಿಂದ ತೆಗೆಯುವ ಮೂಲಕ ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಫ್ರಾನ್ಸ್‌,(France) ಹಂಗೇರಿ(Hangeri) ಸೇರಿದಂತೆ ಯೂರೋಪ್‌()ನ ಹಲವು ರಾಷ್ಟ್ರಗಳ ಪ)ಟ್ಟಣಗಳಲ್ಲಿ ಪಾರಂಪರಿಕ ವಸ್ತುಕೋಶ ಸಂಗ್ರಹಾಲಯ(Heritage Museum)ವನ್ನು ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ಇಲ್ಲಿಯೂ ಪಾರಂಪರಿಕ ವಸ್ತುಕೋಶ ಸ್ಥಾಪಿಸುವಲ್ಲಿ ಅರೆಭಾಷೆ ವಸ್ತುಸಂಗ್ರಹಾಲಯ (ಅರೆಭಾಷೆ ಪಾರಂಪರಿಕ ಮ್ಯೂಸಿಯಂ) ಆರಂಭಕ್ಕೆ ಮುಂದಾಗಬೇಕು ಎಂದು ಅಂಬಳಿಕೆ ಹಿರಿಯಣ್ಣ(ambalike hiriyanna) ಅಭಿಪ್ರಾಯಪಟ್ಟರು.

Tap to resize

Latest Videos

Kodava Heritage Center : 5 ವರ್ಷವಾದರೂ ಮುಗಿಯದ ಹೆರಿಟೇಜ್ ಸೆಂಟರ್ ನೆನೆಗುದಿಗೆ

ಅರೆಭಾಷೆ ಪಾರಂಪರಿಕ ವಸ್ತುಕೋಶಗಳು ಜನಮನದಲ್ಲಿ ಪ್ರತಿಬಿಂಬಿಸುತ್ತವೆ ಎಂಬುದನ್ನು ಮರೆಯಬಾರದು. ಪಾರಂಪರಿಕ ವಸ್ತುಗಳು ಅರೆಭಾಷೆ ಸಂಸ್ಕೃತಿ(Arebhashe culture)(ಯನ್ನು ಒಳಗೊಂಡಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಹೆಚ್ಚಿನ ಜನರಿಗೆ ಪರಿಚಯಿಸುವಲ್ಲಿ ಮತ್ತಷ್ಟುಪ್ರಯತ್ನಗಳು ನಡೆಯಬೇಕು ಎಂದು ಅವರು ವಿವರಿಸಿದರು.

ಸಂಸ್ಕೃತಿಕ ಮಹತ್ಸ ಸಾರುತ್ತವೆ: ಅರೆಭಾಷೆ ಪಾರಂಪರಿಕ ವಸ್ತುಗಳು ಸಾಂಸ್ಕೃತಿಕ ಮೌಲ್ಯವನ್ನು ಒಳಗೊಂಡಿದ್ದು, ಸಂಸ್ಕೃತಿಯ ಮಹತ್ವ ಸಾರುತ್ತದೆ. ಅರೆಭಾಷೆ ಪಾರಂಪರಿಕ ವಸ್ತುಕೋಶದ ಪರಿಕರಗಳಲ್ಲಿ ದೊರೆಯುವ ಜ್ಞಾನವನ್ನು ದಾಖಲಿಸಬೇಕು. ಇದರಿಂದ ಸಂಸ್ಕೃತಿ ಮತ್ತು ಇತಿಹಾಸವನ್ನು ಉಳಿಸಲು ಸಾಧ್ಯ ಎಂದರು.

ಅರೆಭಾಷೆ ಪಾರಂಪರಿಕ ವಸ್ತುಕೋಶವು ಅರೆಭಾಷೆ ಸಂಸ್ಕ7ತಿಯ ಅಸ್ಮಿತೆಯನ್ನು ಸಾರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕ7ತಿ ಮತ್ತು ಸಾಹಿತ್ಯವನ್ನು ಪರಿಚಯಿಸುವಲ್ಲಿ ಅರೆಭಾಷೆ ಪಾರಂಪರಿಕ ವಸ್ತುಕೋಶ ಸಹಕಾರಿಯಾಗುತ್ತದೆ ಎಂದು ವಿಶ್ರಾಂತ ಕುಲಪತಿ ಅವರು ನುಡಿದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಬೆಳೆಸುವಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ$ಸಂಶೋಧನಾ ಕೇಂದ್ರ ಆರಂಭವಾಗಲಿದೆ. ಆ ನಿಟ್ಟಿನಲ್ಲಿ ಅರೆಭಾಷೆಗೆ ಸಂಬಂಧಿಸಿದಂತೆ ಮತ್ತಷ್ಟುಚಟುವಟಿಕೆಗಳು ನಡೆಯಲಿವೆ ಎಂದು ವಿಶ್ರಾಂತ ಕುಲಪತಿ ಹೇಳಿದರು.

ಮಡಿಕೇರಿ: ಮನೆಯೂ ಇಲ್ಲ, ಕಾಳಜಿ ಕೇಂದ್ರವೂ ಇಲ್ಲ, ಬೀದಿಗೆ ಬಿದ್ದ ಬಾಣಂತಿ, ಹಸುಗೂಸು

ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್‌ ಕುಂದಲ್ಪಾಡಿ ಮಾತನಾಡಿ ಅರೆಭಾಷೆ ಅಕಾಡೆಮಿ ವತಿಯಿಂದ ಹೊರತಂದಿರುವ ಪಾರಂಪರಿಕ ವಸ್ತುಕೋಶ ಸೇರಿದಂತೆ ಹಲವು ಪುಸ್ತಕಗಳನ್ನು ಕೊಂಡು ಓದುವಂತಾಗಬೇಕು. ಅರೆಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅರೆಭಾಷೆ ಪಾರಂಪರಿಕ ವಸ್ತುಕೋಶದ ಮ್ಯೂಸಿಯಂ ಮತ್ತು ಗ್ರಂಥಾಲಯ ನಿರ್ಮಾಣ ಆಗಬೇಕು ಎಂದರು.

ಹಲವು ಸವಾಲುಗಳ ನಡುವೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಅರೆಭಾಷೆಯಲ್ಲಿ ಕತೆ, ಕವನ, ಲೇಖನಗಳನ್ನು ಬರೆಯಬೇಕು ಎಂದು ಅವರು ಸಲಹೆ ಮಾಡಿದರು.

ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೇನಾರಾಯಣ ಕಜೆಗದ್ದೆ ಮಾತನಾಡಿ, ಅಕಾಡೆಮಿ ಕಾರ್ಯ ಚಟುವಟಿಕೆಗಳಲ್ಲಿ ಪ್ರಮುಖವಾಗಿ ಪುಸ್ತಕ ಪ್ರಕಟಣೆಯೂ ಒಂದಾಗಿದೆ. ಆ ನಿಟ್ಟಿನಲ್ಲಿ ಅಕಾಡೆಮಿಯಿಂದ ಹಲವು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಆ ನಿಟ್ಟಿನಲ್ಲಿ ರಂಗಭೂಮಿ ನಾಟಕಕ್ಕೆ ಯಾವುದೇ ಭಾಷೆ ಹಂಗಿಲ್ಲ ಎಂದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ ಮಾತನಾಡಿ ಅರೆಭಾಷೆ ಬೆಳವಣಿಗೆಗೆ ಅಕಾಡೆಮಿಯಿಂದ ಪ್ರಕಟಿಸಲಾಗಿರುವ ಕೃತಿಗಳು ಸಹಕಾರಿಯಾಗಿವೆ. ಭಾಷೆ ಬೆಳೆದರೆ ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಯಲು ಸಾಧ್ಯ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಂದಿರುವ ಅರೆಭಾಷೆ ಪಾರಂಪರಿಕ ವಸ್ತುಕೋಶ, ಕುಕ್ಕೇಟಿ ಜಯಪ್ರಕಾಶ್‌ ಅವರು ಬರೆದಿರುವ ಸಾಹೇಬ್ರು ಬಂದವೇ, ದೇವಜನ ಗೀತಾ ಮೋಂಟಡ್ಕ ಅವರು ಬರೆದಿರುವ ಕಿರಗೂರಿನ ಗಯ್ಯಾಳಿಗಳು, ಕುಲ್ಕುಂದ ಭವ್ಯಶ್ರೀ ಅವರು ಬರೆದಿರುವ ಯಕ್ಷ ಜೊಂಪೆ, ಕುಯಿಂತೋಡು ದಾಮೋದರ ಅವರು ಬರೆದಿರುವ ನೆಂಪುನ ಒರ್ತೆ, ಪಿ.ಜಿ. ಅಂಬೆಕಲ್‌ ಅವರು ಬರೆದಿರುವ ಗೂಡೆ ಬೇಕಾಗುಟ್ಟು ಹಾಗೂ ಅಡ್ತಲೆ ಭವಾನಿಶಂಕರ ಅವರು ಬರೆದಿರುವ ಕತೆಗಳ ಅಟ್ಟುಳಿ ಪುಸ್ತಕಗಳ ಕುರಿತು ಮಾತನಾಡಿದರು.

ಪ್ರಾಸ್ತಾವಿಕವಾಗಿ ಡಾ. ಪುರುಷೋತ್ತಮ ಕರಂಗಲ್ಲು ಮಾತನಾಡಿ ಅರೆಭಾಷೆ ಅಕಾಡೆಮಿಯಿಂದ ಇದುವರೆಗೆ 41 ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, ಕಳೆದ 3 ವರ್ಷದಲ್ಲಿ 15 ಪುಸ್ತಕ ಪ್ರಕಟಿಸಲಾಗಿದೆ ಎಂದರು.

ಅರೆಭಾಷೆ ಪಾರಂಪರಿಕ ವಸ್ತುಕೋಶ ಹೊರತರುವ ನಿಟ್ಟಿನಲ್ಲಿ ಹಲವರು ಸಹಕರಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ಹಿರಿಯರು ದಿನನಿತ್ಯ ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ ಪುಸ್ತಕ ಹೊರತರಲಾಗಿದೆ ಎಂದರು.

ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಪೆರಾಜೆ ಗೌಡ ಗ್ರಾಮ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ ಮಾತನಾಡಿದರು. ಪಾರ್ವತಿ ತೋಟಂಬೈಲು ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯ ಗೌಡ ಕೆ.ಜಿ. ಅವರನ್ನು ಸನ್ಮಾನಿಸಲಾಯಿತು. ಎಂ.ಜಿ. ಕಜೆ, ಬಾರಿಯಂಡ ಜೋಯಪ್ಪ, ಶಿವರಾಮ ಗೌಡ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅರೆಭಾಷೆ ಪಾರಂಪರಿಕ ವಸ್ತುಕೋಶ ತರುವಲ್ಲಿ ಶ್ರಮಿಸಿದ ಸದಸ್ಯರಾದ ಜಯಪ್ರಕಾಶ ಮೋಂಟಡ್ಕ, ಡಾ. ವಿಶ್ವನಾಥ ಬದಿಕಾನ, ಡಾ. ಪುರುಷೋತ್ತಮ ಕರಂಗಲ್ಲು, ಭರತೇಶ ಅಲಸಂಡೆ ಮಜಲು ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಕುಕ್ಕೇಟಿ ಜಯಪ್ರಕಾಶ್‌, ದೇವಜನ ಗೀತಾ ಮೋಂಟಡ್ಕ, ಕುಯಿಂತೋಡು ದಾಮೋದರ, ಪಿ.ಜಿ. ಅಂಬೆಕಲ್‌, ಅಡ್ತಲೆ ಭವಾನಿಶಂಕರ, ಅಕಾಡೆಮಿ ರಿಜಿಸ್ಟ್ರಾರ್‌ ಚಿನ್ನಸ್ವಾಮಿ, ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್‌, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ. ಕೂಡಕಂಡಿ ದಯಾನಂದ, ಕುಸುಮಾಧರ ಎ.ಟಿ., ಪುರುಷೋತ್ತಮ ಕಿರ್ಲಾಯ, ಕಿರಣ್‌ ಕುಂಬಳಚೇರಿ ಇತರರು ಇದ್ದರು. ಸದಸ್ಯರಾದ ಜಯಪ್ರಕಾಶ ಮೊಂಟಡ್ಕ ಸ್ವಾಗತಿಸಿದರು. ಎ.ಟಿ. ಕುಸುಮಾಧರ ನಿರೂಪಿಸಿದರು. ಕೆ.ಆರ್‌. ಗೋಪಾಲಕೃಷ್ಣ ಆಶಯ ಗೀತೆ ಹಾಡಿದರು. ಕಿರಣ್‌ ಕುಂಬಳಚೇರಿ ವಂದಿಸಿದರು.

click me!