ದಾವಣಗೆರೆ ನಗರದಲ್ಲಿ ಅಂಬೇಡ್ಕರ್ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಾವಣಗೆರೆ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಪಾಲಿಕೆ ಆವರಣದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಏ.14): ದಾವಣಗೆರೆ (Davanagere) ನಗರದಲ್ಲಿ ಅಂಬೇಡ್ಕರ್ ಜಯಂತಿಯನ್ನು (Ambedkar Jayanti) ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಾವಣಗೆರೆ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಪಾಲಿಕೆ ಆವರಣದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ರಿಷ್ಯಂತ್ , ಜಿಲ್ಲಾ ಪಂಚಾಯತ್ ಸಿಇಓ ಚನ್ನಪ್ಪ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಇದಕ್ಕು ಮುನ್ನ ನಗರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ಡಾ ಅಂಬೇಡ್ಕರ್ ವೃತ್ತದಿಂದ ಪ್ರಾರಂಭಿಸಿ ಜಯದೇವ ವೃತ್ತ ಆಶೋಕ ರಸ್ತೆ, ಪಿ ಬಿ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ, ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
Ambedkar Jayanti 2022: ಸಂವಿಧಾನದ ಆಶಯ ಕೇಂದ್ರದ ಮೋದಿ ಸರ್ಕಾರದಿಂದ ಸಾಕಾರ
ಅಂಬೇಡ್ಕರ್ ಭವನ ನಿರ್ಮಾಣಕ್ಕೆ 5 ಕೋಟಿ ಮೀಸಲು: ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 5 ಕೋಟಿ ಹಣ ಸರ್ಕಾರದಿಂದ ಮೀಸಲಿಟ್ಟು 12 ವರ್ಷ ಆಗಿದೆ. ಆದೆ ದಾವಣಗೆರೆ ದಲಿತ ಸಂಘಟನೆಗಳ ಒಕ್ಕೂಟಗಳಲ್ಲಿ ಭಿನ್ನಾಭಿಪ್ರಾಯದಿಂದ ಅಂಬೇಡ್ಕರ್ ಭವನ ನಿರ್ಮಾಣವಾಗಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ಅಂಬೇಡ್ಕರ್ ಭವನ ನಿರ್ಮಾಣವಾಗಲು ಒಂದು ನಿವೇಶನವನ್ನು ಜಿಲ್ಲಾಡಳಿತ ನೀಡಬೇಕು, ದಲಿತ ಸಂಘಟನೆಗಳ ಒಕ್ಕೂಟ ಒಮ್ಮತಕ್ಕೆ ಬಂದು ಭವನ ನಿರ್ಮಾಣವಾಗಬೇಕೆಂದು ಮಾಯಕೊಂಡ ಶಾಸಕ ಪ್ರೋ ಲಿಂಗಣ್ಣ ಅಭಿಪ್ರಾಯಿಸಿದರು.
ಅಂಬೇಡ್ಕರ್ ಸರ್ಕಲ್‌ನಲ್ಲಿ ಮುಗಿಲು ಮುಟ್ಟಿದ ಸಂಭ್ರಮ: ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ 17 ಲಕ್ಷ ವೆಚ್ಚದಲ್ಲಿ 6 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣವಾಗಿ ಲೋಕಾರ್ಪಣೆಯಾಗಿದೆ.ನಗರದ ಅಂಬೇಡ್ಕರ್ ಸರ್ಕಲ್ ಇವತ್ತು ಸೆಲ್ಪಿ ತಾಣವಾಗಿದೆ. ದಲಿತ ಸಂಘಟನೆಗಳು ಸೇರಿದಂತೆ ಪ್ರಗತಿಪರ ಸಂಘಟನೆಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ ಪ್ರಾರ್ಥಿಸಿದ್ದಾರೆ.
ಅಂಬೇಡ್ಕರ್ ಒಳಗೊಬ್ಬ ಕ್ರಾಂತಿಕಾರಿ: ಮಧ್ಯ ಪ್ರದೇಶದ ಮಾಹುವಿನಲ್ಲಿ ಭಾರತಾಂಬೆಯ ಮಡಿಲಲ್ಲಿ 1891 ಏಪ್ರಿಲ್ 14ರಂದು ಈ ದೇಶದ ರತ್ನವೊಂದು ಜನ್ಮ ತಳೆದಾಗ ಮುಂದೊಂದು ದಿನ ಇಡೀ ವಿಶ್ವವೇ ನಿಬ್ಬೆರಗಾಗುವಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನದ ಜನಕನ ಜನ್ಮವಾಗಿದೆ ಎನ್ನುವ ಕಲ್ಪನೆ ಯಾರಿಗೂ ಇರಲು ಸಾಧ್ಯವಿಲ್ಲ. ಯಾಕೆಂದರೆ ಅಂಬೇಡ್ಕರ್ ಅವರೇ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿರುವಂತೆ ಶಾಲೆಯಲ್ಲಿ ಬಾಯಾರಿದಾಗ ನೀರಿನ ಪೈಪನ್ನು ಮುಟ್ಟಿ ನೀರು ಕುಡಿಯುವಷ್ಟು ಸ್ವಾತಂತ್ರ್ಯ ಅವರಿಗಿರಲಿಲ್ಲ. ಬಹುಶಃ ತಮ್ಮ ಮೇಲೆ ಆದ ಇಂತಹ ಘಟನೆಗಳು ಅಂಬೇಡ್ಕರ್ ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತಾ ಹೋದವು. ಆ ಮೂಲಕ ಒಬ್ಬ ಕ್ರಾಂತಿಕಾರಿ ಅವರ ಒಳಗೆ ಜನ್ಮ ಎತ್ತಿದ್ದ.
Ambedkar Portrait Controversy ಕೋರ್ಟ್‌ನಲ್ಲಿ ರಾಷ್ಟ್ರೀಯ ಹಬ್ಬಕ್ಕೆ ಅಂಬೇಡ್ಕರ್ ಫೋಟೋ ಕಡ್ಡಾಯ!
ಹಿಂದೂ ಸಮಾಜದ ರಕ್ಷಣೆಗೆ ನಾಂದಿ: ಅವರ ಇನ್ನೊಂದು ಸಂದೇಶವನ್ನೇ ತೆಗೆದುಕೊಳ್ಳೋಣ. ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮ ರಕ್ಷಣೆಗೆ ಸಮರ್ಥವಾಗಬಲ್ಲದು. ಇಂಥ ಆಂತರಿಕ ಶಕ್ತಿ ಇಲ್ಲದೇ ಹೋದರೆ ಸ್ವರಾಜ್ಯವೆಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು ಎಂದು ಹೇಳಿದ್ದರು. ಅದನ್ನು ಅರಿತುಕೊಳ್ಳುವುದರಿಂದ ಹಿಂದೂ ಸಮಾಜ ಎಷ್ಟು ಸದೃಢವಾಗುತ್ತದೆ ಎನ್ನುವುದಕ್ಕೆ ಅವರ ಮಾತುಗಳೇ ಸಾಕ್ಷಿ.