ಮರು ವ್ಯಾಖ್ಯಾನಿಸಿದ ಮಾನದಂಡದಡಿ ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸಿ: ಸಿಎನ್‌ಸಿ ಒತ್ತಾಯ

By Kannadaprabha News  |  First Published Jan 21, 2023, 10:19 AM IST

ಕೇಂದ್ರ ಸರ್ಕಾರದ ಅಧೀನದ ಕೇಂದ್ರ ಬುಡಕಟ್ಟು ಸಚಿವಾಲಯವು 2017 ರಲ್ಲಿ ರೂಪಿಸಿದ ಹೊಸ ಮರು ವ್ಯಾಖ್ಯಾನಿಸಿದ ಮಾನದಂಡ ದಡಿಯಲ್ಲಿ ಕೊಡವ ಜನಾಂಗವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಭದ್ರತೆಯನ್ನು ನೀಡಬೇಕೆಂದು ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆಯ ಅಧ್ಯಕ್ಷ ಎನ್‌.ಯು. ನಾಚಪ್ಪ ಒತ್ತಾಯಿಸಿದ್ದಾರೆ.


ಮಡಿಕೇರಿ (ಜ.21) : ಕೇಂದ್ರ ಸರ್ಕಾರದ ಅಧೀನದ ಕೇಂದ್ರ ಬುಡಕಟ್ಟು ಸಚಿವಾಲಯವು 2017 ರಲ್ಲಿ ರೂಪಿಸಿದ ಹೊಸ ಮರು ವ್ಯಾಖ್ಯಾನಿಸಿದ ಮಾನದಂಡ ದಡಿಯಲ್ಲಿ ಕೊಡವ ಜನಾಂಗವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಭದ್ರತೆಯನ್ನು ನೀಡಬೇಕೆಂದು ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆಯ ಅಧ್ಯಕ್ಷ ಎನ್‌.ಯು. ನಾಚಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಕುರಿತು ಕೇಂದ್ರ ಬುಡಕಟ್ಟು ಮಂತ್ರಾಲಯ(Central Tribal Ministry), ರಾಷ್ಟ್ರೀಯ ಬುಡಕಟ್ಟು ಆಯೋಗ(National Tribal Commission), ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಪ್ರಧಾನ ಕಾರ್ಯದರ್ಶಿ, ಬುಡಕಟ್ಟು ಕಲ್ಯಾಣ ಮಂತ್ರಾಲಯ(Karnataka Ministry of Tribal Welfare)ದ ಕಾರ್ಯದರ್ಶಿ, ನಿರ್ದೇಶಕರು ಹಾಗೂ ಬುಡಕಟ್ಟು ಶಂಶೋಧನ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

Tap to resize

Latest Videos

undefined

ಮಹತ್ವ ಅರಿತು ಹಬ್ಬಗಳ ಆಚರಣೆಯಿಂದ ಸಂಸ್ಕೃತಿ ರಕ್ಷಣೆ: ಕಾಳಿಮಾಡ ಮೋಟಯ್ಯ

ಕೊಡಗಿನ ಮೂಲ ಬುಡಕಟ್ಟು ಜನಾಂಗವಾಗಿರುವ ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದು ತ್ವರಿತವಾಗಿ ಆಗದಿದ್ದರೆ ಕೊಡವ ಬುಡಕಟ್ಟು ಜನಾಂಗದÜ ಭವಿಷ್ಯವು ಕತ್ತಲೆಯಲ್ಲಿ ಮುಳುಗುತ್ತದೆ. ಕೊಡವರ ಜಾನಪದ ಗುರುತು ಮತ್ತು ಭೌಗೋಳಿಕ- ರಾಜಕೀಯ ಅಸ್ತಿತ್ವಕ್ಕೆ ಹಾನಿಯಾಗಲಿದೆ. ಭಾರತ ದೇಶವು ಬಹು ಜನಾಂಗೀಯ ಹೂದೋಟದಂತ್ತಿದ್ದು, ಇತರ ಜನಾಂಗೀಯ ಗುಂಪುಗಳಿಗೆ ನೀಡಲಾಗುವ ಅದೇ ಸಾಂವಿಧಾನಿಕ ಪೋಷಣೆಯನ್ನು ಕೊಡವ ಬುಡಕಟ್ಟು ಜನಾಂಗಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಪಹಾರಿ ಸಮುದಾಯ, ಪೆರಂಬಲೂರಿನ ನರಿಕೊರವನ್‌/ನರಿಕುರವರ್‌, ಊಟಿಯ ಬಡಗಾಸ್‌, ಅಸ್ಸಾಂನ ಕೋಚ್‌ ರಾಜ್ಬೊಂಗ್ಶಿ, ಮಟಕ್‌, ಮೋರಾನ್‌, ಟೀ ಟ್ರೈಬ್‌, ಚುಟಿಯಾ, ತೈ ಅಹೋಮ್‌ ಸೇರಿದಂತೆ 6 ಬುಡಕಟ್ಟು ಸಮುದಾಯಗಳನ್ನು ಎಸ್ಟಿಪಟ್ಟಿಗೆ ಸೇರಿಸಲು ಉತ್ಸುಕವಾಗಿದೆ ಮತ್ತು ಪ್ರಕ್ರಿಯೆ ಆರಂಭಿಸಿದೆæ. ಸಾಂವಿಧಾನಿಕವಾಗಿ ಹಕ್ಕನ್ನು ಪಡೆಯಲು ಬಾಕಿ ಉಳಿದಿರುವ ಕೊಡವ ಜನಾಂಗದ ಬಗ್ಗೆಯೂ ಕೇಂದ್ರ ಸರ್ಕಾರ ಅದೇ ಕ್ರಮ ಅನುಸರಿಸಬೇಕು ಎಂದು ಹೇಳಿದ್ದಾರೆ.

ಕೊಡವ ಜನಾಂಗ(Kodav Community)ದೊಳಗೆ ಯಾವುದೇ ಉಪಪಂಗಡವಿಲ್ಲ, ನಾವು ಕೂಗ್‌ರ್‍ಗೆ ಮಾತ್ರ ಸೀಮಿತವಾಗಿದ್ದೇವೆ, ನಮ್ಮ ಜನಸಂಖ್ಯೆ ಕೂಡ ಕಡಿಮೆ ಇದೆ. ಆದ್ದರಿಂದ ಸೂಕ್ಷ್ಮ ಕೊಡವ ಜನಾಂಗವನ್ನು ರಕ್ಷಿಸಲು ಮತ್ತು ಅಧಿಕಾರ ನೀಡಲು ಸಂವಿಧಾನದಲ್ಲಿ ಉಳಿದಿರುವ ಏಕೈಕ ಆಯ್ಕೆಯೆಂದರೆ ಅವರನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದು ಎಂದು ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆ(Kodava National Council Organization) ಕೊಡವಲ್ಯಾಂಡ್‌(Kodava land) ಭೌಗೋಳಿಕ-ರಾಜಕೀಯ ಸ್ವಾಯತ್ತತೆ/ಸ್ವಯಂ-ಆಡಳಿತವನ್ನು ಸಾಧಿಸಲು ಮತ್ತು ಕೊಡವರನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಶಾಂತಿಯುತವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಸಿಎನ್‌ಸಿಯ ಮನವಿಗೆ ಪ್ರತಿಯಾಗಿ 2011 ರಲ್ಲಿ ಸರ್ಕಾರ ಕೊಡವರ ಎಥ್ನೋಗ್ರಾಫಿಕ್‌ ಅಧ್ಯಯನಕ್ಕೆ ಆದೇಶ ನೀಡಿತು. ಆದರೆ ಮೈಸೂರಿನಲ್ಲಿರುವ ಪೂರ್ವಾಗ್ರಹ ಮನೋಭಾವದ ಜನರು ಇಡೀ ಅಧ್ಯಯನ ಪ್ರಕ್ರಿಯೆಯನ್ನು ಅಪಾಯಕ್ಕೆ ಸಿಲುಕಿಸಿದರು. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಇಡೀ ಪ್ರಕ್ರಿಯೆಯನ್ನು ಬುಡಮೇಲು ಮಾಡಿದರು. ಇದರ ವಿರುದ್ಧ ನಾವು ಕಾನೂನು ಮೊರೆ ಹೋದಾಗ ಉಚ್ಚ ನ್ಯಾಯಾಲಯವು 21 ಜುಲೈ 2021 ರಂದು ಜನಾಂಗೀಯ ಅಧ್ಯಯನವನ್ನು ಸರಿಪಡಿಸಲು ಅಥವಾ ಅದರ ಮರು-ಅಧ್ಯಯನಕ್ಕಾಗಿ ತೀರ್ಪು ನೀಡಿತು.

ಮುಂದಿನ ವರ್ಷ ಪ್ರತ್ಯೇಕ ಕೊಡವ ಲ್ಯಾಂಡ್‌ ಘೋಷಣೆ: ಡಾ. ಸುಬ್ರಮಣಿಯನ್‌ ಸ್ವಾಮಿ

ಹೈಕೋರ್ಟ್ ಆದೇಶದ ಅನುಷ್ಠಾನಕ್ಕಾಗಿ ಬುಡಕಟ್ಟು ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು 25 ಏಪ್ರಿಲ್‌ 2022 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ನಮ್ಮೊಂದಿಗೆ ಸಭೆಯನ್ನು ನಡೆಸಿ ಅಭಿಪ್ರಾಯವನ್ನು ಸಂಗ್ರಹಿಸಿದರು. ಮರು ಅಧ್ಯಯನಕ್ಕೆ ಶಿಫಾರಸ್ಸು ಮಾಡಿದರು ಮತ್ತು ಕಡತವನ್ನು ಬುಡಕಟ್ಟು ಕಲ್ಯಾಣ ಇಲಾಖೆಗೆ ರವಾನಿಸಿದರು. 17 ಆಗಸ್ಟ್‌ 2022 ರಂದು ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಸಚಿವರನ್ನು ಭೇಟಿ ಮಾಡಿದಾಗ ನಮ್ಮ ಬೇಡಿಕೆಗೆ ಒಪ್ಪಿಗೆ ನೀಡಿದರು ಮತ್ತು ಅದರ ಕ್ಲಿಯರೆನ್ಸ್‌ಗಾಗಿ ಕಡತವನ್ನು ಕರ್ನಾಟಕದ ಸಿಎಂಗೆ ರವಾನಿಸಿದರು. ಆದರೆ ನಂತರದ ದಿನಗಳಲ್ಲಿ ನಮ್ಮ ಕಡತವನ್ನು ನಿರ್ಲಕ್ಷಿಸಲಾಗಿದೆ, ಇದು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ ಎಂದು ನಾಚಪ್ಪ ಟೀಕಿಸಿದರು.

click me!