ಭಾರತೀಯ ಪರಂಪರೆ ಬಗ್ಗೆ ವಿರೋಧ ಮಾತುಗನ್ನಾಡುತ್ತಿರುವ, ತಮ್ಮದೇ ಸಂಸ್ಕೃತಿಯನ್ನು ಹಿಯಾಳಿಸುತ್ತಿರುವ ಹಾಗೂ ನಾವೇ ಬಹುದೊಡ್ಡ ಬುದ್ದಿಜೀವಿಗಳು ಎಂದುಕೊಂಡವರಿಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ಶನಿವಾರ ನಡೆದ ವಚನ ಪರಂಪರೆ ಗೋಷ್ಠಿಯು ತೀಕ್ಷ್ಮ ಉತ್ತರ ನೀಡಿತು.
ಬಸವರಾಜ ಹಿರೇಮಠ
ಧಾರವಾಡ (ಜ.8) : ಭಾರತೀಯ ಪರಂಪರೆ ಬಗ್ಗೆ ವಿರೋಧ ಮಾತುಗನ್ನಾಡುತ್ತಿರುವ, ತಮ್ಮದೇ ಸಂಸ್ಕೃತಿಯನ್ನು ಹಿಯಾಳಿಸುತ್ತಿರುವ ಹಾಗೂ ನಾವೇ ಬಹುದೊಡ್ಡ ಬುದ್ದಿಜೀವಿಗಳು ಎಂದುಕೊಂಡವರಿಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ಶನಿವಾರ ನಡೆದ ವಚನ ಪರಂಪರೆ ಗೋಷ್ಠಿಯು ತೀಕ್ಷ$್ಣ ಉತ್ತರ ನೀಡಿತು.
ಇತ್ತೀಚಿನ ದಿನಗಳಲ್ಲಿ ಭಾರತೀಯ ಪರಂಪರೆ(Indian heritage) ಬಗ್ಗೆ ಮೂಗು ಮುರಿಯುವ ರೀತಿಯಲ್ಲಿ ಮಾತುಗಳು ಬುದ್ದಿ ಜೀವಿಗಳಿಂದ ಕೇಳಿ ಬರುತ್ತಿವೆ. ಭಾರತ ಸ್ವಾತಂತ್ರ್ಯ ಪಡೆದ ನಂತರ ವಿದೇಶಿ ವಿಚಾರಧಾರೆಯ ಹುಚ್ಚಿನಿಂದಾಗಿ ಕೆಲವು ಬುದ್ದಿಜೀವಿಗಳಲ್ಲಿ ಇದು ವಿಚಿತ್ರವಾಗಿ ಬೆಳೆದು ಬರುತ್ತಿದೆ. ತಮ್ಮದೇ ಸಂಸ್ಕೃತಿ ಹಿಯಾಳಿಸುತ್ತಿರುವುದರಿಂದ ದೊಡ್ಡ ಪ್ರಗತಿಪರರು ಎಂಬ ಭ್ರಮೆ ಅವರು ಮುಳುಗಿದ್ದಾರೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ ಬುದ್ದಿಜೀವಿಗಳನ್ನು ಕೆಣಕಿದರು.
ಸಮ್ಮೇಳನದಲ್ಲಿ ಅತಿಥಿಯನ್ನೇ ಒಳಬಿಡದ ಪೊಲೀಸರು, ಪೊಲೀಸರ ಮೇಲೆ ಮಹೇಶ್ ಜೋಶಿ ಗರಂ
ಇಂತಹ ಪ್ರವೃತ್ತಿ ಕೆಲವು ವಚನ ಸಾಹಿತ್ಯದ ಅಭ್ಯಾಸಗಳಿಗೆ ವಿಶೇಷವಾಗಿ ವಿಶ್ವವಿದ್ಯಾಲಯಗಳ ಬುದ್ದಿಜೀವಿಗಳಿಗೆ ಹಬ್ಬಿಕೊಂಡಿದ್ದು ಬೇಸರದ ಸಂಗತಿ. ಹಿಂದೂ ಪರಂಪರೆಯನ್ನು ಧಿಕ್ಕರಿಸಿ ಶಿವಶರಣರು ಹೊಚ್ಚ ಹೊಸ ಧರ್ಮವನ್ನು ಹುಟ್ಟುಹಾಕಿದರು ಎಂಬ ಹುಸಿ ವಾದವೇ ಇವರ ಮುಖ್ಯ ಬಂಡವಾಳವಾಗಿದೆ. ನಾವು ಗಿಡದ ಹೂ ಹಣ್ಣಿಗೆ ಮಾತ್ರ ಸೀಮಿತವಾಗಿದ್ದೇವೆ. ಅಂತಹ ಫಲ ನೀಡುವ ನೆಲದ ಸತ್ವ ಒದಗಿಸುವ ಬೇರುಗಳನ್ನು ಕಾಂಡಗಳನ್ನು ಗಮನಿಸುತ್ತಿಲ್ಲ ಏಕೆ. ಇದೇ ಅವರ ದೌರ್ಬಲ್ಯವಾಗಿದೆ ಎಂದ ಅವರು, ವಚನಕಾರರು ನಿಜಕ್ಕೂ ಪ್ರಗತಿಪರರೇ, ಅನುಮಾನವಿಲ್ಲ. ಆದರೆ, ಅವರು ಯಾವತ್ತೂ ಪರಂಪರೆಯನ್ನು ಧಿಕ್ಕರಿಸಲಿಲ್ಲ. ಶರಣರ, ವಚನಕಾರರ ಬುದ್ದಿಯನ್ನು ಈಗಿನ ಬುದ್ದಿಜೀವಿಗಳು ಅಳವಡಿಸಿಕೊಳ್ಳಬೇಕೆ ಹೊರತು ಮೊಂಡ ವಾದ ಮಾಡಬಾರದು ಎಂದು ಪ್ರತಿಪಾದಿಸಿದರು.
ಪರಂಪೆಯನ್ನು ವಿರೋಧ ಮಾಡುವವರು ಯಾವ ಕಾಲಕ್ಕೂ ಇರುತ್ತಾರೆ. ವಚನಕಾರರು ಪರಂಪರೆಯನ್ನು ಅನುಸರಿಸಿಯೂ ಕೂಡಾ ತಮ್ಮ ಹೊಸ ಆಲೋಚನೆಗಳನ್ನು ಅನುಭವದ ಹಿನ್ನೆಲೆಯಲ್ಲಿ ಸಾಮಾಜಿಕ, ಧಾರ್ಮಿಕ ಆಚಾರ-ವಿಚಾರಗಳಿಗೆ ಹೊಸ ಆಯಾಮ ನೀಡಿದ್ದಾರೆ. ಇದನ್ನು ಬುದ್ದಿಜೀವಿಗಳು ಅರಿಯಬೇಕಿದೆ ಎಂಬ ಎಚ್ಚರಿಕೆಯನ್ನು ಸವದತ್ತಿಮಠ ಸೂಕ್ಷ್ಮವಾಗಿ ನೀಡಿದರು.
ಮುಂಡರಗಿ ಅನ್ನದಾನೇಶ್ವರ ಸಂಸ್ಥಾನ ಮಠದ ನಾಡೋಜ ಅನ್ನದಾನೇಶ್ವರ ಸ್ವಾಮೀಜಿ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ವಚನ ಸಾಹಿತ್ಯ ನೀಡಿದ ಕೊಡುಗೆ ಬಗ್ಗೆ ಆಶಯ ನುಡಿಗಳಲ್ಲಿ ಹೇಳಿದರು. ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಹಾಮನೆ ಕುರಿತು ಡಾ.ಕಾಂತೇಶ ಅಂಬಿಗೇರ, ಚಿಂತಕಿ ವೀಣಾ ಬನ್ನಂಜೆ ವಿಷಯ ಮಂಡಿಸಿದರು. ವಚನಗಳಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ಕುರಿತು ಸಂಗಮೇಶ ಪೂಜಾರ ಮಾತನಾಡಿದರು. ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಸುರೇಶ ಚನಶೆಟ್ಟಿನಿರೂಪಿಸಿದರು. ಪ್ರಭಣ್ಣ ಅರಗೋಳ ವಂದಿಸಿದರು. ಡಾ.ರವೀಂದ್ರ ಹೊಸಮನಿ ನಿರ್ವಹಿಸಿದರು.
ಜೀವನದ ಅನ್ವೆಷಣೆಯೇ ಅನುಭಾವ: ವೀಣಾ ಬನ್ನಂಜೆ
ಕಣ್ಣಿಗೆ ಕಾಣದ, ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ. ಬಸವಣ್ಣ, ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಸೇರಿದಂತೆ ಹಲವು ಶರಣರು ಇಂತಹ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರು. ಅನುಭವ ಹಾಗೂ ಅನುಭಾವ ಎರೆಡೂ ಬೇರೆ ಬೇರೆ. ಜೀವನದ ಪ್ರತಿನಿತ್ಯದ ಜಂಜಾಟಗಳಲ್ಲಿ ನಮಗೆ ಲಭಿಸುವುದು ಅನುಭವ. ಅನುಭಾವ ಆಧ್ಯಾತ್ಮ ಚಿಂತನೆ. ದೇವರ ಸಾಕಾರ ಆಗೂವವರೆಗೂ ನಮ್ಮನ್ನು ನಾವು ಅನ್ವೇಷಿಸಿಕೊಳ್ಳಬೇಕು. ಕೂಡಸಂಗಮದೇವನಿಗಾಗಿ ಬಸವಣ್ಣ, ಚನ್ನಮಲ್ಲಿಕಾರ್ಜುನನಿಗಾಗಿ ಅಕ್ಕಮಹಾದೇವಿ, ಗುಹೇಶ್ವರನಿಗಾಗಿ ಅಲ್ಲಮ ಪ್ರಭು ಅನ್ವೇಷಿಸಿ ತಮ್ಮ ಬದುಕನ್ನು ಸಾಗಿಸಿದರು. ಇಂತಹ ಅನ್ವೇಷಣೆಯಲ್ಲಿ ತೊಡಗಿದ ಇವರಿಗೆ ಬುದುಕಿನ ಅನಿಶ್ಚಿತತೆ ಕಾಡಲಿಲ್ಲ. ಭೌತಿಕ ವಸ್ತುಗಳ ಹಾಗೂ ವ್ಯವಹಾರಗಳನ್ನು ತ್ಯಜಿಸಿ ಮುನ್ನೆಡೆದರು. ತಾವು ಕಂಡುಕೊಂಡ ಸತ್ಯದ ಆಚೆಯೂ ಇನ್ನೊಂದು ಸತ್ಯವಿದೆ ಎಂದು ನಂಬಿ ಅನುಭಾವವನ್ನು ಹುಡುಕಿದರು ಎಂದರು.
Kannada sahitya sammelana: ಕನ್ನಡಕ್ಕಿವೆ 2 ಕುತ್ತುಗಳು: ಎಚ್‌ಎಸ್‌ವಿ ಎಚ್ಚರಿಕೆ
ವಚನಗಳಲ್ಲಿನ ಪರಂಪರೆಯ ನೈಜ ವಿಷಯಗಳನ್ನು ಪ್ರತಿಪಾಸಿದಿಸುವರನ್ನು ಮೂಲಭೂತವಾದಿಗಳು, ಬಲಪಂಥೀಯರು ಎಂದು ಕರೆಯುತ್ತಿದ್ದಾರೆ. ಈ ಮೂಲಕ ಸತ್ಯವನ್ನು ಮರೆಮಾಚುತ್ತಿದ್ದಾರೆ. ಎಡ, ಬಲ ಪಂಥೀಯ ವಾದ ಸದ್ಯ ಬುಡಮೇಲಾಗಿದ್ದು ಬೇರೆಯ ಮಾತು. ಒಟ್ಟಾರೆ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ವಚನ ಪರಂಪರೆ ಕುರಿತು ಪ್ರತ್ಯೇಕ ಗೋಷ್ಠಿ ಏರ್ಪಡಿಸಿದ್ದು ಸ್ತುತ್ತರ್ಹ್ಯ
- ಡಾ.ಸಂಗಮೇಶ ಸವದತ್ತಿಮಠ, ಗೋಷ್ಠಿಯ ಅಧ್ಯಕ್ಷ