ಶೃಂಗೇರಿ ಬಾಲಕಿ ಮೇಲೆ 15 ಮಂದಿಯಿಂದ ರೇಪ್‌ : ಸಿಕ್ಕಿಬಿದ್ದರು 8 ಆರೋಪಿಗಳು

By Kannadaprabha News  |  First Published Feb 2, 2021, 7:40 AM IST

ಶೃಂಗೇರಿಯಲ್ಲಿ ನಡೆದ ಅಪ್ರಾಪ್ತೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 8 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. 30 ಕ್ಕೂ ಹೆಚ್ಚು ಮಂದಿ ವಿರುದ್ಧ ಕೇಸ್ ದಾಖಲಾಗಿದೆ. 


ಶೃಂಗೇರಿ (ಫೆ.02): ತಾಲೂಕಿನ ಗೋಚವಳ್ಳಿಯಲ್ಲಿ ಬಾಲಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಆರೋಪಿಗಳನ್ನು ಸೋಮವಾರ ಚಿಕ್ಕಮಗಳೂರು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. 

ಘಟನೆ ಸಂಬಂಧ ಶೃಂಗೇರಿ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿ, 17 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಇದೀಗ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Tap to resize

Latest Videos

ಅಪ್ರಾಪ್ತೆ ಮೇಲೆ 15 ಜನರಿಂದ ಅತ್ಯಾಚಾರ, ಶೃಂಗೇರಿಯಲ್ಲಿ ಪೈಶಾಚಿಕ ಕೃತ್ಯ! .

ಬಾಲಕಿಯು ಮೂಲತಃ ಹಾವೇರಿ ಜಿಲ್ಲೆ ಶಿಗ್ಗಾವಿಯವಳಾಗಿದ್ದು, 7ನೇ ತರಗತಿಯಲ್ಲಿ ಓದು​ತ್ತಿ​ರು​ವಾ​ಗಲೇ ತಾಯಿ​ಯನ್ನು ಕಳೆ​ದು​ಕೊಂಡಿ​ದ್ದ​ಳು. ಹೀಗಾಗಿ ಶೃಂಗೇ​ರಿಯ ಜಲ್ಲಿ ಕ್ರಷ​ರ್‌​ನಲ್ಲಿ ಕೆಲಸ ಮಾಡು​ತ್ತಿದ್ದ ಚಿಕ್ಕಮ್ಮ ಆಕೆಯನ್ನು ಓದಿ​ಸು​ವು​ದಾಗಿ ತನ್ನೊಟ್ಟಿಗೆ ಇಟ್ಟುಕೊಂಡಿದ್ದಳು. ಸದ್ಯ ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದಳು.

ಸೆಪ್ಟಂಬರ್‌ನಲ್ಲಿ ಚಿಕ್ಕಮ್ಮನಿಗೆ ಆರೋಗ್ಯ ಸರಿ ಇಲ್ಲದಿದ್ದರಿಂದ ಬಾಲಕಿ ಜಲ್ಲಿ ಕ್ರಷರ್‌ನ ಕೆಲಸಕ್ಕೆ ಹೋಗಿದ್ದಳು. ಆ ವೇಳೆ ಚಾಲಕ ಕೆಲಸ ಮಾಡುತ್ತಿದ್ದ ಗಿರೀಶ್‌ ಪರಿಚಯವಾಗಿದ್ದು, ಆತ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಂತರದ ದಿನಗಳಲ್ಲಿ ಗಿರೀಶ್‌ ತನ್ನ ಸ್ನೇಹಿತ ಅಭಿಗೆ ಈಕೆ​ಯ​ನ್ನು ಪರಿಚಯ ಮಾಡಿದ್ದ. ಆತ ಮತ್ತು ಆತನ ಸ್ನೇಹಿತರೂ ಈಕೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

click me!