ದಾವಣಗೆರೆ (ಮೇ.13): ಜಿಲ್ಲೆಯ ಹರಪನಹಳ್ಳಿಯಲ್ಲಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಯುವತಿಗೆ ವಿಷ ಕುಡಿಸಿ ಕೊಂದ ಆರೋಪ ಇದೀಗ ಆಕೆಯ ಸಂಬಂಧಿಗಳ ಮೇಲೆ ಎದುರಾಗಿದೆ.
ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಯಡಿಹಳ್ಳಿಯ 18 ವರ್ಷದ ಯುವತಿಯನ್ನು ವಿಷ ಕುಡಿಸಿ ಹತ್ಯೆ ಮಾಡಿ ಆಕೆಯ ಮೃತದೇಹವನ್ನು ಸುಟ್ಟುಹಾಕಿದ್ದಾರೆಂದು ಆರೋಪದಡಿ ಇದೀಗ 7 ಮಂದಿ ಬಂಧಿಸಲಾಗಿದೆ.
ಅದೇ ಗ್ರಾಮದ ಅನ್ಯ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿದ್ದಳು ಎಂದು ಮರ್ಯಾದೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು; ಪಿತೃ ದೋಷವಿದೆ ಎಂದ ಡೋಂಗಿ ಜ್ಯೋತಿಷಿ, ಹೆತ್ತವರನ್ನೇ ಕೊಂದ ಬಾಲಕ ..
ಪ್ರೀತಿಸಿದ ಯುವಕನ ಜೊತೆ ಯುವತಿ ಮನೆ ಬಿಟ್ಟು ಹೋಗಿದ್ದು, ಇಬ್ಬರನ್ನು ಹಿಡಿದು ಮನೆಗೆ ಕರೆತರಲಾಗಿತ್ತು. ಯುವಕನನ್ನು ಬೆದರಿಸಿ ಊರು ಬಿಟ್ಟು ಕಳುಹಿಸಿದ ಯುವತಿ ಕುಟುಂಬಸ್ಥರು ಬಳಿ ಆಕೆಗೆ ವಿಷ ಕುಡಿಸಿ ಊರಿನ ಕೆರೆ ಬಳಿ ಸುಟ್ಟು ಹಾಕಿದ್ದರೆನ್ನಲಾಗಿದೆ.
ಯಾರಿಗೂ ತಿಳಿಯದಂತೆ ಶವ ಸಂಸ್ಕಾರ ಮಾಡಿದ್ದು, ಇದೀಗ ಸಾಕ್ಷ್ಯ ನಾಶ, ಕೊಲೆ ಸಂಬಂಧ ಹಲವಾಗಿಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ಕುಟುಂಬದ 7 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.