ಬೆಂಗಳೂರಲ್ಲಿ 11 ತಿಂಗಳಲ್ಲಿ 133 ರೇಪ್‌ ಕೇಸ್‌!

By Kannadaprabha NewsFirst Published Dec 9, 2019, 7:36 AM IST
Highlights

ರಾಜಧಾನಿ ಪೊಲೀಸರು ಮಹಿಳೆಯರ ಸುರಕ್ಷತೆಗೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಆದಾಗ್ಯೂ ನಗರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ.

ಬೆಂಗಳೂರು [ಡಿ.09]: ತೆಲಂಗಾಣದಲ್ಲಿ ಪಶುವೈದ್ಯ ಮೇಲಿನ ಅತ್ಯಾಚಾರ, ಕೊಲೆ ಬೆನ್ನಲ್ಲೇ ರಾಜಧಾನಿ ಪೊಲೀಸರು ಮಹಿಳೆಯರ ಸುರಕ್ಷತೆಗೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಆದಾಗ್ಯೂ ನಗರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.

ಕಳೆದ ಎರಡು ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ನವೆಂಬರ್‌ ಅಂತ್ಯಕ್ಕೆ ಮೂರು ವರ್ಷದಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಪ್ರಸಕ್ತ ವರ್ಷ ನವೆಂಬರ್‌ ಅಂತ್ಯಕ್ಕೆ 133 ಅತ್ಯಾಚಾರ ಪ್ರಕರಣ ಸೇರಿ ಒಟ್ಟು ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (ಪೋಕ್ಸೋ) ಸೇರಿ 1,228 ಪ್ರಕರಣಗಳು ದಾಖಲಾಗಿವೆ.

ನಗರ ಅಪರಾಧ ದಾಖಲಾತಿ ವಿಭಾಗ ನೀಡಿರುವ ಮಾಹಿತಿ ಅನ್ವಯ ಜ.1ರಂದು ನ.30ರವರೆಗೆ ನಗರದಲ್ಲಿ 133 ಅತ್ಯಾಚಾರ, 304 ಪೊಕ್ಸೋ, 791 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2017ರಲ್ಲಿ 131 ಅತ್ಯಾಚಾರ ಪ್ರಕರಣ, 2018ರಲ್ಲಿ 106 ಪ್ರಕರಣ ದಾಖಲಾದರೆ ಪ್ರಸಕ್ತ ವರ್ಷ ನವೆಂಬರ್‌ ಅಂತ್ಯಕ್ಕೆ 133 ಪ್ರಕರಣ ದಾಖಲಾಗಿದೆ. ಈ ಪೈಕಿ ಶೇ.80ರಷ್ಟುಪ್ರಕರಣ ಇತ್ಯರ್ಥವಾಗಬೇಕಿದೆ.

ಅಂತ್ಯಸಂಸ್ಕಾರಕ್ಕೆ ಯೋಗಿ ಬರಲಿಲ್ಲ: ನ್ಯಾಯ ಸಿಗದೇ ಹೊರಟಳು ದೇಶದ ಮಗಳು!...

ಆಘಾತಕಾರಿ ಅಂಶವೆಂದರೆ ಅಪ್ರಾಪ್ತಾರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಅಧಿಕವಾಗಿವೆ. 2017ರಲ್ಲಿ 417 ಮತ್ತು 2018ರಲ್ಲಿ 402 ಪ್ರಕರಣಗಳು ವರದಿಯಾಗಿವೆ. ಇನ್ನು ಲೈಂಗಿಕ ದೌರ್ಜನ್ಯಗಳ ಪೈಕಿ 2017ರಲ್ಲಿ 891 ಹಾಗೂ 2018ರಲ್ಲಿ 721 ಇತ್ಯರ್ಥಗೊಂಡಿವೆ ಎಂದು ತಿಳಿದು ಬಂದಿದೆ.

ನೆರೆಮನೆ ವಾಸಿಗಳು, ಶಾಲಾ ಸಿಬ್ಬಂದಿ ಬಗ್ಗೆ ಇರಲಿ ಎಚ್ಚರ!

ಈ ಬಹುತೇಕ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮನೆ ಹಾಗೂ ಶಾಲೆಯಲ್ಲಿ ಸಂಭವಿಸಿದ್ದವುಗಳಾಗಿವೆ. ನೆರೆ ಮನೆ ನಿವಾಸಿಗಳು ಹಲವು ಕೃತ್ಯ ಎಸಗಿರುವುದು ವರದಿಯಾಗಿವೆ. ಪೋಷಕರು ನೆರೆ ಮನೆ ನಿವಾಸಿಗಳು ಹಾಗೂ ಹೊರಗಿನ ವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕು. ಶಾಲೆಗಳಲ್ಲಿ ಶಾಲಾ ಸಿಬ್ಬಂದಿ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಈ ಹಿಂದೆ ಕೆ.ಆರ್‌.ಪುರ ಮತ್ತು ಮಾರತ್‌ಹಳ್ಳಿಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಇಡೀ ರಾಜ್ಯದಲ್ಲಿ ಸುದ್ದಿಯಾದ ಉದಾಹರಣೆಗಳಿವೆ. ಈ ಬಗ್ಗೆ ಪೊಲೀಸ್‌ ಇಲಾಖೆಯಿಂದ ಸುರಕ್ಷತಾ ಕ್ರಮಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

click me!