ಅಬ್ಬಬ್ಬಾ... ಏಕಕಾಲದಲ್ಲಿ ಇಷ್ಟು ವಿದ್ಯಾರ್ಥಿಗಳಿಗೆ ಸಿಕ್ತು ವಾರ್ಷಿಕ 1 ಕೋಟಿಗೂ ಅಧಿಕ ಮೊತ್ತದ ಪ್ಯಾಕೇಜ್‌!

By Santosh Naik  |  First Published Jan 5, 2024, 2:34 PM IST

IIT Bombay Placement 2023-24: 63 ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಜಾಬ್‌ ಆಫರ್‌ಗಳನ್ನು ಸ್ವೀಕರಿಸಿದ್ದಾರೆ. ಈ  ಸಂಸ್ಥೆಯು ಈ ವರ್ಷ ಸರಾಸರಿ ವೇತನ ಪ್ಯಾಕೇಜ್‌ನಲ್ಲಿ ಭಾರೀ ಹೆಚ್ಚಳವಾಗಿದೆ.


ನವದೆಹಲಿ (ಜ.5): ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಬಾಂಬೆ) 2023-24ನೇ ಶೈಕ್ಷಣಿಕ ವರ್ಷಕ್ಕೆ 1 ನೇ ಹಂತದ ಪ್ಲೇಸ್‌ಮೆಂಟ್‌ಗಳನ್ನು ಮುಕ್ತಾಯಗೊಳಿಸಿದೆ. 388 ದೇಶೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಹಂತ 1 ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ, 85 ವಿದ್ಯಾರ್ಥಿಗಳು ವಾರ್ಷಿಕ ಒಂದು ಕೋಟಿಗೂ ಅಧಿಕ ಮೊತ್ತದ ಸಿಟಿಸಿ (ಕಾಸ್ಟ್‌ ಟು ಕಂಪನಿ) ಪಡೆದುಕೊಂಡಿದ್ದು, ಈ ಎಲ್ಲರೂ ಉದ್ಯೋಗವನ್ನು ಸ್ವೀಕಾರ ಮಾಡಿದ್ದಾರೆ. ಮೊದಲ ಹಂತದ ಪ್ಲೇಸ್‌ಮೆಂಟ್‌ನ ಲೆಕ್ಕಾಚಾರದಲ್ಲಿ ಹೇಳುವುದಾದರೆ, ವಾರ್ಷಿಕ ಸರಾಸರಿ ವೇತನವು 24.02 ಲಕ್ಷ ರೂಪಾಯಿ ಆಗಿದೆ. ಕಳೆದ ವರ್ಷ ಐಐಸಿ ಬಾಂಬೆ ವಿದ್ಯಾರ್ಥಿಗಳ ಸ್ಯಾಲರಿ ಪ್ಯಾಕೇಜ್‌ ವಾರ್ಷಿಕ ಸರಾಸರಿ 21.82 ಲಕ್ಷ ರೂಪಾಯಿ ಆಗಿತ್ತು.  2023ರ ಡಿಸೆಂಬರ್‌ 20ರ ವೇಳೆಗೆ ಐಐಟಿ ಬಾಂಬೆಯ 1340 ವಿದ್ಯಾರ್ಥಿಗಳು ಜಾಬ್‌ ಆಫರ್‌ಅನ್ನು ಪಡೆದುಕೊಂಡಿದ್ದರು. ಇವುಗಳ ಪೈಕಿ 1188 ವಿದ್ಯಾರ್ಥಿಗಳು ಈ ಆಫರ್‌ಅನ್ನು ಸ್ವೀಕಾರ ಮಾಡಿದ್ದಾರೆ.

ಇವುಗಳ ಪೈಕಿ ಏಳು ಮಂದಿ ವಿದ್ಯಾರ್ಥಿಗಳು ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ (ಪಿಎಸ್‌ಯು) ಕೆಲಸ ಪಡೆದುಕೊಂಡಿದ್ದಾರೆ. ಇನ್ನು 297 ವಿದ್ಯಾರ್ಥಿಗಳಿಗೆ ಪ್ರೀ ಪ್ಲೇಸ್‌ಮೆಂಟ್‌ ಆಫರ್‌ (ಪಿಪಿಓ) ಅಂದರೆ ಉದ್ಯೂಗ ನೀಡುವ ಮುನ್ನ ನೀಡುವ ಮುನ್ನ ನೀಡಲಾಗುವ ಇಂಟರ್ನ್‌ಶಿಪ್‌ ನೀಡಲಾಗಿದ್ದು, 258 ಮಂದಿ ಇದನ್ನು ಒಸ್ವೀಕರಿಸಿದ್ದಾರೆ. ಇನ್ನು 63 ವಿದ್ಯಾರ್ಥಿಗಳು ಜಪಾನ್, ತೈವಾನ್, ದಕ್ಷಿಣ ಕೊರಿಯಾ, ನೆದರ್ಲ್ಯಾಂಡ್ಸ್, ಸಿಂಗಾಪುರ್ ಮತ್ತು ಹಾಂಗ್ ಕಾಂಗ್‌ನಲ್ಲಿ ತಮ್ಮ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

“ಐಐಟಿ ಬಾಂಬೆ ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಕ್ರಾಸ್ ಆಫರ್‌ಗಳನ್ನು ಕಡಿಮೆ ಮಾಡಲು ಸಂಸ್ಥೆಗಳು ಗರಿಷ್ಠವಾಗಿ ಹರಡಿರುವುದನ್ನು ಖಚಿತಪಡಿಸಿಕೊಳ್ಳಲು ಕಂಪನಿಗಳನ್ನು ಸ್ಲಾಟ್ ಮಾಡುತ್ತದೆ. ಸಂಸ್ಥೆಗಳು ಅಭ್ಯರ್ಥಿಗಳೊಂದಿಗೆ ವೈಯಕ್ತಿಕವಾಗಿ ಅಥವಾ ವರ್ಚುವಲ್ ಮೀಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂವಹನ ನಡೆಸುತ್ತವೆ, ಎಲ್ಲಾ ವಿದ್ಯಾರ್ಥಿಗಳು ಸ್ಥಳದಿಂದಲೇ ಸಂದರ್ಶನಕ್ಕೆ ಹಾಜರಾಗುತ್ತಾರೆ, ”ಎಂದು ಸಂಸ್ಥೆ ಹೇಳಿದೆ.

ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಐಟಿ, ಸಾಫ್ಟ್‌ವೇರ್, ಹಣಕಾಸು, ಬ್ಯಾಂಕಿಂಗ್, ಫಿನ್‌ಟೆಕ್, ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ವಿನ್ಯಾಸ ಡೊಮೇನ್‌ಗಳು ಹೆಚ್ಚಿನ ಸಂಖ್ಯೆಯ ಪ್ಲೇಸ್‌ಮೆಂಟ್ ಆಫರ್‌ಗಳನ್ನು ಪಡೆದುಕೊಂಡಿವೆ.

ಜ.6ಕ್ಕೆ ಸೂರ್ಯ ನಮಸ್ಕಾರ ಮಾಡಲಿದೆ ಆದಿತ್ಯ ಎಲ್‌-1, ಬಾಹ್ಯಾಕಾಶದಿಂದಲೇ ದೇಶದ 400 ಉಪಗ್ರಹಗಳ ರಕ್ಷಣೆ!

Latest Videos

undefined

ಇಂಜಿನಿಯರಿಂಗ್‌ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸರಾಸರಿ ವಾರ್ಷಿಕ 21.88 ಲಕ್ಷ ವೇತನದ ಆಫರ್‌ ದೊರೆತಿದೆ.  ಅದೇ ರೀತಿ ಐಟಿ/ಸಾಫ್ಟ್‌ವೇರ್‌ (26.35 ಲಕ್ಷ). ಫೈನಾನ್ಸ್ (32.38 ಲಕ್ಷ), ಕನ್ಸಲ್ಟಿಂಗ್‌ (18.68 ಲಕ್ಷ), ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ (36.94 ಲಕ್ಷ) ದೊಡ್ಡ ಪ್ರಮಾಣದ ವಾರ್ಷಿಕ ಸರಾಸರಿಯ ವೇತನ ಪಡೆದಿದ್ದಾರೆ.

ಅತಿಥಿ ಉಪನ್ಯಾಸಕರ ಸೇವೆ ಕಾಯಂ ಅಸಾಧ್ಯ: ಸಚಿವ ಸುಧಾಕರ್‌

ಐಐಟಿ ಬಾಂಬೆ ವಿದ್ಯಾರ್ಥಿಗಳನ್ನು ದೊಡ್ಡ ಪ್ರಮಾಣದಲ್ಲಿ ಸೇರಿಸಿಕೊಂಡ ಕಂಪನಿಗಳ ಪೈಕಿ, ಅಕ್ಸೆಂಚರ್‌, ಏರ್‌ಬಸ್‌, ಏರ್‌ ಇಂಡಿಯಾ, ಆಪಲ್‌, ಆರ್ಥರ್‌ ಡಿ ಲಿಟಲ್‌, ಬಜಾಜ್‌, ಬಾರ್ಕ್ಲೇಸ್, ಕೋಹೆಸಿಟಿ, ಡಾ ವಿನ್ಸಿ, ಡಿಹೆಚ್‌ಎಲ್, ಫುಲ್ಲರ್ಟನ್, ಫ್ಯೂಚರ್ ಫಸ್ಟ್, ಜಿಇ-ಐಟಿಸಿ, ಗ್ಲೋಬಲ್ ಎನರ್ಜಿ ಮತ್ತು ಎನ್ವಿರಾನ್, ಗೂಗಲ್, ಹೋಂಡಾ ಆರ್&ಡಿ, ಐಸಿಐಸಿಐ ಲಾಂಬಾರ್ಡ್‌, ಐಡಿಯಾಫೋರ್ಜ್, ಐಎಂಸಿ ಟ್ರೇಡಿಂಗ್, ಇಂಟೆಲ್, ಜಾಗ್ವಾರ್ ಲ್ಯಾಂಡ್ ರೋವರ್, ಜೆಪಿ ಮೋರ್ಗಾನ್ ಚೇಸ್, ಜೆಎಸ್‌ಡಬ್ಲ್ಯೂ, ಕೋಟಾಕ್ ಸೆಕ್ಯುರಿಟೀಸ್, ಮಾರ್ಷ್ ಮೆಕ್ಲೆನ್ನನ್, ಮಹೀಂದ್ರಾ ಗ್ರೂಪ್, ಮೈಕ್ರಾನ್, ಮೈಕ್ರೋಸಾಫ್ಟ್, ಮೋರ್ಗಾನ್ ಸ್ಟಾನ್ಲಿ, ಮರ್ಸಿಡಿಸ್-ಬೆನ್ಜ್, ಮತ್ತು ಎಲ್‌ & ಟಿ ಸೇರಿವೆ.

click me!