ಇಲ್ಲೊಬ್ಬ ಉದ್ಯೋಗಿ ತನ್ನನ್ನು ಕೆಲಸದಿಂದ ತೆಗೆದು ಹಾಕಿದ ಉದ್ಯೋಗಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಬರೋಬ್ಬರಿ 17 ಲಕ್ಷ ಪರಿಹಾರ ಗಿಟ್ಟಿಸಿಕೊಂಡಿದ್ದಾನೆ. ಆದರೆ ಈ ವ್ಯಕ್ತಿಯನ್ನು ಸಂಸ್ಥೆ ಕೆಲಸದಿಂದ ತೆಗೆದು ಹಾಕಿದ್ದೇಕೆ ಎಂದು ಕಾರಣ ತಿಳಿದರೆ ನಿಮಗೆ ಅಚ್ಚರಿಯಾಗದಿರದು.
ನವದೆಹಲಿ: ಸಾಮಾನ್ಯವಾಗಿ ಸಂಸ್ಥೆ ನಮ್ಮನ್ನು ಸಡನ್ ಆಗಿ ಉದ್ಯೋಗದಿಂದ ತೆಗೆದು ಹಾಕಿದರೆ ನಾವೇನು ಮಾಡಬಹುದು ಅಳುತ್ತಾ ಕೂರಬಹುದು. ಸಂಸ್ಥೆಗೆ ಹಿಡಿಶಾಪ ಹಾಕುತ್ತಾ ಬೇರೆ ಉದ್ಯೋಗ ಹುಡುಕಲು ಶುರು ಮಾಡಬಹುದು. ಆದರೆ ಇಲ್ಲೊಬ್ಬ ಉದ್ಯೋಗಿ ತನ್ನನ್ನು ಕೆಲಸದಿಂದ ತೆಗೆದು ಹಾಕಿದ ಉದ್ಯೋಗಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಬರೋಬ್ಬರಿ 17 ಲಕ್ಷ ಪರಿಹಾರ ಗಿಟ್ಟಿಸಿಕೊಂಡಿದ್ದಾನೆ. ಆದರೆ ಈ ವ್ಯಕ್ತಿಯನ್ನು ಸಂಸ್ಥೆ ಕೆಲಸದಿಂದ ತೆಗೆದು ಹಾಕಿದ್ದೇಕೆ ಎಂದು ಕಾರಣ ತಿಳಿದರೆ ನಿಮಗೆ ಅಚ್ಚರಿಯಾಗದಿರದು. ಆತ ಕಚೇರಿಯ ಊಟದ ವಿರಾಮದ ಸಮಯದಲ್ಲಿ ಬರ್ಗರ್ ತಿನ್ನಲು ಹೊರ ಹೋಗಿದ್ದೆ ಆತ ಮಾಡಿದ ದೊಡ್ಡ ತಪ್ಪು.
ಕೆಲಸ ಮಾಡುವ ಸಂಸ್ಥೆ ನಮಗೆ 30 ನಿಮಿಷ 40 ನಿಮಿಷ ಅಥವಾ ಒಂದು ತಾಸಿನವರೆಗೆ ಊಟದ ವಿರಾಮ ನೀಡುತ್ತದೆ. ಈ ಊಟದ ವಿರಾಮದ ಸಮಯದ ವಿಚಾರದಲ್ಲಿ ಸಂಸ್ಥೆಯಿಂದ ಸಂಸ್ಥೆಗೆ ವ್ಯತ್ಯಾಸವಿದೆ. ಹೀಗೆ ಈ ವಿರಾಮದ ಸಮಯದಲ್ಲಿ ಊಟಕ್ಕೆಂದು ಬರ್ಗರ್ ಕಿಂಗ್‌ಗೆ (Burger King) ಹೋದ ಬಿಎಂಡಬ್ಲ್ಯೂ ಸಂಸ್ಥೆಯ ಫ್ಯಾಕ್ಟರಿಯ ಉದ್ಯೋಗಿಯೋರ್ವನನ್ನು ಸಂಸ್ಥೆ ಕೆಲಸದಿಂದ ತೆಗೆದು ಹಾಕಿತ್ತು. ಬಿಎಂಡಬ್ಲ್ಯೂ ಸಂಸ್ಥೆಯ ಫ್ಯಾಕ್ಟರಿಯ ಉದ್ಯೋಗಿ ರಯಾನ್ ಪಾರ್ಕಿನ್ಸನ್ (yan Parkinson) ಎಂಬಾತನೇ ಹೀಗೆ ಕೆಲಸದಿಂದ ತೆಗೆದು ಹಾಕಲ್ಪಟ್ಟ ಉದ್ಯೋಗಿ. ಬಿಎಂಡಬ್ಲ್ಯೂ (BMW) ಸಂಸ್ಥೆಗೆ ಸೇರಿದ ಆಕ್ಸ್‌ಫರ್ಡ್ ಕಾರ್ಖಾನೆಯಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದ ಈತ ಅಲ್ಲಿ ಓವರ್ ಟೈಮ್ ಕೆಲಸ ಮಾಡುತ್ತಿದ್ದು, ಈ ಮಧ್ಯೆ ಊಟದ ವಿರಾಮದ ನಡುವೆ ಬರ್ಗರ್ ಕಿಂಗ್‌ಗೆ ಹೋಗಿದ್ದ. ಆದರೆ ಅಲ್ಲಿಂದ ವಾಪಸ್ ಬರುವ ಹೊತ್ತಿಗೆ ಆತನಿಗೆ ಆಘಾತ ಕಾದಿತ್ತು. ಊಟದ ವಿರಾಮ ತೆಗೆದುಕೊಂಡ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಈತನ ವಿರುದ್ಧ ಈತನ ಮ್ಯಾನೇಜರ್ ಕೆಂಡಕಾರಿದ್ದ.
7 ವರ್ಷದಲ್ಲಿ ಮೊದಲ ಬಾರಿಗೆ ಕಚೇರಿಗೆ 20 ನಿಮಿಷ ತಡ: ನೌಕರನ ವಜಾಗೊಳಿಸಿದ ಕಂಪನಿ
ಇದಕ್ಕೂ ಮೊದಲು ಈತನನ್ನು ತಾತ್ಕಾಲಿಕ ಗುತ್ತಿಗೆಗಳನ್ನು ನೀಡುವ ನೇಮಕಾತಿ ಏಜೆನ್ಸಿಯಾದ ಜಿಐ ಗ್ರೂಪ್ (IG group) ವಜಾಗೊಳಿಸಿತ್ತು. ಆದರೆ ತನ್ನ ಮೇಲ್ವಿಚಾರಕರಿಗೆ ಹೇಳದೆ ಕಾರ್ಖಾನೆಯ ಸ್ಥಳವನ್ನು ತೊರೆದಿದ್ದಕ್ಕಾಗಿ ಮತ್ತೊಮ್ಮೆ ಆತನನ್ನು ವಜಾ ಮಾಡಿದಾಗ ಸಿಟ್ಟಿಗೆದ್ದ ರಯಾನ್ ಪಾರ್ಕಿನ್ಸನ್ ಈ ಅನ್ಯಾಯದ ವಿರುದ್ಧ ಕೇಸ್ ದಾಖಲಿಸಿದರು. ಈ ಬಗ್ಗೆ ಮಾತನಾಡಿದ ರಯಾನ್ ಪಾರ್ಕಿನ್ಸನ್, 2018ರ ಜೂನ್ 17 ರಂದು ಓವರ್‌ಟೈಮ್ ಶಿಫ್ಟ್‌ನಲ್ಲಿ ರಾತ್ರಿ 7.50ರ ಸಮಯದಲ್ಲಿ ಅವರ ಮೇಲ್ವಿಚಾರಕರು ಅವರು ಕಣ್ಮರೆ ಆಗಿದ್ದಾರೆ ಎಂದು ಹೇಳಿದಾಗ ಮೊದಲಿಗೆ ಹೋಗಲಿ ಬಿಡು ಎಂದು ಸುಮ್ಮನಾದರು. ಆದರೆ ಅವರ ಬಾಸ್ ಪ್ರಕಾರ, ಅವರು ಊಟಕ್ಕೆ ಹೊರಟ ವೇಳೆ ಯಾರಿಗೂ ಆ ಬಗ್ಗೆ ತಿಳಿಸಿ ಹೋಗಿಲ್ಲ. ಅಲ್ಲದೇ ರಾತ್ರಿ 8.45ರ ಸುಮಾರಿಗೆ ಮತ್ತೆ ಕೆಲಸಕ್ಕೆ ಬಂದರು ಎಂಬುದು.
ಈ ಬಗ್ಗೆ ಎಲ್‌ಬಿಸಿ ನ್ಯೂಸ್‌ನೊಂದಿಗೆ ಮಾತನಾಡಿದ ರಯಾನ್ ಪಾರ್ಕಿನ್ಸನ್ (Ryan Parkinson) ಅವರು, ಎಲ್ಲರಿಗೂ ಕಬಾಬ್ ಬೇಕಿತ್ತು. ಆದರೆ ನನಗೆ ಬರ್ಗರ್ ಬೇಕಿತ್ತು. ನನ್ನ ಸಹೋದ್ಯೋಗಿಗಳು ಅವರು ಏನು ತೆಗೆದುಕೊಳ್ಳಬೇಕು ಎಂದು ಚರ್ಚಿಸುತ್ತಿದ್ದರು. ಈ ವೇಳೆ ನಾನು ಬರ್ಗರ್ ಕಿಂಗ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದೆ. ನಾನು ಸ್ಕೂಟರ್ ಹತ್ತಿ ಹೋಗಿ ಬರ್ಗರ್ ಕಿಂಗ್ ತೆಗೆದುಕೊಂಡು ಬಂದು ಅರ್ಧ ಘಂಟೆಯವರೆಗೆ ನನ್ನ ಕಾರಿನಲ್ಲಿ ಕುಳಿತುಕೊಂಡೆ ಎಂದು ಅವರು ಹೇಳಿದ್ದಾರೆ.
ಕೆಲಸದಿಂದ ವಜಾ: ಬೋಲ್ಡೋಜರ್ ತರಿಸಿ ಬಾಸ್ ಮನೆ ಬೀಳಿಸಿದ ಮಾಜಿ ಉದ್ಯೋಗಿ
ಇದೇ ಪ್ರಕರಣದ ವಿಚಾರವಾಗಿ ಮೇ 2019ರಲ್ಲಿ ಶಿಸ್ತು ಕ್ರಮದ ಹೆಸರಲ್ಲಿ ವಿಚಾರಣೆ ನಡೆಸಿದ ಕಂಪನಿ ಮತ್ತೆ ಅವರನ್ನು ವಜಾ ಮಾಡಿತ್ತು. ಜೂನ್‌ನಲ್ಲಿ ಅವರು ಮತ್ತೆ ಮೇಲ್ಮನವಿ ಸಲ್ಲಿಸಿದಾಗ ಮತ್ತೆ ಆತನಿಗೆ ಎಚ್ಚರಿಕೆ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ 2019ರ ನವೆಂಬರ್‌ನಲ್ಲಿ ಮತ್ತೆ ಹೊರ ಹೋಗಿದ್ದಕ್ಕೆ ಮತ್ತೆ ವಜಾ ಮಾಡಲಾಯಿತು. ಇದಾದ ನಂತರ ಎರಡು ಬಾರಿ ಅವರು ಅನುಮತಿ ಇಲ್ಲದೇ ಸೈಟ್ ಅನ್ನು ತೊರೆದಿದ್ದಾರೆ ಎಂದು ರಯಾನ್ ಪಾರ್ಕಿನ್ಸನ್‌ನ ಮೇಲ್ವಿಚಾರಕರು ಹೇಳಿದಾಗ ಅವರು ಐಜಿ ಸಂಸ್ಥೆ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದರು. ಪ್ರಕರಣ ದಾಖಲಿಸಿದ ಅವರು ತನ್ನ ವಿರುದ್ಧ ಸಂಸ್ಥೆ, ವರ್ಣಭೇದ ನೀತಿ ಹಾಗೂ ಕಿರುಕುಳ ಹಾಗೂ ತಾರತಮ್ಯ ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ ವರ್ಣಬೇಧ ಆರೋಪವನ್ನು ಕೋರ್ಟ್ ವಜಾಗೊಳಿಸಿದೆ.
ನ್ಯಾಯಾಧೀಶ ಸ್ಟೀಫನ್ ವೌಲ್ಸ್ (Stephen Vowles) ನೀಡಿದ ತೀರ್ಪಿನಲ್ಲಿ, ಪಾರ್ಕಿನ್ಸನ್ ಆರೋಪ ಮತ್ತು ಅವರ ಟ್ರೇಡ್ ಯೂನಿಯನ್ ಪ್ರತಿನಿಧಿಗಳ ಸಮರ್ಥನೆಗಳನ್ನು ತನಿಖೆ ಮಾಡಲು GI ಗ್ರೂಪ್ ವಿಫಲವಾಗಿದೆ. ವಿರಾಮದ ಸಮಯದಲ್ಲಿ ಈ ರೀತಿ ಎಲ್ಲರೂ ಮಾಡುತ್ತಾರೆ. ಆದ್ದರಿಂದ ಬಿಎಂಡಬ್ಲ್ಯು ಕಾರ್ಖಾನೆಯೂ ಕೆಲಸಗಾನಿಗೆ ಇದುವರೆಗೆ ಪಾವತಿಸದ ವೇತನ ಮತ್ತು ಪರಿಹಾರ ಸೇರಿ 17 ಲಕ್ಷ ರೂಪಾಯಿ ನೀಡುವಂತೆ ಆದೇಶಿಸಿದ್ದಾರೆ.