
ಇಂಪಾಲ(n.29): ಭಾರತೀಯ ರೈಲ್ವೆ ಇಲಾಖೆಯೂ ಜಗತ್ತಿನ ಅತ್ಯಂತ ದೊಡ್ಡ ರೈಲ್ವೆ ಸೇತುವೆಯ ಕಂಬವನ್ನು ಮಣಿಪುರ(Manipur)ದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ. ಇದು 111 ಕಿ.ಮೀ. ಉದ್ದದ ಜಿರಿಬಮ್(Jiribam)-ಇಂಪಾಲ(Imphal) ರೈಲ್ವೆ ಪ್ರಾಜೆಕ್ಟ್ ಆಗಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಯೂ ಮಣಿಪುರದ ರಾಜಧಾನಿಯನ್ನು ದೇಶದ ರೈಲ್ವೆಯ ಬ್ರಾಡ್‌ಗೇಜ್ ಜಾಲದೊಂದಿಗೆ ಸೇರಿಸುತ್ತದೆ. ಈ ಸೇತುವೆಗಾಗಿ 141 ಮೀಟರ್ ಎತ್ತರದ ಪಿಲ್ಲರ್ ನಿರ್ಮಾಣವಾಗಲಿದೆ. ಇದರಿಂದ ಇದು ಜಗತ್ತಿನ ಅತ್ಯಂತ ಎತ್ತರದ ರೈಲ್ವೆ ಸೇತುವೆಯಾಗಲಿದೆ. ಯುರೋಪ್(Europe)ನ ಮಪಂಟೆನಿಗ್ರೋದಲ್ಲಿ ಇರುವ ಮಾಲಾ-ರಿಜೆಕಾ(Mala - Rijeka)ರೈಲು ಮಾರ್ಗವೂ 139 ಮೀಟರ್ ಉದ್ದವನ್ನು ಹೊಂದಿದ್ದು, ಇದುವರೆಗೂ ಜಗತ್ತಿನ ಅತ್ಯಂತ ಎತ್ತರದ ಸೇತುವೆ ಎಂದು ಅದು ಖ್ಯಾತಿ ಗಳಿಸಿತ್ತು. ಆದರೆ ಈಗ ಭಾರತದ ಮಣಿಪುರದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ 141 ಮೀಟರ್ ಎತ್ತರದ್ದಾಗಿದ್ದು, ಯುರೋಪ್‌ನ ಮಾಲಾ-ರಿಜೆಕಾ ರೈಲು ಮಾರ್ಗದ ದಾಖಲೆಯನ್ನು ಇದು ಬದಿಗೆ ಸರಿಸಲಿದೆ.
ಈ ರೈಲ್ವೆ ಸೇತುವೆ ನಿರ್ಮಾಣವಾದರೆ 111 ಕಿ.ಮೀ ದೂರವನ್ನು 2 ರಿಂದ ಎರಡೂವರೆ ಗಂಟೆ ಅಂತರದಲ್ಲಿ ಕ್ರಮಿಸಬಹುದಾಗಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 37(NH 37)ರಲ್ಲಿ ಬರುವ ಜಿರಿಬಮ್ ಹಾಗೂ ಇಂಪಾಲ್ ನಡುವಿನ ಅಂತರ 220 ಕಿ.ಮೀ. ಆಗಿದ್ದು, ಇಲ್ಲಿನ ರಸ್ತೆಗಳು ಸಂಪೂರ್ಣ ತಿರುವುಗಳನ್ನೇ ಹೊಂದಿರುವುದರಿಂದ ಈ ದೂರವನ್ನು ಪ್ರಯಾಣಿಸಲು ಬರೋಬರಿ10ರಿಂದ 12 ಗಂಟೆಗಳ ಅವಧಿ ಬೇಕು. ಆದರೆ ಈಗ ರೈಲ್ವೆ ಸೇತುವೆ ನಿರ್ಮಾಣವಾದಲಿ ಕನಿಷ್ಠ 2 ಗಂಟೆಯಲ್ಲಿ ಈ ದೂರವನ್ನು ಕ್ರಮಿಸಬಹುದಾಗಿದೆ. ಈ ಸೇತುವೆಯ ನಿರ್ಮಾಣ ಕಾರ್ಯ 2023ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. 111 ಕಿ.ಮೀ. ಉದ್ದದ ಈ ಯೋಜನೆಯ ಶೇ.60ರಷ್ಟು ಸುರಂಗಗಳೇ ಇವೆ. ಈ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಕಾರ ಈ ಸೇತುವೆಗಾಗುವ ನಿರೀಕ್ಷಿತ ವೆಚ್ಚ 374 ಕೋಟಿ ಎಂದು ಅಂದಾಜಿಸಲಾಗಿದೆ.
Rampath Yatra Express... ಪುಣೆಯಿಂದ ರಾಮ ಜನ್ಮಸ್ಥಾನ ಆಯೋಧ್ಯೆಗೆ ವಿಶೇಷ ರೈಲು....
ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ನೋನಿ ಕಣಿವೆಯನ್ನು ದಾಟುವ ಈ ಸೇತುವೆಯು ವಿಶ್ವದ ಅತಿ ಎತ್ತರದ ಕಂಬವಿರುವ ಸೇತುವೆಯಾಗಲಿದೆ ಎಂದು ಯೋಜನೆಯ ಮುಖ್ಯ ಇಂಜಿನಿಯರ್ ಸಂದೀಪ್ ಶರ್ಮಾ ತಿಳಿಸಿದರು.
Super Special: ರೈಲಿನಿಂದ ಬಿದ್ದಾಕೆಯನ್ನು ರಕ್ಷಿಸಿದ RPF ಲೇಡಿ ಸಿಂಗಂ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ