ಮುಖೇಶ್ ಅಂಬಾನಿ ಒಡೆತನದ ಆಂಟಿಲಿಯಾ ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಾಗಿದ್ದು, 15000 ಕೋಟಿ ರೂ. ಮೌಲ್ಯ ಹೊಂದಿದೆ. ಆದರೆ ಭಾರತದ ಅತ್ಯಂತ ದೊಡ್ಡ ಖಾಸಗಿ ನಿವಾಸ ಬೇರೆಯೇ ಇದೆ. 828,821 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮನೆ 24,000 ಕೋಟಿ ರೂ. ಮೌಲ್ಯ ಹೊಂದಿದೆ.
ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾದ ಆಂಟಿಲಿಯಾ ಉದ್ಯಮಿ ಮುಖೇಶ್ ಅಂಬಾನಿ ಒಡೆತನದಲ್ಲಿದೆ ಇದರ ಮೌಲ್ಯ 15000 ಕೋಟಿ ರೂ. ಆದರೆ ವಿಶ್ವದ ಅತ್ಯಂತ ಬೃಹತ್ ಖಾಸಗಿ ನಿವಾಸ ಕೂಡ ಭಾರತದಲ್ಲಿದೆ. ಇದೂ ಸೇರಿದಂತೆ ಭಾರತವು ಕೆಲವು ಸೊಗಸಾದ ಕಟ್ಟಡಗಳಿಗೆ ನೆಲೆಯಾಗಿದೆ. ಆಂಟಿಲಿಯಾಕ್ಕಿಂತಲೂ ಅತಿದೊಡ್ಡ ಖಾಸಗಿ ನಿವಾಸ ಭಾರತದಲ್ಲಿರುವುದು ಯಾವುದು ಎಂದು ನೀವು ಆಶ್ಚರ್ಯ ವ್ಯಕ್ತಪಡಿಸಬಹುದು.
ಆದರೆ ಆಂಟಿಲಿಯಾವು 48,780 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದರೆ, ಭಾರತದಲ್ಲಿರುವ ಈ ಖಾಸಗಿ ಮನೆಯು ಇದಕ್ಕಿಂತಲೂ ಹೆಚ್ಚು ವಿಸ್ತೀರ್ಣತೆ ಹೊಂದಿದೆ. ಅಂದರೆ ಇದು 828,821 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಮಾತ್ರವಲ್ಲ ಇದೊಂದು ಪಾರಂಪರಿಕ, ಐತಿಹಾಸಿಕ ಖಾಸಗಿ ನಿವಾಸ ಇದರ ಈಗಿನ ಮೌಲ್ಯ 24,000 ಕೋಟಿ. ಇದು 700 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.
ಬೆಂಗಳೂರು ಎಷ್ಟು ಸೇಫ್, ಊರು ಬಿಟ್ಟು ಅಮೆರಿಕ ಸೇರಿದ್ದಕ್ಕೆ 4 ಕಾರಣ ಕೊಟ್ಟ ಮಹಿಳೆ!
1890 ರಲ್ಲಿ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ III ಅವರು 27 ಲಕ್ಷ ವೆಚ್ಚದಲ್ಲಿ ಕಟ್ಟಿಸಿದರು. ಆ ಕಾಲದ ಶ್ರೇಷ್ಠ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ಮೇಜರ್ ಚಾರ್ಲ್ಸ್ ಮಾಂಟ್ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪದಲ್ಲಿ ಇದನ್ನು ವಿನ್ಯಾಸಗೊಳಿಸಿದ್ದಾರೆ. ಇದು ಪ್ರಪಂಚದ ಇತರ ಐತಿಹಾಸಿಕ ಕಟ್ಟಡಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ಬಣ್ಣದ ಗಾಜುಗಳನ್ನು ಹೊಂದಿದೆ. ಹೆಚ್ಚಿನವು ಬೆಲ್ಜಿಯಂನಿಂದ ತರಲ್ಪಟ್ಟಿವೆ. ಅಮೃತಶಿಲೆ, ಹಳೆಯ ಶಸ್ತ್ರಾಸ್ತ್ರ, ಶಿಲ್ಪಗಳು ನೀರಿನ ಕಾರಂಜಿ ಇತ್ಯಾದಿಗಳನ್ನು ಹೊಂದಿದೆ.
ಇದು ಸ್ವಂತ ರೈಲು ಮಾರ್ಗವನ್ನು ಹೊಂದಿದೆ. ಅಂದಿನ ಕಾಲದಲ್ಲೇ ಈ ಕಟ್ಟಡಕ್ಕೆ ಲಿಫ್ಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಆವಾಗ ಲಿಫ್ಟ್ ಅಪರೂಪವಾಗಿತ್ತು. 170 ಕೊಠಡಿಗಳನ್ನು ಈ ಖಾಸಗಿ ನಿವಾಸವು ಹೊಂದಿದೆ. ಹಲವಾರು ವಿಶೇಷತೆಗಳನ್ನು ಹೊಂದಿರು ಈ ಖಾಸಗಿ ವಿಲ್ಲಾ ಬರೋಡಾದ ಮರಾಠ ರಾಜಮನೆತನದ ವಾಸಸ್ಥಾನ ಲಕ್ಷ್ಮಿ ವಿಲಾಸ್ ಅರಮನೆ. ಇದು ಬ್ರಿಟಿಷ್ ರಾಜವಂಶದ ಪ್ರಧಾನ ನಿವಾಸ ಬಕಿಂಗ್ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ.
ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ, ಇಂದಿನಿಂದ ನಾಗಸಂದ್ರ-ಮಾದವಾರ ಟ್ರಯಲ್ ರನ್
ಅರಮನೆಯ ಒಳಭಾಗವು ಅತ್ಯುತ್ತಮವಾದ ಮೊಸಾಯಿಕ್ಸ್ ಮತ್ತು ಅಮೂಲ್ಯ ಕಲಾಕೃತಿಗಳಿಂದ ತುಂಬಿದೆ. 1930 ರ ದಶಕದಲ್ಲಿ ಮಹಾರಾಜ ಪ್ರತಾಪ್‌ಸಿಂಹ ಯುರೋಪಿಯನ್ ಅತಿಥಿಗಳಿಗಾಗಿಅರಮನೆಯ ಮೈದಾನದಲ್ಲಿ ಗಾಲ್ಫ್ ಕೋರ್ಸ್ ನಿರ್ಮಾಣ ಮಾಡಿದ್ದನು. ಇಲ್ಲಿ ವಸ್ತುಸಂಗ್ರಹಾಲಯ ಕಟ್ಟಡವಿದ್ದು, ರಾಜಾ ರವಿ ವರ್ಮಾನ ಅಪರೂಪದ ವರ್ಣಚಿತ್ರಗಳು ಇಲ್ಲಿದೆ. ಈ ಕಟ್ಟಡವನ್ನು ರಾಜಮನೆತನದ ಮಕ್ಕಳ ಶಾಲೆಯಾಗಿ ಬಳಸಲಾಗುತ್ತಿತ್ತು. ಇಲ್ಲಿ ಒಂದು ಚಿಕ್ಕ ರೈಲು ಮಾರ್ಗ ಕೂಡ ಇದೆ. ಈ ರೈಲು ಮಾರ್ಗವು ಶಾಲೆ ಮತ್ತು ಅರಮನೆಗೆ ಸುಲಭ ಸಂಪರ್ಕವಾಗಿತ್ತು.
ಮಾಜಿ ರಣಜಿ ಟ್ರೋಫಿ ಆಟಗಾರ ಸಮರ್ಜಿತ್ ಸಿಂಗ್ (ಮಹಾರಾಜ ಪ್ರತಾಪ್‌ಸಿಂಹ ಮೊಮ್ಮಗ) ಅರಮನೆಯನ್ನು ನವೀಕರಣ ಮಾಡಿ, ಸಾರ್ವಜನಿಕರಿಗೆ ನೋಡಲು ಅವಕಾಶ ಮಾಡಿ ಕೊಟ್ಟರು. ಮರಾಠಾ ಸಾಮ್ರಾಜ್ಯ ಪಶ್ಚಿಮ ಭಾರತದಲ್ಲಿ ಬರೋಡಾದ ರಾಜಮನೆತನವನ್ನು ಗಾಯಕ್ವಾಡ್ಸ್ ಎಂದು ಕರೆಯಲಾಗುತ್ತಿತ್ತು. 18 ನೇ ಶತಮಾನದ ಆರಂಭದಿಂದ ಸ್ವಾತಂತ್ರ್ಯದವರೆಗೆ ಬರೋಡಾದ ಮಹಾರಾಜ ಗಾಯಕ್ವಾಡ್ ಆಗಿ ಅಧಿಕಾರವನ್ನು ಹೊಂದಿದ್ದರು. ಬ್ರಿಟಿಷ್ ಇಂಡಿಯಾ ಬಿಟ್ಟರೆ ದೇಶದ ಅತಿದೊಡ್ಡ ಮತ್ತು ಶ್ರೀಮಂತ ರಾಜಪ್ರಭುತ್ವದ ರಾಜ್ಯಗಳಲ್ಲಿ ಗಾಯಕ್ವಾಡ್ಸ್ ಆಡಳಿತ ಕೂಡ ಒಂದಾಗಿತ್ತು.
ಅರಮನೆಯ ಆವರಣವು ಮೋತಿ ಬಾಗ್ ಅರಮನೆ, ಮಹಾರಾಜ ಫತೇ ಸಿಂಗ್ ಮ್ಯೂಸಿಯಂ ಕಟ್ಟಡ ಮತ್ತು ಐಷಾರಾಮಿ LVP ಔತಣಕೂಟ, ಸಮಾವೇಶದ ಹಾಲ್ ಸೇರಿದಂತೆ ಹಲವಾರು ಕಟ್ಟಡಗಳನ್ನು ಒಳಗೊಂಡಿದೆ. ಮೋತಿ ಬಾಗ್ ಕ್ರಿಕೆಟ್ ಮೈದಾನವು ಇಲ್ಲಿಯ ವಸ್ತುಸಂಗ್ರಹಾಲಯದ ಪಕ್ಕದಲ್ಲಿದೆ ಜೊತೆಗೆ ಪ್ರಸಿದ್ಧ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಕಚೇರಿ ಕೂಡ ಇಲ್ಲಿದ್ದು ಗೌರವವನ್ನು ಹೊಂದಿದೆ. ಈ ರಾಜವಂಶಕ್ಕೆ ವಡೋದರದ ಜನರು ಹೆಚ್ಚಿನ ಗೌರವ ನೀಡುತ್ತಾರೆ. ಐತಿಹಾಸಿಕ ಪ್ರಾಮುಖ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿರುವ ಈ ಅರಮನೆಯಲ್ಲಿ ಈಗ HRH ಸಮರ್ಜಿತ್ ಸಿಂಗ್ ಗಾಯಕ್ವಾಡ್, ಅವರ ಪತ್ನಿ ರಾಧಿಕರಾಜೆ ಗಾಯಕ್ವಾಡ್ ಮತ್ತು ಅವರ ಇಬ್ಬರು ಪುತ್ರಿಯರು ನೆಲೆಸಿದ್ದಾರೆ.