ಮಾರ್ಚ್ 28, 2022 ರ ರಾತ್ರಿ, ಗ್ಯಾಂಗ್‌ಸ್ಟರ್ - ರಾಜಕಾರಣಿ ಅತೀಕ್ ಅಹ್ಮದ್ ಅವರ ಸಹೋದರ ಅಶ್ರಫ್ ತನ್ನನ್ನು 2 ವಾರಗಳಲ್ಲಿ ಕೊಲ್ಲಲಾಗುವುದು ಎಂದು ಹೇಳಿದ್ದರು. ಇನ್ನೆರಡು ವಾರಗಳಲ್ಲಿ ಜೈಲಿನಿಂದ ಹೊರಗೆ ಕರೆದುಕೊಂಡು ಹೋಗಿ ಸಾಯಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದರು ಎಂದು ಅಶ್ರಫ್ ಹೇಳಿಕೊಂಡಿದ್ದರಂತೆ.
ಪ್ರಯಾಗ್‌ರಾಜ್ (ಏಪ್ರಿಲ್ 17, 2023): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಶನಿವಾರ ರಾತ್ರಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹಾಗೂ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಕೊಲೆ ಮಾಡಲಾಗಿತ್ತು. ಪತ್ರಕರ್ತರ ಸೋಗಿನಲ್ಲಿ ಕ್ರಿಮಿನಲ್‌ಗಳು ಇವರನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದ್ದು, ಮೂವರು ಆರೋಪಿಗಳನ್ನು ಕೊಲೆ ಮಾಡಲಾಗಿದೆ. ಆದರೆ, ಕೊಲೆಯಾದ ಡಾನ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಅವರ ಸಹೋದರ ಅಶ್ರಫ್‌ಗೆ ತಾನು ಹತ್ಯೆಯಾಗುವ ಬಗ್ಗೆ ಕೆಲ ದಿನಗಳ ಹಿಂದೆಯೇ ಮಾಹಿತಿ ಇತ್ತು ಎಂದು ಹೇಳಲಾಗಿದೆ.
ಮಾರ್ಚ್ 28, 2022 ರ ರಾತ್ರಿ, ಗ್ಯಾಂಗ್‌ಸ್ಟರ್ - ರಾಜಕಾರಣಿ ಅತೀಕ್ ಅಹ್ಮದ್ ಅವರ ಸಹೋದರ ಅಶ್ರಫ್ ತನ್ನನ್ನು 2 ವಾರಗಳಲ್ಲಿ ಕೊಲ್ಲಲಾಗುವುದು ಎಂದು ಹೇಳಿದ್ದರು. ಇನ್ನೆರಡು ವಾರಗಳಲ್ಲಿ ಜೈಲಿನಿಂದ ಹೊರಗೆ ಕರೆದುಕೊಂಡು ಹೋಗಿ ಸಾಯಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದರು ಎಂದು ಅಶ್ರಫ್ ಹೇಳಿಕೊಂಡಿದ್ದರಂತೆ.
ಇದನ್ನು ಓದಿ: ದೊಡ್ಡ ಡಾನ್ ಆಗಲು ದೊಡ್ಡ ತಲೆಯನ್ನೇ ತೆಗೆಯಬೇಕೆಂದು ಯುಪಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹತ್ಯೆ!
ಆತನ ಹೇಳಿಕೆಯಂತೆ 2 ವಾರದಲ್ಲಿ, ಅಂದರೆ ಶನಿವಾರ ರಾತ್ರಿ, ಮಾಧ್ಯಮ ಸಂವಾದ ನಡೆಯುತ್ತಿದ್ದ ವೇಳೆ ಪತ್ರಕರ್ತರ ಸೋಗಿನಲ್ಲಿದ್ದ ಮೂವರು ವ್ಯಕ್ತಿಗಳು ಅತೀಕ್ ಮತ್ತು ಅಶ್ರಫ್ ಅವರನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಇಲ್ಲಿನ ವೈದ್ಯಕೀಯ ಕಾಲೇಜಿಗೆ ತಪಾಸಣೆಗಾಗಿ ಪೊಲೀಸ್ ಸಿಬ್ಬಂದಿ ಅವರನ್ನು ಕರೆದೊಯ್ಯುತ್ತಿದ್ದಾಗ ಅವರು ಮೃತಪಟ್ಟಿದ್ದರು.
ಕಳೆದ ತಿಂಗಳು, 2006 ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅಶ್ರಫ್‌ನನ್ನು ಉತ್ತರ ಪ್ರದೇಶದ ಬರೇಲಿ ಜೈಲಿಗೆ ಸ್ಥಳಾಂತರಿಸಲಾಯಿತು. ಬಳಿಕ, ಅಶ್ರಫ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದರೆ, ಅತೀಕ್‌ರನ್ನು ದೋಷಿ ಎಂದು ಘೋಷಿಸಲಾಯಿತು.
ಇದನ್ನೂ ಓದಿ: ಅತೀಕ್ ಅಹ್ಮದ್ ಹತ್ಯೆ ಕೇಸ್: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ
'ನಾನು 2 ವಾರಗಳಲ್ಲಿ ಕೊಲ್ಲಲ್ಪಡುತ್ತೇನೆ'
ಯಾವುದೋ ಕಾರಣದ ನೆಪದಲ್ಲಿ ನಿನ್ನನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಹೋಗಿ ಕೊಲ್ಲಲಾಗುವುದು ಎಂದು ಹೇಳಲಾಗಿತ್ತು. ನನಗೆ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿಯ ಹೆಸರನ್ನು ನಾನು ಬಹಿರಂಗಪಡಿಸಲಾರೆ. ಪಿತೂರಿ ನಡೆದಿದೆ. ನನ್ನ ಕುಟುಂಬದ ವಿರುದ್ಧ ಈ ಕೃತ್ಯ ಎಸಗಲಾಗಿದೆ. ಅಲ್ಲದೆ, ಇದು ಉತ್ತರ ಪ್ರದೇಶ ಸರ್ಕಾರದ ಮಾನಹಾನಿ ಮಾಡುವ ಷಡ್ಯಂತ್ರವಾಗಿದೆ. ಈಗಾಗಲೇ ಯುಪಿ ಸಿಎಂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ನಕಲಿ ಎನ್‌ಕೌಂಟರ್ ಪ್ರಕರಣಗಳ ಆರೋಪವಿದೆ, ಆದ್ದರಿಂದ ಅವರು ನನ್ನ ನೋವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಅಶ್ರಫ್ ಹೇಳಿದ್ದರು ಎಂದು ತಿಳಿದುಬಂದಿದೆ.
ಅಲ್ಲದೆ, “ನನ್ನ ಹತ್ಯೆಯ ನಂತರ ಸೀಲ್ ಮಾಡಿದ ಲಕೋಟೆಯು ಪ್ರಯಾಗ್‌ರಾಜ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ತಲುಪುತ್ತದೆ. ನಾನು ನಿಮಗೆ ಮಾಫಿಯಾದಂತೆ ಕಾಣುತ್ತಿದ್ದೇನೆಯೇ? ಕಳೆದ ಮೂರು ವರ್ಷಗಳಿಂದ ನಾನು ಜೈಲಿನಲ್ಲಿ ಇದ್ದೇನೆ, ನಾನು ಒಮ್ಮೆ ಶಾಸಕನಾಗಿದ್ದೆ. ನಾನು ಜೈಲಿನಲ್ಲಿದ್ದಾಗ ಸಂಚು ರೂಪಿಸಲು ಹೇಗೆ ಸಾಧ್ಯ ಎಂದು ಮಾಧ್ಯಮದವರ ಕೆಲವು ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮಾಫಿಯಾ ಗಡಗಡ, ಪೊಲೀಸ್ ಕಸ್ಟಡಿಯಲ್ಲಿದ್ದ ಅತೀಕ್ ಅಹಮ್ಮದ್ ಹತ್ಯೆ!
ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ ಅತೀಕ್ ಅಹ್ಮದ್ ಪತ್ನಿ ಶೈಸ್ತಾ ಪರ್ವೀನ್ ಬಗ್ಗೆಯೂ ಅಶ್ರಫ್ ಮಾತನಾಡಿದ್ದರು. ಹಾಗೆ, ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ತನ್ನ ಕೈವಾಡವಿಲ್ಲ. ಜೈಲಿನಲ್ಲಿ ನಿರಂತರವಾಗಿ ನಿಗಾ ಇಡುತ್ತಿರುವಾಗಲೇ ಕೊಲೆಯ ಯೋಜನೆ ಮಾಡಲು ಸಾಧ್ಯವಿಲ್ಲ ಎಂದೂ ಅಶ್ರಫ್ ಹೇಳಿದ್ದರು.
"ಮೈನ್ ಬಾತ್ ಯೇ ಹೈ ಕಿ ಗುಡ್ಡು ಮುಸ್ಲಿಂ..." ಎಂದು ಹೇಳುವಷ್ಟರಲ್ಲಿ ಅತೀಕ್ ಅಹ್ಮದ್ ತಲೆಗೆ ಗುಂಡು ತಗುಲಿದ್ದರಿಂದ ಅಶ್ರಫ್ ತನ್ನ ಹೇಳಿಕೆಯನ್ನು ಮುಗಿಸಲು ಸಾಧ್ಯವಾಗಲಿಲ್ಲ. ಬಳಿಕ ಮುಂದಿನ ಗುಂಡು ಅಶ್ರಫ್ ಮೇಲೆ ಬಿತ್ತು ಮತ್ತು ಅವರು ಗುಡ್ಡು ಮುಸ್ಲಿಂ ಬಗ್ಗೆ ಏನು ಬಹಿರಂಗಪಡಿಸಲು ಹೊರಟಿದ್ದರು ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ: ಫೇಕ್ ಐಡಿಕಾರ್ಡ್, ಕ್ಯಾಮರಾ ಹಿಡಿದುಕೊಂಡು ಇಡೀ ದಿನ ಅತೀಕ್ ಹಿಂಬಾಲಿಸಿದ್ದ ದಾಳಿಕೋರರು!