Receptionist Murder Case ಬಂಧಿತ ಬಿಜೆಪಿ ನಾಯಕನ ಪುತ್ರನ ರೆಸಾರ್ಟ್ ಧ್ವಂಸಕ್ಕೆ ಸಿಎಂ ಆದೇಶ!

By Suvarna News  |  First Published Sep 24, 2022, 3:51 PM IST

ಉತ್ತರಖಂಡದಲ್ಲಿ ಬಿಜೆಪಿ ಮುಖಂಡನ ಪುತ್ರನಿಗೆ ಸೇರಿದ ಹೊಟೆಲ್‌ನಲ್ಲಿದ್ದ 19 ವರ್ಷದ ಹೊಟೆಲ್ ರೆಸಪ್ಶನಿಸ್ಟ್ ಹತ್ಯೆ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಘಟನೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಬಿಜೆಪಿ ಮುಖಂಡನ ಪುತ್ರನ ಹೋಟೆಲ್ ಹಾಗೂ ಧ್ವಂಸ ಮಾಡಲು ಸಿಎಂ ಆದೇಶಿಸಿದ್ದಾರೆ. 
 


ರಿಷಿಕೇಶಿ(ಸೆ.24):  ಬಿಜೆಪಿ ಮುಖಂಡನ ಪುತ್ರನ ಹೊಟೆಲ್ ಹಾಗೂ ರೆಸಾರ್ಟ್‌ನಲ್ಲಿ ರೆಸೆಪ್ಶನಿಸ್ಟ್ ಆಗಿದ್ದ 19ರ ಹರೆಯದ ಯುವತಿ ಹತ್ಯೆ ಪ್ರಕರಣ ಉತ್ತರಖಂಡದಲ್ಲಿ ಭಾರಿ ಪ್ರತಿಭಟನೆಗೆ ಕಾರಣಾಗಿದೆ. ಉತ್ತರ ಪ್ರದೇಶ ಬಿಜೆಪಿ ನಾಯಕನ ಪುತ್ರನಿಗೆ ಸೇರಿದ್ದ ಹೊಟೆಲ್‌ನಲ್ಲಿ ರೆಸೆಪ್ಶನಿಸ್ಟ್ ಆಗಿದ್ದ 19ರ ಯುವತಿಯನ್ನು ಹತ್ಯೆ ಮಾಡಿದ ಆರೋಪದಡಿ ಬಿಜೆಪಿ ಮುಖಂಡ ಪುಲ್ಕಿತ್ ಆರ್ಯನನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಈ ಘಟನೆ ಉತ್ತರಖಂಡ ಬಿಜೆಪಿ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ. ಇದರ ಬೆನ್ನಲ್ಲೇ ಉತ್ತರಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ ಮಹತ್ವದ ಆದೇಶ ನೀಡಿದ್ದಾರೆ. ಬಿಜೆಪಿ ಮುಖಂಡನ ಪುತ್ರ ಪುಲ್ಕಿತ್ ಆರ್ಯಗೆ ಸೇರಿದ್ದ  ಹೊಟೆಲ್ ಧ್ವಂಸಕ್ಕೆ ಧಮಿ ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ಹೊಟೆಲ್ ಹಾಗೂ ರೆಸಾರ್ಟ್ ಧ್ವಂಸಗೊಳಿಸಲಾಗಿದೆ. ಇಷ್ಟೇ ಅಲ್ಲ ಉತ್ತರಖಂಡದಲ್ಲಿನ ಅಕ್ರಮ ಹೊಟೆಲ್ ಹಾಗೂ ರೆಸಾರ್ಟ್ ಧ್ವಂಸಕ್ಕೆ ಪುಷ್ಕರ್ ಸಿಂಗ್ ಧಮಿ ಆದೇಶಿಸಿದ್ದಾರೆ. 

ಉತ್ತರಖಂಡದ(Uttarkhand) ರಿಷಿಕೇಶಿಯ ಪೌರಿ ಜಿಲ್ಲೆಯಲ್ಲಿರುವ ಪುಲ್ಕಿತ್ ಆರ್ಯಗೆ(Pukit Arya) ಸೇರಿದ ರೆಸಾರ್ಟ್‌ನಲ್ಲಿ 19ರ ಹರೆಯದ ಯುವತಿ ರಿಸೆಪ್ಶನಿಸ್ಟ್ ಆಗಿದ್ದಳು(Murder). ಪುಲ್ಕಿತ್ ಆರ್ಯ ಹಾಗೂ ಇತರ ಮೂವರು ಸಹಚರರ ಜೊತೆ ಸೇರಿ ಯುವತಿನ್ನು ಹತ್ಯೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಯುವತಿ ಕಾಣೆಯಾದ ಬೆನ್ನಲ್ಲೇ ಪೋಷಕರು ದೂರು ದಾಖಲಿಸಿದ್ದರು. ತನಿಖೆಯಲ್ಲಿ ಯುವತಿಯನ್ನು ಹತ್ಯೆ ಮಾಡಿರುವುದು ಬಯಲಾಗಿದೆ. ಬಳಿಕ ರೆಸಾರ್ಟ್(Resort) ಬಳಿ ಇರುವ ನೀರನ ಕಾಲುವೆಯಲ್ಲಿ ಎಸೆದಿರುವುದು ಬೆಳಕಿಗೆ ಬಂದಿದೆ. ಇದೀಗ ಯುವತಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆ ಉತ್ತರಖಂಡ ಬಿಜೆಪಿ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿತ್ತು.  ಬಿಜೆಪಿ ನಾಯಕ(BJP leader) ವಿನೋದ್ ಆರ್ಯ ಪುತ್ರನ ರೆಸಾರ್ಟ್ ಆಗಿರುವ ಕಾರಣ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆರೋಪಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಅನ್ನೋ ಆರೋಪೂ ಕೇಳಿಬಂದಿತ್ತು.  

Tap to resize

Latest Videos

Uttarakhand CM ಸೋತರೂ ಪುಷ್ಕರ್ ಸಿಂಗ್ ಧಾಮಿಗೆ ಉತ್ತರಖಂಡ ಸಿಎಂ ಪಟ್ಟ, ಇದಕ್ಕಿದೆ 5 ಕಾರಣ!

ಆದರೆ ಈ ಕುರಿತು ಖಡಕ್ ನಿರ್ಧಾರ ತೆಗೆದುಕೊಂಡ ಸಿಎಂ ಪುಷ್ಕರ್ ಸಿಂಗ್ ಧಮಿ(CM pushkar singh dhami), ತಕ್ಷಣವೇ ತಮ್ಮ ಪಕ್ಷದ ನಾಯಕ ಪುತ್ರನ ರೆಸಾರ್ಟ್ ಕೆಡವಲು ಆದೇಶ ನೀಡಿದ್ದಾರೆ. ಈಗಾಗಲೇ ರೆಸಾರ್ಟ್ ಹಾಗೂ ಹೊಟೆಲ್ ಮೇಲೆ ಜೆಸಿಬಿ ಸವಾರಿ ಮಾಡಿದೆ. ಇಷ್ಟೇ ಅಲ್ಲ ಅಕ್ರಮ ಹೊಟೆಲ್ ಹಾಗೂ ರೆಸಾರ್ಟ್ ಧ್ವಂಸಕ್ಕೆ ಧಮಿ ಆದೇಶ ನೀಡಿದ್ದಾರೆ. ಯಾರನ್ನು ರಕ್ಷಿಸುವ ಪ್ರಶ್ನೆ ಇಲ್ಲ. ನಮ್ಮ ಪಕ್ಷದ ನಾಯಕರೇ ಆಗಿರಬಹುದು. ಎಷ್ಟೇ ಪ್ರಭಾವಿಗಳು ಆಗಿರಬಹುದು. ಎಲ್ಲರಿಗೂ ಒಂದೇ ನಿಯಮ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ಯುವತಿ ಕಟುಂಬಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ಪುಷ್ಕರ್ ಸಿಂಗ್ ಧಮಿ ಧಮಿ ಎಚ್ಚರಿಸಿದ್ದಾರೆ.

ವಿನೋದ್ ಆರ್ಯ ಬಿಜೆಪಿ ಸದಸ್ಯರಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ವಿನೋದ್ ಆರ್ಯ ಮೇಲೂ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಪಕ್ಷದಿಂದ ವಿನೋದ್ ಆರ್ಯನನ್ನು ಉಚ್ಚಾಟಿಸಲಾಗಿದೆ. ಉತ್ತರಖಂಡ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯ ಜವಾಬ್ದಾರಿ ನೀಡಿದೆ. 

Uttarakhand Elections 2022: ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ: ಸಿಎಂ ಪುಷ್ಕರ್ ಸಿಂಗ್ ಧಾಮಿ!

ಇದೀಗ ಧಮಿ ಆದೇಶದ ಬಳಿಕ ಉತ್ತರಖಂಡದಲ್ಲಿ ಅನಧಿಕೃತ ಹಾಗೂ ಅಕ್ರಮವಾಗಿ ತಲೆ ಎತ್ತಿರುವ ಹಲವು ಹೊಟೆಲ್ ಹಾಗೂ ರೆಸಾರ್ಟ್ ಮೇಲೆ ಪೊಲೀಸರು ಜೆಸಿಬಿಯೊಂದಿಗೆ ದಾಳಿ ಮಾಡುತ್ತಿದ್ದಾರೆ. ನೋಟಿಸ್ ನೀಡುವ ಮೂಲಕ ನೇರವಾಗಿ ದಾಳಿ ಮಾಡಿ ಹೊಟೆಲ್ ಧ್ವಂಸಗೊಳಿಸುವ ಕಾರ್ಯದಲ್ಲಿ ಅಧಿಕಾರಿಗಳ ತಂಡ ನಿರತವಾಗಿದೆ.

click me!