ಉದಯ್‌ಪುರ ಹಿಂದೂ ಯುವಕನ ಹತ್ಯೆ, ಮೋದಿ ಶಾ ರತ್ತ ಕೈತೋರಿಸಿದ ರಾಜಸ್ಥಾನ ಸಿಎಂ!

By Suvarna News  |  First Published Jun 28, 2022, 8:47 PM IST
  • ಶಾಂತಿ ಕಾಪಾಡಲು ಮೋದಿ, ಅಮಿತ್ ಶಾ ಮನವಿ ಮಾಡಬೇಕು
  • ಹಿಂದೂ ಯುವಕನ ಹತ್ಯೆ ಬಳಿಕ ಸಿಎಂ ಅಶೋಕ್ ಗೆಹ್ಲೋಟ್ ಹೇಳಿಕೆ
  • ಮೋದಿ, ಶಾ ಯಾಕೆ ಮಾತನಾಡುತ್ತಿಲ್ಲ? ರಾಜಸ್ಥಾನ ಸಿಎಂ ಪ್ರಶ್ನೆ

ಉದಯ್‌ಪುರ(ಜೂ.28): ಬಿಜೆಪಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿದ ಹಿಂದೂ ವ್ಯಕ್ತಿ ಕನ್ಹಯ್ಯ ಲಾಲ್‌ನನ್ನು ಮುಸ್ಲಿಮ್ ಯುವಕರು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜಸ್ಥಾನದ ಉದಯ್‌ಪುರದಲ್ಲಿ ಹಾಡಹಗಲೇ ಈ ಘಟನೆ ನಡೆದಿದೆ. ಈ ಘಟನೆಯಿಂದ ಉದಯ್‌ಪುರ ಉದ್ರಿಕ್ತಗೊಂಡಿದೆ. ಈ ಘಟನೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಪ್ರದಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಯಾಕೆ ಮೌನವಾಗಿದ್ದಾರೆ. ದೇಶದಲ್ಲಿ ಶಾಂತಿ ಕಾಪಾಡುವಂತೆ ಮೋದಿ ಹಾಗೂ ಶಾ ಮನವಿ ಮಾಡಬೇಕು ಎಂದು ಅಶೋಕ್ ಗೆಹ್ಲೋಟ್ ಸೂಚಿಸಿದ್ದಾರೆ.

ಇದು ದುರಾದೃಷ್ಟಕರ ಘಟನೆ, ದೇಶದಲ್ಲೇ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ದೇಶದ ಜನತೆಯಲ್ಲಿ ಮನವಿ ಮಾಡಬೇಕು. ಶಾಂತಿ ಕಾಪಾಡುವಂತೆ ಮನವಿ ಮಾಡಬೇಕು. ಇಷ್ಟೇ ಅಲ್ಲ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂಬ ಮಾತನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

Tap to resize

Latest Videos

ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಹಿಂದೂ ಯುವಕನ ತಲೆ ಕತ್ತರಿಸಿದ ಮುಸ್ಲಿಂ ಯುವಕರು, ವಿಡಿಯೋ ವೈರಲ್!

ಹಿಂದೂ ವ್ಯಕ್ತಿಯ ಹತ್ಯೆ ಮಾಡಿದ ತಪ್ಪಿತಸ್ತರನ್ನು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ನೀಡಲಾಗುವುದು. ಈ ಕುರಿತು ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. 

ಉದಯ್‌ಪುರದ ಧನ್ ಮಂಡಿ ಪೊಲೀಸ್ ವ್ಯಾಪ್ತಿಯಲ್ಲಿರುವ ಬಟ್ಟೆ ಅಂಗಡಿಗೆ ತೆರಳಿದ ಮುಸ್ಲಿಮ್ ಯುವಕರು ಬಟ್ಟೆ ಹೊಲಿಯಲು ಅಳತೆ ತೆಗೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಚಾಕುವಿನಿಂದ ಶಿರಚ್ಚೇದ ಮಾಡಿದ್ದಾರೆ. ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.ಜೊತೊಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

10 ದಿನಗಳ ಹಿಂದೆ ವ್ಯಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ನೂಪರ್ ಶರ್ಮಾ ಫೋಟೋ ಹಾಕಿಕೊಂಡಿದ್ದ. ನೂಪುರ್ ಶರ್ಮಾಗೆ ಬೆಂಬಲ ಸೂಚಿಸುವಂತಿದ್ದ ಈ ಸ್ಟೇಟಸ್‌ಗೆ ಉದಯ್‌ಪುರ್ ಮುಸ್ಲಿಮರು ಉರಿದು ಬಿದ್ದಿದ್ದಾರೆ. ಫೋನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡುವುದಾಗಿ ಎಚ್ಚರಿಸಿದ್ದರು.

ಹಿಂದೂ ಯುವಕನ ತಲೆ ಕತ್ತರಿಸಿದ ಇಬ್ಬರು ಹಂತಕರ ಬಂಧನ, ಭಾರಿ ಪ್ರತಿಭಟನೆ!

ಈ ಕುರಿತು ಆರೋಪಿಗಳ ಹೆಸರು ಸಹಿತ ಕನ್ಹಯ್ ಲಾಲ್ ಪೊಲೀಸರಿಗೆ ದೂರು ನೀಡಿದ್ದ. ಆದರೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬದಲಿಗೆ ಆರೋಪಿಗಳನ್ನು ಬಂಧಿಸುವ ಅಥವಾ ಎಚ್ಚರಿಸುವ ಪ್ರಯತ್ನಕ್ಕೆ ಹೋಗದೆ ಬದಲಾಗಿ ಕನ್ಹಯ್ಯ ಲಾಲ್‌ಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.

ಕಳೆದ ಒಂದು ವಾರದಿಂದ ಅಂಗಡಿ ತರೆಯದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕನ್ಹಯ್ಯ ಲಾಲ್, ಸೋಮವಾರ(ಜೂ.27) ಅಂಗಡಿ ತರೆದಿದ್ದ. ಇದೇ ವೇಳೆ ಮುಸ್ಲಿಮ್ ಯುವಕರು ನುಗ್ಗಿ ರುಂಡ ಕತ್ತರಿಸಿದ್ದಾರೆ. ಈ ಘಟನೆ ಖಂಡಿಸಿ ಭಾರಿ ಪ್ರತಿಭಟನೆ ಆರಂಭಗೊಂಡಿದೆ. ಉದಯ್‌ಪುರದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಉದಯ್‌ಪುರದಲ್ಲಿ 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ವಿಡಿಯೋ ಹರಿಬಿಟ್ಟರೆ ಅಥವಾ ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜಸಸ್ಥಾನ ಪೊಲೀಸ್ ಎಚ್ಚರಿಕೆ ನೀಡಿದೆ. ಈ ಘಟನೆಯಿಂದ ದೇಶದ ಹಿಂದೂಗಳಲ್ಲಿ ಆಕ್ರೋಶ ಮಡುಗಟ್ಟಿದೆ. ಕಠಿಣ ಕ್ರಮಕ್ಕೆ ಆಗ್ರಹಿಸಿ ಹೋರಾಟ ಆರಂಭಗೊಂಡಿದೆ.

click me!