Sexual assault; ಹೇಗೆ ಮೈ ಸ್ಪರ್ಶಿಸಿದರೂ ಅದು ಲೈಂಗಿಕ ದೌರ್ಜನ್ಯ, ಸುಪ್ರೀಂ ಮಹತ್ವದ ಆದೇಶ!

Published : Nov 19, 2021, 01:35 AM IST
Sexual assault; ಹೇಗೆ ಮೈ ಸ್ಪರ್ಶಿಸಿದರೂ ಅದು ಲೈಂಗಿಕ ದೌರ್ಜನ್ಯ,  ಸುಪ್ರೀಂ ಮಹತ್ವದ ಆದೇಶ!

ಸಾರಾಂಶ

ಚರ್ಮ-ಚರ್ಮ ತಾಗಿದರಷ್ಟೇ ಲೈಂಗಿಕ ದೌರ್ಜನ್ಯ ಎಂಬ ತೀರ್ಪು ರದ್ದು ಬಾಂಬೆ ಹೈಕೋರ್‌್ಟನ ತೀರ್ಪು ರದ್ದುಪಡಿಸಿ ಸುಪ್ರೀಂ ಮಹತ್ವದ ಆದೇಶ ಲೈಂಗಿಕ ದೌರ್ಜನ್ಯದಲ್ಲಿ ಲೈಂಗಿಕ ಉದ್ದೇಶವೇ ಮುಖ್ಯ ಹೇಗೆ ಮೈ ಸ್ಪರ್ಶಿಸಿದರೂ ಅದು ಲೈಂಗಿಕ ದೌರ್ಜನ್ಯ ಎಂದ ಸುಪ್ರೀಂ ಕೋರ್ಟ್  

ನವದೆಹಲಿ(ನ.19):  ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ(sexual assault) ಪ್ರಕರಣವೊಂದರಲ್ಲಿ ‘ಚರ್ಮಕ್ಕೆ ಚರ್ಮ ತಾಗಿಲ್ಲ’(skin-to-skin contact) ಎಂಬ ಕಾರಣ ನೀಡಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ(Bombay High Court) ಬಹುಚರ್ಚಿತ ವಿವಾದಿತ ತೀರ್ಪನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ‘ಪೋಕ್ಸೋ ಕಾಯ್ದೆಯಡಿ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಾಬೀತುಪಡಿಸುವಲ್ಲಿ ಆರೋಪಿಯ ಲೈಂಗಿಕ ಉದ್ದೇಶ ಮುಖ್ಯವೇ ಹೊರತು ಚರ್ಮಕ್ಕೆ ಚರ್ಮ ತಾಗುವುದಲ್ಲ’ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಗುಪ್ತಾಂಗಗಳನ್ನು ಸ್ಪರ್ಶಿಸುವುದು ಅಥವಾ ಇನ್ನಾವುದೇ ರೀತಿಯ ದೈಹಿಕ ಸ್ಪರ್ಶವು ಲೈಂಗಿಕ ಉದ್ದೇಶದಿಂದ(sexual intent) ಕೂಡಿದ್ದಾಗಿದ್ದರೆ ಅದು ಪೋಕ್ಸೋ ಕಾಯ್ದೆಯ(POCSO Act) ಸೆಕ್ಷನ್‌ 7ರಡಿ ಲೈಂಗಿಕ ದೌರ್ಜನ್ಯವಾಗುತ್ತದೆ. ಕಾಯ್ದೆಯ ಉದ್ದೇಶವು ಸ್ಪಷ್ಟವಾಗಿದ್ದು, ಅದರಲ್ಲಿ ಕೋರ್ಟ್‌ಗಳು ಗೊಂದಲ ಹುಡುಕಬಾರದು ಎಂದೂ ಸುಪ್ರೀಂಕೋರ್ಟ್‌(Supreme Court) ತಿಳಿಸಿದೆ.

ಬಟ್ಟೆ ಧರಿಸಿದ್ದಾಗ ಖಾಸಗಿ ಅಂಗ ಮುಟ್ಟಿದರೆ ಲೈಂಗಿಕ ದೌರ್ಜನ್ಯ ಅಲ್ಲ'

ನ್ಯಾಯಮೂರ್ತಿ ಯುಯು ಲಲಿತ್, ಎಸ್ ರವೀಂದ್ರ ಭಟ್, ಬೇಲಾ ತ್ರಿವೇದಿ ಒಳಗೊಂಡ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ. ಚರ್ಮಕ್ಕೆ ಚರ್ಮ ಸ್ಪರ್ಶಿಸಿದರೆ ಅನ್ನೋ ವ್ಯಾಖ್ಯಾನ ಸಂಪೂರ್ಣವಾಗಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಉದ್ದೇಶವನ್ನೇ ಮರೆ ಮಾಚುತ್ತಿದೆ. ಕೆಟ್ಟ ಉದ್ದೇಶದಿಂದ, ಕಾಮದಿಂದ ಸ್ಪರ್ಶಿಸುವುದು ಲೈಂಗಿಕ ಅಪರಾಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಬಾಂಬೈ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿರುವ ಸ್ಪರ್ಶ ಎಂಬ ಪದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ವ್ಯಾಖ್ಯಾನವನ್ನೇ ಬದಲಿಸುತ್ತಿದೆ. ಇದರಿಂದ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಬದಲು ಅವರನ್ನೇ ಶಿಕ್ಷಿಸಿದಂತಾಗುತ್ತದೆ. ಲೈಂಗಿಂಗ ಉದ್ದೇಶದಿಂದ ಸ್ಪರ್ಶಿಸುವ ಯಾವುದೇ ಸ್ಪರ್ಶ ಕಾನೂನು ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

2016ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ(Nagpura, Maharastra) 12 ವರ್ಷದ ಬಾಲಕಿಯೊಬ್ಬಳನ್ನು 39 ವರ್ಷದ ವ್ಯಕ್ತಿ ತನ್ನ ಮನೆಗೆ ಕರೆದೊಯ್ದು ಬಟ್ಟೆಯ ಮೇಲಿನಿಂದಲೇ ಆಕೆಯ ಗುಪ್ತಾಂಗಗಳನ್ನು ಸ್ಪರ್ಶಿಸಿ ದೌರ್ಜನ್ಯ ಎಸಗಿದ್ದ. ಸ್ಥಳೀಯ ಕೋರ್ಟ್‌ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ 354ರ ಪ್ರಕಾರ ಆತನಿಗೆ 3 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಆದರೆ, ಬಾಂಬೆ ಹೈಕೋರ್ಟ್‌ ಆ ಆದೇಶ ರದ್ದುಪಡಿಸಿ, ಪ್ರಕರಣದಲ್ಲಿ ಚರ್ಮಕ್ಕೆ ಚರ್ಮ ತಾಗಿಲ್ಲ, ಹೀಗಾಗಿ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ವ್ಯಕ್ತಿಯನ್ನು ಖುಲಾಸೆಗೊಳಿಸಿತ್ತು. ಆ ಆದೇಶ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಅದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಪೋಕ್ಸೋ ಕಾಯ್ದೆಯಡಿ ಬಾಂಬೈ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು. ಚರ್ಮಕ್ಕೆ ಚರ್ಮ ತಾಗಿಲ್ಲ ಎಂದು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪು ತಡೆಹಿಡಿದು ವಿಚಾರಣೆ ಆರಂಭಿಸಿತ್ತು. 

Yadgir| ವಿದ್ಯಾರ್ಥಿನಿಯರು ಸಹಕರಿಸಿದ್ರೆ ಹೆಚ್ಚು ಅಂಕ, ಕಾಮುಕ ಪ್ರಿನ್ಸಿಪಾಲ್‌ ವಿರುದ್ಧ FIR

ಬಾಂಬೇ ಹೈಕೋರ್ಟ್ ಆದೇಶಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು.  ಈ ತೀರ್ಪಿನ ವಿರುದ್ಧ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ವೇದಿಕೆಗಳಲ್ಲಿ ಭಾರಿ ಚರ್ಚೆಯಾಗಿತ್ತು. ಅತ್ಯಾಚಾರಿಗಳನ್ನು ಶಿಕ್ಷಿಸುವ ಬದಲು ಸಂರಕ್ಷಿಸುವಂತಿದೆ ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿತ್ತು. ಕಾನೂನು ತಜ್ಞರು ಸೇರಿದಂತೆ ಹಲವು ಗಣ್ಯರನ್ನೊಳಗೊಂಡ ವೇದಿಕೆ ಈ ತೀರ್ಪನ್ನು ಚರ್ಚಿಸಿತ್ತು. ಎಲ್ಲರೂ ಈ ತೀರ್ಪು ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗೆ ವಿರುದ್ಧವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರ ಬಾಂಬೈ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪಶ್ನೆ ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್ ಮಹತ್ವದ ಆದೇಶದ ಮೂಲಕ ಸ್ಪಷ್ಟ ಸಂದೇಶ ಸಾರಿದೆ. ಅತ್ಯಾಚಾರಿಗಳ ವಿರುದ್ಧ ನಿಯಮ ಕಠಿಣಗೊಳ್ಳುತ್ತಿದೆ. ಇಷ್ಟೇ ಅಲ್ಲ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಅನ್ನೋದನ್ನು ಹೇಳಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್