Threat Letter to Rahul Gandhi: ಬಾಂಬ್‌ ಸ್ಪೋಟಿಸಿ ಹತ್ಯೆ, ರಾಹುಲ್‌ ಗಾಂಧಿಗೆ ಬೆದರಿಕೆ ಪತ್ರ!

By Santosh NaikFirst Published Nov 18, 2022, 12:10 PM IST
Highlights

ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಬೆದರಿಕೆ ಪತ್ರ ಬಂದಿದೆ. ಇಂದೋರ್‌ನಿಂದ ಈ ಪತ್ರ ಬಂದಿದ್ದು, ಬಾಂಬ್‌ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಅದರಲ್ಲಿ ಬರೆಯಲಾಗಿದೆ.
 

ಮುಂಬೈ (ನ. 18): ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜೀವ ಬೆದರಿಕೆ ಹಾಕಲಾಗಿದೆ. ಮಧ್ಯಪ್ರದೇಶದ ಇಂದೋರ್‌ನಿಂದ ಅವರಿಗೆ ಬೆದರಿಕೆ ಪತ್ರ ಕಳುಹಿಸಲಾಗಿದೆ. ಕಾಂಗ್ರೆಸ್ ನಾಯಕನ ಮೇಲೆ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಗುವುದು ಎಂದು ಅದರಲ್ಲಿಬರೆಯಲಾಗಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿರುವ ಭಾರತ್‌ ಜೋಡೋ ಯಾತ್ರೆ ನವೆಂಬರ್ 24 ರಂದು  ಇಂದೋರ್‌ಗೆ ತಲುಪಲಿದೆ. ಪತ್ರ ಕಳುಹಿಸಿದವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇಂದೋರ್‌ನ ಸಿಹಿ ತಿಂಡಿಯ ಮಳಿಗೆಯಲ್ಲಿ ಈ ಬೆದರಿಕೆ ಪತ್ರವನ್ನು ಇಡಲಾಗಿದೆ. ಭಾರತ್ ಜೋಡೋ ಯಾತ್ರೆ ಇಂದೋರ್‌ಗೆ ಬರಲಿದ್ದು, ಬಾಂಬು, ಸ್ಫೋಟಗಳು ಆಗಲಿದೆ ಎಂದು ಬರೆಯಲಾಗಿದೆ.ಪೊಲೀಸರು ಈ ಕುರಿತಾಗಿ ತನಿಖೆ ಆರಂಭಿಸಿದ್ದಾರೆ. ನವೆಂಬರ್‌ 24 ರಂದು ಇಂದೋರ್‌ನಲ್ಲಿ ರಾಹುಲ್‌ ಗಾಂಧಿ ಯಾತ್ರೆಗಾಗಿ ವಿಶ್ರಾಂತಿ ಪಡೆಯಲಿದ್ದಾರೆ. ಈ ವೇಳೆ ದಾಳಿ ನಡೆಯುವ ಸಂಚು ಇದಾಗಿರಬಹುದು ಎಂದು ಪೊಲೀಸರು ಅಲರ್ಟ್‌ ಆಗಿದ್ದಾರೆ.

ಸಿಹಿ ತಿಂಡಿಯ ಮಳಿಗೆಯ ಹೊರಗೆ ಈ ಬೆದರಿಕೆ ಪತ್ರವನ್ನು ಗುರುವಾರ ರಾತ್ರಿಯ ವೇಳೆ ಇಡಲಾಗಿತ್ತು. ಇದನ್ನು ನೋಡಿದ ಅಂಗಡಿಯ ಮಾಲೀಕ ಅದರಲ್ಲಿ ಬೆದರಿಕೆಯ ಸಂದೇಶವನ್ನು ಓದಿದ್ದಾರೆ. ರಾಹುಲ್‌ ಗಾಂಧಿ ಇಂದೋರ್‌ಗೆ ಬರದೇ ಇದ್ದರೆ ಒಳ್ಳೆಯದು. ಹಾಗೇನಾದರೂ ಬಂದಲ್ಲಿ ಬಾಂಬ್‌ ಸ್ಪೋಟ ಮಾಡಿ ಅವರ ಹತ್ಯೆ ಮಾಡಲಾಗುತ್ತದೆ ಎಂದು ಬರೆಯಲಾಗಿದೆ. ಇಂದೋರ್‌ನ ಖಾಲ್ಸಾ ಕಾಲೇಜಿನಲ್ಲಿ ರಾಹುಲ್‌ ಗಾಂಧಿ ಹಾಗೂ ಅವರ ಟೀಮ್‌ ವಿಶ್ರಾಂತಿ ಪಡೆದುಕೊಳ್ಳಲಿದೆ. ಇನ್ನು ಪೊಲೀಸರು ಈ ಪತ್ರಕ್ಕೆ ಹೆಚ್ಚಿನ ಮಹತ್ವ ಕೊಟ್ಟು ತನಿಖೆ ಆರಂಭಿಸಿದ್ದಾರೆ. ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಬಾಂಬ್ ಸ್ಫೋಟದ ಬೆದರಿಕೆಯಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಆಡಳಿತವು ಎಚ್ಚರಿಕೆಯಿಂದ ಕೆಲಸ ಅರಂಭಿಸಿದೆ. ಜುನಿ ಇಂದೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಹಿತಿಂಡಿ ಅಂಗಡಿಯ ಬಳಿ ಈ  ಬೆದರಿಕೆ ಪತ್ರ ಸಿಕ್ಕಿದೆ. ಸದ್ಯಕ್ಕೆ ಸಮೀಪದಲ್ಲೇ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪತ್ರವನ್ನು ಬಿಟ್ಟು ಹೋದ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.

ಸ್ವಾತಂತ್ರ್ಯ ಸೇನಾನಿಗೆ ಅಪಮಾನ, ರಾಹುಲ್‌ ಗಾಂಧಿ ವಿರುದ್ಧ ಸಾವರ್ಕರ್‌ ಮೊಮ್ಮಗನಿಂದ ಕೇಸ್‌!

ಇಂದೋರ್‌ನ ಜುನಿ ಇಂದೋರ್ ಪೊಲೀಸ್ ಠಾಣಾ (Juni Indore Police Station) ವ್ಯಾಪ್ತಿಯಲ್ಲಿರುವ ಸ್ವೀಟ್ ಅಂಗಡಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಪತ್ರವೊಂದನ್ನು ಬಿಟ್ಟು ಹೋಗಿದ್ದು, ಅದನ್ನು ಸ್ವೀಟ್ ಅಂಗಡಿಯ ಮಾಲೀಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಇಂದೋರ್‌ನ ಖಾಲ್ಸಾ ಕಾಲೇಜಿನಲ್ಲಿ ( Khalsa College) ರಾಹುಲ್ ಗಾಂಧಿ (Rahul Gandhi) ವಿಶ್ರಾಂತಿ ಪಡೆದಯಕೊಳ್ಳಲಿದ್ದು, ಅಲ್ಲಿಯೇ ಬಾಂಬ್ ಸ್ಫೋಟಿಸುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಇಂತಹ ಬೆದರಿಕೆ ಪತ್ರ ಬಂದಿರುವುದನ್ನು ಗುಪ್ತಚರ ಡಿಸಿಪಿ ರಜತ್ ಸಕ್ಲೇಚಾ (DCP Intelligence Rajat Saklecha) ಖಚಿತಪಡಿಸಿದ್ದಾರೆ. ಪತ್ರ ಉಜ್ಜಯಿನಿಯಿಂದ ಬಂದಿದೆ ಎಂದು ಹೇಳಲಾಗಿದೆ. ಪತ್ರದಲ್ಲಿ ಶಾಸಕರೊಬ್ಬರ ಹೆಸರನ್ನು ನಮೂದಿಸಲಾಗಿದೆ.

ಜನ ಗಣ ಮನದ ಬದಲು ನೇಪಾಳದ ರಾಷ್ಟ್ರಗೀತೆ, ಭಾರತ್‌ ಜೋಡೋ ಯಾತ್ರೆಯಲ್ಲಿ ಪ್ರಮಾದ!

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 24 ರಿಂದ ಮಧ್ಯಪ್ರದೇಶದಲ್ಲಿ ಪ್ರಾರಂಭವಾಗಲಿದೆ ಎಂಬುದು ಗಮನಾರ್ಹ. ಪೊಲೀಸರು ಸುತ್ತಮುತ್ತಲಿನ ಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಇತ್ತೀಚೆಗೆ, ಪಂಜಾಬ್‌ನ ಕೀರ್ತಂಕರ್ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರನ್ನು ಖಾಲ್ಸಾ ಕಾಲೇಜಿನಲ್ಲಿ ಪ್ರಕಾಶ್ ಪರ್ವ್ ಕಾರ್ಯಕ್ರಮದ ಸಂದರ್ಭದಲ್ಲಿ ಸನ್ಮಾನಿಸಿದ್ದಕ್ಕಾಗಿ ಟೀಕಿಸಿದ್ದರು. ಅಲ್ಲದೇ ಇನ್ನೆಂದೂ ಇಂದೋರ್ ಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ವಿವಾದವೂ ಎದ್ದಿತ್ತು.

 

click me!