ಶ್ರೀಲಂಕಾದಲ್ಲಿ ಶೀಘ್ರದಲ್ಲೇ ಗೋ ಹತ್ಯೆ ನಿಷೇಧ..!

By Suvarna News  |  First Published Sep 9, 2020, 1:14 PM IST

ನೆರೆ ರಾಷ್ಟ್ರ ಶ್ರೀಲಂಕಾದಲ್ಲಿಯೂ ಶೀಘ್ರವೇ ಗೋಹತ್ಯೆ ನಿಷೇಧವಾಗುವ ಸಾಧ್ಯತೆ ಇದೆ.


ಶ್ರೀಲಂಕಾದಲ್ಲೂ ಗೋಹತ್ಯೆ ನಿಷೇಧವಾಗಲಿದೆ. ಅಲ್ಲಿನ ಆಡಳಿತ ಪಕ್ಷ ಶ್ರೀ ಲಂಕಾ ಪೊದುಜನ ಪೆರಮುನ(ಎಸ್‌ಎಲ್‌ಪಿಪಿ) ಕಳೆದ ತಿಂಗಳು ಸಂಸದೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಶ್ರೀಲಂಕಾದ್ಯಂತ ಗೋ ಹತ್ಯೆ ನಿಷೇಧಿಸಲು ನಿರ್ಧರಿಸಿದೆ. ಈ ಸಂದರ್ಭ ಬೀಫ್ ಅಮದು ಮಾಡಬಹುದಾಗಿರುತ್ತದೆ.

ಪ್ರಧಾನಿ ಮಹೀಂದ್ರ ರಾಜಪಕ್ಷೆ ಎಸ್‌ಎಲ್‌ಪಿಪಿ ಜೊತೆಗೆ ಮಂಗಳವಾರ ಈ ಸಂಬಂಧ ಚರ್ಚೆ ನಡೆಸಿದ್ದಾರೆ. ರಾಜಪಕ್ಷ ಈ ಸಂಬಂಧ ಪ್ರಸ್ತಾಪ ಮಾಡಿದ್ದು, ಗೋ ಹತ್ಯೆ ನಿಷೇಧವಾಗುವ ಸಾಧ್ಯತೆ ಇದೆ.

Tap to resize

Latest Videos

ನಾನ್‌ವೆಜ್‌ ಪ್ರಿಯರೇ ಎಚ್ಚರ: ಕುರಿ ಮಾಂಸದೊಂದಿಗೆ ಮಿಕ್ಸ್‌ ಆಗ್ತಿದೆ ದನದ ಮಾಂಸ..!

ಸರ್ಕಾರಕ್ಕೆ ಈ ಪ್ರಸ್ತಾಪ ಯಾವಾಗ ಸಲ್ಲಿಸಬೇಕೆಂದು ಅವರು ನಿರ್ಧರಿಸಲಿದ್ದಾರೆ ಎಂದು ಸಂಸದೀಯ ವಕ್ತಾರ ಹಾಗೂ ಮಾಧ್ಯಮ ಸಚಿವ ಕೆಹೆಲಿಯಾ ರಂಬುಕ್‌ವೆಲ್ಲಾ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಬೌದ್ಧ ಮತೀಯರು ಬಹುಸಂಖ್ಯೆಯಲ್ಲಿದ್ದು, ಶೇ 99ರಷ್ಟು ಜನ ಶಾಖಾಹಾರಿಗಳು. ಆದರೆ ಮೆಜಾರಿಟಿ ಹಿಂದೂ ಹಾಗೂ ಬೌದ್ಧರು ಗೋಮಾಂಸ ಸೇವಿಸುವುದಿಲ್ಲ. ಪ್ರಭಾವಶಾಲಿ ಬೌದ್ಧ ಗುರುಗಳು ಎಸ್‌ಎಲ್‌ಪಿಪಿ ಮೇಲೆ ಗೋಹತ್ಯೆ ನಿಷೇಧಕ್ಕೆ ಒತ್ತಡ ಹೇರುತ್ತಿದೆ ಎನ್ನಲಾಗುತ್ತಿದೆ.

ಕೇರಳ ಪ್ರವಾಸೋದ್ಯಮ ಟ್ವೀಟ್‌ನಲ್ಲಿ ಬೀಫ್: ಊಟಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದ ಸಚಿವ!

ಎಸ್‌ಎಲ್‌ಪಿಪಿ ಶ್ರೀಲಂಕಾದಲ್ಲಿ ಬಲಿಷ್ಠ ಪಕ್ಷವಾಗಿದ್ದು, ಇದಕ್ಕೆ ಸಿನ್ಹಾಲಾ ಬೌದ್ಧ ಸಮುದಾಯದ ಬೆಂಬಲವಿದೆ. ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಗೋಮಾಂಸ ಸೇವಿಸುತ್ತಿದ್ದು, ಎರಡೂ ಸಮುದಾಯ ರಾಜಕೀಯ ನಿಟ್ಟಿನಲ್ಲಿ ಪ್ರಭಾವಶಾಲಿ.

click me!