ಭಾರತ ಜಲಸೀಮೆಗೆ ಪ್ರವೇಶ ಮಾಡಿದ್ದ ಚೀನಾದ ಹಡಗು

By Kannadaprabha News  |  First Published Dec 4, 2019, 9:28 AM IST

ಚೀನಾ ಸೇನೆಯ ಹಡಗೊಂದು ಕಳೆದ ಸೆಪ್ಟೆಂಬರ್‌ನಲ್ಲಿ ಅಕ್ರಮವಾಗಿ ಭಾರತದ ಜಲಸೀಮೆ ಪ್ರವೇಶಿಸಿದ್ದ ಘಟನೆ ನಡೆದಿದ್ದ ಘಟನೆ ತಡವಾಗಿ ಬಹಿರಂಗವಾಗಿದೆ. ಭಾರತದ ನೌಕಾಪಡೆಯು ಇದನ್ನು ಗಮನಿಸಿ ಎಚ್ಚರಿಕೆ ನೀಡಿದ ನಂತರ ಚೀನಾ ಹಡಗು ವಾಪಸಾಗಿದೆ.


ನವದೆಹಲಿ (ಡಿ. 04): ಚೀನಾ ಸೇನೆಯ ಹಡಗೊಂದು ಕಳೆದ ಸೆಪ್ಟೆಂಬರ್‌ನಲ್ಲಿ ಅಕ್ರಮವಾಗಿ ಭಾರತದ ಜಲಸೀಮೆ ಪ್ರವೇಶಿಸಿದ್ದ ಘಟನೆ ನಡೆದಿದ್ದ ಘಟನೆ ತಡವಾಗಿ ಬಹಿರಂಗವಾಗಿದೆ. ಭಾರತದ ನೌಕಾಪಡೆಯು ಇದನ್ನು ಗಮನಿಸಿ ಎಚ್ಚರಿಕೆ ನೀಡಿದ ನಂತರ ಚೀನಾ ಹಡಗು ವಾಪಸಾಗಿದೆ.

ಇದು ‘ಶಿ ಯಾನ್‌ 1’ ಹೆಸರಿನ ಚೀನಾ ಸೇನೆಯ ಸಂಶೋಧನಾ ಹಡಗು ಆಗಿದ್ದು, ಅಂಡಮಾನ್‌-ನಿಕೋಬಾರ್‌ ದ್ವೀಪದ ಸಮೀಪ ಇರುವ ಭಾರತಕ್ಕೆ ಸೇರಿದ ಆರ್ಥಿಕ ಜಲ ವಲಯಕ್ಕೆ ಪ್ರವೇಶಿಸಿ ಸಮುದ್ರದಾಳದಲ್ಲಿ ಏನಿದೆ ಎಂಬ ಸಂಶೋಧನೆ ನಡೆಸುತ್ತಿತ್ತು.

Tap to resize

Latest Videos

ಭಾರತಕ್ಕೆ ಬೆದರಿ ಫೋನ್‌ ಬಳಕೆ ಬಿಟ್ಟ ದಾವೂದ್‌!

ಭಾರತದ ಜಲವಲಯ ಪ್ರವೇಶಿಸಬೇಕು ಎಂದರೆ ಅದಕ್ಕೆ ಭಾರತೀಯ ನೌಕಾಪಡೆಯ ಅನುಮತಿ ಬೇಕು. ಆದರೆ ಅನುಮತಿ ಪಡೆಯದೇ ಈ ಹಡಗು ಭಾರತದ ಆರ್ಥಿಕ ಜಲವಲಯ ಪ್ರವೇಶಿಸಿದ್ದ ಕಾರಣ ನೌಕಾಪಡೆಯು ಎಚ್ಚರಿಕೆ ನೀಡಿತು. ಬಳಿಕ ಚೀನಾ ಹಡಗು ಅಲ್ಲಿಂದ ನಿರ್ಗಮಿಸಿತು ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಶ್ವಸಂಸ್ಥೆಯ ನಿಯಮದ ಪ್ರಕಾರ, ಒಂದು ದೇಶವು ತನ್ನ ಕರಾವಳಿ ತೀರದಿಂದ 200 ನಾಟಿಕಲ್‌ ಮೈಲು ದೂರದವರೆಗೆ ಸಮುದ್ರದ ಮೇಲೆ ಹಕ್ಕು ಹೊಂದಿರುತ್ತದೆ. ಇದಕ್ಕೆ ಜಲ ಆರ್ಥಿಕ ವಲಯ ಎಂದು ಕರೆಯುತ್ತಾರೆ. ಈ 200 ನಾಟಿಕಲ್‌ ಮೈಲು ಜಲವಲಯದ ವ್ಯಾಪ್ತಿಯಲ್ಲಿ ಮೀನುಗಾರಿಕೆ, ಉತ್ಖನನ ನಡೆಸಬಹುದು ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮಾಡಬಹುದು.

ರಾಹುಲ್‌ರಂಥದ್ದೇ ಕಾರಲ್ಲಿ ಪ್ರಿಯಾಂಕ ಮನೆಗೆ ಅಪರಿಚಿತರು!

ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದ 7-8 ಹಡಗುಗಳು ಯಾವಾಗಲೂ ಸಂಚರಿಸುತ್ತ ಸಮುದ್ರದ ಆಳದಲ್ಲಿ ಏನಿವೆ ಎಂಬ ಸಂಶೋಧನೆ ನಡೆಸುತ್ತಿರುತ್ತವೆ. ಇವು ಭಾರತೀಯ ಜಲಸೀಮೆ ಪ್ರವೇಶಿಸದಂತೆ ನೌಕಾಪಡೆ ಸದಾ ಹದ್ದಿನ ಕಣ್ಣಿಟ್ಟಿರುತ್ತದೆ ಎಂದು ಅಡ್ಮಿರಲ್‌ ಸಿಂಗ್‌ ಹೇಳಿದರು.

ಹಿಂದೂ ಮಹಾಸಾಗರದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಶ್ರೀಲಂಕಾ ಜತೆ ಚೀನಾ ಈಗಾಗಲೇ ಒಪ್ಪಂದ ಮಾಡಿಕೊಂಡು ಅಲ್ಲಿನ ಒಂದು ಬಂದರನ್ನು ನಿರ್ವಹಿಸುತ್ತಿದೆ. ಆದರೆ ಈ ವಲಯದಲ್ಲಿ ಚೀನಾ ಪ್ರಭಾವ ತಡೆಯಲು ಭಾರತ ಶತಾಯ-ಗತಾಯ ಯತ್ನಿಸುತ್ತಿದೆ.

click me!