ಸಲಿಂಗ ಸಂಬಂಧ ಭಾವನಾತ್ಮಕ ಬಾಂಧವ್ಯ: ಸುಪ್ರೀಂ ಸಿಜೆಐ

By Kannadaprabha News  |  First Published Apr 21, 2023, 7:29 AM IST

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮೂರನೇ ದಿನವಾದ ಗುರುವಾರವೂ ಮುಂದುವರಿಸಿರುವ ಸುಪ್ರೀಂಕೋರ್ಟ್, ಮದುವೆಗೆ ಎರಡು ಭಿನ್ನ ಲಿಂಗಕ್ಕೆ ಸೇರಿದ ಜೋಡಿಗಳ ಅವಶ್ಯಕತೆ ಇದೆಯೇ? ಎಂದು ಪ್ರಶ್ನೆ ಕೇಳಿದೆ


ನವದೆಹಲಿ: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮೂರನೇ ದಿನವಾದ ಗುರುವಾರವೂ ಮುಂದುವರಿಸಿರುವ ಸುಪ್ರೀಂಕೋರ್ಟ್, ಮದುವೆಗೆ ಎರಡು ಭಿನ್ನ ಲಿಂಗಕ್ಕೆ ಸೇರಿದ ಜೋಡಿಗಳ ಅವಶ್ಯಕತೆ ಇದೆಯೇ? ಎಂದು ಪ್ರಶ್ನೆ ಕೇಳಿದೆ. ಸಲಿಂಗ ಸಂಬಂಧ ಎಂಬುದು ಭೌತಿಕ ಬಾಂಧವ್ಯವಷ್ಟೇ ಅಲ್ಲ. ಅದು ಸ್ಥಿರವಾದ ಹಾಗೂ ಭಾವನಾತ್ಮಕ ಸಂಬಂಧ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ (Justice Chandrahud) ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮುನ್ನ ವಿವಾಹ ಎಂಬುದರ ಬದಲಾದ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಿಸಬೇಕಾದ ಅವಶ್ಯಕತೆ ಇದೆ. ಏಕೆಂದರೆ, ಎರಡು ಭಿನ್ನ ಲಿಂಗಗಳಿಗೆ ಸೇರಿದ ಇಬ್ಬರು ವ್ಯಕ್ತಿಗಳ ಅಸ್ತಿತ್ವ ವಿವಾಹದ ಅಗತ್ಯಕ್ಕೆ ಅವಶ್ಯವಿದೆಯೇ? ಎಂದು ಪ್ರಶ್ನಿಸಿದರು. ವೈಯಕ್ತಿಕ ಕಾನೂನು (Personel Law) ಪಾಲಿಸಲು ಬಯಸದೇ ಇರುವ ನಾಗರಿಕರ ವಿವಾಹಕ್ಕೆ ಅವಕಾಶ ಕಲ್ಪಿಸಲು 1954ರಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ರೂಪಿಸಲಾಗಿದೆ. ಅದಾಗಿ 69 ವರ್ಷಗಳಾದ ಬಳಿಕ ಆ ಕಾನೂನು ಗಮನಾರ್ಹ ರೀತಿಯಲ್ಲಿ ವಿಕಾಸಗೊಂಡಿದೆ ಎಂದರು.

Tap to resize

Latest Videos

ಸಮಗ್ರ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮನ್ನಣೆ ನೀಡಿ: ಸುಪ್ರೀಂಕೋರ್ಟ್‌ಗೆ ಸಲಿಂಗಿಗಳ ಪರ ವಕೀಲರ ಮನವಿ

ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸುವ ಮೂಲಕ ಒಂದೇ ಲಿಂಗದ ಇಬ್ಬರು ಪರಸ್ಪರ ಸಮ್ಮತಿ ಹೊಂದಿದ ವಯಸ್ಕರ ಸಂಬಂಧಕ್ಕೆ (Adults relationship) ಮಾನ್ಯತೆ ನೀಡಿದ್ದಷ್ಟೇ ಅಲ್ಲ, ಒಂದೇ ಲಿಂಗದ ಸಂಬಂಧವಿರುವ ವ್ಯಕ್ತಿಗಳು ಸ್ಥಿರವಾದ ಬಾಂಧವ್ಯವನ್ನು ಹೊಂದಿರುತ್ತಾರೆ ಎಂಬುದಕ್ಕೂ ಮಾನ್ಯತೆ ನೀಡಲಾಗಿದೆ ಎಂದು ಹೇಳಿದರು.

ಧರ್ಮಗಳ ವಿವಾಹ ಕಾಯ್ದೆ ಅನ್ವಯ ಸಲಿಂಗ ವಿವಾಹ ವಿಚಾರಣೆ ನಡೆಸಲ್ಲ: ಸುಪ್ರೀಂ

click me!