ನವೀಕರಿಸಬಹುದಾದ ಇಂಧನ ವಲಯದಲ್ಲಿ 32.45 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಬದ್ದತೆ ವ್ಯಕ್ತವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
- ಡೆಲ್ಲಿ ಮಂಜು
ಗಾಂಧಿನಗರ, ಸೆ.17 (ಗುಜರಾತ್): ನವೀಕರಿಸಬಹುದಾದ ಇಂಧನ ವಲಯದಲ್ಲಿ 32.45 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಬದ್ದತೆ ವ್ಯಕ್ತವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
undefined
ಮಂಗಳವಾರ 2ನೇ ದಿನ ಸಭೆಯ ಬಳಿಕ ಗಾಂಧಿನಗರದಲ್ಲಿ ಮಾತಮಾಡಿದ ಸಚಿವರು, 2030 ರ ವೇಳೆಗೆ 25 ಲಕ್ಷ ಕೋಟಿ ಮೌಲ್ಯದ ಸಾಲಗಳನ್ನು ನೀಡಲು ಬ್ಯಾಂಕ್‌ಗಳ ಬದ್ಧವಾಗಿವೆ. 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋ ಹೂಡಿಕೆ ಆಕರ್ಷಿಸಿವೆ ಎಂದರು.
2024 ರ ಸಮಾವೇಶದಲ್ಲಿ ₹ 6 ಟ್ರಿಲಿಯನ್ ಮೌಲ್ಯದ ಸಾಲ ಒದಗಿಸುವ ಪ್ರಸ್ತಾಪಗಳು ಬಂದಿದೆ. ಇಂಡಿಯನ್ ರಿನ್ಯೂವಬಲ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿ ಲಿಮಿಟೆಡ್ (IREDA) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಲಾ ₹ 5 ಲಕ್ಷ ಕೋಟಿ ಮೌಲ್ಯದ ಸಾಲ ನೀಡುವ ವಾಗ್ದಾನ ಮಾಡಿದೆ.
ಪವರ್ ಫೈನಾನ್ಸ್ ಕಾರ್ಪೊರೇಷನ್ (ಪಿಎಫ್‌ಸಿ) ಮತ್ತು ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಡೆವಲಪ್‌ಮೆಂಟ್ (ನಾಬಿಎಫ್‌ಐಡಿ) ಕ್ರಮವಾಗಿ ₹ 3 ಟ್ರಿಲಿಯನ್ ಮತ್ತು ₹ 1.86 ಟ್ರಿಲಿಯನ್ ಸಾಲ ನೀಡುವುದಾಗಿ ಭರವಸೆ ನೀಡಿವೆ.
ನಾಗಮಂಗಲ ಘಟನೆಯಲ್ಲಿ 10-15 ಜನ ಮೃತಪಡಬೇಕಿತ್ತೇ?: ಸಚಿವ ಪರಮೇಶ್ವರ್‌ಗೆ ಜೋಶಿ ಪ್ರಶ್ನೆ
ಈ ದಶಕದ ಅಂತ್ಯದ ವೇಳೆಗೆ ನವೀಕರಿಸಬಹುದಾದ ಇಂಧನ ಕಂಪನಿಗಳು ಸುಮಾರು ₹ 32.45 ಟ್ರಿಲಿಯನ್ ಹೂಡಿಕೆ ಮಾಡಲು ಬದ್ಧವಾಗಿವೆ. ಭಾರತವು ಐದನೇ ದೊಡ್ಡದು ಮಾತ್ರವಲ್ಲದೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಬೆಳವಣಿಗೆಯು ಶಕ್ತಿಯ ಅಭೂತಪೂರ್ವ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಈ ಬೇಡಿಕೆಯನ್ನು ಸುಸ್ಥಿರವಾಗಿ ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದರು.
2030 ರ ವೇಳೆಗೆ ಸುಮಾರು 570 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
ಈ ನಡುವೆ ನವೀಕರಿಸಬಹುದಾದ ಇಂಧನ ಸಚಿವಾಲಯದ 100 ದಿನಗಳ ಸಾಧನೆ ಬಿಡುಗಡೆ ಮಾಡಿದೆ. 4.5 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಬೇಕೆಂಬ ಜೂನ್, ಜುಲೈ ತಿಂಗಳ ಗುರಿಗೆ ಪೂರಕವಾಗಿ 6 ಗಿ.ವ್ಯಾ. ಸ್ಥಾಪಿತ ಇಂಧನ ಸಾಮರ್ಥ್ಯ ಹೊಂದಲಾಗಿದೆ. ಕಚ್ಚಾ ಅಲ್ಲದ ಇಂಧನಗಳ ಸ್ಥಾಪಿತ ಸಾಮರ್ಥ್ಯ 207.76 ಗಿಗಾ ವ್ಯಾಟ್ ಗೆ ತಲುಪಿದೆ. ಎರಡು ಸೋಲಾರ್ ಪಾರ್ಕ್‌ಗಳು ಪೂರ್ಣಗೊಂಡಿವೆ.
ಪಿಎಂ ಕುಸುಮ್ ಯೋಜನೆ ಅಡಿಯಲ್ಲಿ 1 ಲಕ್ಷ ಸೌರ ಪಂಪ್‌ಗಳನ್ನು ಸ್ಥಾಪಿಸಲಾಗಿದ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿಯಲ್ಲಿ, 3.56 ಲಕ್ಷ ರೂಫ್‌ಟಾಪ್ ಸೋಲಾರ್ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಸಂಚಿತ 13.8 ಗಿಗಾ ವ್ಯಾಟ್ ಸೋಲಾರ್ ಮಾಡ್ಯೂಲ್ ಉತ್ಪಾದನೆ ಪ್ರಾರಂಭವಾಗಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಎರಡನೇ ಹಂತದ ಎಲೆಕ್ಟ್ರೋಲೈಸರ್ ತಯಾರಿಕೆಗೆ 11 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಅಕ್ಷರಶಃ ಪಾಕಿಸ್ತಾನ ಮಾಡುತ್ತಿದೆ: ಜೋಶಿ ಕಿಡಿ
ಕಡಲಾಚೆಯ ಪವನಶಕ್ತಿ ಯೋಜನೆಗೆ ಜೂನ್ 19ರಂದು ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇಂಡಿಯನ್ ರಿನಿವೇಬಲ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿಯು ಐಆರ್'ಇಡಿಎ ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್- ಐಎಫ್‌ಎಸ್‌ಸಿ ಲಿಮಿಟೆಡ್ ಎಂಬ ಅಂಗಸಂಸ್ಥೆಯನ್ನು ಆರಂಭಿಸಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.