ರಾಜೀವ್‌ ಗಾಂಧಿ ಹತ್ಯೆ ಪ್ರಮುಖ ಆರೋಪಿ ನಳಿನಿ ಸೇರಿ 6 ಜನರ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

By Sharath Sharma KalagaruFirst Published Nov 11, 2022, 1:50 PM IST
Highlights

Rajiv Gandhi assassination accused freed by supreme court: ರಾಜೀವ್‌ ಗಾಂಧಿ ಹತ್ಯೆ ಪ್ರಮುಖ ಆರೋಪಿ ನಳಿನಿ ಶ್ರೀಹರನ್‌ ಸೇರಿದಂತೆ ಆರು ಜನರನ್ನು ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡುವಂತೆ ಆದೇಶಿಸಿದೆ. 

ನವದೆಹಲಿ: ರಾಜೀವ್‌ ಗಾಂಧಿ ಹತ್ಯೆಯ ಪ್ರಮುಖ ಆರೋಪಿ ನಳಿನಿ ಶ್ರೀಹರನ್‌ ಸೇರಿದಂತೆ ಆರು ಜನರ ಆರೋಪಿಗಳನ್ನು ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡುವಂತೆ ಆದೇಶಿಸಿದೆ. ತಮಿಳುನಾಡು ಸರ್ಕಾರ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಎಲ್‌ಟಿಟಿಇ ಪ್ರಭಾಕರನ್‌ ನೇತೃತ್ವದಲ್ಲಿ ರಾಜೀವ್‌ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದರು. ಶ್ರೀಲಂಕಾ ಸರ್ಕಾರಕ್ಕೆ ಪರಭಾಕರನ್‌ ವಿರುದ್ಧ ಹೋರಾಡಲು ರಾಜೀವ್‌ ಗಾಂಧಿ ಸಹಾಯ ಮಾಡಿದ್ದರು. ಹಾಗೊಂದು ವೇಳೆ ರಾಜೀವ್‌ ಗಾಂಧಿ ಮುಂದಾಗದಿದ್ದರೆ ಚೀನಾ ಶ್ರೀಲಂಕಾದಲ್ಲಿ ಭದ್ರ ನೆಲೆ ಕಂಡುಕೊಳ್ಳುವ ಸಾಧ್ಯತೆಯಿತ್ತು. ಇದೇ ಕಾರಣಕ್ಕಾಗಿ ಎಲ್‌ಟಿಟಿಇ ರೆಬೆಲ್‌ಗಳ ವಿರುದ್ಧದ ಯುದ್ಧಕ್ಕೆ ಸೇನೆಯನ್ನು ರಾಜೀವ್‌ ಗಾಂಧಿ ಅನಿವಾರ್ಯವಾಗಿ ಕಳಿಸಬೇಕಾಯಿತು. ಇದೇ ಕಾರಣಕ್ಕೆ ಪ್ರಭಾಕರನ್‌ ರಾಜೀವ್‌ ಗಾಂಧಿ ಹತ್ಯೆ ಮಾಡಿಸಿದ್ದರು. 

ರಾಹುಲ್‌ ಗಾಂಧಿ ತಂದೆಗೆ ನಮನ:

ತಮ್ಮ ತಂದೆಯ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ರಾಹುಲ್‌ ಗಾಂಧಿ ಆ ಫೋಟೋದೊಂದಿಗೆ ಈ ಸಂಬಂಧ ಟ್ವೀಟ್‌ (Tweet) ಮಾಡಿದ್ದಾರೆ. "ದ್ವೇಷ ಮತ್ತು ವಿಭಜನೆಯ ರಾಜಕೀಯದಿಂದ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ ಪ್ರೀತಿಯ ದೇಶವನ್ನೂ ನಾನು ಕಳೆದುಕೊಳ್ಳುವುದಿಲ್ಲ. ಪ್ರೀತಿ ದ್ವೇಷವನ್ನು ಜಯಿಸುತ್ತದೆ. ಭರವಸೆ ಭಯವನ್ನು ಸೋಲಿಸುತ್ತದೆ. ಒಟ್ಟಿಗೆ, ನಾವು ಜಯಿಸುತ್ತೇವೆ" ಎಂದು ತನ್ನ ತಂದೆಯ ಸ್ಮಾರಕಕ್ಕೆ ನಮನ ಸಲ್ಲಿಸಿದ ಬಳಿಕ ಟ್ವೀಟ್‌ ಮಾಡಿಕೊಂಡಿದ್ದಾರೆ. ಇನ್ನು, ತಮ್ಮ ತಂದೆಯ ಸ್ಮಾರಕಕ್ಕೆ ಭೇಟಿ ನೀಡಿದ ನಂತರ, ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಗೆ ಮಹಾತ್ಮ ಗಾಂಧಿ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಅಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ರಾಹುಲ್‌ ಗಾಂಧಿ ಅವರಿಗೆ ಯಾತ್ರೆಯ ಪ್ರಾರಂಭಕ್ಕಾಗಿ ರಾಷ್ಟ್ರಧ್ವಜವನ್ನು (National Flag) ಹಸ್ತಾಂತರಿಸಲಿದ್ದಾರೆ.

ರಾಜೀವ್‌ ಗಾಂಧಿ ಹತ್ಯೆಯ ಮಹತ್ವದ ಸುಳಿವು:

 

ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ರಾಜೀವ್‌ ಗಾಂಧಿ ಹತ್ಯೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ತಮ್ಮ ಬಳಿಯಿದೆ. ಈ ಬಗ್ಗೆ ಆಗಿನ ರಾಷ್ಟ್ರಪತಿ ಆರ್‌. ವೆಂಕಟರಾಮನ್‌ ಅವರಿಗೆ ಟೆಲಿಗ್ರಾಂ ಮಾಡಿದ್ದೆ ಎಂದು ಎಐಸಿಸಿ ಸದಸ್ಯ ಟಿ.ಡಿ.ಆರ್‌. ಹರಿಶ್ಚಂದ್ರಗೌಡ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ರಾಜೀವ್‌ ಹತ್ಯೆ ಕುರಿತು ತಮ್ಮ ಬಳಿ ಇರುವ ಮಾಹಿತಿಯನ್ನು ಅವರ ಪುತ್ರಿಯೂ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲು ಪ್ರಯತ್ನ ನಡೆಸಿದ್ದೆ. ಆದರೆ, ಅವರು ಈ ಬಗ್ಗೆ ಆಸಕ್ತಿ ತೋರಲಿಲ್ಲ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟು ದಂಡ ತೆತ್ತ ಬೈಕ್ ಚಾಲಕ

ರಾಜೀವ್‌ ಗಾಂಧಿಯವರ ಹತ್ಯೆಗೂ ಮುನ್ನವೇ ನನಗೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ರಾಷ್ಟ್ರಪತಿಗಳಾಗಿದ್ದ ಆರ್‌.ವೆಂಕಟರಾಮನ್‌ ಅವರಿಗೆ ಟೆಲಿಗ್ರಾಮ್‌ ಮೂಲಕ ತಿಳಿಸಿದ್ದೆ. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಭೇಟಿಗೆ ಅವಕಾಶ ನೀಡುವಂತೆ ಪ್ರಿಯಾಂಕಾ ಗಾಂಧಿಯವರ ಆಪ್ತಸಹಾಯಕರ ಮೂಲಕ ಸಂಪರ್ಕಿಸಿದ್ದೆ. ಆದರೆ, ಅವರು ಭೇಟಿಗೆ ಅವಕಾಶ ನೀಡಲಿಲ್ಲ. ತಮ್ಮ ತಂದೆ ಹತ್ಯೆಯ ಬಗ್ಗೆಯೇ ಮಾಹಿತಿ ಪಡೆಯಲು ಪ್ರಿಯಾಂಕಾ ಅವರಿಗೆ ಆಸಕ್ತಿ ಇಲ್ಲದಿರುವುದು ತಮಗೆ ಬೇಸರ ತಂದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!