ಲೋಕಸಭೆಯಲ್ಲಿ ಸ್ಮೃತಿ ಇರಾನಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಸದನದಿಂದ ಹೊರಹೋಗಲು ಅಣಿಯಾಗಿದ್ದರು. ಈ ವೇಳೆ ರಾಹುಲ್ ಗಾಂಧಿ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಆಡಳಿತ ಪಕ್ಷದ ಮಹಿಳಾ ಸಂಸದರು ದೂರಿದ್ದಾರೆ.
ನವದೆಹಲಿ (ಆ.9): ಹಿಂದೊಮ್ಮೆ ಸದನದಲ್ಲಿ ಕಣ್ಣುಹೊಡೆದು ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬುಧವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ 21 ಮಂದಿ ಮಹಿಳಾ ಸಂಸದರು ಸ್ಪೀಕರ್ ಓಂ ಬಿರ್ಲಾಗೆ ಲಿಖಿತ ದೂರು ನೀಡಿದ್ದಾರೆ. ಸ್ಮೃತಿ ಇರಾನಿ ಮಾತಾಡುವಾಗ ಮಹಿಳಾ ಸಂಸದರತ್ತ ನೋಡಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಈ ಬಗ್ಗೆ ಸ್ಪೀಕರ್ ಗೆ ಬಿಜೆಪಿ ಮಹಿಳಾ ಸಂಸದರು ಸ್ಪೀಕರ್ ಗೆ ದೂರು ನೀಡಿದ್ದೇವೆ. ಸಿಸಿಟಿವಿ ಮತ್ತು ವಿಡಿಯೋಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವತ್ತ ಆಗ್ರಹಿಸಿದ್ದೇವೆ. ಎಂಥ ನಾಯಕರು ಇವರು. ಮಹಿಳಾ ಸಂಸದರು ಇರುವ ಕಡೆ ಈ ರೀತಿ ಮಾಡಿದ್ದಾರೆ . ಎಂಥ ಸಂಸ್ಕೃತಿ ಇದು ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರಾಗಿ ಸಂಸತ್‌ಗೆ ಮರಳಿದ ಬಳಿಕ ಮೊದಲ ಬಾರಿಗೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ತಮ್ಮ ಮಾತನ್ನು ಮುಗಿಸಿ ಸದನದಿಂದ ಹೊರಹೋಗುವ ಪ್ರಯತ್ನದಲ್ಲಿದ್ದರು. ಈ ವೇಳೆ ಮಾತನಾಡಲು ಆರಂಭಿಸಿದ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಇದರ ಮೂಲ ದೃಶ್ಯಾವಳಿ ಕ್ಯಾಮೆರಾದಲ್ಲಿ ಇನ್ನೂ ಸೆರೆಯಾಗಿಲ್ಲ. ಲೋಕಸಭೆಯಿಂದ ಅವರು ಹೊರಹೋಗುವ ವೇಳೆ ಆಡಳಿತ ಪಕ್ಷದ ಮಹಿಳಾ ಸಂಸದರಿದ್ದ ಕಡೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅವಿಶ್ವಾಸ ಗೊತ್ತುವಳಿ ಭಾಷಣ ಮುಗಿಸಿ ಲೋಕಸಭೆಯ ಆವರಣದಿಂದ ಹೊರಬರುತ್ತಿದ್ದ ರಾಹುಲ್ ಗಾಂಧಿ ಅವರು ಕೆಲವು ಫೈಲ್‌ಗಳನ್ನು ಬೀಳಿಸಿದ್ದರು. ಅವುಗಳನ್ನು ತೆಗೆದುಕೊಳ್ಳಲು ಅವರು ಬಗ್ಗಿದ ವೇಳೆ ಕೆಲವು ಬಿಜೆಪಿ ಸಂಸದರು ಅವರನ್ನು ನೋಡಿ ನಗಲು ಪ್ರಾರಂಭಿಸಿದರು ಎಂದು ಈ ಕ್ಷಣವನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಬಳಿಕ ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ರಾಹುಲ್ ಗಾಂಧಿ!
ಫೈಲ್‌ಗಳನ್ನು ಎತ್ತಿಕೊಂಡು ಸದನದಿಂದ ಹೊರಹೋಗುವ ವೇಳೆ ಅವರು ಬಿಜೆಪಿಯ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎನ್ನಲಾಗಿದೆ. ಫ್ಲೈಯಿಂಗ್ ಕಿಸ್ ಬಗ್ಗೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, "ಸ್ತ್ರೀದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಇಂತಹ ಉದಾಹರಣೆ ಹಿಂದೆಂದೂ ಕಂಡಿರಲಿಲ್ಲ. ಇದು ಅವರ ಮಾನಸಿಕತೆ ತೋರಿಸುತ್ತದೆ. ಇದು ಅಶ್ಲೀಲ ಪ್ರಕರಣ' ಎಂದಿದ್ದಾರೆ. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಫ್ಲೈಯಿಂಗ್ ಕಿಸ್ ಕುರಿತು ಕಾಂಗ್ರೆಸ್ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದು, ಲೋಕಸಭೆ ಸ್ಪೀಕರ್‌ಗೆ ದೂರು ಸಲ್ಲಿಸಿದ್ದಾರೆ. ರಾಹುಲ್ ಗಾಂಧಿಯ ನಡವಳಿಕೆಯನ್ನು 'ಅನುಚಿತ' ಎಂದಿರುವ ಅವರ ಪತ್ರಕ್ಕೆ ಹಲವು ಮಹಿಳಾ ಸಂಸದರು ಸಹಿ ಹಾಕಿದ್ದಾರೆ.
ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಲೆ ಮಾಡಿದ್ದೀರಿ, ಲೋಕಸಭೆಯಲ್ಲಿ ರಾಹುಲ್ ಕೆಂಡ!
Here's the video of Rahul Gandhi going back after giving historic speech,
When did Rahul Gandhi Ji gave flying kiss to ?
Requesting to speaker to suspend for making fake allegations on India's Rahul Gandhi Ji pic.twitter.com/fB91MZebiy