ಈ ದೇಶ ಮುನ್ನಡೆಸುವ ವ್ಯಕ್ತಿ ಹಿಂಸೆ ನಂಬುತ್ತಾರೆ: ಮೋದಿ ವಿರುದ್ಧ ವಾಗ್ದಾಳಿ!

By Suvarna NewsFirst Published Dec 7, 2019, 3:49 PM IST
Highlights

ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು| ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ| 'ಆಡಳಿತದಲ್ಲಿರುವ ಪಕ್ಷದ ಹಲವು ನಾಯಕರೇ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು'| 'ಅತ್ಯಾಚಾರ ಪ್ರಕರಣಗಳನ್ನೂ ಕಂಡೂ ಪ್ರಧಾನಿ ಮೋದಿ ಮೌನವಾಗಿದ್ದಾರೆ'| 'ಈ ದೇಶವನ್ನು ಮುನ್ನಡೆಸುತ್ತಿರುವ ವ್ಯಕ್ತಿ ಹಿಂಸೆಯನ್ನು ನಂಬುತ್ತಾರೆ'| ಪ್ರಧಾನಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ ರಾಹುಲ್|

ವಾಯ್ನಾಡ್(ಡಿ.07): ಅತ್ಯಾಚಾರ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ ಅತ್ಯಾಚಾರಗಳ ರಾಜಧಾನಿ ಎಂದು ವಿದೇಶಿಯರು ದೂಷಿಸುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಆಡಳಿತದಲ್ಲಿರುವ ಪಕ್ಷದ ಹಲವು ನಾಯಕರೇ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ರಾಹುಲ್ ಹರಿಹಾಯ್ದಿದ್ದಾರೆ.

ಬದುಕಲಿಲ್ಲ ಉನ್ನಾವ್ ಅತ್ಯಾಚಾರ ಸಂತ್ರಸ್ತೆ

ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಸಾವು ಅತ್ಯಂತ ಖೇದಕರ ಎಂದಿರುವ ರಾಹುಲ್, ಅತ್ಯಾಚಾರ ಪ್ರಕರಣಗಳ ಕುರಿತು ಪ್ರಧಾನಿ ದಿವ್ಯ ಮೌನವನ್ನು ಪ್ರಶ್ನಿಸಿದ್ದಾರೆ.

Rahul Gandhi in Wayanad, Kerala: India is known as the rape capital of the world. Foreign nations are asking the question why India is unable to look after its daughters and sisters. A UP MLA of BJP is involved in rape of a woman and the Prime Minister doesnot say a single word. pic.twitter.com/GXL7yJDEQX

— ANI (@ANI)

ತಮ್ಮದೇ ಪಕ್ಷದ ನಾಯಕರು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರೂ, ಪ್ರಧಾನಿ ಮೋದಿ ಈ ಕುರಿತು ಮೌನವಾಗಿರುವುದು ಅವರ ಹಿಂಸಾ ಮನೋಭಾವವನ್ನು ತೋರಿಸುತ್ತದೆ ಎಂದು ರಾಹುಲ್ ಹರಿಹಾಯ್ದಿದ್ದಾರೆ.

ಡಾಕ್ಟ್ರೇ... ನನ್ನನ್ನು ಬದುಕಿಸಿ: ಉನ್ನಾವೋ ರೇಪ್ ಸಂತ್ರಸ್ತೆಯ ಕೊನೆಯ ಮಾತುಗಳು!

ಈ ದೇಶವನ್ನು ಮುನ್ನಡೆಸುತ್ತಿರುವ ವ್ಯಕ್ತಿ ಹಿಂಸೆಯನ್ನು ನಂಬುತ್ತಾರೆ. ಇದೇ ಕಾರಣಕ್ಕೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಂಡೂ ಸುಮ್ಮನಿದ್ದಾರೆ ಎಂದು ಮೋದಿ ವಿರುದ್ಧ ರಾಹುಲ್ ಗಂಭೀರ ಆರೋಪ ಮಾಡಿದ್ದಾರೆ.

click me!