ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ದಿನಾಂಕ ಪ್ರಕಟ, ಸ್ಥಳ ಹಾಗೂ ಇತರ ಮಾಹಿತಿ ಇಲ್ಲಿದೆ!

By Suvarna News  |  First Published Jan 3, 2023, 7:44 PM IST

ಪ್ರಧಾನಿ ನರೇಂದ್ರ ಮೋದಿ ನಡಸಿಕೊಡುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ದಿನಾಂಕ, ಸ್ಥಳ, ಸಮಯ ನಿಗದಿಯಾಗಿದೆ. ಈ ಕುರಿತು ಕೇಂದ್ರ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ ಹಂಚಿಕೊಂಡಿದೆ. 
 


ನವದೆಹಲಿ(ಜ.030: ಪರೀಕ್ಷೆ ಸಿದ್ದರಾಗುವ ವಿದ್ಯಾರ್ಥಿಗಳು, ಶಿಕ್ಷಕರು ಪೋಷಕರಿಗೆ ಧೈರ್ಯ ತುಂಬುವ ಹಾಗೂ ಯಶಸ್ವಿಯಾಗಿ ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ತುಂಬುವ ವಿಶೇಷ ಕಾರ್ಯಕ್ರಮ ಪರೀಕ್ಷಾ ಪೇ ಚರ್ಚಾ. ಈ ಕಾರ್ಯಕ್ರವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ನಡೆಸಿಕೊಡುತ್ತಾರೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಜೊತೆ ನಡೆಸುವ ವಿಶೇಷ ಸಂವಾದ ಕಾರ್ಯಕ್ರಮ ಪರೀಕ್ಷಾ ಪೇ ಚರ್ಚೆ 2023ರ ದಿನಾಂಕ ಬಿಡುಗಡೆಯಾಗಿದೆ. ಬಾರಿ ಜನವರಿ 27 ರಂದು ಪರೀಕ್ಷಾ ಪೇ ಚರ್ಚೆ ನಡೆಯಲಿದೆ. ದೆಹಲಿಯ ತಲ್ಕಾತೊರ ಕ್ರೀಡಾಂಗಣದಲ್ಲಿ ಈ ಬಾರಿಯ ಪರೀಕ್ಷಾ ಪೇ ಚರ್ಚಾ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಪರೀಕ್ಷಾ ಪೇ ಚರ್ಚಾಗೆ ಹೆಸರು ನೋಂದಣಿ 
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯ, ನವದೆಹಲಿ ವತಿಯಿಂದ ಜನವರಿ 2023ರ ಮಾಹೆಯಲ್ಲಿ ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಆಯ್ಕೆ ಮಾಡಲು ಆನ್‌ಲೈನ್‌ ಮೂಲಕ ಅವಕಾಶ ನೀಡಲಾಗಿತ್ತು. ಕಳೆದ ತಿಂಗಳು ನೋಂದಣಿಗೆ ಅವಕಾಶ ನೀಡಲಾಗಿತ್ತು. 

Tap to resize

Latest Videos

Pariksha Pe Charcha 2022: ಮಕ್ಕಳು ಮೊಬೈಲ್ ನಿಂದ ದೂರ ಇರಲು ಮೋದಿ ಸಲಹೆ

ಕಳೆದ ಬಾರಿಯ ಪರೀಕ್ಷಾ ಪೇ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಿವಿ ಮಾತು ಹೇಳಿದ್ದರು. ಪರೀಕ್ಷೆಗಳು ಸಮೀಪಿಸುತ್ತಿರುವ ನಡುವೆಯೇ, ಪರೀಕ್ಷೆಗಳನ್ನು ಹಬ್ಬದಂತೆ ಆಚರಿಸಿ. ಒತ್ತಡ ಬೇಡವೇ ಬೇಡ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು. ಇದೇ ವೇಳೆ ನಿಮ್ಮ ಜೀವನದಲ್ಲಿ ಈಡೇರದ ಕನಸು ಹಾಗೂ ಆಶೋತ್ತರಗಳನ್ನು ಮಕ್ಕಳ ಮೇಲೆ ಹೇರಬೇಡಿ. ಉತ್ತಮ ಅಂಕ ಗಳಿಸಲು ತಮ್ಮ ಮೇಲೆ ಶಿಕ್ಷಕರು ಹಾಗೂ ಪೋಷಕರಿಂದ ಒತ್ತಡವಿದೆ ಎಂದು ಮಕ್ಕಳು ಭಾವಿಸದಂತೆ ನೋಡಿಕೊಳ್ಳಿ ಎಂದು ಪೋಷಕರಿಗೂ ಸಲಹೆ ನೀಡಿದ್ದರು.

ಪುತ್ರರು ಹಾಗೂ ಪುತ್ರಿಯರ ನಡುವೆ ಯಾವುದೇ ತಾರತಮ್ಯ ಮಾಡದೆ ಸಮಾನ ಅವಕಾಶಗಳನ್ನು ಸಮಾಜ ನೀಡಬೇಕು. ಬಾಲಕಿಯರ ಸಾಮರ್ಥ್ಯವನ್ನು ಗುರುತಿಸುವಲ್ಲಿ ಸಮಾಜ ವಿಫಲವಾದರೆ, ಅಂತಹ ಸಮಾಜ ಎಂದಿಗೂ ಪ್ರಗತಿ ಸಾಧಿಸದು. ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ನೀಡಿದರೆ, ಹೆಣ್ಣುಮಕ್ಕಳೇ ಉತ್ತಮ ಸಾಧನೆ ಮಾಡುತ್ತಾರೆ. ಪೋಷಕರನ್ನು ನೋಡಿಕೊಳ್ಳಲು ವಿವಾಹವನ್ನೇ ಆಗದ ಹೆಣ್ಣುಮಕ್ಕಳನ್ನು ನಾನು ನೋಡಿದ್ದೇನೆ. ಮಗ ಸಂತೋಷವಾಗಿ ಬಾಳುತ್ತಿದ್ದರೂ ವೃದ್ಧಾಶ್ರಮದಲ್ಲಿ ದಿನದೂಡುತ್ತಿರುವ ಪೋಷಕರನ್ನೂ ಕಂಡಿದ್ದೇನೆ ಎಂದು ಮೋದಿ ಹೇಳಿದ್ದರು.

Pariksha Pe Charcha: ಪ್ರಧಾನಿ ಮೋದಿಯೊಟ್ಟಿಗೆ ಮೈಸೂರಿನ ವಿದ್ಯಾರ್ಥಿ ತರುಣ್‌ ಮಾತು!

20ನೇ ಶತಮಾನದ ಹಳೆಯ ಆಲೋಚನೆ ಹಾಗೂ ನೀತಿಗಳು 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿ ಪಥಕ್ಕೆ ಮಾರ್ಗದರ್ಶನ ಮಾಡಲಾರವು. ಸಮಯಕ್ಕೆ ತಕ್ಕಂತೆ ಬದಲಾವಣೆ ಆಗಬೇಕು. ಅದರಂತೆ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಕಟಿಸಿದ್ದು, ದೇಶದ ಪ್ರತಿ ವರ್ಗವೂ ಹೃತ್ಪೂರ್ವಕವಾಗಿ ಸ್ವಾಗತಿಸಿದೆ. ಸಾಮಾನ್ಯವಾಗಿ ಜನರು ಸರ್ಕಾರ ಏನೇ ಮಾಡಿದರೂ ಟೀಕಿಸಲು ದಾರಿ ಹುಡುಕುತ್ತಾರೆ. ಆದರೆ ಶಿಕ್ಷಣ ನೀತಿಯನ್ನು ಪ್ರತಿಯೊಬ್ಬರೂ ಸ್ವಾಗತಿಸಿದ್ದಾರೆ ಎಂದು ಹೇಳಿದ್ದರು. 

click me!