ಪಾಕ್‌ ಮಾಜಿ ಯೋಧರು ಈಗ ಉಗ್ರರು: ಐವರ ಬಲಿ ಪಡೆದ ರಜೌರಿ ದಾಳಿ ಹಿಂದೆ ಪಾಕ್ ಸೈನಿಕರು

By Kannadaprabha News  |  First Published Nov 25, 2023, 7:26 AM IST

ಮಂಗಳೂರು ಮೂಲದ ಸೇನಾ ಕ್ಯಾಪ್ಟನ್‌ ಎಂ.ವಿ.ಪ್ರಾಂಜಲ್‌ ಸೇರಿ 5 ಯೋಧರನ್ನು ರಜೌರಿಯಲ್ಲಿ ಪಾಕ್‌ ಮೂಲದ ಉಗ್ರರು ಹತ್ಯೆ ಮಾಡಿರುವ ಬೆನ್ನಲ್ಲೇ, ‘ಈ ಕೃತ್ಯದಲ್ಲಿ ಪಾಕಿಸ್ತಾನದ ಮಾಜಿ ಯೋಧರು ಕೂಡ ಶಾಮೀಲಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಉತ್ತರ ಸೇನಾ ಕಮಾಂಡರ್‌ ಲೆ।ಜ। ಉಪೇಂದ್ರ ದ್ವಿವೇದಿ ಬಹಿರಂಗಪಡಿಸಿದ್ದಾರೆ.


ಶ್ರೀನಗರ: ಮಂಗಳೂರು ಮೂಲದ ಸೇನಾ ಕ್ಯಾಪ್ಟನ್‌ ಎಂ.ವಿ.ಪ್ರಾಂಜಲ್‌ ಸೇರಿ 5 ಯೋಧರನ್ನು ರಜೌರಿಯಲ್ಲಿ ಪಾಕ್‌ ಮೂಲದ ಉಗ್ರರು ಹತ್ಯೆ ಮಾಡಿರುವ ಬೆನ್ನಲ್ಲೇ, ‘ಈ ಕೃತ್ಯದಲ್ಲಿ ಪಾಕಿಸ್ತಾನದ ಮಾಜಿ ಯೋಧರು ಕೂಡ ಶಾಮೀಲಾಗಿದ್ದಾರೆ. ಅರ್ಥಾತ್‌ ಪಾಕ್‌ ಮಾಜಿ ಸೈನಿಕರು ಈಗ ಉಗ್ರರ ರೂಪದಲ್ಲಿ ಕಾಶ್ಮೀರಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂಬ ಸ್ಫೋಟಕ ಮಾಹಿತಿಯನ್ನು ಉತ್ತರ ಸೇನಾ ಕಮಾಂಡರ್‌ ಲೆ।ಜ। ಉಪೇಂದ್ರ ದ್ವಿವೇದಿ ಬಹಿರಂಗಪಡಿಸಿದ್ದಾರೆ.

ಯೋಧರ ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, ‘ಜಮ್ಮು ಕಾಶ್ಮೀರದಲ್ಲಿ(Jammu and Kashmir) ಸ್ಥಳೀಯ ನೇಮಕಾತಿ ಸ್ಥಗಿತವಾಗಿರುವುದರಿಂದ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯು (Lashkar-e-Taiba terrorist organization) ವಿದೇಶಿ ಉಗ್ರರನ್ನು ಇಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಲು ಕಳುಹಿಸುತ್ತಿದೆ. ಇದರ ಭಾಗವಾಗಿ ಪಾಕಿಸ್ತಾನದ ಮಾಜಿ ಯೋಧರು ಈಗ ಉಗ್ರರಾಗಿ ಪರಿವರ್ತನೆಗೊಂಡು ರಜೌರಿಗೆ ಬಂದಿದ್ದಾರೆ. ರಜೌರಿ ಎನ್‌ಕೌಂಟರ್‌ನಲ್ಲಿ ಅವರು ಶಾಮೀಲಾಗಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಅವರನ್ನು ಸಂಪೂರ್ಣ ಮಟ್ಟಹಾಕಲು ನಾವು ಸರ್ವಸನ್ನದ್ಧರಾಗಿದ್ದೇವೆ’ ಎಂದು ತಿಳಿಸಿದರು.

Tap to resize

Latest Videos

ಮದುವೆಗೆ ಬರಬೇಕಿದ್ದ ಮಗ, ಹೆಣವಾಗಿ ಬಂದ; ಸಂಭ್ರಮದ ಊರಲ್ಲಿ ಈಗ ಬರೀ ಸೂತಕ!

36 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ರಜೌರಿಯಲ್ಲಿ 5 ಯೋಧರ ಕೊಲೆಗೆ ಕಾರಣರಾಗಿದ್ದ ಎಲ್‌ಇಟಿ ಕಮಾಂಡರ್‌ ಸೇರಿ ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು ಇತರರ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಈ ನಡುವೆ ಹುತಾತ್ಮ ಯೋಧರ (martyred soldiers) ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಶುಕ್ರವಾರ ಅವನ್ನು ಅವರ ಊರಿಗೆ ಕಳಿಸಲಾಯಿತು.

ರಜೌರಿಯಲ್ಲಿ ಗುಂಡಿನ ಚಕಮಕಿ: ಮಂಗಳೂರಿನ ಕ್ಯಾ.ಪ್ರಾಂಜಲ್‌ ಸೇರಿ ನಾಲ್ವರು ಯೋಧರು ಹುತಾತ್ಮ 

| Last respects paid to Havildar Abdul Majid who lost his life fighting terrorists during the Rajouri encounter, in J&K's Poonch pic.twitter.com/bP20Fwtmch

— ANI (@ANI)

 

click me!