ಪದ್ಮಶ್ರೀ ಪುರಸ್ಕೃತೆ: ರಾಜವಂಶದಲ್ಲಿ ಹುಟ್ಟಿ ಮಾವುತೆಯಾದ ಪರ್ಬತಿ ರೋಚಕ ಸ್ಟೋರಿ ಇದು

By Anusha Kb  |  First Published Jan 26, 2024, 3:21 PM IST

 ಭಾರತ ಸರ್ಕಾರವು ದೇಶದ ಹಲವು ಗಣ್ಯರಿಗೆ ದೇಶದ ಸರ್ವಶ್ರೇಷ್ಠ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇಂತಹ ಪ್ರಶಸ್ತಿ ಪಡೆದವರಲ್ಲಿ ಪರ್ಬಾತಿ ಬರುವಾ ಕೂಡ  ಒಬ್ಬರು. ಪದ್ಮಶ್ರೀಯಂತಹ ಶ್ರೇಷ್ಠ ಪ್ರಶಸ್ತಿ ಪಡೆಯುವುದಕ್ಕೆ ಇವರು ಮಾಡಿದ ಸಾಧನೆ ಏನು ಇವರು ಬೆಳದು ಬಂದ ಹಾದಿ ಎಂತಹದ್ದು ಎಂಬ ಬಗ್ಗೆ ಸಣ್ಣ ಡಿಟೇಲ್ ಇಲ್ಲಿದೆ. 


ನವದೆಹಲಿ: ನಿನ್ನೆ ಗಣರಾಜ್ಯೋತ್ಸವದ ಹಿಂದಿನ ದಿನ  ಭಾರತ ಸರ್ಕಾರವು ದೇಶದ ಹಲವು ಗಣ್ಯರಿಗೆ ದೇಶದ ಸರ್ವಶ್ರೇಷ್ಠ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ದೇಶಕ್ಕಾಗಿ ಪ್ರಾಣತೆತ್ತ ಯೋಧರಿಗೆ, ದೇಶಕ್ಕಾಗಿ ಹೋರಾಡಿದ ಶೌರ್ಯ ಮೆರದ ಯೋಧರಿಗೆ, ದೇಶದ ಹೆಸರನ್ನು ಬೆಳಗಿಸಿದ ಕೆಲ ಸಾಧಕರಿಗೆ ಪದ್ಮಭೂಷಣ, ಪದ್ಮವಿಭೂಷಣ,  ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅಂತಹ ಸರ್ವಶ್ರೇಷ್ಠ ಪ್ರಶಸ್ತಿ ಪಡೆದವರಲ್ಲಿ ಪರ್ಬಾತಿ ಬರುವಾ ಕೂಡ  ಒಬ್ಬರು. ಪದ್ಮಶ್ರೀಯಂತಹ ಶ್ರೇಷ್ಠ ಪ್ರಶಸ್ತಿ ಪಡೆಯುವುದಕ್ಕೆ ಇವರು ಮಾಡಿದ ಸಾಧನೆ ಏನು ಇವರು ಬೆಳದು ಬಂದ ಹಾದಿ ಎಂತಹದ್ದು ಎಂಬ ಬಗ್ಗೆ ಸಣ್ಣ ಡಿಟೇಲ್ ಇಲ್ಲಿದೆ. 

ಪರ್ಬತಿ ಬರುವಾ ದೇಶದ ಮೊದಲ ಮಹಿಳಾ ಮಾವುತೆ. ಅಸ್ಸಾಂನ ಜಮೀನ್ದಾರರ ಕುಟುಂಬದಲ್ಲಿ ಹುಟ್ಟಿದ ಈಕೆಯ ಬಾಲ್ಯ ಕಳೆದಿದ್ದು ಬಹುತೇಕ ಕುದುರೆ ಆನೆ ಮುಂತಾದ ದೊಡ್ಡ ದೊಡ್ಡ ಅಪರೂಪದ ಪ್ರಾಣಿಗಳ ಜೊತೆ. ಇಂತಹ ಪರ್ಬತಿ ಬರುವಾ ಅವರ ಕತೆ ಕೇಳಲು ರೋಚಕ ಹಾಗೂ ಆಸಕ್ತಿದಾಯಕವಾಗಿದೆ. ಇತರ ಮಕ್ಕಳಂತೆ ಪ್ಲಾಸ್ಟಿಕ್ ಗೊಂಬೆಗಳ ಜೊತೆ ಆಡುವ ಬದಲು ಪರ್ಬತಿ ಆಟವಾಡಲು ಬಯಸುತ್ತಿದ್ದುದ್ದು ಸಮಯ ಕಳೆಯಲು ಬಯಸುತ್ತಿದ್ದಿದ್ದು,  ಆನೆ ಹಾಗೂ ಕುದುರೆಗಳ ಜೊತೆ. ಅಸ್ಸಾಂನ ಗೌರಿಪುರದ ರಾಜವಂಶದ ಕುಟುಂಬಕ್ಕೆ ಸೇರಿದ್ದ ಬರುವಾ ಅವರು ಪ್ರಕೃತಿಶ್‌ ಚಂದ್ರ 9 ಮಕ್ಕಳಲ್ಲಿ ಒಬ್ಬರು. 

Tap to resize

Latest Videos

ಹಾಸನ ಆನೆ ದಾಳಿ: ಮರವೇರಿದರೂ ಬಿಡಲಿಲ್ಲ, ಮೇಲಿಂದ ಕೆಡವಿ ಹೊಟ್ಟೆ ಮೇಲೆ ಕಾಲಿಟ್ಟೇಬಿಡ್ತು ಕಾಡಾನೆ!

ರಕ್ತಗತವಾಗಿ  ತನ್ನಲ್ಲಿ  ಬಂದ ತಂದೆಯ ಗುಣಗಳನ್ನೇ ಬೆಳೆಸಿಕೊಂಡು ಹೋದ ಬರುವಾ ಅವರು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾ ಅವುಗಳ ಗುಣಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿತರು, ಇದು ಆಕೆಗೆ ತಂದೆಯಿಂದ ಬಂದ ಬಳುವಳಿ, ಬರುವಾ ಅವರ ತಂದೆಗೂ ಆನೆಗಳ ಬಗ್ಗೆ ಯಥೇಚ್ಛಚಾದ ಜ್ಞಾನವಿತ್ತು. ಹೀಗಾಗಿ ಮಗಳಿಗೂ ಈ ಗುಣ ತಂದೆಯಿಂದ ಬಂದಿದ್ದು, ಯಾವತ್ತೂ ಆನೆಗಳಿಂದ ದೂರ ಇದ್ದಿದ್ದೇ ಇಲ್ಲ ಈ ಬರುವಾ. ಜೊತೆಗೆ ತಮ್ಮ ಇಡೀ ಜೀವನವನ್ನು ಆನೆಗಳ ಕುಟುಂಬದ ಜೊತೆಯೇ ಕಳೆಯಲು ಬಯಸಿದ್ದರು ಬರುವಾ. 


14ನೇ ವಯಸ್ಸಿನಲ್ಲೇ ಕಾಡಾನೆಗಳ ಪಳಗಿಸಲು ಕಲಿತ ಬಾಲೆ

ಆನೆಗಳನ್ನು ಹಿಡಿಯುವುದು ಮತ್ತು ಅವುಗಳನ್ನು ಪಳಗಿಸುವುದು ಅತ್ಯಂತ ಅಪಾಯಕಾರಿ ಮತ್ತು ಕಠಿಣ ಕೆಲಸ. ಕಾಡಾನೆಯ ಮನ ಗೆಲ್ಲಲ್ಲು ಕನಿಷ್ಠ ಆರು ತಿಂಗಳಾದರು ಬೇಕು. ಇದಕ್ಕೆ ಸಾಕಷ್ಟು ತಾಳ್ಮೆಯೂ ಬೇಕು. ಇದನ್ನು ವರ್ಷದಲ್ಲಿ ಕರಗತ ಮಾಡಿಕೊಂಡ ಆಕೆ ನಂತರ ಆನೆಗಳಿಗೆ ತರಬೇತಿ ನೀಡುವ ಆನೆಗಳನ್ನು  ಸವಾರಿ ಮಾಡಿಸುವ ಮೊದಲ ಮಹಿಳಾ ಮಾವುತೆ ಆದಳು.  ಆನೆಗಳ ಯೋಗಕ್ಷೇಮಕ್ಕಾಗಿ ಅವಳ ಸಮರ್ಪಣೆ ಪ್ರೀತಿ ಅವಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. 

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು: ತಪ್ಪಿಸಿಕೊಂಡ ಬಳಿಕ ಮತ್ತೆ ತಾಯಿ ಮಡಿಲು ಸೇರಿ ಸುಖನಿದ್ದೆಗೆ ಜಾರಿದ ಮರಿಯಾನೆ

ರಾಜ ಕುಟುಂಬದಲ್ಲಿ ಜನಿಸಿದ್ದರು ಎಲ್ಲಾ ತನ್ನಾಸೆಯಂತೆ ಬದುಕುವುದಕ್ಕಾಗಿ ಎಲ್ಲಾ ಐಷಾರಾಮಿ ಜೀವನವನ್ನು ತೊರೆದ ಸರಳವಾಗಿ ಬದುಕಲು ನಿರ್ಧರಿಸಿದಳು.  ದಿಂಬು ಹಾಸಿಗೆ ಇಲ್ಲದ ಟೆಂಟ್‌ನಲ್ಲಿ ಬದುಕಲು ಶುರು ಮಾಡಿದ್ದಳು. ಟೂತ್‌ಪೇಸ್ಟ್ ಬದಲಿಗೆ ಬೂದಿ ಬಳಸುವುದು ಆಕೆಯ ದೈನಂದಿನ ಹವ್ಯಾಸವಾಯ್ತ. 


ಈಕೆಗೆ ಪರ್ಬತಿ ಹೆಸರು ಬಂದಿದ್ದು ಹೇಗೆ?

ಆನೆಗಳ ಮೇಲೆ ಈಕೆ ತೋರುತ್ತಿದ್ದ ತಾಯಿಯಂತ ಪ್ರೀತಿಯನ್ನು ನೋಡಿದ ಮೇಲೆ ಜನ ಈಕೆಯನ್ನು ಪರ್ಬತಿ ಎಂದು ಕರೆಯಲು ಶುರು ಮಾಡಿದರು. ಪರ್ಬತಿ ಎಂದರೆ ದೇವ ಗಣೇಶನ ತಾಯಿ ಪಾರ್ವತಿ. ಹಲವು ಕಡೆ ಇವರು ಆನೆಗಳನ್ನು ರಕ್ಷಿಸಿ ಮನುಷ್ಯರು ಹಾಗೂ ಆನೆಗಳ ನಡುವಣ ಸಂಘರ್ಷವನ್ನು ತಪ್ಪಿಸಿದ್ದಾರೆ. 40 ವರ್ಷಗಳ ಹಿಂದೆ ಶುರುವಾದ ಇವರ ಈ ಪ್ರಯಾಣದಲ್ಲಿ ಹಲವರು ಆನೆಗಳನ್ನು ರಕ್ಷಿಸಿ ಪಳಗಿಸಿರುವ ಇವರಿಗೆ ಹಾತಿ ಕಿ ಪಾರಿ ಎಂಬ ಖ್ಯಾತಿಯೂ ಇದೆ.
 

click me!