ಚಾಲಕ ರಹಿತ ನಮ್ಮ ಮೆಟ್ರೋ ರೈಲು ಆರಂಭಕ್ಕೆ ತಯಾರಿ, ಚೀನಾದ ಎಂಜಿನೀಯರ್ಸ್‌ಗೆ ಭಾರತ ವೀಸಾ!

By Suvarna NewsFirst Published Dec 12, 2023, 5:35 PM IST
Highlights

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಕಾರಿಡಾರ್ ಹೊಸ ಇತಿಹಾಸ ರಚಿಸಲು ಸಜ್ಜಾಗಿದೆ. ಚಾಲಕ ರಹಿತ ಮೆಟ್ರೋ ಸಂಚಾರಕ್ಕೆ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಈ ರೈಲಿನ ಸಿದ್ಧತೆಗೆ ಚೀನಾದಿಂದಎಂಜಿನೀಯರ್ಸ್, ಲೋಕೋ ಪೈಲೆಟ್, ತಾಂತ್ರಿಕ ಸಿಬ್ಬಂದಿ ಸೇರಿದಂತೆ 21 ನುರಿತ ಸಿಬ್ಬಂದಿಗಳಿಗೆ ಭಾರತ ವೀಸಾ ನೀಡಿದೆ.
 

ಬೆಂಗಳೂರು(ಡಿ.12) ಭಾರತದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೆಂಗಳೂರಿನಲ್ಲಿ ಆರಂಭಗೊಳ್ಳುತ್ತಿದೆ. ಈಗಾಗಲೇ ಬೋಗಿಗಳು, ಎಂಜಿನ್ ಸೇರಿದಂತೆ ಕೆಲ ಸಲಕರಣೆಗಳು ಭಾರತಕ್ಕೆ ಆಗಮಿಸಿದೆ. ಇದೇ ವೇಳೆ ಈ ರೈಲಿನ ಕಾಮಗಾರಿ, ಸಿದ್ದತೆ, ತಂತ್ರಜ್ಞಾನ, ಜೋಡಣೆಗಳ ಕಾಮಗಾರಿಗೆ ಚೀನಾದ 21 ನುರಿತ ಎಂಜಿನೀಯರ್ಸ್‌ಗೆ ಭಾರತ ವೀಸಾ ನೀಡಿದೆ. ಚಾಲಕ ರಹಿತ ಮೆಟ್ರೋ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಜೋಡಣೆ ಮಾಡಬೇಕಿದೆ. ಈ ತಂತ್ರಜ್ಞಾನ ಭರಿತ ಎಂಜಿನ್, ವ್ಯವಸ್ಥೆಗಳು ಡಿಸೆಂಬರ್ 15ಕ್ಕೆ ಚೆನ್ನೈ ಬಂದರು ತಲುಪಲಿದೆ. ಇಲ್ಲಿಂದ ಮಾರ್ಗ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಮೆಟ್ರೋ ಡಿಪೋಗೆ ತಲುಪಲಿದೆ. ಮಕರ ಸಂಕ್ರಾತಿ ದಿನ(ಜನವರಿ 15) ಬೆಂಗಳೂರು ತಲುಪಲಿದೆ.

 ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ಎಂಜಿನೀಯರ್ಸ್, ಲೋಕೋ ಪೈಲೆಟ್ ಹಾಗೂ ಟೆಕ್ನಲ್ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಭಾರತ ಸರ್ಕಾರ ವೀಸಾ ನೀಡಿದೆ. ಒಟ್ಟು 64 ಸಿಬ್ಬಂದಿಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಪೈಕಿ 21 ಮಂದಿಗೆ ವೀಸಾ ನೀಡಲಾಗಿದೆ. ಇನ್ನುಳಿದ ಸಿಬ್ಬಂದಿಗಳ ಡೇಟಾ ಪರಿಶೀಲನೆ ಕಾರ್ಯ ನಡೆಯುತ್ತಿದೆ.

Latest Videos

 

ನಮ್ಮ ಮೆಟ್ರೋ ಗುಲಾಬಿ ಮಾರ್ಗ ಸುರಂಗ ಕೊರೆವ ಕೆಲಸ ಪೂರ್ಣ, ಎಷ್ಟು ನಿಲ್ದಾಣಗಳಿರಲಿದೆ?

ಟೆಸ್ಟಿಂಗ್, ಟೆಸ್ಟ್ ರೈಲು ಚಾಲನೆ, ಇಲ್ಲಿನ ಸಿಬ್ಬಂದಿಗಳಿಗೆ ತರಬೇತಿ, ಸಮಸ್ಯೆ, ಸವಾಲು ಎದುರಿಸುವ ರೀತಿ ಸೇರಿದಂತೆ ಹಲವು ವಿಚಾರಗಳ ಕುರಿತು ಚೀನಾ ಸಿಬ್ಬಂದಿಗಳು ಕೆಲಸ ಮಾಡಲಿದ್ದಾರೆ.  ಕಮ್ಯೂನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್(CBTC) ಅಂದರೆ ಡ್ರೈವರ್ ಲೆಸ್ ನಮ್ಮ ಮೆಟ್ರೋ ರೈಲು ನವೆಂಬರ್ 20ಕ್ಕೆ ಆರಂಭಗೊಳ್ಳಬೇಕಿತ್ತು. ಆದರೆ ಈ ಅವಧಿಯಲ್ಲಿ ಕೆಲಸ ಪೂರ್ಣಗೊಳ್ಳದ ಕಾರಣ ದಿನಾಂಕ ಮುಂದೂಡಲಾಗಿದೆ. 

ಆರ್.ವಿ.ರಸ್ತೆ- ಬೊಮ್ಮಸಂದ್ರ ನಡುವಿನ ರೀಚ್ -5 ಮಾರ್ಗದಲ್ಲಿ ತಲಾ ಆರು ಬೋಗಿಗಳ 12 ರೈಲುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೊ ಓಡಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಕಮ್ಯುನಿಕೇಷನ್ ಬೇಸ್ಡ್ ಟ್ರೇನ್ ಕಂಟ್ರೊಲ್ ಸಿಗ್ನಲಿಂಗ್ ಸಿಸ್ಟಂ ತಂತ್ರಜ್ಞಾನವನ್ನು ಎರಡನೇ ಹಂತದ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ರೈಲು ಸಂಚಾರವನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ. ಆದರೆ, ಆರಂಭದಿಂದಲೇ ಚಾಲಕ ರಹಿತ ರೈಲು ಓಡುವುದಿಲ್ಲ. ಎರಡು ವರ್ಷಗಳ ಕಾಲ ಚಾಲಕ ಸಹಿತ ರೈಲುಗಳೇ ಈ ಮಾರ್ಗದಲ್ಲಿ ಸಂಚರಿಸಲಿದ್ದು, ಸಾಕಷ್ಟು ಪೂರ್ವಾಭ್ಯಾಸದ ಬಳಿಕವಷ್ಟೇ ಇವು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿವೆ.

ನಮ್ಮ ಮೆಟ್ರೋ 3ನೇ ಹಂತದ ಭೂಸ್ವಾದೀನಕ್ಕೆ ಸಿದ್ಧತೆ, 100 ಎಕರೆ ಗುರುತಿಸಿದ ಬಿಎಂಆರ್‌ಸಿಎಲ್‌

ವಿಸ್ತರಣೆಯಿಂದಾಗಿ ಈಗಾಗಲೇ ನೇರಳೆ, ಹಸಿರು ಮಾರ್ಗ ಮೆಟ್ರೋ ರೈಲುಗಳ ಕೊರತೆ ಎದುರಿಸುತ್ತಿವೆ. ಹೊಸದಾಗಿ ಈ ಬೋಗಿಗಳು ಬಂದ ಬಳಿಕ ಈ ತೊಂದರೆ ನಿವಾರಣೆಯಾಗುವ ನಿರೀಕ್ಷೆಯಿದ್ದು, ರೈಲುಗಳ ಸಂಚಾರ ಹೆಚ್ಚಲಿದೆ.

click me!